ಇನ್ಮುಂದೆ ವಾಟ್ಸಾಪ್‌ನಲ್ಲೇ ಸಿಗಲಿದೆ ಜಿಯೋಮಾರ್ಟ್‌ ಶಾಪಿಂಗ್‌ ಸೇವೆ!

|

ರಿಲಯನ್ಸ್‌ ಕಂಪೆನಿ ತನ್ನ 45 ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಹಲವು ಮಹತ್ತರ ಘೋಷಣೆಗಳನ್ನು ಮಾಡಿದೆ. ಇದರಲ್ಲಿ ಮೆಟಾ ಮತ್ತು ಜಿಯೋ ಪ್ಲಾಟ್‌ಫಾರ್ಮ್‌ಗಳು ವಾಟ್ಸಾಪ್‌ನಲ್ಲಿ ಎಂಡ್‌ ಟು ಎಂಡ್‌ ಶಾಪಿಂಗ್‌ ಮಾಡುವುದಕ್ಕೆ ಅವಕಾಶ ನೀಡುವುದಕ್ಕೆ ಘೊಷಣೆ ಮಾಡಲಾಗಿದೆ. ಇದರಿಂದ ಭಾರತದಲ್ಲಿನ ಗ್ರಾಹಕರು ವಾಟ್ಸಾಪ್‌ ಮೂಲಕವೇ ಜಿಯೋಮಾರ್ಟ್‌ ನಲ್ಲಿ ಶಾಪಿಂಗ್‌ ಮಾಡಲು ಸಾಧ್ಯವಾಗಲಿದೆ. ವಾಟ್ಸಾಪ್‌ ಮೂಲಕ ಜಿಯೋಮಾರ್ಟ್‌ನ ದಿನಸಿ ಕ್ಯಾಟ್‌ಲಾಗ್‌ ಅನ್ನು ಬ್ರೌಸ್‌ ಮಾಡುವುದಕ್ಕೆ ಅವಕಾಶ ನೀಡುವುದಾಗಿ ಹೇಳಲಾಗಿದೆ.

ವಾಟ್ಸಾಪ್‌

ಹೌದು, ಇನ್ಮುಂದೆ ವಾಟ್ಸಾಪ್‌ ಮೂಲಕವೇ ಜಿಯೋಮಾರ್ಟ್‌ನಲ್ಲಿ ಶಾಪಿಂಗ್‌ ಮಾಡುವುದಕ್ಕೆ ಅವಕಾಶ ಸಿಗಲಿದೆ. ಜಿಯೋಮಾರ್ಟ್‌ನ ದಿನಸಿ ಕ್ಯಾಟ್‌ಲಾಗ್‌ನಲ್ಲಿ ಕಾರ್ಟ್‌ಗೆ ಐಟಂಗಳನ್ನು ಸೇರಿಸಬಹುದಾಗಿದೆ. ಹಾಗೆಯೇ ಅಪ್ಲಿಕೇಶನ್‌ನಲ್ಲಿ ಖರೀದಿಯನ್ನು ಪೂರ್ಣಗೊಳಿಸಲು ಪಾವತಿ ಮಾಡಬಹುದು ಎನ್ನಲಾಗಿದೆ. ಹಾಗಾದ್ರೆ ವಾಟ್ಸಾಪ್‌ ಮೂಲಕ ಜಿಯೋಮಾರ್ಟ್‌ನಲ್ಲಿ ಶಾಪಿಂಗ್‌ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಜಿಯೋದ ಪ್ರತಿಕಾ ಪ್ರಕಟಣೆಯ ಪ್ರಕಾರ ವಾಟ್ಸಾಪ್‌ ಮೂಲಕ ಶಾಪಿಂಗ್‌ ಮಾಡುವುದಕ್ಕೆ ಅವಕಾಶ ನೀಡಿದ ವಿಶ್ವದ ಮೊದಲ ಇನಿಶಿಯೇಟಿವ್ ಆಗಿದೆ. ವಾಟ್ಸಾಪ್‌ನಲ್ಲಿ ಜಿಯೋಮಾರ್ಟ್‌ ಭಾರತದಲ್ಲಿನ ಬಳಕೆದಾರರನ್ನು ಆಕ್ಟಿವ್‌ ಮಾಡಲಿದೆ. ಹಿಂದೆಂದೂ ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡದವರೂ ಕೂಡ ವಾಟ್ಸಾಪ್‌ನಲ್ಲಿ ಜಿಯೋಮಾರ್ಟ್‌ ನಂಬರ್‌ +917977079770 ಗೆ 'ಹಾಯ್' ಎಂದು ಕಳುಹಿಸುವ ಮೂಲಕ ಶಾಪಿಂಗ್‌ ಮಾಡಲು ಸಾಧ್ಯವಾಗಲಿದೆ.

ಘೋಷಣೆ

ಇನ್ನು ಈ ಘೋಷಣೆ 2020ರಲ್ಲಿ ಘೋಷಿಸಲಾದ ಮೆಟಾ ಮತ್ತು ಜಿಯೋ ಪ್ಲಾಟ್‌ಫಾರ್ಮ್‌ಗಳ ನಡುವಿನ ಕಾರ್ಯತಂತ್ರದ ಪಾಲುದಾರಿಕೆಯ ಭಾಗವಾಗಿದೆ. ಹೆಚ್ಚು ಹೆಚ್ಚು ಜನರನ್ನು ಆನ್‌ಲೈನ್‌ ವ್ಯವಹಾರಗಳಿಗೆ ತರುವ ಪ್ರಯತ್ನವನ್ನು ಮಾಡುತ್ತಿದ್ದೇವೆ ಎಂದು ಜಿಯೋ ಹೇಳಿದೆ. ನಾವು ನವೀನ ಗ್ರಾಹಕರ ಅನುಭವವನ್ನು ಅಭಿವೃದ್ದಿಪಡಿಸಲು ವಾಟ್ಸಾಪ್‌ನಲ್ಲಿ ಜಿಯೋಮಾರ್ಟ್‌ನೊಂದಿಗೆ ಮೊದಲ ಬಾರಿಗೆ ಎಂಡ್-ಟು-ಎಂಡ್ ಶಾಪಿಂಗ್ ಅನುಭವ ನೀಡಲಿದ್ದೇವೆ ಎಂದಿದ್ದಾರೆ. ವಾಟ್ಸಾಪ್‌ ಮೂಲಕ ಜಿಯೋಮಾರ್ಟ್‌ ಲಕ್ಷಾಂತರ ಭಾರತೀಯರಿಗೆ ಆನ್‌ಲೈನ್ ಶಾಪಿಂಗ್‌ನ ಸರಳ ಮತ್ತು ಅನುಕೂಲಕರ ಮಾರ್ಗವನ್ನು ಸಕ್ರಿಯಗೊಳಿಸುವ ನಮ್ಮ ಬದ್ಧತೆಯನ್ನು ಹೆಚ್ಚಿಸುತ್ತದೆ ಎಂದು ಅಂಬಾನಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಜಿಯೋಮಾರ್ಟ್‌

ವಾಟ್ಸಾಪ್‌ ಅನುಭವದಲ್ಲಿ ಜಿಯೋಮಾರ್ಟ್‌ ಶಾಪಿಂಗ್‌ ಮಾಡುವುದು ಉತ್ತಮ ಹೆಜ್ಜೆಯಾಗಿದೆ. ದೇಶದಾದ್ಯಂತ ಲಕ್ಷಾಂತರ ವ್ಯವಹಾರಗಳು ತಮ್ಮ ಗ್ರಾಹಕರೊಂದಿಗೆ ಸಂಪರ್ಕ ಸಾಧಿಸುವ ರೀತಿಯಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ಇದು ತರಲಿದೆ ಎಂದು ರಿಲಯನ್ಸ್‌ ಕಂಪೆನಿ ಹೇಳಿದೆ. ಜನರ ಶಾಪಿಂಗ್ ಅನುಭವಕ್ಕೆ ಸಾಟಿಯಿಲ್ಲದ ಸರಳತೆ ಮತ್ತು ಅನುಕೂಲತೆಯನ್ನು ಇದು ತರುತ್ತದೆ ಎಂದು ಹೇಳಿಕೊಂಡಿದೆ. ಇನ್ನು ಜಿಯೋಮಾರ್ಟ್‌-ವಾಟ್ಸಾಪ್‌ ಬಳಕೆದಾರರು ವಾಟ್ಸಾಪ್‌ ಪೇ, ಕ್ಯಾಶ್ ಆನ್ ಡೆಲಿವರಿ (COD) ಮತ್ತು ಇತರ ಪಾವತಿ ವಿಧಾನಗಳನ್ನು ಬಳಸಬಹುದಾಗಿದೆ.

ರಿಲಯನ್ಸ್‌

ಇದಲ್ಲದೆ ರಿಲಯನ್ಸ್‌ ಸಂಸ್ಥೆ ತನ್ನ 45 ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ (AGM) ಜಿಯೋ 5G, ಜಿಯೋ ಏರ್‌ಫೈಬರ್‌ ಹಾಗೂ ಇತರ ಸೇವೆಗಳನ್ನು ಘೋಷಣೆ ಮಾಡಲಾಗಿದೆ. ಸಭೆಯಲ್ಲಿ ಮಾತನಾಡಿದ ರಿಲಯನ್ಸ್‌ ಕಂಪೆನಿಯ ವ್ಯವಸ್ಥಾಪಕ ನಿರ್ದೆಶಕ ಮುಖೇಶ್‌ ಅಂಬಾನಿ ದೀಪಾವಳಿ ವೇಳೆಗೆ ಭಾರತದ ಪ್ರಮುಖ ನಗರಗಳಲ್ಲಿ 5G ಸೇವೆ ಪ್ರಾರಂಭಿಸುವುದಾಗಿ ತಿಳಿಸಿದ್ದಾರೆ. ಹಾಗೆಯೇ, ಹೊಸದಾಗಿ ಜಿಯೋ ಏರ್‌ಫೈಬರ್‌ ಡಿವೈಸ್‌ ಬಗ್ಗೆ ಘೋಷಣೆ ಮಾಡಿದ್ದಾರೆ.

ಜಿಯೋ

ರಿಲಯನ್ಸ್‌ ಜಿಯೋ ಹೊಸದಾಗಿ ಘೋಷಣೆ ಮಾಡಿರುವ ಜಿಯೋ ಏರ್‌ಫೈಬರ್‌ ಪ್ಲಗ್-ಅಂಡ್-ಪ್ಲೇ ಡಿವೈಸ್‌ ಅನ್ನು ಬಳಕೆದಾರರಿಗೆ ಯಾವುದೇ ವಾಯರ್‌ಗಳಿಲ್ಲದೆ ಗಾಳಿಯಲ್ಲಿ ಫೈಬರ್ ತರಹದ ವೇಗವನ್ನು ಅನುಭವಿಸುವುದಕ್ಕೆ ಅವಕಾಶ ನೀಡುವ ಡಿವೈಸ್‌ ಆಗಿದೆ. ಈ ಡಿವೈಸ್‌ ಮೂಲಕ ನೀವು ಮನೆ ಅಥವಾ ಕಚೇರಿಗಳಲ್ಲಿ ವೈಯುಕ್ತಿಕ ವೈಫೈ ಹಾಟ್‌ಸ್ಪಾಟ್‌ ಪಡೆದುಕೊಳ್ಳಬಹುದಾಗಿದೆ. ಇದು ಅಲ್ಟ್ರಾ-ಹೈ-ಸ್ಪೀಡ್ ಜಿಯೋ ಟ್ರೂ 5G ಇಂಟರ್ನೆಟ್‌ಗೆ ಸಂಪರ್ಕ ಹೊಂದಿರಲಿದೆ.

ರಿಲಯನ್ಸ್‌

ಇನ್ನು ರಿಲಯನ್ಸ್‌ ಕಂಪೆನಿ 2022 ರ ದೀಪಾವಳಿ ವೇಳೆಗೆ ದೆಹಲಿ, ಮುಂಬೈ, ಕೋಲ್ಕತ್ತಾ ಮತ್ತು ಚೆನ್ನೈನಲ್ಲಿ ಜಿಯೋ 5G ಸೇವೆಗಳನ್ನು ಹೊರತರಲಿದೆ ಎಂದು ಘೊಷಣೆ ಮಾಡಿದೆ. ಇದನ್ನು ಹಂತ ಹಂತವಾಗಿ ದೇಶದ ಇತರ ನಗರಗಳು ಮತ್ತು ಪಟ್ಟಣಗಳಿಗೆ ವಿಸ್ತರಿಸಲಾಗುವುದು ಎಂದಿದೆ. ಜೊತೆಗೆ ಡಿಸೆಂಬರ್ 2023 ರ ವೇಳೆಗೆ ದೇಶದ ಎಲ್ಲಾ ಭಾಗಕ್ಕೂ ಈ ಸೇವೆಯನ್ನು ನೀಡುವುದಾಗಿ ಹೇಳಿಕೊಂಡಿದೆ. ಭಾರತದಲ್ಲಿ 5G ಸಲ್ಯೂಶನ್‌ ಅಭಿವೃದ್ಧಿಪಡಿಸಲು ಜಿಯೋ ಕೂಡ ಕ್ವಾಲ್ಕಾಮ್‌ನೊಂದಿಗೆ ಕೈ ಜೋಡಿಸುತ್ತಿದೆ.

Best Mobiles in India

English summary
Jio Platforms now lets JioMart users shop groceries directly from WhatsApp

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X