ಜಿಯೋ ಪೋಸ್ಟ್ ಪೇಯ್ಡ್ ಆಫರ್ ಗಳಿಂದ ವೊಡಾಫೋನ್‌ ಐಡಿಯಾಗೆ ಸಂಕಷ್ಟ!

|

ಜಿಯೋದಿಂದ ಈಚೆಗೆ ಘೋಷಿಸಲಾದ ಪೋಸ್ಟ್ ಪೇಯ್ಡ್ ಪ್ಲಾನ್ ಗಳು ವೊಡಾಫೋನ್ ಐಡಿಯಾಗೆ ಭರ್ತಿ ಪೆಟ್ಟು ನೀಡಲಿವೆ. ಆ ಕಂಪೆನಿಯ ಮಾರ್ಕೆಟ್ ಷೇರನ್ನು ಕಸಿದುಕೊಳ್ಳಲಿದೆ. ತುಂಬ ಸರಿಯಾದ ಸಮಯದಲ್ಲಿ ರಿಲಯನ್ಸ್ ಜಿಯೋದಿಂದ ಆಕರ್ಷಕವಾದ ಪೋಸ್ಟ್ ಪೇಯ್ಡ್ ಪ್ಲಾನ್ ಗಳನ್ನು ಪರಿಚಯಿಸಲಾಗಿದೆ ಎಂದು ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ.

ಜಿಯೋ ಪೋಸ್ಟ್ ಪೇಯ್ಡ್ ಆಫರ್ ಗಳಿಂದ ವೊಡಾಫೋನ್‌ ಐಡಿಯಾಗೆ ಸಂಕಷ್ಟ!

ಈ ತಿಕ್ಕಾಟದಲ್ಲಿ ವೊಡಾಫೋನ್ ಐಡಿಯಾ ದೊಡ್ಡ ಮಟ್ಟದಲ್ಲಿ ತನ್ನ ನೆಲೆಯನ್ನು ಕಳೆದುಕೊಳ್ಳಲಿದೆ. ವೊಡಾಫೋನ್ ಗಿಂತಲೂ ಭಾರ್ತಿ ಏರ್ ಟೆಲ್ ನೆಟ್ ವರ್ಕ್ ಕವರೇಜ್ ಹಾಗೂ ಡಿಜಿಟಲ್ ವ್ಯಾಪ್ತಿ ದೊಡ್ಡದಿದೆ. ಆ ಕಾರಣಕ್ಕೆ ಈ ತಿಕ್ಕಾಟದಲ್ಲಿ ಭಾರ್ತಿ ಏರ್ ಟೆಲ್ ಗೆ ಅತಿ ಕಡಿಮೆ ಸಮಸ್ಯೆ ಆಗಲಿದೆ ಎಂದು ಜೆಪಿ ಮೋರ್ಗನ್ ಈಚಿನ ತನ್ನ ವರದಿಯಲ್ಲಿ ಹೇಳಿದೆ.

ಮೊಬೈಲ್ ಕರೆ- ಇಂಟರ್ನೆಟ್ ಹಾಗೂ ಫೈಬರ್ ಬ್ರಾಡ್ ಬ್ಯಾಂಡ್ ಸೇವೆ ದರ ಸಮರದ ನಂತರ ಏಷ್ಯಾದ ಶ್ರೀಮಂತ ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಜಿಯೋದಿಂದ ಮಂಗಳವಾರ ಜಿಯೋ ಪೋಸ್ಟ್ ಪೇಯ್ಡ್ ಪ್ಲಾನ್ ಗಳನ್ನು ಬಹಿರಂಗ ಮಾಡಲಾಗಿದೆ. ಇದರಲ್ಲಿ 500 GB ತನಕ ಡೇಟಾ, ನೆಟ್ ಫ್ಲಿಕ್ಸ್, ಅಮೆಜಾನ್ ಪ್ರೈಮ್ ಮತ್ತು ಡಿಸ್ನಿ+ ಹಾಟ್ ಸ್ಟಾರ್ VIP ಚಂದಾದಾರಿಕೆ ಗ್ರಾಹಕರಿಗೆ ಲಭ್ಯವಾಗುತ್ತವೆ.

ಜಿಯೋ ಪೋಸ್ಟ್ ಪೇಯ್ಡ್ ಆಫರ್ ಗಳಿಂದ ವೊಡಾಫೋನ್‌ ಐಡಿಯಾಗೆ ಸಂಕಷ್ಟ!

ಇದೀಗ ಜಿಯೋ ಪೋಸ್ಟ್ ಪೇಯ್ಡ್ ವಿಭಾಗದಲ್ಲಿ ತಂದಿರುವ ಈ ಪ್ಲಾನ್ ಗಳು ಮಹತ್ತರ ಬದಲಾವಣೆಯನ್ನೇ ತರುತ್ತವೆ. ಏಕೆಂದರೆ, ಆವರೇಜ್ ರೆವೆನ್ಯೂ ಪರ್ ಯೂಸರ್ (ಎಆರ್ ಪಿಯು) ಪೋಸ್ಟ್ ಪೇಯ್ಡ್ ನಲ್ಲಿ ಪ್ರೀ ಪೇಯ್ಡ್ ಗಿಂತ ಮೂರು ಪಟ್ಟು ಹೆಚ್ಚಾಗಿರುತ್ತದೆ.

"ಈಗಿನ ಡೇಟಾ ವೆಚ್ಚವನ್ನು (ಪ್ರತಿ ಜಿಬಿಗೆ) ಒಟಿಟಿಗೂ ಸೇರಿ ಲೆಕ್ಕ ಹಾಕಿ ಹೇಳುವುದಾದರೆ, ಜಿಯೋದಿಂದ ಈಗ ಪ್ರೀಪೇಯ್ಶ್ ಪ್ಲಾನ್ ನಲ್ಲಿ ನೀಡುತ್ತಿರುವ ಅದೇ ಡೇಟಾ ಮಿತಿಯೊಂದಿಗೆ ಹೋಲಿಸಿದಲ್ಲಿ ಪೋಸ್ಟ್ ಪೇಯ್ಡ್ 50ರಿಂದ 33 ಪರ್ಸೆಂಟ್ ಅಗ್ಗವಾಗುತ್ತದೆ. ಇನ್ನು ಜಿಯೋದಿಂದ ಪೋಸ್ಟ್ ಪೇಯ್ಡ್ ಸ್ಮಾರ್ಟ್ ಫೋನ್ ಗ್ರಾಹಕರ ಸಂಖ್ಯೆಯನ್ನು 28 ಕೋಟಿಗೆ ಜಾಸ್ತಿ ಮಾಡಲು ಗುರಿ ಇರಿಸಿಕೊಳ್ಳಲಾಗಿದೆ ಹಾಗೂ ಎಆರ್ ಪಿಯು ಕೂಡ ಹೆಚ್ಚಿಸಿಕೊಳ್ಳಲು ಗುರಿ ಇರಿಸಿಕೊಂಡಿದ್ದಾರೆ,'' ಎಂದು ಜೆಪಿ ಮೋರ್ಗನ್ ಹೇಳಿದೆ.

ಇದರಿಂದ ಒಟ್ಟಾರೆ ಮಾರುಕಟ್ಟೆ ಎಆರ್ ಪಿಯುವನ್ನು ಹೆಚ್ಚಿಸುತ್ತದೆ ಹಾಗೂ ಟೆಲಿಕಾಂ ವಲಯಕ್ಕೆ ಸಕಾರಾತ್ಮಕವಾಗಲಿದೆ ಎನ್ನಲಾಗಿದೆ. ಇನ್ನು ಜಿಯೋ ನೀಡುತ್ತಿರುವ ಈ ಒಟಿಟಿ ಜತೆಗಿನ ಯೋಜನೆಯನ್ನು ಸರಿತೂಗಿಸಬೇಕು ಎಂದಾದರೆ, ಇತರ ಟೆಲಿಕಾಂ ಕಂಪೆನಿಗಳ 2021ನೇ ಆರ್ಥಿಕ ವರ್ಷದ ಆದಾಯದಲ್ಲಿ (EBITDA) 1ರಿಂದ 6 ಪರ್ಸೆಂಟ್ ಪರಿಣಾಮ ಆಗುತ್ತದೆ ಎಂದು ಸೇರಿಸಲಾಗಿದೆ.

ಈಗ ಹೆಡ್ ಲೈನ್ ಗಳಾಗುವಂತೆ ದರ ಇಳಿಸಿದೆವು ಅಂದರೆ ಆಗಲ್ಲ. ವೊಡಾಫೋನ್ ಐಡಿಯಾ ಹಾಗೂ ಭಾರ್ತಿ ಸಹ ಪೋಸ್ಟ್ ಪೇಯ್ಡ್ ಚಂದಾದಾರರಿಗೆ ಒಟಿಟಿ ಸಬ್ ಸ್ಕ್ರಿಪ್ಷನ್ ಒದಗಿಸಬೇಕಾಗುತ್ತದೆ ಎಂಬುದನ್ನು ಹೇಳಲಾಗಿದೆ. ಜಿಯೋದ ಪೋಸ್ಟ್ ಪೇಯ್ಡ್ ಕೊಡುಗೆ ಸರಿಯಾದ ಸಮಯದಲ್ಲಿ ಬಂದಿದ್ದು, ವೊಡಾ- ಐಡಿಯಾದ ಪಾಲನ್ನು ಅದು ತೆಗೆದುಕೊಳ್ಳಲಿದೆ. ಆದರೆ ಭಾರ್ತಿ ದೋಣಿಯನ್ನು ಪೂರ್ತಿ ಅಲುಗಾಡಿಸುವುದು ಕಷ್ಟ ಎಂದು ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.

ಇದು ಪೋಸ್ಟ್ ಪೇಯ್ಡ್ ಗ್ರಾಹಕರ ಸಂಖ್ಯೆ ಹೆಚ್ಚಿಸಿಕೊಳ್ಳಲು ಜಿಯೋ ಮಾಡುತ್ತಿರುವ ಎರಡನೇ ಪ್ರಯತ್ನ. ಜತೆಗೆ ವೊಡಾಫೋನ್ ಐಡಿಯಾದ 2.3 ಕೋಟಿ ಚಂದಾದಾರರನ್ನು ಸೆಳೆಯಲು ಸರಿಯಾದ ಸಮಯವೂ ಹೌದು ಎಂದು ಜೆಪಿ ಮೋರ್ಗನ್ ನ ಜೆಫೆರೀಸ್ ಹೇಳಿದ್ದಾರೆ. ಈ ಸನ್ನಿವೇಶದಲ್ಲಿ ಭಾರ್ತಿ ಪಾಲಿಗೆ ಇರುವ ಅಪಾಯ ಸೀಮಿತವಾದದ್ದು. ಅಂಥ ಸವಾಲನ್ನು ಅದು ಎದುರಿಸಬಲ್ಲದು ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಜಿಯೋ ಪೋಸ್ಟ್ ಪೇಯ್ಡ್ ಆಫರ್ ಗಳಿಂದ ವೊಡಾಫೋನ್‌ ಐಡಿಯಾಗೆ ಸಂಕಷ್ಟ!

ಸೇವಾ ಗುಣಮಟ್ಟದ ಕಂದಕ ಹೆಚ್ಚಾಗುತ್ತದೆ. ಆದ್ದರಿಂದ ವೊಡಾಫೋನ್ ಐಡಿಯಾದ ಪೋಸ್ಟ್ ಪೇಯ್ಡ್ ಗ್ರಾಹಕರೇ ಜಿಯೋಗೆ ಸೆಳೆಯುವ ಸಾಧ್ಯತೆ ಹೆಚ್ಚು. ಇನ್ನು ಭಾರ್ತಿಯಿಂದ 25% ಪ್ರೀಮಿಯಂ ದರದ ಪ್ರೀಪೇಯ್ಡ್ ವಿಭಾಗದವರಿದ್ದಾರೆ. ಈಗ ಜಿಯೋದಿಂದ ಪೋಸ್ಟ್ ಪೇಯ್ಡ್ ದರ ಇಳಿಸಿರುವುದರಿಂದ ಆಪರೇಟರ್ ಕಂಪೆನಿಗೆ ವಾಸ್ತವವಾಗಿ ಸಮಸ್ಯೆ ಆಗಲಿಕ್ಕಿಲ್ಲ ಎಂದಿದ್ದಾರೆ.

Emkay ವರದಿಯಲ್ಲಿ ದಾಖಲಿಸಿರುವಂತೆ, ಈ ಹಿಂದೆ ಜಿಯೋದಿಂದ ಪೋಸ್ಟ್ ಪೇಯ್ಡ್ ಮಾರ್ಕೆಟ್ ಪಾಲು ಹೆಚ್ಚಿಸಿಕೊಳ್ಳಲು ಆಕ್ರಮಣಕಾರಿಯಾಗಿ ದರಗಳನ್ನು ನಿಗದಿ ಮಾಡಲಾಯಿತು. ಆದರೂ ಗ್ರಾಹಕರನ್ನು ಸೆಳೆಯಲು ಆಗಲಿಲ್ಲ. ಏಕೆಂದರೆ ಹೇಳಿಕೊಳ್ಳುವಂಥ ಅನುಕೂಲಗಳು ಗ್ರಾಹಕರಿಗೆ ದೊರೆಯುತ್ತವೆ ಎಂದು ಮನವೊಲಿಸಲು ಸಫಲವಾಗಲಿಲ್ಲ. ಆದರೆ ಈ ಸಲ ವಿಪರೀತ ಆಕ್ರಮಣಕಾರಿಯಾಗಿ ಒಟಿಟಿ ಆಫರ್ ಗಳು, ಕಡಿಮೆ ದರದ ಮೂಲಕ ಗ್ರಾಹಕರನ್ನು ಜಿಯೋ ಸೆಳೆಯುತ್ತಿದೆ.

ವೊಡಾಫೋನ್ ಐಡಿಯಾದ ಆರ್ಥಿಕ ಸ್ಥಿತಿ ದುರ್ಬಲವಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಇರುವ ಪೋಸ್ಟ್ ಪೇಯ್ಡ್ ಚಂದಾದಾರರ ಸಂಖ್ಯೆಯಿಂದ ಹೆಚ್ಚು ನಷ್ಟಕ್ಕೆ ಈಡಾಗುತ್ತಿದೆ. ಭಾರ್ತಿ ಕೂಡ ಜಿಯೋ ರೀತಿಯಲ್ಲೇ ಆಫರ್ ಗಳು ಕೊಡಬಹುದು. ಅದರಿಂದ ಚಂದಾದಾರರ ನಷ್ಟ ಹಾಗೂ ಆದಾಯದ ಮೇಲಿನ ಪರಿಣಾಮ ಮಿತಿಗೊಳ್ಳಬಹುದು ಎಂದು ವರದಿ ಹೇಳಿದೆ.

BNP ಪರಿಬಾಸ್ ಮಾತನಾಡಿ, ಪೋಸ್ಟ್ ಪೇಯ್ಡ್ ಗ್ರಾಹಕರಿಗೆ ಜಿಯೋದಿಂದ "ಆಕ್ರಮಣಕಾರಿ" ಹೊಸ ಕರೆ ಪ್ಲಾನ್ ಗಳನ್ನು ಘೋಷಣೆ ಮಾಡಲಾಗಿದೆ ಎಂದಿದೆ. ಇನ್ನು ಜಿಯೋದ ಹೊಸ ಪೋಸ್ಟ್ ಪೇಯ್ಡ್ ಪ್ಲಾನ್ ತಿಂಗಳಿಗೆ 399 ರುಪಾಯಿಯಿಂದ ಶುರುವಾಗುತ್ತದೆ (ಈ ಹಿಂದೆ 199 ರುಪಾಯಿ ಇತ್ತು). ಈಗ ಅತಿ ದೊಡ್ಡ ವ್ಯತ್ಯಾಸ ಏನೆಂದರೆ, ಪ್ರೀಮಿಯಂ ಕಂಟೆಂಟ್ ಗಳು ಸಿಕ್ಕಾಪಟ್ಟೆ ಕೈಗೆಟುಕುವ ದರದಲ್ಲೇ ಸಿಗುತ್ತದೆ ಎಂದು ಹೇಳಿದೆ.

ಸ್ಪರ್ಧೆ ನೀಡಬೇಕು ಎಂದಾದರೆ ಪ್ರತಿಸ್ಪರ್ಧಿಗಳು ನೆಟ್ ಫ್ಲಿಕ್ಸ್ ಕೊಡಬೇಕಾಗುತ್ತದೆ ಎಂದಿದ್ದು, ದೊಡ್ಡ ಸಂಖ್ಯೆಯ ಗ್ರಾಹಕರಿಗೆ ಆಕರ್ಷಕ ಕಂಟೆಂಟ್ ಗಳು ಪೋಸ್ಟ್ ಪೇಯ್ಡ್ ಕಡೆಗೆ ಸೆಳೆಯುತ್ತವೆ ಮತ್ತು ಇದರಿಂದ ಪೋಸ್ಟ್ ಪೇಯ್ಡ್ ಮಾರುಕಟ್ಟೆ ಗಾತ್ರ ವಿಸ್ತರಣೆ ಆಗಲಿದೆ ಎಂದು ಹೇಳಿದೆ.

Most Read Articles
Best Mobiles in India

English summary
Jio's aggressive postpaid offensive with plans that pack-in extensive content portfolio is timed well, and could wrest away market share from Vodafone Idea, analysts said.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X