ಮಾರ್ಚ್ 31ಕ್ಕೆ ಜಿಯೋ ಪ್ರೈಮ್‌ ಸದಸ್ಯತ್ವ ಕೊನೆ: ಮುಂದೇನು..?

|

ದೇಶಿಯ ಟೆಲಿಕಾಂ ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಹುಟ್ಟಿಹಾಕಿದ ರಿಲಯನ್ಸ್ ಮಾಲೀಕತ್ವದ ಜಿಯೋ, ಮೊದಲ ಆರು ತಿಂಗಳ ಉಚಿತ ಸೇವೆಯನ್ನು ನೀಡಿದ ನಂತರದಲ್ಲಿ ಶುರು ಮಾಡಿದಂತಹ ಪ್ರೈಮ್‌ ಮೆಂಬರ್ ಶಿಪ್ ಯೋಜನೆಯೂ ಶೀಘ್ರವೇ ಕೊನೆಯಾಗುವ ದಿನಗಳು ಹತ್ತಿರ ಬರುತ್ತಿದೆ. ಈ ಹಿನ್ನಲೆಯಲ್ಲಿ ರೂ.99 ನೀಡಿ ಸದಸ್ಯತ್ವ ಪಡೆದುಕೊಂಡರೆಲ್ಲರೂ ಮತ್ತೇ ರಿಚಾರ್ಜ್ ಮಾಡಿಸಬೇಕೆ ಹೇಗೆ..?

ಮಾರ್ಚ್ 31ಕ್ಕೆ ಜಿಯೋ ಪ್ರೈಮ್‌ ಸದಸ್ಯತ್ವ ಕೊನೆ: ಮುಂದೇನು..?

ಪ್ರೈಮ್‌ ಸದಸ್ಯತ್ವವನ್ನು ಮುಂದುವರೆಸಿಕೊಳ್ಳಲು ಜಿಯೋ ಬಳಕೆದಾರರು ಏನು ಮಾಡಬೇಕು ಎನ್ನುವ ಮಾಹಿತಿಯೂ ಜಿಯೋ ಕಡೆಯಿಂದ ಲಭ್ಯವಾಗಿಲ್ಲ. ಈ ಹಿನ್ನಲೆಯಲ್ಲಿ ಮಾರ್ಚ್ 31 ರಂದು ಜಿಯೋ ಪ್ರೈಮ್ ಅವಧಿಯೂ ಕೊನೆಯಾಗಲಿದ್ದು, ಇದಾದ ನಂತರದಲ್ಲಿ ಜಿಯೋ ಯಾವ ಪ್ಲಾನ್ ಘೋಷಣೆ ಮಾಡಲಿದೆ ಎನ್ನುವುದನ್ನು ಕಾದು ನೋಡಬೇಕಾಗಿದೆ. ಜಿಯೋ ಮಾರುಕಟ್ಟೆಯಲ್ಲಿ ಪ್ರೈಮ್ ಸದಸ್ಯರಿಗೆ ಹೆಚ್ಚಿನ ಲಾಭವನ್ನು ಮಾಡಿಕೊಟ್ಟಿದೆ ಎನ್ನಲಾಗಿದೆ.

ಹೆಚ್ಚು ಡೇಟಾ:

ಹೆಚ್ಚು ಡೇಟಾ:

ಜಿಯೋ ತನ್ನ ಚಂದಾದಾರಿಕೆಯನ್ನು ಪಡೆದವರಿಗೆ ಪ್ಲಾನ್‌ಗಳಲ್ಲಿ ಹೆಚ್ಚುವರಿ ಡೇಟಾವನ್ನು ಮತ್ತು ತನ್ನ ಇತರೆ ಸೇವೆಗಳ ಲಾಭವನ್ನು ಉಚಿತವಾಗಿ ಪಡೆದುಕೊಳ್ಳುವ ಅವಕಾಶವನ್ನು ಮಾಡಿಕೊಟ್ಟಿತ್ತು. ಅಲ್ಲದೇ ಕ್ಯಾಷ್ ಬ್ಯಾಕ್, ರಿಚಾರ್ಜ್ ವೋಚರ್ ಗಳನ್ನ ನೀಡುವ ಮೂಲಕ ಇತರೆ ಟೆಲಿಕಾಂ ಕಂಪನಿಗಳಿಗಿಂತ ತನ್ನ ಗ್ರಾಹಕರಿಗೆ ಹೆಚ್ಚಿನ ಲಾಭವನ್ನು ಮಾಡಿಕೊಡಲು ಮುಂದಾಗಿತ್ತು. ಈ ಹಿನ್ನಲೆಯಲ್ಲಿ ಪ್ರೈಮ್ ಸದಸ್ಯರು ಮತ್ತೇ ತನ್ನ ಸೇವೆಯನ್ನು ವಿಸ್ತರಿಸಲಿ ಎಂದು ಆಶಯ ವ್ಯಕ್ತಪಡಿಸುತ್ತಿದ್ದಾರೆ.

ಪ್ರೈಮ್ ಸದಸ್ಯತ್ವ:

ಪ್ರೈಮ್ ಸದಸ್ಯತ್ವ:

ಕಾರಣ ರೂ.99 ನೀಡಿ ಪ್ರೈಮ್ ಸದಸ್ಯತ್ವವನ್ನು ಪಡೆದುಕೊಂಡವರಿಗೆ ಜಿಯೋ, ಸಾಮಾನ್ಯ ಬಳಕೆದಾರರಿಗಿಂತಲೂ ಶೇ.200 ಹೆಚ್ಚು ಲಾಭವನ್ನು ಮಾಡಿಕೊಟ್ಟಿತ್ತು. ಅಲ್ಲದೇ ಡೇಟಾ ಮತ್ತು ಕರೆ ಆಫರ್‌ಗಳಲ್ಲಿಯೂ ಹೆಚ್ಚಿನ ಆಯ್ಕೆಯನ್ನು ಬಳಕೆದಾರರಿಗೆ ನೀಡಲು ಮುಂದಾಗಿತ್ತು. ಆದರೆ ಸದ್ಯ ಮಾರುಕಟ್ಟೆಯಲ್ಲಿ ಪ್ರೈಮ್ ಸದಸ್ಯರು ಹೆಚ್ಚಿನ ಲಾಭವನ್ನು ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

ಅಂಬಾನಿ ನಿರ್ಧಾರ:

ಅಂಬಾನಿ ನಿರ್ಧಾರ:

ಮತ್ತೆ ಮುಂದುವರೆಸುವ ಸಾಧ್ಯತೆ ಇದೆ ಎನ್ನಲಾಗಿದ್ದು, ಆದರೆ ಕೊಂಚ ಬೆಲೆಯಲ್ಲಿ ಏರಿಕೆ ಮಾಡಬಹುದು ಎನ್ನುವ ಮಾತು ಕೇಳಿ ಬಂದಿದೆಯಾದರೂ, ಜಿಯೋ ಬೆಲೆ ಏರಿಕೆಗೆ ಮುಂದಾಗುವ ಬಲದಲು ಪ್ರೈಮ್ ಸದಸ್ಯತ್ವವನ್ನು ಉಚಿತವಾಗಿಯೇ ಘೋಷಣೆ ಮಾಡುವ ಸಾಧ್ಯತೆಯೂ ದಟ್ಟವಾಗಿದೆ ಎನ್ನುವ ಮಾತುಗಳು ಕೇಳಿಬಂದಿದೆ. ಒಟ್ಟಿನಲ್ಲಿ ಜಿಯೋ ಪ್ರೈಮ್ ಕುರಿತಂತೆ ಅಂಬಾನಿ ನಿರ್ಧಾರ ಕುರಿತು ಸಾಕಷ್ಟು ನಿರೀಕ್ಷೆಗಳು ಇದೆ.

Jio-Fi ಪಾಸ್‌ವರ್ಡ್ ಬದಲಾಯಿಸುವುದು ಹೇಗೆ,,?
ಶೀಘ್ರವೇ ಮಾಹಿತಿ:

ಶೀಘ್ರವೇ ಮಾಹಿತಿ:

ಈಗಾಗಲೇ ಜಿಯೋ ಪಾಳಯದಿಂದ ಹೊಸ ನಿರ್ಧಾರದ ಕುರಿತು ಮಾಹಿತಿಯೂ ಲಭ್ಯವಾಗಬೇಕಿತ್ತು. ಆದರೆ ಇನ್ನು ದೊರೆತಿಲ್ಲ. ಮೂಲಗಳ ಪ್ರಕಾರ ಇನ್ನೇರಡು ದಿನದಲ್ಲಿ ಈ ಕುರಿತು ಮಾಹಿತಿಯೂ ಲಭ್ಯವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

Best Mobiles in India

English summary
Jio Prime membership expires on March 31, what's next?. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X