ಕೇವಲ 100 ರೂಪಾಯಿಗಳಲ್ಲಿ ಜಿಯೋವಿನ 399 ರೂ.ಪ್ಲಾನ್ ಪಡೆಯುವುದು ಹೇಗೆ?

  ಪೋಸ್ಟ್‌ಪೇಯ್ಡ್ ಆಫರ್ ಪ್ರಕಟಿಸಿದ ನಂತರ ಇದೀಗ ನಂತರ ಜಿಯೋ ಇದೀಗ ಮತ್ತೊಂದು "ಹಾಲಿಡೇ ಹಂಗಾಮ" ಹಂಗಾಮ ಆಫರ್ ಅನ್ನು ಘೋಷಿಸಿ ಟೆಲಿಕಾಂ ಅನ್ನು ಬೆಚ್ಚಿ ಬೀಳಿಸಿದೆ. ಜಿಯೋವಿನ ಜನಪ್ರಿಯ ಆಫರ್ ಒಂದರ ಬೆಲೆಯಲ್ಲಿ ಭಾರೀ ಕಡಿತಗೊಳಿಸಿರುವ ಜಿಯೋ ತನ್ನ ಬಳಕೆದಾರರಿಗೆ ಸೀಮಿತ ಕೊಡುಗೆ ಆಫರ್ ಒಂದನ್ನು ಘೋಷಿಸಿ ಕುತೋಹಲ ಮೂಡಿಸಿದೆ.

  ಜಿಯೋ ಪ್ರೀಪೇಯ್ಡ್ ಬಳಕೆದಾರರಿಗೆ ಮುಂಗಾರು ಪ್ರವೇಶದ ಕಾಲದಲ್ಲಿ "ಹಾಲಿಡೇ ಹಂಗಾಮ" ಸಿಗಲಿದ್ದು, ರೂ. 399ರ ಜಿಯೋ ಪ್ಲಾನ್ ಅನ್ನು ಜಿಯೋ ಗ್ರಾಹಕರು ವಾಸ್ತವವಾಗಿ ಈಗ ಕೇವಲ 100 ರೂಪಾಯಿಗಳ ವಿಶೇಷ ರಿಯಾಯಿತಿಯಲ್ಲಿ ಪಡೆಯಬಹುದಾಗಿದೆ. ಈ ಆಫರ್ ಪಡೆಯುವ ಅವಧಿಯನ್ನು ಜಿಯೋ ಸೀಮಿತ ಅವದಿಗೆ ಮಾತ್ರ ನಿಗದಿಪಡಿಸಿರುವುದಾಗಿ ಹೇಳಿದೆ.

  ಕೇವಲ 100 ರೂಪಾಯಿಗಳಲ್ಲಿ ಜಿಯೋವಿನ 399 ರೂ.ಪ್ಲಾನ್ ಪಡೆಯುವುದು ಹೇಗೆ?

  ಈ ಹೊಸ ಕೊಡುಗೆಯ ಮೂಲಕ ಜಿಯೋದ ಅಪರಿಮಿತ ಸೇವೆಗಳ (ಪ್ರತಿದಿನ 1.5 ಜಿಬಿ ಡೇಟಾ ಜೊತೆಗೆ) ಮೇಲೆ ಜಿಯೋ 100 ರೂ. ಡಿಸ್ಕೌಂಟ್ಸ್ ಘೋಷಿಸಿದೆ. ಆದರೆ, ವಾಸ್ತವಿಕವಾಗಿ ಈ ಆಫರ್ ಅನ್ನು ಕೇವಲ ರೂ. 100ರಲ್ಲಿ ಪಡೆಯಬಹುದಾಗಿದೆ. ಹಾಗಾದರೆ, ಜಿಯೋ 399ರ ಜಿಯೋ ಪ್ಲಾನ್ ಅನ್ನು 100 ರೂಪಾಯಿಗಳಲಿ ಪಡೆಯುವುದು ಹೇಗೆ ಎಂದು ಮುಂದೆ ತಿಳಿಯಿರಿ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  100 ರೂ. ಡಿಸ್ಕೌಂಟ್ಸ್!!

  ಜನಪ್ರಿಯ 399ರ ಜಿಯೋ ರೀಚಾರ್ಜ್ ಪ್ಲಾನ್ ಅನ್ನು ಜಿಯೋ ಕಂಪೆನಿ ಸೀಮಿತ ಅವಧಿಗೆ ಬದಲಾಯಿಸಿಕೊಂಡಿದೆ. ಒಟ್ಟು 126 GB ಡೇಟಾವನ್ನು ಹೊಂದಿರುವ ಜಿಯೋ 399 ರೂ. ರೀಚಾರ್ಜ್ ಪ್ಲಾನ್ ಅನ್ನು ಕೇವಲ 299 ರೂಪಾಯಿಗಳಲ್ಲಿ ಪಡೆಯಬಹುದದಾಗಿದೆ. ಈ ಆಫರ್ ಕೂಡ ಮೊದಲಿನಂತೆ 84 ದಿವಸಗಳ ವ್ಯಾಲಿಡಿಟಿಯನ್ನು ಹೊಂದಿದೆ.

  100 ರೂ.ಗೆ 399 ರೂ. ಆಫರ್!!

  ಜಿಯೋವಿನ 100 ರೂ. ಡಿಸ್ಕಕೌಂಟ್ಸ್ ಜೊತೆಗೆ ಮೈಜಿಯೋ ಆಪ್ ಮೂಲಕ ರೀಚಾರ್ಜ್ ಮಾಡಿದರೆ 50 ರೂಪಾಯಿ ಕ್ಯಾಶ್‌ಬ್ಯಾಕ್ ವೋಚರ್ ಹೊಂದಿರುವ ಜಿಯೋ ಪ್ರೀಪೇಯ್ಡ್ ಗ್ರಾಹಕರಿಗೆ ತಕ್ಷಣವೇ 50 ರೂಪಾಯಿ ರಿಯಾಯಿತಿ ಸಿಗಲಿದೆ. ಜತೆಗೆ ಫೋನ್‌ಪೇ ಮೂಲಕ ಪಾವತಿಸುವ ಗ್ರಾಹಕರಿಗೆ ರೂ. 100ರ ಈ ವಿಶೇಷ ರಿಯಾಯಿತಿ ಮೈಜಿಯೋ ಆಪ್‌ನಲ್ಲಿ ಲಭ್ಯವಾಗಲಿದೆ.

  Jio Fi ಬಳಸಿ 2G ಮತ್ತು 3G ಗ್ರಾಹಕರು ಕಾಲ್ ಮಾಡುವುದು ಹೇಗೆ?
  ಸೀಮಿತ ಅವಧಿಗೆ ಮಾತ್ರ!!

  ಸೀಮಿತ ಅವಧಿಗೆ ಮಾತ್ರ!!

  ಜಿಯೋ ನೀಡಿರುವ ಇದೊಂದು ಸೀಮಿತ ಅವಧಿಯ ಕೊಡುಗೆಯಾಗಿದ್ದು ಜೂನ್ 1ರಿಂದ ಜೂನ್ 15, 2018ರವರೆಗೆ ಮಾತ್ರ ಲಭ್ಯವಿರಲಿದೆ.ರಜಾದಿನಗಳ ಸಂದರ್ಭದಲ್ಲಿ ಪರಿಚಯಿಸಲಾಗಿರುವ ಈ ಕೊಡುಗೆಯ ಮೂಲಕ, ಗ್ರಾಹಕರು ತಮ್ಮ ರಜೆಯ ಸದುಪಯೋಗಪಡಿಸಿಕೊಳ್ಳುವಲ್ಲಿ ನೆರವಾಗಲು ಜಿಯೋ ಇಚ್ಛಿಸುವುದಾಗಿ ಹೇಳಿದೆ.

  ಬೆಚ್ಚಿಬಿತ್ತು ಟೆಲಿಕಾಂ!!

  ಅತ್ಯಂತ ಜನಪ್ರಿಯ ರೂ. 399ರ ಜಿಯೋ ಪ್ಲಾನ್ ರೂ. 100 ತತ್‌ಕ್ಷಣದ ರಿಯಾಯಿತಿಯಿಂದಾಗಿ ಇದೀಗ ರೂ. 299ರೂಪಾಯಿಗಳಾಗಿದೆ. ಜೊತೆಗೆ ಮೈಜಿಯೋ ಆಪ್‌ನಲ್ಲಿ, ಫೋನ್‌ಪೇ ಮೂಲಕ ಹಣ ಪಾವತಿಸಿದಾಗ ರೂ. 50 ರಿಯಾಯಿತಿ ಸಿಗುವುದರಿಂದ ಟೆಲಿಕಾಂ ಪ್ರಪಂಚ ಮತ್ತೆ ಬೆಚ್ಚಿಬಿದ್ದಿದೆ ಎಂದು ಹೇಳಬಹುದು.

  ಭಾರತದ ಶ್ರೀಮಂತ ವ್ಯಕ್ತಿ ಅಂಬಾನಿ ಬಗ್ಗೆ ನೀಮಗೆ ತಿಳಿಯದ 10 ಸತ್ಯ ಸಂಗತಿಗಳಿವು!!

  ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ ಬಗ್ಗೆ ಯಾರಿಗೆ ಗೊತ್ತಿಲ್ಲಾ ಹೇಳಿ.? ಅದರಲ್ಲಿಯೂ ಟೆಲಿಕಾಂ ಕಂಪೆನಿ ಜಿಯೋ ವನ್ನು ಶುರುಮಾಡಿದ ನಂತರವಂತೂ, ಪ್ರತಿಯೋರ್ವ ಭಾರತೀಯನಿಗೂ ಅಂಬಾನಿ ಈಗ ದೇವರಾಗಿದ್ದಾರೆ. ಟೆಲಿಕಾಂ ಲೋಕದ ಆಧುನಿಕ ಡೇಟಾ ದೇವರು ಎಂದೆ ಹೆಸರಾಗಿರುವ ಅಂಬಾನಿಗೆ ಈಗ 61 ವರ್ಷ ತುಂಬಿದೆ.!

  ಹೌದು, ಮಾರ್ಚ್ 2018 ರಲ್ಲಿ ಬಿಡುಗಡೆಯಾದ ಫೋರ್ಬ್ಸ್ ಮಾಹಿತಿಯ ಪ್ರಕಾರ, ಭಾರತದಲ್ಲಿ ಮಾತ್ರವಲ್ಲದೇ ವಿಶ್ವದಲ್ಲೇ ಅತ್ಯಂತ ಶಕ್ತಿಶಾಲಿ ವ್ಯಾಪಾರಿಗಳಲ್ಲಿ ಒಬ್ಬರಾಗಿರುವ ಮುಕೇಶ್ ಅಂಬಾನಿ ಇಂದು ವಿಶ್ವದ ಬೃಹತ್ ಉದ್ಯಮಿಗಳಲ್ಲಿ ಓರ್ವರಾಗಿ ಬೆಳೆದುನಿಂತಿದ್ದಾರೆ. ತಮ್ಮ 61 ವರ್ಷ ವಯಸ್ಸಿನಲ್ಲಿ ಅಭೂತಪೂರ್ವ ಸಾಧನೆ ಮಾಡಿ ವಿಶ್ವದ ಗಮನಸೆಳೆದಿದ್ದಾರೆ.

  1957 ರ ಎಪ್ರಿಲ್ 19 ರಂದು ಜನಿಸಿದ ಮುಖೇಶ್ ಅಂಬಾನಿ, ಪ್ರಸ್ತುತ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ ಸಂಸ್ಥೆ ಸಿಇಒ ಮತ್ತು ಅಧ್ಯಕ್ಷರಾಗಿ ಮುಂದುವರೆದಿದ್ದಾರೆ. ಹಾಗಾಗಿ, ವಿಶ್ವದಲ್ಲಿಯೇ ಹೆಸರುಗಳಿಸುವಂತೆ ಸಂಸ್ಥೆಯನ್ನು ಮುನ್ನಡೆಸಿದ ಮುಖೇಶ್ ಅಂಬಾನಿ ಅವರ ವಯಕ್ತಿಕ ಜೀವನದ ಬಗ್ಗೆ ಇರುವ 10 ಆಸಕ್ತಿದಾಯಕ ಸಂಗತಿಗಳು ನಿಮಗೆ ತಿಳಿಸಿಕೊಡುತ್ತಿದ್ದೇವೆ.

  ಜಿಯೊ ಚಂಡಮಾರುತ!!

  ಮುಖೇಶ್ ಅಂಬಾನಿ ಜಿಯೊವನ್ನು ಪ್ರಾರಂಭಿಸಿದಾಗ, ಭಾರತದ ಟೆಲಿಕಾಂ ವಲಯವು ಚಂಡಮಾರುತಕ್ಕೆ ಸಿಲುಕಿದಂತಾಯಿತು. ಜಿಯೋ ಶುರುವಾದ ಒಂದು ತಿಂಗಳೊಳಗೆ 16 ದಶಲಕ್ಷ ಚಂದಾದಾರರನ್ನು ಗಳಿಸಿ ದಾಖಲೆ ಸೃಷ್ಟಿಸಿತು. ಸ್ಪರ್ಧಾತ್ಮಕ ಟೆಲಿಕಾಂ ಬೆಲೆ ಯುದ್ಧವನ್ನು ಹೆಚ್ಚಿಸಿತು. ಅಂತಿಮವಾಗಿ ಗ್ರಾಹಕರಿಗೆ ಲಾಭದಾಯಕವಾಗಿರುವ ಜಿಯೋ ಈಗಲೂ ಗ್ರಾಹಕರ ಅತ್ಯುತ್ತಮ ಟೆಲಿಕಾಂ ಕಂಪೆನಿಯಾಗಿದೆ.

  ಅಂಬಾನಿ ಫೇವರೇಟ್ ಗೇಮ್ ಕ್ರಿಕೆಟ್ ಅಲ್ಲ.!!

  ಇಂಡಿಯನ್ ಪ್ರೀಮಿಯರ್ ಲೀಗ್ ಫ್ರಾಂಚೈಸ್ ಮಾಲಿಕತ್ವ ಹೊಂದಿರುವ ಅಂಬಾನಿ ಮುಂಬಯಿ ಇಂಡಿಯನ್ಸ್ ಕ್ರಿಕೆಟ್ ತಂಡವನ್ನು ಹೊಂದಿರುವುದು ನಿಮಗೆಲ್ಲಾ ತಿಳಿದಿದೆ. ಆದರೆ, ಮುಖೇಶ್ ಅಂಬಾನಿ ಅವರ ಶಾಲಾ ದಿನಗಳಲ್ಲಿ ಹೆಚ್ಚಾಗಿ ಹಾಕಿಯನ್ನು ಆಡುತ್ತಿದ್ದರು ಮತ್ತು ಹಾಕಿ ಆಟದ ಕಾರಣದಿಂದಾಗಿ ಅವರು ಅಧ್ಯಯನದಲ್ಲಿ ಆಸಕ್ತಿ ಕಳೆದುಕೊಂಡಿದ್ದರು.!!

  ವಿಶ್ವದ ಅತಿ ದೊಡ್ಡ ಸಂಸ್ಕರಣಾಗಾರ!!

  ಐಟಿ ಉದ್ಯಮೇತರನಾಗಿ ಮುಖೇಶ್ ಅಂಬಾನಿ ಯಾವಾಗಲೂ ಒಳ್ಳೆಯ ಉದ್ಯಮಿ ಎನ್ನುತ್ತವೆ ವರದಿಗಳು. ಇದಕ್ಕೆ ಪೂರಕವೆಂಬಂತೆ ಮುಖೇಶ್ ಅಂಬಾನಿ ಅವರು ವಿಶ್ವದಲ್ಲಿಯೇ ಅತಿ ದೊಡ್ಡ ಸಂಸ್ಕರಣಾಗಾರವನ್ನು ಹೊಂದಿದ್ದಾರೆ. ಪ್ರಪಂಚದ ಅತಿದೊಡ್ಡ ಸಂಸ್ಕರಣಾಗಾರವಾದ ದಿನಕ್ಕೆ 6,68,000 ಬ್ಯಾರೆಲ್ ರಿಫೈನರಿ ನಡೆಯುತ್ತದಂತೆ.

  ವಿಶ್ವದ ಅತ್ಯಂತ ದುಬಾರಿ ಮನೆ!!

  ಮುಖೇಶ್ ಅಂಬಾನಿ ಅವರು ವಿಶ್ವದ ಅತ್ಯಂತ ದುಬಾರಿ ಮನೆಯ ಮಾಲಿಕತಾಗಿದ್ದಾರೆ. ದಕ್ಷಿಣ ಮುಂಬಯಿಯಲ್ಲಿ ಇರುವ ಅಂಟಿಲಿಯಾ ಮನೆಯ ಅಂದಾಜು ಮೌಲ್ಯ ಸುಮಾರು 1 ಬಿಲಿಯನ್ ಡಾಲರ್ ಎಂದು ವರದಿಯಾಗಿದೆ. ಈ ಮನೆ 27 ಅಂತಸ್ತುಗಳನ್ನು ಹೊಂದಿದ್ದು, 600 ಕ್ಕೂ ಹೆಚ್ಚಿನ ಸಿಬ್ಬಂದಿಗಳನ್ನು ಹೊಂದಿದೆ ಎನ್ನಲಾಗಿದೆ.

  ಅಂಬಾನಿ ಸ್ನೇಹಿತರು ಯಾರು ಗೊತ್ತಾ?

  ಮುಖೇಶ್ ಅಂಬಾನಿ ಅವರ ಶಾಲಾ ದಿನಗಳಲ್ಲಿ ಹೊಂದಿದ್ದ ಬಾಲ್ಯ ಸ್ನೇಹಿತರನ್ನೇ ಮುಂದೆಯೂ ಸ್ನೇಹಿತರನ್ನಾಗಿಯೇ ಕಾಪಾಡಿಕೊಂಡುಬಂದಿದ್ದಾರೆ. ಉದ್ಯಮಿಗಳಾದ ಆದಿ ಗೋದ್ರೆಜ್ ಮತ್ತು ಆನಂದ್ ಮಹೀಂದ್ರಾ ಅವರು ಅಂಬಾನಿ ಅವರ ಶಾಲೆಯ ಸಹವರ್ತಿಗಳು ಮತ್ತು ಅವರು ಈಗಲೂ ಅತ್ಯುತ್ತಮ ಸ್ನೇಹಿತರು.

  ಮದ್ಯಪಾನ ಮಾಡಲೇ ಇಲ್ಲ!!

  ಇಂದಿನ ಶ್ರೀಮಂತ ಮಕ್ಕಳಂತೆ ಮುಖೇಶ್ ಅಂಬಾನಿ ಎಂದಿಗೂ ಮದ್ಯಪಾನ ಮಾಡಲೇ ಇಲ್ಲವಂತೆ. ಕಾಲೇಜು ದಿನಗಳಿಂದಲೂ ಮದ್ಯಪಾನದಿಂದ ದೂರವೇ ಉಳಿದಿದ್ದ ಮುಖೇಶ್ ಅಂಬಾನಿ ಅವರು ಮಾಂಸವನ್ನು ತಿನ್ನುವುದಿಲ್ಲವಂತೆ. ಮೊಟ್ಟೆಯನ್ನು ತನ್ನದಂತಹ ಶುದ್ಧ ಸಸ್ಯಾಹಾರಿ ಅವರಂತೆ.!!

  168 ಕ್ಕಿಂತಲೂ ಹೆಚ್ಚು ಕಾರಿವೆ.!!

  ಮುಖೇಶ್ ಅಂಬಾನಿ ಕಾರುಗಳನ್ನು ಹೆಚ್ಚಾಗಿ ಇಷ್ಟಪಡುತ್ತಾರೆ. ಅಂಬಾನಿ ಬಳಿಯಲ್ಲಿ 168 ಕ್ಕಿಂತಲೂ ಹೆಚ್ಚು ಕಾರುಗಳಿವೆ. ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬಳಸುತ್ತಿರುವ ಹಾಗೂ ಬಾಂಬ್ ಸ್ಫೋಟವನ್ನು ತಡೆಯುವಷ್ಟು ರಕ್ಷಾಕವಚ ಹೊಂದಿರುವ BMW 760LI ಕಾರು ಬಳಕೆಯಲ್ಲಿದೆ. ಮರ್ಸಿಡಿಸ್-ಮೇಬ್ಯಾಚ್ ಬೆಂಜ್ S660 ಗಾರ್ಡ್, ಆಯ್ಸ್ಟನ್ ಮಾರ್ಟಿನ್ ರ್ಯಾಪಿಡ್, ರೋಲ್ಸ್ ರಾಯ್ಸ್ ಫ್ಯಾಂಟಮ್ ಕಾರುಗಳೂ ಕೂಡ ಅಂಬಾನಿ ಬತ್ತಳಿಕೆಯಲ್ಲಿವೆ.

  15 ಕೋಟಿ ವಾರ್ಷಿಕ ವೇತನ!!

  ಇಷ್ಟೆಲ್ಲಾ ಸಂಪತ್ತಿಗೆ ಒಡೆಯನಾಗಿರುವ ಮುಖೇಶ್ ಅಂಬಾನಿ ಅವರು ವಾರ್ಷಿಕವಾಗಿ ಕೇವಲ 15 ಕೋಟಿ ರೂಪಾಯಿಗಳ ವೇತನ ಪಡೆಯುತ್ತಾರೆ. ಇದು ಕಳೆದ ಒಂಬತ್ತು ವರ್ಷಗಳಿಂದ ಬದಲಾಗದೆ ಉಳಿದಿರುವುದು ವಿಶೇಷವಾಗಿದೆ. ಅಂಬಾನಿಯ ಇನ್ನೆಲ್ಲಾ ಆದಾಯವು ಅವರ ಶೇರುಗಳಿಂದಲೇ ಅವರಿಗೆ ಬಂದು ಸೇರಲಿದೆ.

  5% ತೆರಿಗೆ ಕಟ್ಟುತ್ತಾರೆ.!!

  ಪ್ರಸ್ತುತ 40.1 ಬಿಲಿಯನ್ ಆಸ್ತಿಯನ್ನು ಹೊಂದಿರುವ ಮುಖೇಶ್ ಅಂಬಾನಿಯ ಅವರ ಕಂಪೆನಿಯು ಭಾರತದ ಒಟ್ಟು ತೆರಿಗೆ ಆದಾಯದ ಸುಮಾರು 5% ರಷ್ಟು ಕೊಡುಗೆಯನ್ನು ನಿಡುತ್ತಿದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  Reliance Jio introduces Holiday Hungama for prepaid users with Rs 399 plan now available at Rs 299. to know more visit to kannada.gizbot.com
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more