ಜಿಯೋ 399ರೂ. ಪೋಸ್ಟ್‌ಪೇಯ್ಡ್‌ ಪ್ಲ್ಯಾನ್‌ ರೀಚಾರ್ಜ್‌ಗೆ ಯೋಗ್ಯವೇ?

|

ಟೆಲಿಕಾಂ ಸಂಸ್ಥೆಗಳು ಪ್ರೀಪೇಯ್ಡ್‌ ಯೋಜನೆಗಳಂತೆ ಸದ್ಯ ಪೋಸ್ಟ್‌ಪೇಯ್ಡ್‌ ಯೋಜನೆಗಳಲ್ಲಿಯೂ ಆಕರ್ಷಕ ಪ್ರಯೋಜನಗಳನ್ನು ನೀಡುತ್ತ ಸಾಗಿವೆ. ಈ ನಿಟ್ಟಿನಲ್ಲಿ ರಿಲಾಯನ್ಸ್‌ ಜಿಯೋ ಟೆಲಿಕಾಂ ಭಿನ್ನ ಪ್ರೈಸ್‌ನಲ್ಲಿ ಪೋಸ್ಟ್‌ಪೇಯ್ಡ್‌ ಯೋಜನೆಗಳ ಆಯ್ಕೆಯನ್ನು ಪರಿಚಯಿಸಿದೆ. ಆ ಪೈಕಿ ಇತ್ತೀಚಿಗಷ್ಟೆ ಬಿಡುಗಡೆ ಮಾಡಿರುವ ಅಗ್ಗದ ಜಿಯೋ 399ರೂ. ಪ್ಲ್ಯಾನ್‌ ಆಕರ್ಷಕ ಪ್ರಯೋಜನಗಳಿಂದ ಗಮನ ಸೆಳೆದಿದೆ.

ಜಿಯೋ

ಹೌದು, ಜಿಯೋ ಟೆಲಿಕಾಂನ ಇತ್ತೀಚಿಗಷ್ಟೆ ಪೋಸ್ಟ್‌ಪೇಯ್ಡ್‌ ಪ್ಲಸ್‌ ಕೆಲವು ಯೋಜನೆಗಳನ್ನು ಪರಿಚಯಿಸಿದೆ. ಅವುಗಳಲ್ಲಿ ಜಿಯೋ 399ರೂ. ಪ್ಲ್ಯಾನ್‌ ಆರಂಭಿಕ ಪೋಸ್ಟ್‌ಪೇಯ್ಡ್‌ ಯೋಜನೆ ಆಗಿದೆ. ಇನ್ನು ಈ ಯೋಜನೆಯು ಅನಿಯಮಿತ ಡೇಟಾ ಪ್ರಯೋಜನದ ಜೊತೆಗೆ ಓಟಿಟಿ ಚಂದಾದಾರಿಕೆಯನ್ನು ಒಳಗೊಂಡಿದೆ. ಹಾಗೆಯೇ ಡೇಟಾ ರೋಲ್‌ ಓವರ್‌ ಹಾಗೂ ಎಸ್‌ಎಮ್‌ಎಸ್‌ ಸೌಲಭ್ಯವನ್ನು ಪಡೆದಿದೆ. ಇನ್ನುಳಿದಂತೆ ಜಿಯೋದ ಈ ಪೋಸ್ಟ್‌ಪೇಯ್ಡ್‌ ಪ್ಲ್ಯಾನಿನ ಮಾಹಿತಿಯನ್ನು ಮುಂದೆ ನೋಡೋಣ ಬನ್ನಿರಿ.

ಜಿಯೋ 399ರೂ. ಪೋಸ್ಟ್‌ಪೇಯ್ಡ್ ಪ್ಲ್ಯಾನ್‌ ಪ್ರಯೋಜನಗಳು

ಜಿಯೋ 399ರೂ. ಪೋಸ್ಟ್‌ಪೇಯ್ಡ್ ಪ್ಲ್ಯಾನ್‌ ಪ್ರಯೋಜನಗಳು

ಜಿಯೋ 399ರೂ. ಪೋಸ್ಟ್‌ಪೇಯ್ಡ್ ಪ್ಲ್ಯಾನಿನಲ್ಲಿ ಬಳಕೆದಾರರಿಗೆ 75 GB ಡೇಟಾದೊಂದಿಗೆ ಅನಿಯಮಿತ ವಾಯಿಸ್ ಕರೆ ಮಾಡುವ ಸೌಲಭ್ಯದ ಸಿಗಲಿದೆ. ಜೊತೆಗೆ SMS ಕಳುಹಿಸುವ ಅವಕಾಶವು ದೊರೆಯಲಿದೆ. ಎಂಟರ್ಟೈನ್ಮೆಂಟ್ ಪ್ಲಸ್ ಆಯ್ಕೆಯೊಂದಿಗೆ 200GB ಡೇಟಾ ರೋಲ್ ಓವರ್ ಆಯ್ಕೆಯೂ ದೊರೆಯಲಿದೆ. ಹಾಗೆಯೇ ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಸಾವನ್ ಹಾಗೂ ಅನ್‌ಲಿಮಿಟೆಡ್‌ ಕಾಲರ್‌ ಟ್ಯೂನ್‌ ಸೌಲಭ್ಯಗಳು ಲಭ್ಯವಾಗಲಿವೆ.

ಓಟಿಟಿ ಚಂದಾದಾರಿಕೆ

ಓಟಿಟಿ ಚಂದಾದಾರಿಕೆ

ಜಿಯೋದ ಈ ಫೋಸ್ಟ್‌ಪೇಯ್ಡ್‌ ಯೋಜನೆಯು ಒಟಿಟಿ ಚಂದಾದಾರಿಕೆಗಳ ಪ್ರಯೋಜನ ಸಹ ಹೊಂದಿದೆ. ಬಳಕೆದಾರರು ನೆಟ್‌ಫ್ಲಿಕ್ಸ್ ಮೊಬೈಲ್ ಯೋಜನೆ ಆಕ್ಸಸ್‌, ಒಂದು ವರ್ಷದವರೆಗೆ ಉಚಿತ ಅಮೆಜಾನ್ ಪ್ರೈಮ್ ಚಂದಾದಾರಿಕೆ ಮತ್ತು ಉಚಿತ ಡಿಸ್ನಿ + ಹಾಟ್‌ಸ್ಟಾರ್ ವಿಐಪಿ ಸದಸ್ಯತ್ವವನ್ನು ಪಡೆಯುತ್ತಾರೆ. ಅಲ್ಲದೆ ಜಿಯೋ ಪೋಸ್ಟ್‌ಪೇಯ್ಡ್ ಯೋಜನೆಯು ಜಿಯೋ ಟಿವಿ ಮತ್ತು ಜಿಯೋ ಸಿನೆಮಾದಂತಹ ಜಿಯೋನ ಒಟಿಟಿ ಅಪ್ಲಿಕೇಶನ್‌ಗಳಿಗೆ ಉಚಿತ ಪ್ರವೇಶವನ್ನು ನೀಡುತ್ತದೆ.

ಠೇವಣಿ ಶುಲ್ಕ ಎಷ್ಟು?

ಠೇವಣಿ ಶುಲ್ಕ ಎಷ್ಟು?

ಜಿಯೋದ ಈ ಪೋಸ್ಟ್‌ಪೇಯ್ಡ್‌ ಯೋಜನೆಯಲ್ಲಿ ಚಂದಾದಾರರು ಮರುಪಾವತಿಸಬಹುದಾದ (refundable) ಭದ್ರತಾ ಠೇವಣಿಯಾಗಿ 500ರೂ. ನೀಡಬೇಕಿರುತ್ತದೆ. ಹೊಸ ಬಳಕೆದಾರರು ಜಿಯೋಪ್ರೈಮ್ ಚಂದಾದಾರಿಕೆ ಪ್ರಯೋಜನಗಳಿಗೆ 99 ರೂಗಳನ್ನು ಪಾವತಿಸಬೇಕಾಗುತ್ತದೆ. ಒಂದು ಬಾರಿಯ ಜಿಯೋಪ್ರೈಮ್ ಚಂದಾದಾರಿಕೆ ಮತ್ತು ಭದ್ರತಾ ಠೇವಣಿ ಹೊರತಾಗಿಯೂ, ಜಿಯೋದ 399ರೂ. ಪೋಸ್ಟ್‌ಪೇಯ್ಡ್ ಯೋಜನೆ ಉತ್ತಮ ಅನಿಸುತ್ತದೆ.

ಏರ್‌ಟೆಲ್ 399ರೂ. ಪೋಸ್ಟ್‌ಪೇಯ್ಡ್‌ ಪ್ಲ್ಯಾನ್

ಏರ್‌ಟೆಲ್ 399ರೂ. ಪೋಸ್ಟ್‌ಪೇಯ್ಡ್‌ ಪ್ಲ್ಯಾನ್

ಏರ್‌ಟೆಲ್ 399 ರೂ ಯೋಜನೆಯಲ್ಲಿ ಬಳಕೆದಾರರು 4G/3G ಬೆಂಬಲಿತ 40GB ಡೇಟಾವನ್ನು ಪಡೆಯುತ್ತಾರೆ. ಹಾಗೆಯೇ ಇದರೊಂದಿಗೆ ಅನಿಯಮಿತ ಕರೆ ಮತ್ತು ದಿನಕ್ಕೆ 100 ಎಸ್‌ಎಂಎಸ್ ದೊರೆಯುತ್ತವೆ. ಇದರೊಂದಿಗೆ ಹೆಚ್ಚುವರಿಯಾಗಿ ವಿಂಕ್ ಮ್ಯೂಸಿಕ್ ಮತ್ತು ಶಾ ಅಕಾಡೆಮಿಯ ಚಂದಾದಾರಿಕೆಗಳ ಜೊತೆಗೆ ಒಂದು ವರ್ಷದವರೆಗೆ ಏರ್ಟೆಲ್ ಎಕ್ಸ್‌ಸ್ಟ್ರೀಮ್ ಪ್ರೀಮಿಯಂನ ಚಂದಾದಾರಿಕೆ ಇದೆ.

Most Read Articles
Best Mobiles in India

English summary
Jio 399 postpaid plan offers a host of benefits like 75GB data per month, 200GB rollover facility and OTT subscriptions to top services.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X