ಭಾರತದಲ್ಲಿ ಪ್ರಬಲ ಟೆಲಿಕಾಂ ಬ್ರ್ಯಾಂಡ್ ಆಗಿ ಹೊರಹೊಮ್ಮಿದ ಜಿಯೋ!

|

ಬಿಲಿಯನೇರ್ ಉದ್ಯಮಿ ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಜಿಯೋ ಭಾರತದ ಪ್ರಬಲ ಟೆಲಿಕಾಂ ಬ್ರ್ಯಾಂಡ್ ಆಗಿದ್ದು, ಇದು ಭಾರ್ತಿ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಲಿಮಿಟೆಡ್‌ಗಿಂತ ಮುಂದಿದೆ ಎಂದು ಬ್ರ್ಯಾಂಡ್ ಗುಪ್ತಚರ ಮತ್ತು ಡೇಟಾ ಒಳನೋಟಗಳ ಕಂಪನಿ ಟಿಆರ್‌ಎ (TRA) ತಿಳಿಸಿದೆ.

TRA

ಟಿಆರ್‌ಎ (TRA) ಈ ಹಿಂದೆ ಟ್ರಸ್ಟ್ ರೀಸರ್ಚ್ ಅಡ್ವೈಸರಿ ಆಗಿತ್ತು. ಅದರ 'ಭಾರತದ ಅತ್ಯಂತ ಅಪೇಕ್ಷಿತ ಬ್ರ್ಯಾಂಡ್‌ಗಳು 2022'ರಲ್ಲಿ ಕಂಪನಿಗಳು ತಮ್ಮ ಬ್ರ್ಯಾಂಡ್ ಸಾಮರ್ಥ್ಯಕ್ಕೆ ಅನುಗುಣವಾಗಿ ಸ್ಥಾನ ಪಡೆದಿವೆ. ರಿಲಯನ್ಸ್ ಜಿಯೋ ಟೆಲಿಕಾಂ ಈ ವಿಭಾಗದಲ್ಲಿ ಅಗ್ರಸ್ಥಾನದಲ್ಲಿದ್ದು, ಭಾರ್ತಿ ಏರ್‌ಟೆಲ್, ವೊಡಾಫೋನ್ ಐಡಿಯಾ ಲಿಮಿಟೆಡ್ ಮತ್ತು ಬಿಎಸ್‌ಎನ್‌ಎಲ್ ಆ ನಂತರದ ಸ್ಥಾನದಲ್ಲಿವೆ.

ಅಡಿಡಾಸ್ ಅಗ್ರ ಬ್ರ್ಯಾಂಡ್

ಉಡುಪು ವಿಭಾಗದಲ್ಲಿ ಅಡಿಡಾಸ್ ಅಗ್ರ ಬ್ರ್ಯಾಂಡ್ ಆಗಿದ್ದು, ಆ ನಂತರ ನೈಕ್, ರೇಮಂಡ್, ಅಲನ್ ಸೋಲಿ ಮತ್ತು ಪೀಟರ್ ಇಂಗ್ಲೆಂಡ್ ಇವೆ. ಆಟೋಮೊಬೈಲ್ ವಿಭಾಗದಿಂದ ಬಿಎಂಡಬ್ಲ್ಯು ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು, ಟೊಯೋಟಾ, ಹ್ಯುಂಡೈ ಮತ್ತು ಹೋಂಡಾ ಆ ನಂತರದಲ್ಲಿ ಇವೆ. ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆಗಳ ಸೂಚ್ಯಂಕದಲ್ಲಿ ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) 1 ನೇ ಸ್ಥಾನದಲ್ಲಿದೆ, ಅದಾದ ಮೇಲೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 2 ನೇ ಸ್ಥಾನದಲ್ಲಿದೆ ಮತ್ತು ಐಸಿಐಸಿಐ ಬ್ಯಾಂಕ್ 3 ನೇ ಸ್ಥಾನದಲ್ಲಿದೆ.

ಶ್ರೇಯಾಂಕದಲ್ಲಿ ಕೆಂಟ್

ಗ್ರಾಹಕ ಉಪಕರಣಗಳ ಶ್ರೇಯಾಂಕದಲ್ಲಿ ಕೆಂಟ್ ಅಗ್ರಸ್ಥಾನದಲ್ಲಿದ್ದರೆ, ಆ ನಂತರ ಲಿವ್‌ಪ್ಯೂರ್ ಮತ್ತು ಒಕಾಯಾ ಇದೆ. ಗ್ರಾಹಕ ಎಲೆಕ್ಟ್ರಾನಿಕ್ಸ್‌ನಲ್ಲಿ ಎಲ್‌ಜಿ, ಸೋನಿ ಮತ್ತು ಸ್ಯಾಮ್‌ಸಂಗ್ ಮೊದಲ ಮೂರು ಬ್ರ್ಯಾಂಡ್‌ಗಳಾಗಿವೆ. ವೈವಿಧ್ಯಮಯ ಸಂಘಟಿತ ಪಟ್ಟಿಯಲ್ಲಿ ಐಟಿಸಿ ಅಗ್ರಸ್ಥಾನದಲ್ಲಿದೆ, ಟಾಟಾ ಮತ್ತು ರಿಲಯನ್ಸ್ ಆ ನಂತರದ ಸ್ಥಾನದಲ್ಲಿವೆ.

ನೆಸ್‌ಕೆಫೆ

ಇಂಧನ ಪಟ್ಟಿಯಲ್ಲಿ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಎಚ್‌ಪಿಸಿಎಲ್) ಅಗ್ರಸ್ಥಾನದಲ್ಲಿದ್ದರೆ, ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) ಮತ್ತು ಅದಾನಿ ನಂತರದ ಸ್ಥಾನದಲ್ಲಿವೆ. ಆಹಾರ ಮತ್ತು ಪಾನೀಯಗಳ ವಿಭಾಗದಲ್ಲಿ, ಅಮುಲ್ ಅಗ್ರ ಬ್ರಾಂಡ್ ಆಗಿದ್ದರೆ, ನೆಸ್‌ಕೆಫೆ ನಂತರದ ಸ್ಥಾನದಲ್ಲಿದ್ದರೆ, ಫಾಗ್ ಅಗ್ರ ಎಫ್‌ಎಂಸಿಜಿ ಬ್ರ್ಯಾಡ್ ಆಗಿದೆ, ಲ್ಯಾಕ್ಮೆ, ನಿವಿಯಾ ಮತ್ತು ಕೋಲ್ಗೇಟ್ ಆ ನಂತರದ ಸ್ಥಾನದಲ್ಲಿವೆ.

ಎಲೆಕ್ಟ್ರಿಕಲ್

ಫಾಸ್ಟ್‌ ಮೂವಿಂಗ್ ಎಲೆಕ್ಟ್ರಿಕಲ್ ಸರಕುಗಳ ಪಟ್ಟಿಯಲ್ಲಿ ಫಿಲಿಪ್ಸ್ ಅಗ್ರಸ್ಥಾನದಲ್ಲಿದ್ದರೆ, ಗ್ಯಾಜೆಟ್ ಪಟ್ಟಿಯಲ್ಲಿ ಎಂಐ (Mi), ಹೆಲ್ತ್‌ಕೇರ್‌ನಲ್ಲಿ ಹಿಮಾಲಯ, ಹಾಸ್ಪಿಟಾಲಿಟಿಯಲ್ಲಿ ಐಟಿಸಿ ಹೋಟೆಲ್‌ಗಳು, ಉತ್ಪಾದನೆಯಲ್ಲಿ ಎಸಿಸಿ, ರೀಟೇಲ್ ವ್ಯಾಪಾರದಲ್ಲಿ ಕೆಎಫ್‌ಸಿ ಮತ್ತು ತಂತ್ರಜ್ಞಾನದಲ್ಲಿ ಡೆಲ್ ಇದೆ. ಅಮೆಜಾನ್, ಫೇಸ್‌ಬುಕ್, ಫ್ಲಿಪ್‌ಕಾರ್ಟ್ ಮತ್ತು ಗೂಗಲ್ ಇಂಟರ್‌ನೆಟ್ ಬ್ರ್ಯಾಂಡ್‌ಗಳ ಪಟ್ಟಿಯಲ್ಲಿ ಅಗ್ರ ಶ್ರೇಯಾಂಕದ ಸಂಸ್ಥೆಗಳಾಗಿವೆ.

ಜಿಯೋ 5G ಸೇವೆ

ಜಿಯೋ 5G ಸೇವೆ

ರಿಲಯನ್ಸ್ ಜಿಯೋ ತನ್ನ 5G ಸೇವೆಗಳನ್ನು ಇತ್ತೀಚಿಗೆ ಮತ್ತೆ ಎರಡು ಹೊಸ ನಗರಗಳಲ್ಲಿ ಹೊರತಂದಿದೆ. ಮುಂಬೈ, ದೆಹಲಿ, ಕೋಲ್ಕತ್ತಾ, ಚೆನ್ನೈ, ವಾರಾಣಸಿ ಮತ್ತು ನಾಥದ್ವಾರ ಹೀಗೆ ಆರು ನಗರಗಳಲ್ಲಿ ಜಿಯೋ ಟ್ರೂ - 5G ಸೇವೆಗಳ ಯಶಸ್ವಿ ಬೀಟಾ -ಅನಾವರಣ ಆದ ನಂತರದಲ್ಲಿ ಇದೀಗ ಜಿಯೋ ಹೆಚ್ಚಿನ ನಗರಗಳಲ್ಲಿ ಜಿಯೋ ಟ್ರೂ - 5G ವ್ಯಾಪ್ತಿಯನ್ನು ವಿಸ್ತರಿಸುತ್ತಿದೆ. ಬೆಂಗಳೂರು ಮತ್ತು ಹೈದರಾಬಾದ್‌ಗೂ ಈಗ ಜಿಯೋ ಟ್ರೂ 5G ದೊರೆಯುತ್ತದೆ.

ಸೇವೆ ವಿಸ್ತರಣೆ

ಸೇವೆ ವಿಸ್ತರಣೆ

ಇನ್ನು ಡಿಸೆಂಬರ್ 2023 ರೊಳಗೆ ದೇಶವ್ಯಾಪಿ 5G ಸೇವೆಯನ್ನು ಒದಗಿಸುವುದಾಗಿ ಜಿಯೋ ಭರವಸೆ ನೀಡಿದೆ. ಆದರೆ ಮುಂದಿನ ಹಂತದ ರೋಲ್ಔಟ್ ನಡೆಯುವ ನಗರಗಳ ಪಟ್ಟಿಯನ್ನು ಕಂಪನಿಯು ದೃಢಪಡಿಸಿಲ್ಲ.

Best Mobiles in India

Read more about:
English summary
Jio strongest telecom brand in India: TRA.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X