ಜಿಯೋ ಇಂದು ಘೋಷಣೆ ಮಾಡಿದ ಎಲ್ಲಾ 10 'ಮಾನ್ಸೂನ್ ಆಫರ್ಸ್' ಲೀಸ್ಟ್!!

|
41st Reliance AGM: WhatsApp for JioPhone, JioPhone 2, and Jio Giga Fiber

ಇಂದು ನಡೆದ ರಿಲಯನ್ಸ್ ಇಂಡಸ್ಟ್ರೀಸ್ 41 ನೇ ವಾರ್ಷಿಕ ಸಭೆಯಲ್ಲಿ ಭಾರತದ ಟೆಲಿಕಾಂ ಅನ್ನು ಅಲ್ಲೋಲ ಕಲ್ಲೋಲಗೊಳಿಸಿರುವ ಹೊಸ ಸೇವೆಗಳನ್ನು ಜಿಯೋ ಘೋಷಿಸಿದೆ.! ಕೇವಲ ಒಂದೇ ದಿನದಲ್ಲಿ ನಿಬ್ಬೆರಗಾಗಿಸುವ 10 ಹೊಸ ಸೇವೆಗಳನ್ನು ಜಿಯೋ ಘೋಷಿಸಿದೆ. ಟೆಲಿಕಾಂ ಪ್ರಪಂಚದ ನಿರೀಕ್ಷೆಗೂ ಮೀರಿ ರಿಲಯನ್ಸ್ ಕಂಪೆನಿ ಎಲ್ಲರಿಗೂ ಶಾಕ್ ನೀಡಿದೆ.

ಜಿಯೋ ಇಂದು ಘೋಷಣೆ ಮಾಡಿದ ಎಲ್ಲಾ 10 'ಮಾನ್ಸೂನ್ ಆಫರ್ಸ್' ಲೀಸ್ಟ್!!

ಹೌದು, ಜಿಯೋ ಫೈಬರ್ ಬ್ರಾಡ್‌ಬ್ಯಾಂಡ್ , ಜಿಯೋ ಗಿಗಾ ರೂಟರ್ , ಜಿಯೋ ಫೋನ್ 2 ಮತ್ತು ಜಿಯೋ ವಾಯ್ಸ್ ಓವರ್ ವೈಫೈ ಸೇರಿದಂತೆ ಜಿಯೋ ಹೊಸದಾಗಿ ಹತ್ತು ಘೋಷಣೆಗಳನ್ನು ಮಾಡಿದೆ. ಹಾಗಾಗಿ, ಇಂದಿನ ಲೇಖನದಲ್ಲಿ ಜಿಯೋ ಇಂದು ಘೋಷಣೆ ಮಾಡಿರುವ ಎಲ್ಲಾ ಹತ್ತು ಮಾನ್ಸೂನ್ ಆಫರ್ಸ್ ಸೇವೆಗಳು ಯಾವುವು ಎಂಬುದನ್ನು ಮುಂದೆ ತಿಳಿಯಿರಿ.

1) ಜಿಯೋ ಫೋನ್

1) ಜಿಯೋ ಫೋನ್

2016ರಲ್ಲಿ ಬಿಡುಗಡೆಯಾಗಿ ಟೆಲಿಕಾಂ ಲೋಕವನ್ನು ಅಲುಗಾಡಿಸಿದ್ದ ಜಿಯೋ ಫೋನ್ ಪ್ರಸ್ತುತ 2.5 ಕೋಟಿ ಗ್ರಾಹಕರನ್ನು ಹೊಂದಿರುವುದಾಗಿ ಜಿಯೋ ತಿಳಿಸಿದೆ.ಜಿಯೋ ಫೋನ್‌ನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗಲು ಬಯಸುತ್ತೇವೆ ಮತ್ತು 100 ಮಿಲಿಯನ್ ಗ್ರಾಹಕರಿಗೆ ಜಿಯೋ ಫೋನ್ ಅನ್ನು ತಲುಪಿಸುವ ಗುರಿ ಹೊಂದಿದ್ದೇವೆ ಎಂದು ಅಂಬಾನಿ ಹೇಳಿದ್ದಾರೆ.

2) ಜಿಯೋಫೋನ್ 2

2) ಜಿಯೋಫೋನ್ 2

ರಿಲಾಯನ್ಸ್ ಇಂದು ಜಿಯೋಫೋನಿನ ಅಭಿವೃದ್ದಿ ಭಾಗವಾಗಿ ಜಿಯೋ ಫೋನ್ 2 ಲಾಂಚ್ ಮಾಡುವುದಾಗಿ ಘೋಷಿಸಿದೆ. ಆಗಸ್ಟ್ 15 ರಿಂದ ಬಳಕೆದಾರರಿಗೆ ಜಿಯೋ ಫೋನ್ 2 ಲಭ್ಯವಿರುತ್ತದೆ ಎಂದು ರಿಲಾಯನ್ಸ್ ಸಂಸ್ಥೆ ತಿಳಿಸಿದೆ. ಫೂರ್ಣ ಕೀಬೋರ್ಡ್ ಹೊಂದಿರುವ ಈ ಫೋನ್‌ನ ಆರಂಭಿಕ ಬೆಲೆ 2,999 ರೂಪಾಯಿಗಳಾಗಿರಲಿದೆ.

3) ಜಿಯೋ ಫೋನ್‌ ಎಕ್ಸ್‌ಚೇಂಜ್ ಆಫರ್!

3) ಜಿಯೋ ಫೋನ್‌ ಎಕ್ಸ್‌ಚೇಂಜ್ ಆಫರ್!

ಇದೇ ತಿಂಗಳ ಜುಲೈ 21ರಿಂದ ಬಳಕೆದಾರರು ತಮ್ಮಲ್ಲಿರುವ ಯಾವುದೇ ಫೀಚರ್ ಫೋನ್‌ನ್ನು ಈ ಮೊದಲು ಜಿಯೋ ಬಿಡುಗಡೆ ಮಾಡಿದ್ದ ಜಿಯೋಫೋನ್‌ನೊಂದಿಗೆ ಕೇವಲ 501 ರೂ.ಗೆ ಎಕ್ಸ್‌ಚೇಂಜ್ ಆಗಿ ಪಡೆಯಬಹುದಾಗಿದೆ. ಆಗಸ್ಟ್‌ 15ರಂದು ಜಿಯೋಫೋನ್ 2 ಮೊಬೈಲ್‌ನ್ನು ಬಿಡುಗಡೆ ಮಾಡಲಿದ್ದು, ಈ ಫೋನಿನ ಎಕ್ಸ್‌ಚೇಂಜ್ ಆಫರ್ ಇರುವ ಬಗ್ಗೆ ಮಾಹಿತಿ ನೀಡಿಲ್ಲ.!

4) ಜಿಯೋ ಫೋನಿನಲ್ಲಿ ಫೇಸ್‌ಬುಕ್

4) ಜಿಯೋ ಫೋನಿನಲ್ಲಿ ಫೇಸ್‌ಬುಕ್

ಜಿಯೋಫೋನ್‌ನಲ್ಲಿ ವಾಟ್ಸ್‌ಆಪ್, ಫೇಸ್‌ಬುಕ್, ಯೂಟ್ಯೂಬ್ ಆಪ್‌ಗಳು ಬಳಕೆದಾರರಿಗೆ ಮುಂದೆ ಲಭ್ಯವಾಗಲಿವೆ ಎಂದು 41ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಘೋಷಿಸಲಾಗಿದೆ. ಈ ಆಪ್‌ಗಳು ವಾಯ್ಸ್‌ ಕಮಾಂಡ್‌ ಮೂಲಕವು ಬಳಸಬಹುದಾಗಿದ್ದು, ಅಧಿಕೃತವಾಗಿ ಆಗಸ್ಟ್‌ 15ರ ನಂತರ ಬಳಕೆದಾರರಿಗೆ ಲಭ್ಯವಾಗಲಿವೆ.

5) ಜಿಯೋ ಗಿಗಾ ಟಿವಿ ಸೆಟ್‌-ಆಪ್‌-ಬಾಕ್ಸ್!!

5) ಜಿಯೋ ಗಿಗಾ ಟಿವಿ ಸೆಟ್‌-ಆಪ್‌-ಬಾಕ್ಸ್!!

600 ಪ್ಲಸ್ ಚಾನೆಲ್‌ಗಳು, ಲಕ್ಷಾಂತರ ಹಾಡುಗಳು ಮತ್ತು 4K ರೆಸೊಲ್ಯೂಶನ್‌ನಲ್ಲಿ ಅಲ್ಟ್ರಾ ಹೆಚ್‌ಡಿಯಲ್ಲಿ ವೀಡಿಯೋ ವೀಕ್ಷಿಸಲು ಸಾಧ್ಯವಾಗುವ ಜಿಯೋ ಜಿಯೋ ಗಿಗಾ ಟಿವಿ ಸೆಟ್‌-ಆಪ್‌-ಬಾಕ್ಸ್ ಅನ್ನು ಇಂದು ಘೋಷಿಸಿದೆ. ಧ್ವನಿ ಕಮಾಂಡ್ ಮೂಲಕ ಟಿವಿಯಲ್ಲಿ ನಿಯಂತ್ರಿಸುವ ವೈಶಿಷ್ಟ್ಯವನ್ನು ಹೊಂದಿರುವ ಇದರಿಂದ ಟಿವಿಯಲ್ಲಿಯೂ ವೀಡಿಯೊ ಕರೆ ಮಾಡಲು ಸಾಧ್ಯವಾಗುತ್ತದೆ.

6) ಜಿಯೋ ಗಿಗಾ ಫೈಬರ್!

6) ಜಿಯೋ ಗಿಗಾ ಫೈಬರ್!

ಟೆಲಿಕಾಂ ಪ್ರಪಂಚದ ನಿರೀಕ್ಷೆಯಂತೆಯೇ ಜಿಯೋ ಇಂದು 1ಜಿಬಿಪಿಎಸ್ ವೇಗದ ಜಿಯೋ ಫೈಬರ್ ರೂಟರ್ ಅನ್ನು ಬಿಡುಗಡೆ ಮಾಡಿದೆ. 4k ಗುಣಮಟ್ಟದಲ್ಲಿ ಜಿಯೋ ಫೈಬರ್ ಬ್ರಾಡ್‌ಬ್ಯಾಂಡ್ ಗ್ರಾಹಕರಿಗೆ ದೊರೆಯಲಿದೆ. ಸಂಪೂರ್ಣ ಉಚಿತ ವಾಯಿಸ್ ಕಾಲಿಂಗ್ ಸೌಲಭ್ಯವನ್ನು ಹೊಂದಿರುವ ಜಿಯೋ ಫೈಬರ್ ಮೂಲಕ ಜಿಯೋ ಗಿಗಾರೂಟರ್ ಸಂಪರ್ಕವನ್ನು ಸಾಧಿಸಬಹುದಾಗಿದೆ.

7) ಜಿಯೋ ಸ್ಮಾರ್ಟ್ ಹೋಮ್!

7) ಜಿಯೋ ಸ್ಮಾರ್ಟ್ ಹೋಮ್!

ಜಿಯೋ ಗಿಗಾ ಫೈಬರ್ ಜೊತೆಯಲ್ಲಿ, ಕಂಪೆನಿಯು ಸ್ಮಾರ್ಟ್ ಹೋಮ್ ಭವಿಷ್ಯವನ್ನು ಉತ್ತೇಜಿಸುತ್ತಿದೆ. ಸ್ಮಾರ್ಟ್ ಸ್ಪೀಕರ್‌ಗಳು, ಸ್ಮಾರ್ಟ್ ಪ್ಲಗ್, ಕ್ಯಾಮೆರಾಗಳು, ಟಿವಿ ಕ್ಯಾಮೆರಾ, ಅನಿಲ ಸೋರಿಕೆ ಸಂವೇದಕಗಳು ಮೊದಲಾದವುಗಳನ್ನು ಜಿಯೋ ಸ್ಮಾರ್ಟ್ ಮನೆಗಳ ವ್ಯಾಪ್ತಿಗಳನ್ನು ಒದಗಿಸುತ್ತದೆ. ಮೈ ಜಿಯೋ ಅಪ್ಲಿಕೇಶನ್ ಮೂಲಕ ಈ ಸ್ಮಾರ್ಟ್ ಮನೆ ಬಿಡಿಭಾಗಗಳನ್ನು ನಿಯಂತ್ರಿಸಲು ನಿಮಗೆ ಸಾಧ್ಯವಾಗುತ್ತದೆ.

8) ಜಿಯೋ ವರ್ಚುವಲ್ ರಿಯಾಲಿಟಿ

8) ಜಿಯೋ ವರ್ಚುವಲ್ ರಿಯಾಲಿಟಿ

ಜಿಯೋ ಗಿಗಾ ಫೈಬರ್ 4K ಗುಣಮಟ್ಟದ ವರ್ಚುವಲ್ ರಿಯಾಲಿಟಿ ಅನುಭವವನ್ನು ಬೆಂಬಲಿಸಲು ಸಾಕಷ್ಟು ವೇಗವಾಗಿರುತ್ತದೆ. ಹೊಂದಾಣಿಕೆಯ ವಿಆರ್ ಹೆಡ್ಸೆಟ್‌ನೊಂದಿಗೆ, ಒಬ್ಬರ ಮನೆಯ ಸೌಕರ್ಯಗಳಿಂದ 360 ಡಿಗ್ರಿಗಳಷ್ಟು ವಿಷಯವನ್ನು ಆನಂದಿಸಬಹುದು ಎಂದು ಜಿಯೋ ಕಂಪೆನಿ ತಿಳಿಸಿದೆ.

9) ಜಿಯೋ ಗಿಗಾ ರೂಟರ್

9) ಜಿಯೋ ಗಿಗಾ ರೂಟರ್

ಸ್ಮಾರ್ಟ್ ಹೋಮ್ ಪರಿಹಾರಗಳಿಗಾಗಿ ಜಿಯೋ ಗಿಗಾ ರೂಟರ್ ಅನ್ನು ರಿಲಯನ್ಸ್ ಘೋಷಿಸಿದೆ. ಒಂದು ಜಿಬಿಪಿಎಸ್ ವೇಗದಲ್ಲಿ ಡೌನ್‌ಲೋಡ್ ಮತ್ತು ಸ್ಪೀಡ್ ಅಪ್ಲೋಡ್ ಮಾಡಲು ಸಮರ್ಥವಾಗಿರುವ ಈ ರೂಟರ್ ಮೆನಯಲ್ಲಿ ವೈಫೈ ಪ್ರಸಾರಕ್ಕೆ ಸಹಾಯಕವಾಗಿದೆ. ಮನೆಯಲ್ಲಿನ ಸ್ಮಾರ್ಟ್‌ ಸಾಧನಗಳಿಗೆ ಈ ಗಿಗಾ ರೂಟರ್ ಸಂಪರ್ಕವನ್ನು ಸಾಧಿಸಲಿದೆ.

10) ಫೈಬರ್‌ಗೆ ನೊಂದಾಯಿಸಿ

10) ಫೈಬರ್‌ಗೆ ನೊಂದಾಯಿಸಿ

ಇದೇ ಮಾನ್ಸೂನ್ ಆಫರ್‌ನಲ್ಲಿ ಆಗಸ್ಟ್‌ 15ರಿಂದ ಜಿಯೋ ಗಿಗಾ ಫೈಬರ್‌ಗೆ ಆಸಕ್ತ ಬಳಕೆದಾರರು ನೊಂದಾಯಿಸಿಕೊಳ್ಳಬಹುದಾಗಿದೆ. ಹೀಗಾಗಲೇ ಜಿಯೋಫೈಬರ್ ಬೇಟಾ ಟ್ರೈಯಲ್ ಕಾರ್ಯನಿರ್ವಹಿಸುತ್ತಿದೆ. ಎಲ್ಲಿ ಫೈಬರ್‌ನೆಟ್‌ ಬಗ್ಗೆ ಜನ ಹೆಚ್ಚು ಆಸಕ್ತಿ ಹೊಂದಿರುತ್ತಾರೋ ಅಲ್ಲಿ ಜಿಯೋ ಗಿಗಾಫೈಬರ್ ಆರಂಭಿಸಲು ಜಿಯೋ ನಿರ್ಧರಿಸಿದೆ.

Best Mobiles in India

English summary
JioGigaFiber to JioPhone 2: Top 10 announcements from the Reliance AGM 2018. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X