ಜಿಯೋ ಟ್ರೂ-5G ಸೇವೆ ಮತ್ತೆ ವಿಸ್ತರಣೆ; ಈ ಪ್ರದೇಶಗಳಲ್ಲಿ ಈಗ 5G ಲಭ್ಯ!

|

ದೆಹಲಿ, ಗುರುಗ್ರಾಮ್, ನೋಯ್ಡಾ, ಗಾಜಿಯಾಬಾದ್, ಫರೀದಾಬಾದ್ ಮತ್ತು ಇತರ ಪ್ರಮುಖ ಸ್ಥಳ ಒಳಗೊಂಡಂತೆ ದೆಹಲಿ-ಎನ್‌ಸಿಆರ್ (DELHI-NCR) ಪ್ರದೇಶದಾದ್ಯಂತ ಟ್ರೂ-5G ಸೇವೆಗಳನ್ನು ಒದಗಿಸುವ ಏಕೈಕ ಆಪರೇಟರ್ ಜಿಯೋ ಆಗಿದೆ. ಜಿಯೋ ಅತ್ಯಂತ ಸುಧಾರಿತ ಟ್ರೂ 5G ನೆಟ್‌ವರ್ಕ್ ಅನ್ನು ಬಹಳ ವೇಗವಾಗಿ ಹೊರತರುತ್ತಿದ್ದು, ಈಗ ಈ ಭೌಗೋಳಿಕತೆ ಪ್ರಮುಖ ಭಾಗಗಳನ್ನು ಒಳಗೊಂಡಿದೆ.

ಸರ್ಕಾರಿ ಕಟ್ಟಡಗಳು

ಈ ಹೊಸ ನೆಟ್‌ವರ್ಕ್ ಎಲ್ಲ ಪ್ರಮುಖ ಪ್ರದೇಶಗಳು ಮತ್ತು ಕ್ಷೇತ್ರಗಳಾದ್ಯಂತ ಇರುತ್ತದೆ, ಆದರೆ ಇವುಗಳಲ್ಲಿ ತಿಳಿಸಿರುವುದಕ್ಕೆ ಮಾತ್ರ ಸೀಮಿತವಾಗಿಲ್ಲ: ಅಂದರೆ, ಹೆಚ್ಚಿನ ವಸತಿ ಪ್ರದೇಶಗಳು, ಆಸ್ಪತ್ರೆಗಳು, ಶಾಲೆಗಳು, ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳು, ಸರ್ಕಾರಿ ಕಟ್ಟಡಗಳು, ಹೈ ಸ್ಟ್ರೀಟ್‌ಗಳು, ಮಾಲ್‌ಗಳು ಮತ್ತು ಮಾರುಕಟ್ಟೆಗಳು, ಪ್ರವಾಸಿ ತಾಣಗಳು ಮತ್ತು ಹೋಟೆಲ್‌ಗಳಂತಹ ಹೆಚ್ಚಿನ ಕಾಲ್ನಡಿಗೆ ಪ್ರದೇಶಗಳು, ಟೆಕ್ ಪಾರ್ಕ್‌ಗಳು ರಸ್ತೆಗಳು, ಹೆದ್ದಾರಿಗಳು ಮತ್ತು ಮೆಟ್ರೋಗಳು ಎಲ್ಲೆಡೆಯೂ ದೊರೆಯುತ್ತಿದೆ.

ಜಿಯೋ ತನ್ನ ಟ್ರೂ 5G

ಅಂದಹಾಗೆ ಈ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿದ ಜಿಯೋ ವಕ್ತಾರರು, 'ದೆಹಲಿ ಮತ್ತು ಎನ್‌ಸಿಆರ್‌ನ ಬಹುಪಾಲು ಪ್ರದೇಶಗಳನ್ನು ಒಳಗೊಂಡಿರುವುದು ನಮಗೆ ಹೆಮ್ಮೆಯ ವಿಷಯ. ಜಿಯೋ ತನ್ನ ಟ್ರೂ 5G ವ್ಯಾಪ್ತಿಯನ್ನು ಶೀಘ್ರವಾಗಿ ವಿಸ್ತರಿಸುತ್ತಿದೆ ಮತ್ತು ಈಗಾಗಲೇ ಈ ಪ್ರದೇಶದಲ್ಲಿ ಯೋಜಿತ ಟ್ರೂ-5G ನೆಟ್‌ವರ್ಕ್‌ನ ಹೆಚ್ಚಿನ ಭಾಗವನ್ನು ಹೊರತಂದಿದೆ. ಟ್ರೂ 5G ಸೇವೆಗಳೊಂದಿಗೆ ದೆಹಲಿ-ಎನ್‌ಸಿಆರ್‌ (DELHI-NCR) ಪ್ರದೇಶದಾದ್ಯಂತ ಇರುವ ಏಕೈಕ ಆಪರೇಟರ್ ಆಗಿದೆ.

 ಟ್ರೂ-5G

ಪ್ರತಿ ಭಾರತೀಯನಿಗೂ ಟ್ರೂ-5G ಅನ್ನು ತಲುಪಿಸಲು ಜಿಯೋ ಎಂಜಿನಿಯರ್‌ಗಳು ಹಗಲಿರುಳು ಶ್ರಮಿಸುತ್ತಿರುವುದಕ್ಕೆ ಕಾರಣ ಈ ತಂತ್ರಜ್ಞಾನದ ಪರಿವರ್ತನಾ ಶಕ್ತಿ ಮತ್ತು ಪ್ರತಿ ನಾಗರಿಕರಿಗೂ ಇದು ನೀಡಬಹುದಾದ ಅಮೋಘ ಪ್ರಯೋಜನಗಳಾಗಿವೆ, ಎಂದು ಹೇಳಿದ್ದಾರೆ.

ಲಕ್ಷಾಂತರ ಜಿಯೋ ಬಳಕೆದಾರರು

ದೆಹಲಿ-ಎನ್‌ಸಿಆರ್‌ನಲ್ಲಿ ಇರುವ ಲಕ್ಷಾಂತರ ಜಿಯೋ ಬಳಕೆದಾರರು ಈಗಾಗಲೇ ಜಿಯೋ ವೆಲ್‌ಕಮ್ ಆಫರ್ ಅನ್ನು ಆನಂದಿಸುತ್ತಿದ್ದಾರೆ. ಇದರಲ್ಲಿ ಅವರು 1 ಜಿಬಿಪಿಎಸ್+ ವೇಗದಲ್ಲಿ ಅನಿಯಮಿತ ಡೇಟಾ ಪಡೆಯುತ್ತಾರೆ. ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಇದು ಸಾಧ್ಯವಾಗಿದೆ.

 5G ಆರ್ಕಿಟೆಕ್ಚರ್

ಇದು ಸಾಧ್ಯವಾಗಿರುವುದು ಹೇಗೆಂದರೆ, 4G ನೆಟ್‌ವರ್ಕ್‌ನಲ್ಲಿ ಶೂನ್ಯ ಅವಲಂಬನೆಯೊಂದಿಗೆ ಅದ್ವಿತೀಯ 5G ಆರ್ಕಿಟೆಕ್ಚರ್, 700 MHz, 3500 MHz, ಮತ್ತು 26 GHz ಬ್ಯಾಂಡ್‌ಗಳಾದ್ಯಂತ 5G ಸ್ಪೆಕ್ಟ್ರಮ್‌ನ ದೊಡ್ಡ ಮತ್ತು ಉತ್ತಮ ಮಿಶ್ರಣ. ಮತ್ತು ಕ್ಯಾರಿಯರ್ ಒಗ್ಗೂಡಿಸುವಿಕೆ ಎಂಬ ಸುಧಾರಿತ ತಂತ್ರಜ್ಞಾನವನ್ನು ಬಳಸಿಕೊಂಡು ಈ 5G ಆವರ್ತನಗಳನ್ನು ಏಕರೂಪದ 'ಡೇಟಾ ಹೈವೇ' ಆಗಿ ಸಂಯೋಜಿಸುತ್ತದೆ.

1 ಜಿಬಿಪಿಎಸ್+

ದೆಹಲಿ-ಎನ್‌ಸಿಆರ್‌ನಲ್ಲಿ ಇರುವ ಹೆಚ್ಚಿನ ಜಿಯೋ ಬಳಕೆದಾರರನ್ನು ಜಿಯೋ ವೆಲ್‌ಕಮ್ ಆಫರ್‌ಗೆ ಆಹ್ವಾನಿಸುವುದನ್ನು ಮುಂದುವರಿಸಲಾಗುತ್ತದೆ, ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ 1 ಜಿಬಿಪಿಎಸ್+ (gbps+) ವೇಗದಲ್ಲಿ ಅನಿಯಮಿತ ಡೇಟಾವನ್ನು ಅನುಭವಿಸಬಹುದು.

4Gನಲ್ಲಿ ಜಿಯೋ ನಂಬರ್ ಒನ್‌

4Gನಲ್ಲಿ ಜಿಯೋ ನಂಬರ್ ಒನ್‌

ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (TRAI) ಅಕ್ಟೋಬರ್ ತಿಂಗಳ 4G ವೇಗ ಪರೀಕ್ಷೆಯ ಅಂಕಿಅಂಶಗಳನ್ನು ಬಿಡುಗಡೆ ಮಾಡಿದೆ. ಪ್ರಮುಖ ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿಯವರ ಕಂಪನಿ ರಿಲಯನ್ಸ್ ಜಿಯೋ ಸರಾಸರಿ 4G ಡೌನ್‌ಲೋಡ್ ವೇಗದೊಂದಿಗೆ ಅಪ್‌ಲೋಡ್ ವೇಗದಲ್ಲೂ ಮೊದಲ ಸ್ಥಾನದಲ್ಲಿದೆ.

ಎಂಬಿಪಿಎಸ್

TRAI ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಜಿಯೋದ ಸರಾಸರಿ 4G ಡೌನ್‌ಲೋಡ್ ವೇಗದಲ್ಲಿ 1.2 ಎಂಬಿಪಿಎಸ್ (mbps)​ ಜಿಗಿತ ಕಂಡು ಬಂದಿದೆ. ಸೆಪ್ಟೆಂಬರ್ ತಿಂಗಳಲ್ಲಿ 19.1 ಎಂಬಿಪಿಎಸ್ (mbps)​ ಇದ್ದ ವೇಗ ಅಕ್ಟೋಬರ್ ತಿಂಗಳಲ್ಲಿ 20.3 ಎಂಬಿಪಿಎಸ್ (mbps)​ ತಲುಪಿದೆ.

ಸ್ಥಾನದಲ್ಲಿದೆ

ರಿಲಯನ್ಸ್ ಜಿಯೋ ಕಳೆದ ತಿಂಗಳು ಸರಾಸರಿ 4G ಅಪ್​ಲೋಡ್​ ವೇಗದಲ್ಲಿ ಮೊದಲ ಬಾರಿಗೆ ಪ್ರಥಮ ಸ್ಥಾನ ಪಡೆದಿದೆ. ಕಂಪನಿಯು ಈ ತಿಂಗಳು ಅಂದರೆ ಅಕ್ಟೋಬರ್‌ನಲ್ಲಿ 6.2 ಎಂಬಿಪಿಎಸ್​ ವೇಗದಲ್ಲಿ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ. ವಿ (VI) ಟೆಲಿಕಾಂ 4.5 ಎಂಬಿಪಿಎಸ್​ (mbps) ವೇಗದೊಂದಿಗೆ ಎರಡನೇ ಸ್ಥಾನದಲ್ಲಿದೆ.

Best Mobiles in India

English summary
JIO TRUE 5G Becomes First to Provide coverage across DELHI-NCR areas.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X