ಜಿಯೋ ಟಿವಿ ಅಪ್ ಡೇಟ್ ಇನ್ನು ಮುಂದೆ ಉಚಿತವಾಗಿ ಕ್ರಿಕೆಟ್ ನೋಡಿ

By Gizbot Bureau
|

ಜಿಯೋ ಟಿವಿ ಆಪ್ ಆಂಡ್ರಾಯ್ಡ್ ಮತ್ತು ಐಓಎಸ್ ಎರಡರಲ್ಲೂ ಕೂಡ ಅಪ್ ಡೇಟ್ ನ್ನು ರಿಸೀವ್ ಮಾಡಿದೆ ಮತ್ತು ಇದು ಹೊಸ ಇಂಟರ್ ಫೇಸ್ ನೊಂದಿಗೆ ಬಂದಿದೆ. ಹೊಸ ಆಪ್ ನ ಡಿಸೈನ್ ಸುಲಭದ ಕಂಟೆಂಟ್ ಮತ್ತು ಚಾನಲ್ ನ ಆವಿಷ್ಕಾರಕ್ಕೆ ಸಹಾಯ ಮಾಡುತ್ತದೆ ಮತ್ತು ಪ್ರಕಾರಗಳನ್ನು ಆಧರಿಸಿ ಹೊಸ ವಿಭಾಗಗಳನ್ನು ಕೂಡ ಇದರಲ್ಲಿ ಮಾಡಲಾಗಿದೆ.

ಜಿಯೋ ಕ್ರಿಕೆಟ್ ಹೆಚ್ ಡಿ ಚಾನಲ್:

ಜಿಯೋ ಕ್ರಿಕೆಟ್ ಹೆಚ್ ಡಿ ಚಾನಲ್:

ಅದಕ್ಕಿಂತ ಮುಖ್ಯವಾಗಿ ಹೊಸ ಅಪ್ ಡೇಟ್ ನಲ್ಲಿ ಹೊಸ ಚಾನಲ್ ನ್ನು ಪರಿಚಯಿಸಲಾಗಿದ್ದು ಅದುವೇ ಜಿಯೋ ಕ್ರಿಕೆಟ್ ಹೆಚ್ ಡಿ. ಇದು ಮುಂದಿನ ದಿನಗಳಲ್ಲಿ ಭಾರತದ ಎಲ್ಲಾ ಕ್ರಿಕೆಟ್ ಮ್ಯಾಚ್ ಗಳನ್ನು ಲೈವ್ ಸ್ಟ್ರೀಮ್ ಮಾಡುವುದಕ್ಕೆ ಸಹಾಯವಾಗುತ್ತದೆ.

ರಿಯಲ್ ಟೈಮ್ ನಲ್ಲಿ ಟಿವಿ ನೋಡಿ:

ರಿಯಲ್ ಟೈಮ್ ನಲ್ಲಿ ಟಿವಿ ನೋಡಿ:

ಜಿಯೋ ಚಂದಾದಾರರಿಗಾಗಿ ಜಿಯೋ ಟಿವಿ ಲೈವ್ ಸ್ಟ್ರೀಮಿಂಗ್ ಆಪ್ ಆಗಿದೆ ಮತ್ತು ಅದು ಅವರಿಗೆ ತಮ್ಮ ನೆಚ್ಚಿನ ಚಾನಲ್ ಗಳನ್ನು ಮತ್ತು ಟಿವಿ ಶೋಗಳನ್ನು ರಿಯಲ್ ಟೈಮ್ ನಲ್ಲಿ ನೋಡುವುದಕ್ಕೆ ಅವಕಾಶ ನೋಡುತ್ತದೆ. ಉಚಿತವಾಗಿ ಅವರು ಅವರ ನೆಚ್ಚಿನ ಕಾರ್ಯಕ್ರಮವನ್ನು ಇದರಲ್ಲಿ ವೀಕ್ಷಿಸಬಹುದು. ಟಿವಿಯ ಮುಂದೆ ಇಲ್ಲದೆ ಇದ್ದರೂ ಕೂಡ ಟಿವಿಯನ್ನು ರಿಯಲ್ ಟೈಮ್ ನಲ್ಲಿ ಎಲ್ಲೆಂದರಲ್ಲಿ ನೋಡುವುದಕ್ಕೆ ಜಿಯೋ ಟಿವಿ ಸಹಕಾರಿಯಾಗಿರುತ್ತದೆ.

ಅಪ್ ಡೇಟ್ ವರ್ಷನ್ ಗಳ ವಿವರ:

ಅಪ್ ಡೇಟ್ ವರ್ಷನ್ ಗಳ ವಿವರ:

ಜಿಯೋ ಟಿವಿ ಆಂಡ್ರಾಯ್ಡ್ ವರ್ಷನ್ 5.6.0 ಗೆ ಅಪ್ ಡೇಟ್ ಆಗಿದೆ ಮತ್ತು ಐಓಸ್ ವರ್ಷನ್ 2.2 ಗೆ ಅಪ್ ಡೇಟ್ ಆಗಿದೆ. ಆಂಡ್ರಾಯ್ಡ್ ವರ್ಷನ್ ನ ಅಪ್ ಡೇಟ್ ಸೈಜ್ 9.65MB ಮತ್ತು ಐಓಎಸ್ ನ ಅಪ್ ಡೇಟ್ ಸೈಜ್ 36.1MB. ಹೊಸ ಇಂಟರ್ ಫೇಸ್ ನ ಹೊರತಾಗಿ ಜಿಯೋ ಕ್ರಿಕೆಟ್ ಹೆಚ್ ಡಿ ಹೆಸರಿನ ಹೊಸ ಚಾನಲ್ ಕೂಡ ಶುರುವಾಗಿದೆ. ವರ್ಷ ಪೂರ್ತಿ ಇದು ಪ್ರಮುಖ ಕ್ರಿಡೆಗಳ ಕಾರ್ಯಕ್ರಮವನ್ನು ಪ್ರದರ್ಶಿಸುತ್ತದೆ. ಅದು ಭಾರತ-ಆಸ್ಟ್ರೇಲಿಯಾ ಪ್ರವಾಸದ ಫೆಬ್ರವರಿ-ಮಾರ್ಚ್ 2019 ರ ಮ್ಯಾಚ್ ನಿಂದ ಶುರುವಾಗುತ್ತದೆ. ಇನ್ನು ಈ ಚಾನಲ್ ನಲ್ಲಿ ಪ್ರಮುಖ 4 ಪ್ರಾದೇಶಿಕ ಭಾಷೆಗಳ ಚಾನಲ್ ಗಳು ಕೂಡ ಸೇರ್ಪಡೆಯಾಗಿದೆ.

ಸ್ಟಾರ್ ಇಂಡಿಯಾ ಜೊತೆಗೆ ಜಿಯೋ ಒಪ್ಪಂದ:

ಸ್ಟಾರ್ ಇಂಡಿಯಾ ಜೊತೆಗೆ ಜಿಯೋ ಒಪ್ಪಂದ:

ಸ್ಟಾರ್ ಇಂಡಿಯಾ ಜೊತೆಗೆ ಜಿಯೋ ಸಂಸ್ಥೆ ಒಪ್ಪಂದಕ್ಕೆ ಸಹಿ ಮಾಡಿದ ನಂತರ ಈ ಚಾನಲ್ ಆರಂಭವಾಗಿದ್ದು ಮುಂದಿನ ಐದು ವರ್ಷಗಳ ಕಾಲ ಇಂಡಿಯಾದ ಕ್ರಿಕೆಟ್ ಮ್ಯಾಚ್ ಗಳನ್ನು ಇದರಲ್ಲಿ ವೀಕ್ಷಿಸಬಹುದಾಗಿದೆ.

ಹೆಚ್ಚುವರಿ ಶುಲ್ಕ ಇಲ್ಲ:

ಹೆಚ್ಚುವರಿ ಶುಲ್ಕ ಇಲ್ಲ:

ಹೊಸ ಒಪ್ಪಂದದ ಪ್ರಕಾರ ಜಿಯೋ ಟಿವಿ ಬಳಕೆದಾರರಿಗೆ ಟಿ20, ಒನ್ ಡೇ ಅಂತರಾಷ್ಟ್ರೀಯ, ಟೆಸ್ಟ್ ಮ್ಯಾಚ್ ಗಳು ಮತ್ತು ಡೊಮೆಸ್ಟಿಕ್ ಬಿಸಿಸಿಐ ಟೂರ್ನಮೆಂಟ್ ಗಳನ್ನು ಆಪ್ ನಲ್ಲಿ ವೀಕ್ಷಿಸಬಹುದು. ಜಿಯೋ ಟಿವಿ ಆಪ್ ನಲ್ಲಿ ಕ್ರಿಕೆಟ್ ಮ್ಯಾಚ್ ನೋಡುವುದಕ್ಕೆ ಆಕ್ಟಿವ್ ಜಿಯೋ ನಂಬರ್ ಬಳಕೆದಾರರ ಬಳಿ ಇರಬೇಕಾಗುತ್ತದೆ. ಲೈವ್ ಮ್ಯಾಚ್ ಗಳನ್ನು ಸ್ಟ್ರೀಮ್ ಮಾಡುವುದಕ್ಕಾಗಿ ಹೆಚ್ಚುವರಿ ಶುಲ್ಕವನ್ನೇನೂ ಪಾವತಿ ಮಾಡಬೇಕಾಗಿಲ್ಲ. ಎಲ್ಲಾ ಪ್ರೈಮ್ ಗ್ರಾಹಕರಿಗೆ ಲಭ್ಯವಿರುವ ಸೌಲಭ್ಯದಲ್ಲೇ ಇದೂ ಕೂಡ ಲಭ್ಯವಾಗುತ್ತದೆ.

ಚಾನಲ್ ಆಯ್ಕೆಗೆ ಅವಕಾಶ:

ಚಾನಲ್ ಆಯ್ಕೆಗೆ ಅವಕಾಶ:

ಒಮ್ಮೆ ಆಪ್ ಇನ್ಸ್ಟಾಲ್ ಆದ ನಂತರ ಮೇಲ್ಬಾಗದಲ್ಲಿ ಕಾಣುವ ಬ್ಯಾನರ್ ನಲ್ಲಿ ಹೊಸ ಫೀಚರ್ ಕಂಟೆಂಟ್ ಗಳ ವಿವರಣೆ ಇರುತ್ತದೆ. ಕೆಳಗಿನ ಮೆನು ಬಾರ್ ನಲ್ಲಿ ಟಿವಿ, ಫೀಚರ್ಡ್, ಸ್ಪೋರ್ಟ್ಸ್ ಮತ್ತು ನ್ಯೂಸ್ ಎಂಬ ಆಯ್ಕೆಗಳಿರುತ್ತದೆ. ಭಾಷೆ ಮತ್ತು ಅಗತ್ಯತೆಯ ಆಧಾರದಲ್ಲಿ ಚಾನಲ್ ನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಆಪ್ ಅವಕಾಶ ನೀಡುತ್ತದೆ. ಲೈವ್ ನೋಡಲು ಸಾಧ್ಯವಾಗದೇ ಇದ್ದರೆ ಸ್ವಲ್ಪ ಸಮಯ ಬಿಟ್ಟು ನೋಡುವುದಕ್ಕೂ ಕೂಡ ಅವಕಾಶವಿರುತ್ತದೆ. ಗೂಗಲ್ ಪ್ಲೇ ಮತ್ತು ಆಪ್ ಸ್ಟೋರ್ ನಲ್ಲಿ ಉಚಿತವಾಗಿ ಜಿಯೋ ಟಿವಿ ಅಪ್ ಡೇಟ್ ಲಭ್ಯವಿದೆ.

Best Mobiles in India

Read more about:
English summary
Jio TV Update Brings New Interface, Jio Cricket HD Channels to Stream Matches

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X