Just In
Don't Miss
- News
ಡ್ರಗ್ಸ್ ಪ್ರಕರಣ: ಜೈಲಿನಲ್ಲಿ ಜೀವಕ್ಕೆ ಬೆದರಿಕೆ ಇದೆ ಎಂದು ಬಿಜೆಪಿ ಯುವ ನಾಯಕಿ ಪಮೇಲಾ ಆರೋಪ
- Movies
ಶಮಂತ್ಗೆ ಸಿಕ್ತು ಬಂಪರ್: ಎರಡನೇ ವಾರವೂ ಬ್ರೋ ಗೌಡ ಸೇಫ್
- Automobiles
ರ್ಯಾಪಿಡ್ ಬದಲಾಗಿ ಹೊಸ ಸಿ ಸೆಗ್ಮೆಂಟ್ ಸೆಡಾನ್ ಬಿಡುಗಡೆ ಮಾಡಲಿದೆ ಸ್ಕೋಡಾ
- Lifestyle
ಬೆಡ್ನಲ್ಲಿ ಪುರುಷರ ಸಾಮರ್ಥ್ಯ ಹೆಚ್ಚಿಸುತ್ತೆ ಈ ಕೆಗೆಲ್ ವ್ಯಾಯಾಮ
- Sports
ಭಾರತ vs ಇಂಗ್ಲೆಂಡ್: ಕೊಹ್ಲಿ ಜೊತೆಗಿನ ಮಾತಿನ ಚಕಮಕಿ ಬಗ್ಗೆ ಪ್ರತಿಕ್ರಿಯಿಸಿದ ಬೆನ್ ಸ್ಟೋಕ್ಸ್
- Finance
ಮತ್ತಷ್ಟು ಕಡಿಮೆಯಾಯ್ತು ಚಿನ್ನದ ಬೆಲೆ: ಮಾರ್ಚ್ 04ರ ಬೆಲೆ ಇಲ್ಲಿದೆ
- Education
UAS Dharwad Recruitment 2021: ಅರೆಕಾಲಿಕ ಉಪನ್ಯಾಸಕ ಹುದ್ದೆಗಳಿಗೆ ನೇರ ಸಂದರ್ಶನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಜಿಯೋ ಮತ್ತು ಏರ್‌ಟೆಲ್ ವಾರ್ಷಿಕ ಪ್ರೀಪೇಯ್ಡ್ ಪ್ಲ್ಯಾನ್: ಯಾವುದು ಯೋಗ್ಯ?
ಭಾರತದ ಟೆಲಿಕಾಂ ಕ್ಷೇತ್ರದಲ್ಲಿ ಜಿಯೋ ಮತ್ತು ಏರ್‌ಟೆಲ್ ಸಂಸ್ಥೆಗಳು ಮುಂಚೂಣಿಯ ಹಾದಿಯಲ್ಲಿ ನಡೆಯುತ್ತಿವೆ. ಈ ಟೆಲಿಕಾಂಗಳು ತಮ್ಮ ಚಂದಾದಾರರಿಗೆ ಆಕರ್ಷಕ ಯೋಜನೆಗಳನ್ನು ಪರಿಚಯಿಸುತ್ತಾ ಸಾಗಿದ್ದು, ಈ ನಡುವೆ ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿಯೂ ಅನುಕೂಲಕರ ಕೊಡುಗೆಗಳನ್ನು ಘೋಷಿಸಿವೆ. ಹಾಗೆಯೇ ಭಿನ್ನ ಬೆಲೆಯಲ್ಲಿ ಹಲವು ಅಧಿಕ ಡೇಟಾ ಹಾಗೂ ವ್ಯಾಲಿಡಿಟಿ ಯೋಜನೆಗಳನ್ನು ಪರಿಚಯಿಸಿವೆ. ಅವುಗಳಲ್ಲಿ ಬಹುತೇಕರು ವಾರ್ಷಿಕ ಪ್ಲ್ಯಾನ್‌ಗಳತ್ತ ಹೆಚ್ಚು ಗಮನ ನೀಡುತ್ತಾರೆ.

ಹೌದು, ಜಿಯೋ, ಏರ್‌ಟೆಲ್ ಸಂಸ್ಥೆಗಳು ಹೊಸ ಪ್ರೀಪೇಡ್ ಪ್ಲ್ಯಾನ್‌ಗಳನ್ನು ಪರಿಚಯಿಸಿವೆ. ಜಿಯೋ ಮತ್ತು ಏರ್‌ಟೆಲ್ ವಾರ್ಷಿಕ ಪ್ರೀಪೇಡ್ ಪ್ಲ್ಯಾನ್‌ಗಳು ಕ್ರಮವಾಗಿ ಜಿಯೋ(2121 ಮತ್ತು 2399) 2.398ರೂ.(ಏರ್‌ಟೆಲ್) ಗಳಾಗಿವೆ. ಹಾಗಾದರೇ ಜಿಯೋ ಮತ್ತು ಏರ್‌ಟೆಲ್‌ಗಳ ವಾರ್ಷಿಕ ಪ್ಲ್ಯಾನ್ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ ಬನ್ನಿರಿ.

ಜಿಯೋ 2121ರೂ.ಪ್ಲ್ಯಾನ್
ಜಿಯೋ 2121ರೂ.ಪ್ಲ್ಯಾನ್ ಪ್ರತಿದಿನ 1.5GB ಡೇಟಾ ಪ್ರಯೋಜನ ಒದಗಿಸುತ್ತದೆ. ಇದರೊಂದಿಗೆ ಅನಿಯಮಿತ ಜಿಯೋ ಟು ಜಿಯೋ ವಾಯಿಸ್ ಕರೆಗಳು ಲಭ್ಯವಾಗಲಿದ್ದು, ಜಿಯೋದಿಂದ ಇತರೆ ಟೆಲಿಕಾಂ ನೆಟವರ್ಕ್‌ಗಳಿಗೆ ಒಟ್ಟು 12000 ನಿಮಿಷಗಳ ಉಚಿತ ವಾಯಿಸ್ ಕರೆ ಸೌಲಭ್ಯ ದೊರೆಯುತ್ತದೆ. ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನವನ್ನು ಒಳಗೊಂಡಿದ್ದು, ಜಿಯೋ ಟಿವಿ, ಜಿಯೋ ಸಿನಿಮಾ ಸೇರಿದಂತೆ ಜಿಯೋ ಅಪ್ಲಿಕೇಶನ್‌ಗಳ ಸೇವೆಯು ದೊರೆಯುತ್ತದೆ. ಇನ್ನು ಈ ಪ್ಲ್ಯಾನ್ 336 ದಿನಗಳ ವ್ಯಾಲಿಡಿಟಿಯನ್ನು ಒಳಗೊಂಡಿದೆ.

ಜಿಯೋ 2,399ರ ಪ್ಲಾನ್
ಜಿಯೋದ ಹೊಸದಾಗಿ ಪರಿಚಯಿಸಿರುವ 2,399ರೂ. ವಾರ್ಷಿಕ ಪ್ಲಾನ್, ಹಿಂದಿನ 2121ರೂ. ಪ್ಲ್ಯಾನ್‌ಗಿಂತ ಹೆಚ್ಚಿನ ಪ್ರಯೋಜನ ಪಡೆದಿದೆ. ಈ ಪ್ಲ್ಯಾನ್ 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದ್ದು, ಅನಿಯಮಿತ ಎಸ್‌ಎಮ್‌ಎಸ್, ವಾಯಿಸ್ ಕರೆಗಳು ಸೇರಿದಂತೆ ಪ್ರತಿದಿನ 2GB ಡೇಟಾ ಪ್ರಯೋಜನಗಳು ಗ್ರಾಹಕರಿಗೆ ಲಭ್ಯವಾಗಲಿವೆ. ಇತರೆ ಟೆಲಿಕಾಂಗಳಿಗೂ ಹೋಲಿಸಿದರೂ ಇದು ಉತ್ತಮ ವಾರ್ಷಿಕ ಯೋಜನೆ ಅನಿಸಲಿದೆ.

ಏರ್‌ಟೆಲ್ 2398ರೂ. ಪ್ಲ್ಯಾನ್
ಏರ್‌ಟೆಲ್‌ನ 2398ರೂ. ಪ್ರೀಪೇಡ್ ಪ್ಲ್ಯಾನ್ ವಾರ್ಷಿಕ ಯೋಜನೆ ಆಗಿದ್ದು, ಒಟ್ಟು 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಅವಧಿಯಲ್ಲಿ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ ಹಾಗೂ ಪ್ರತಿದಿನ 1.5GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಇದರೊಂದಿಗೆ 100 ಉಚಿತ ಎಸ್‌ಎಮ್‌ಎಸ್ ಸೌಲಭ್ಯ ಸಹ ಲಭ್ಯವಾಗುತ್ತದೆ.

ಯಾವುದು ಬೆಸ್ಟ್
ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್ ಟೆಲಿಕಾಂ ಸಂಸ್ಥೆಯುಗಳು ಸಹ ವಾರ್ಷಿಕ ಯೋಜನೆಗಳನ್ನು ಪಡೆದುಕೊಂಡಿವೆ. ಎರಡು ಟೆಲಿಕಾಂಗಳ ವಾರ್ಷಿಕ ಪ್ಲ್ಯಾನ್‌ಗಳ ಪೈಕಿ ಜಿಯೋ ಭಿನ್ನವಾದ ಪ್ರಯೋಜನಗಳನ್ನು ಹೊಂದಿದ್ದು, ಗ್ರಾಹಕರಿಗೆ ಆಕರ್ಷಕ ಅನಿಸಲಿದೆ. ಆದರೆ ನೆಟವರ್ಕ್ ಲಭ್ಯತೆಯ ಆಧಾರದ ಮೇಲೆ ಗ್ರಾಹಕರು ಪ್ಲ್ಯಾನ್‌ಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಹಾಗೆಯೇ ಕೆಲವರು ಅಧಿಕ ಡೇಟಾ ಬಳಸಿದರೇ ಇನ್ನು ಕೆಲವರು ವಾಯಿಸ್ ಕರೆಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಈ ಅಂಶಗಳು ಪ್ರಭಾವ ಬೀರುತ್ತವೆ.
-
92,999
-
17,999
-
39,999
-
29,400
-
38,990
-
29,999
-
16,999
-
23,999
-
18,170
-
21,900
-
14,999
-
17,999
-
42,099
-
16,999
-
23,999
-
29,495
-
18,580
-
64,900
-
34,980
-
45,900
-
17,999
-
54,153
-
7,000
-
13,999
-
38,999
-
29,999
-
20,599
-
43,250
-
32,440
-
16,190