ಭಾರತದಲ್ಲಿ ಜಿಯೋಬುಕ್ ಲ್ಯಾಪ್‌ಟಾಪ್‌ ಖರೀದಿಗೆ ಲಭ್ಯ!..ಬೆಲೆ ಎಷ್ಟು?

|

ಜಿಯೋ ಟೆಲಿಕಾಂ ಇತ್ತೀಚಿಗೆ ಅನಾವರಣ ಮಾಡಿರುವ ಜಿಯೋ ಬುಕ್ (JioBook) ಲ್ಯಾಪ್‌ಟಾಪ್ ಆಕರ್ಷಕ ಪ್ರೈಸ್‌ ಟ್ಯಾಗ್‌ನಿಂದ ಮಾರುಕಟ್ಟೆಯಲ್ಲಿ ಗ್ರಾಹಕರ ಗಮನ ಸೆಳೆದಿದೆ. ಇದೀಗ ಈ ಜಿಯೋಬುಕ್‌ ಭಾರತದಲ್ಲಿ ಖರೀದಿಗೆ ಲಭ್ಯವಿದೆ. ಇದರ ಬೆಲೆ ಗ್ರಾಹಕರನ್ನು ಹುಬ್ಬೇರಿಸುವಂತೆ ಮಾಡಿದ್ದು, ಗ್ರಾಹಕರು ಈ ಲ್ಯಾಪ್‌ಟಾಪ್‌ ಅನ್ನು ಸುಮಾರು 15,000ರೂ. ಒಳಗೆ ಪಡೆಯಬಹುದಾಗಿದೆ.

ಜಿಯೋ ಬುಕ್

ಹೌದು, ರಿಲಯನ್ಸ್‌ ಜಿಯೋ ಹೊಸದಾಗಿ ಪರಿಚಯಿಸಿದ್ದ, ಜಿಯೋ ಬುಕ್ ಲ್ಯಾಪ್‌ಟಾಪ್‌ ದೇಶಿಯ ಮಾರುಕಟ್ಟೆ ಯಲ್ಲಿ ಖರೀದಿಗೆ ಲಭ್ಯವಾಗಿದೆ. ಅಂದಹಾಗೆ ಈ ಲ್ಯಾಪ್‌ಟಾಪ್‌ 19,500 ರೂ. ಗಳ ಬೆಲೆಯಲ್ಲಿ ಬಿಡುಗಡೆ ಆಗಿತ್ತು. ಆದರೆ ಗ್ರಾಹಕರು ಇದೀಗ 15,799 ರೂ. ಗಳ ಬೆಲೆಯಲ್ಲಿ ಖರೀದಿಸಬಹುದಾಗಿದೆ. ಹಾಗೆಯೇ ಕೆಲವು ಆಯ್ದ ಬ್ಯಾಂಕ್‌ಗಳಿಂದ 5000 ರೂ. ಗಳ ವರೆಗೂ ಇನ್‌ಸ್ಟಂಟ್‌ ರಿಯಾಯಿತಿ ಸಹ ಲಭ್ಯವಾಗಲಿದೆ. ಹಾಗಾದರೇ ಜಿಯೋಬುಕ್‌ ಲ್ಯಾಪ್‌ಟಾಪ್‌ನ ಇತರೆ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಲ್ಯಾಪ್‌ಟಾಪ್‌

ಜಿಯೋಬುಕ್ (JioBook) ಬಜೆಟ್ ಪ್ರೈಸ್‌ನ ಲ್ಯಾಪ್‌ಟಾಪ್‌ ಆಗಿದ್ದು, ವಿದ್ಯಾರ್ಥಿಗಳಿಗೆ ಹೆಚ್ಚು ಉಪಯುಕ್ತ ಆಗಲಿದೆ. ಇನ್ನು ಈ ಲ್ಯಾಪ್‌ಟಾಪ್‌ 11.6 ಇಂಚಿನ HD ಡಿಸ್‌ಪ್ಲೇ ಅನ್ನು ಪಡೆದಿದ್ದು, ವಿಶಾಲವಾದ ಬೆಜೆಲ್‌ಗಳನ್ನು ಹೊಂದಿದೆ. ಈ ಲ್ಯಾಪ್‌ಟಾಪ್‌ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ (Qualcomm Snapdragon) 665 SoC ಪ್ರೊಸೆಸರ್‌ ನಲ್ಲಿ ಕಾರ್ಯ ನಿರ್ವಹಿಸುತ್ತದೆ. ಜೊತೆಗೆ ಅಡ್ರಿನೊ 610 GPU ನ ಸಪೋರ್ಟ್‌ ಸಹ ಪಡೆದಿದೆ.

ಸ್ನ್ಯಾಪ್‌ಡ್ರಾಗನ್

ಸ್ನ್ಯಾಪ್‌ಡ್ರಾಗನ್ ಪ್ರೊಸೆಸರ್‌ಗೆ ಪೂರಕವಾಗಿ 2GB RAM ಮತ್ತು 32GB ಆಂತರೀಕ ಸ್ಟೋರೇಜ್ ಮಾಡೆಲ್‌ ಒಳಗೊಂಡಿದೆ. ವೀಡಿಯೊ ಕರೆಗಳಿಗಾಗಿ ಮುಂಭಾಗದಲ್ಲಿ 2 ಮೆಗಾ ಪಿಕ್ಸೆಲ್ ಕ್ಯಾಮೆರಾವನ್ನು ಒಳಗೊಂಡಿದ್ದು, ಉತ್ತಮ ಬ್ಯಾಕ್‌ಅಪ್‌ಗಾಗಿ 5,000mAh ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಒದಗಿಸಿದೆ. ಒಂದು ಬಾರಿ ಚಾರ್ಜ್ ಮಾಡಿದರೆ, ಸುಮಾರು 8 ಗಂಟೆಗಳ ಕಾಲ ಬಳಕೆ ಮಾಡಬಹುದು ಎಂದು ಕಂಪನಿಯು ಹೇಳಿದೆ.

ಲ್ಯಾಪ್‌ಟಾಪ್

ಹಾಗೆಯೇ ಈ ಲ್ಯಾಪ್‌ಟಾಪ್ Jio OS ನಲ್ಲಿ ಕಾರ್ಯ ನಿರ್ವಹಿಸುತ್ತದೆ. ಇದು ಸುಗಮ ಕಾರ್ಯಕ್ಷಮತೆಗಾಗಿ ಉತ್ತಮವಾಗಿ ಆಪ್ಟಿಮೈಸ್ ಮಾಡಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಈ ಲ್ಯಾಪ್‌ಟಾಪ್‌ ಜಿಯೋಸ್ಟೋರ್ (Jio Store) ಅನ್ನು ಸಹ ಹೊಂದಿದೆ. ಈ ಲ್ಯಾಪ್‌ಟಾಪ್‌ ಯಾವುದೇ ಥರ್ಡ್‌ ಪಾರ್ಟಿ ಅಪ್ಲಿಕೇಶನ್ ಅನ್ನು ಇನ್‌ಸ್ಟಾಲ್‌ ಮಾಡಲು ಸಪೋರ್ಟ್ ಮಾಡುವುದಿಲ್ಲ ಎನ್ನಲಾಗಿದೆ.

ಬ್ಲೂಟೂತ್

ಇನ್ನು ಈ ಲ್ಯಾಪ್‌ಟಾಪ್‌ ಕನೆಕ್ಟಿವಿಟಿ ಆಯ್ಕೆಗಳಲ್ಲಿ 3.5 mm ಆಡಿಯೋ ಜ್ಯಾಕ್, ಬ್ಲೂಟೂತ್ 5.0, HDMI ಮಿನಿ, Wi-Fi ಸೇರಿದಂತೆ ಕೆಲವು ಅಗತ್ಯ ಆಯ್ಕೆಗಳನ್ನು ಪಡೆದಿದೆ. ಈ ಲ್ಯಾಪ್‌ಟಾಪ್‌ ಎಂಬೆಡೆಡ್ ಜಿಯೋ ಸಿಮ್ ಕಾರ್ಡ್‌ನೊಂದಿಗೆ ಲಭ್ಯವಾಗಲಿದ್ದು, ಇದು ಬಳಕೆದಾರರು ಜಿಯೋ 4G LTE ಸಂಪರ್ಕವನ್ನು ಸಕ್ರಿಯಗೊಳಿಸಲು ಅನುವು ಮಾಡಿಕೊಡುತ್ತದೆ. ಹಾಗೆಯೇ ಸುಮಾರು 128 GB ವರೆಗೂ ಬಾಹ್ಯ ಮೆಮೊರಿ ವಿಸ್ತರಿಸುವ ಆಯ್ಕೆ ಲಭ್ಯವಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಆಸಕ್ತ ಖರೀದಿದಾರರು ಜಿಯೋಬುಕ್ ಲ್ಯಾಪ್‌ಟಾಪ್‌ ಅನ್ನು ಇದೀಗ 15,799 ರೂ. ಗಳ ಬೆಲೆಯಲ್ಲಿ ಖರೀದಿಸಬಹುದಾಗಿದೆ. ಹಾಗೆಯೇ ಕೆಲವು ಆಯ್ದ ಬ್ಯಾಂಕ್‌ಗಳಿಂದ 5000 ರೂ. ಗಳ ವರೆಗೂ ಇನ್‌ಸ್ಟಂಟ್‌ ರಿಯಾಯಿತಿ ಸಹ ಲಭ್ಯವಾಗಲಿದೆ. ಇನ್ನು ಈ ಲ್ಯಾಪ್‌ಟಾಪ್‌ ರಿಲಯನ್ಸ್ ಡಿಜಿಟಲ್ ಸ್ಟೋರ್ ಗಳಲ್ಲಿ ಖರೀದಿ ಮಾಡಬಹುದು. ಡೆಬಿಟ್ ಕಾರ್ಡುದಾರರು ರಿಲಯನ್ಸ್ ಡಿಜಿಟಲ್ ವೆಬ್‌ಸೈಟ್‌ನಲ್ಲಿ ಕೊಡುಗೆ ಚೆಕ್ ಮಾಡಬಹುದು. ಕೆಲವು ರಿಯಾಯಿತಿಗಳನ್ನು ಸಹ ಪಡೆಯಲು ಸಾಧ್ಯವಾಗುತ್ತದೆ.

Best Mobiles in India

English summary
JioBook laptop now on sale in India: Price less than Rs 15,000.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X