ನಿಧಾನವಾಗುತ್ತಿದೆ ಜಿಯೋ ಫೈಬರ್‌ನ ಇನ್‌ಸ್ಟಾಲೆಶನ್‌..! ಗ್ರಾಹಕರಿಗೆ ಕಾಯುವುದೊಂದೆ ಕೆಲಸ..!

By Gizbot Bureau
|

ಸುಮಾರು ಒಂದು ತಿಂಗಳ ಹಿಂದೆ, ರಿಲಾಯನ್ಸ್ ಕಂಪನಿ ತನ್ನ ಮಹತ್ವಾಕಾಂಕ್ಷೆ ಯೋಜನೆ ಜಿಯೋ ಫೈಬರ್‌ನ ವಾಣಿಜ್ಯ ಯೋಜನೆಗಳು ಹಾಗೂ ಬೆಲೆಗಳ ಮಾಹಿತಿಯನ್ನು ಬಹಿರಂಗಪಡಿಸಿತ್ತು. ಸಾಕಷ್ಟು ಕೈಗೆಟುಕುವ ದರ ಹಾಗೂ ಹೆಚ್ಚಿನ ವೇಗದ ಬ್ರಾಡ್‌ಬ್ಯಾಂಡ್ ಯೋಜನೆಯೊಂದಿಗೆ ಅನೇಕ ಗ್ರಾಹಕರಿಗೆ ಯೋಗ್ಯ ಆಯ್ಕೆಯಾಗಿ ಜಿಯೋ ಫೈಬರ್‌ ಮುಂದೆ ನಿಂತಿತು. ಜಿಯೋ ಫೈಬರ್ ಸಬ್‌ಸ್ಕ್ರೀಪ್ಷನ್‌ ತಂತ್ರಜ್ಞಾನ ಆಧಾರಿತ ಗ್ರಾಹಕರಿಗೆ ಹೆಚ್ಚು ಪ್ರಯೋಜನಗಳನ್ನು ನೀಡುತ್ತದೆ. ಆದರೆ, ಜಿಯೋ ಫೈಬರ್‌ ಸೇವೆಯ ರೋಲ್ ಔಟ್‌ ನಿರೀಕ್ಷಿಸಿದಷ್ಟು ವೇಗವಾಗಿಲ್ಲದ್ದರಿಂದ ಹೊಸ ಗ್ರಾಹಕರು ಜಿಯೋ ಫೈಬರ್‌ಗಾಗಿ ಇನ್ನು ಸ್ವಲ್ಪ ಸಮಯ ಕಾಯಬೇಕಾಗಿದೆ.

ಪ್ರತಿಕ್ರಿಯೆಗಾಗಿ ಕಾಯುತ್ತಿರುವ ಗ್ರಾಹಕರು

ಪ್ರತಿಕ್ರಿಯೆಗಾಗಿ ಕಾಯುತ್ತಿರುವ ಗ್ರಾಹಕರು

ಇತ್ತೀಚಿನ ವರದಿಗಳ ಪ್ರಕಾರ, ಹೊಸ ಜಿಯೋಫೈಬರ್ ಸಂಪರ್ಕವನ್ನು ಪಡೆಯಲು ಆಸಕ್ತಿ ಹೊಂದಿರುವ ಗ್ರಾಹಕರು ಇನ್‌ಸ್ಟಾಲೆಶನ್‌ ಪ್ರಕ್ರಿಯೆಗಾಗಿ ಕಂಪನಿಯ ಸಂಪರ್ಕಕ್ಕಾಗಿ ಕಾಯುತ್ತಿದ್ದಾರೆ. ಜಿಯೋಫೈಬರ್ ಸಂಪರ್ಕವನ್ನು ಪಡೆಯಲು ಆಸಕ್ತಿ ಹೊಂದಿರುವವರು ಜಿಯೋ ವೆಬ್‌ಸೈಟ್‌ನಲ್ಲಿ ನೋಂದಾಯಿಸಿಕೊಳ್ಳಬೇಕಾಗುತ್ತದೆ. ಆ ನಂತರ ಜಿಯೋ ಪ್ರತಿನಿಧಿಯ ಕರೆಗಾಗಿ ಕಾಯಬೇಕು, ಇದರ ಬಳಿಕ ಇನ್‌ಸ್ಟಾಲೆಶನ್‌ ಪ್ರಕ್ರಿಯೆ ಪೂರ್ಣಗೊಳಿಸಲು ವೆಬ್‌ಸೈಟ್‌ನಲ್ಲಿ ನೀವು ನೊಂದಾಯಿಸುವಾಗ ನೀಡಿದ ವಿಳಾಸಕ್ಕೆ ಜಿಯೋ ಸಿಬ್ಬಂದಿ ಬರುತ್ತಾರೆ.

ನಿಧಾನ ಪ್ರಕ್ರಿಯೆ

ನಿಧಾನ ಪ್ರಕ್ರಿಯೆ

ಜಿಯೋ ಫೈಬರ್‌ ಇನ್‌ಸ್ಟಾಲ್‌ ಪ್ರಕ್ರಿಯೆ ನಿಧಾನವಾಗಿದ್ದು, ಗ್ರಾಹಕರು ಕಾಯುವ ಸ್ಥಿತಿ ನಿರ್ಮಾಣವಾಗಿದೆ. ಅಧಿಕೃತವಾಗಿ ಜಿಯೋದಿಂದ ಯಾವುದೇ ಅಪ್‌ಡೇಟ್‌ ಇಲ್ಲದಿದ್ದರೂ, ಕೆಲವು ಗ್ರಾಹಕರು ಜಿಯೋ ಫೈಬರ್ ಪ್ರಿವೀವ್‌ ಆಫರ್‌ಗೆ ಚಂದಾದಾರಿಕೆ ಶುಲ್ಕ ನೀಡುತ್ತಿದ್ದಾರೆ ಎಂದು ವರದಿಯಾಗಿದೆ. ಟೆಲಿಕಾಂ ಟಾಕ್ ಪ್ರಕಾರ, ಪ್ರಿವೀವ್‌ ಆಫರ್‌ನಡಿ ಜಿಯೋ ಫೈಬರ್‌ಗೆ ಹೊಸ ಸಂಪರ್ಕಗಳನ್ನು ನೀಡಲಾಗುತ್ತಿದ್ದು, ಗ್ರಾಹಕರು ಭದ್ರತಾ ಠೇವಣಿಯಾಗಿ 2,500 ರೂ.ಗಳನ್ನು ಪಾವತಿಸಬೇಕಾಗುತ್ತದೆ. ಮತ್ತು ಇನ್‌ಸ್ಟಾಲೆಶನ್‌ ಶುಲ್ಕದಿಂದ ವಿನಾಯಿತಿ ನೀಡಲಾಗುತ್ತದೆ.

ಹೋಮ್‌ ಗೇಟ್‌ವೇ

ಹೋಮ್‌ ಗೇಟ್‌ವೇ

ಪ್ರಿವೀವ್‌ ಆಫರ್‌ ಜಿಯೋ ಹೋಮ್ ಗೇಟ್‌ವೇ ಸಾಧನವನ್ನು ಗ್ರಾಹಕರಿಗೆ ಉಚಿತವಾಗಿ ನೀಡುತ್ತದೆ. ಚಂದಾದಾರರು 40 ಜಿಬಿ ಹೆಚ್ಚುವರಿ ಡೇಟಾವನ್ನು ನೀಡುವ ಹೆಚ್ಚುವರಿ ಡೇಟಾ ಸ್ಯಾಚೆಟ್‌ಗಳನ್ನು ಸಹ ಪಡೆಯಬಹುದಾಗಿದೆ. ಇಷ್ಟಿದ್ದರೂ, ತಿಂಗಳ ಹಿಂದೆ ಜಿಯೋ ವಿವರಿಸಿದ ಎಲ್ಲಾ ಯೋಜನೆಗಳ ಪ್ರಕಾರ ಜಿಯೋಫೈಬರ್ ಸೇವೆಗೆ ಗ್ರಾಹಕರು ಶುಲ್ಕವನ್ನು ಪಾವತಿಸಬೇಕಾಗುತ್ತದೆ.

ಜಿಯೋ ಸೆಟ್ ಟಾಪ್ ಬಾಕ್ಸ್..?

ಜಿಯೋ ಸೆಟ್ ಟಾಪ್ ಬಾಕ್ಸ್..?

ಗ್ರಾಹಕರು ಹೊಸ ಜಿಯೋಫೈಬರ್ ಸಂಪರ್ಕವನ್ನು ಸದ್ಯ ಜಿಯೋ ಫೈಬರ್ ಪ್ರಿವೀವ್‌ ಆಫರ್‌ನಲ್ಲಿ ಪಡೆಯುತ್ತಿದ್ದು, ಈ ಸಮಯದಲ್ಲಿ ಸೆಟ್ ಟಾಪ್ ಬಾಕ್ಸ್ ಅನ್ನು ನೀಡಲಾಗಿಲ್ಲ. ಆದಾಗ್ಯೂ, ನಿಯಮಿತ ಬಿಲ್ಲಿಂಗ್ ಚಕ್ರ ಪ್ರಾರಂಭವಾದ ನಂತರ ಗ್ರಾಹಕರಿಗೆ ಸೆಟ್‌ ಟಾಪ್‌ ಬಾಕ್ಸ್ ನೀಡಲಾಗುತ್ತದೆ. ಜಿಯೋ ಸೆಟ್ ಟಾಪ್ ಬಾಕ್ಸ್ ಜಿಯೋ ಫೈಬರ್‌ನ ಎಲ್ಲಾ ಸ್ಮಾರ್ಟ್ ಸೇವೆಗಳಿಗೆ ಪ್ರಮುಖವಾಗಿದ್ದು, ಜಿಯೋ ಫೈಬರ್ ವಾಣಿಜ್ಯ ಕೊಡುಗೆಯ ಭಾಗವಾಗಿ ಉಚಿತ ಸಬ್‌ಸ್ಕ್ರಿಪ್ಷನ್‌ನೊಂದಿಗೆ ಬರಲಿದೆ.

450+ ಚಾನಲ್‌

450+ ಚಾನಲ್‌

ಜಿಯೋ ಸೆಟ್ ಟಾಪ್ ಬಾಕ್ಸ್ ಜನಪ್ರಿಯ ಡಿಟಿಎಚ್ ಆಪರೇಟರ್‌ಗಳಿಂದ ಚಂದಾದಾರಿಕೆಯನ್ನು ಸ್ವೀಕರಿಸುತ್ತದೆ. ಆದರೆ, ವರದಿಗಳ ಪ್ರಕಾರ, ಜಿಯೋ ಸೆಟ್‌ ಟಾಪ್‌ ಬಾಕ್ಸ್‌ ಲಾಂಚಿಂಗ್‌ ವೇಳೆ 450+ ಚಾನೆಲ್‌ಗಳ ಲಭ್ಯತೆಯನ್ನು ಜಿಯೋ ಫೈಬರ್ ಸಿಬ್ಬಂದಿ ಖಚಿತಪಡಿಸಿದ್ದಾರೆ ಎನ್ನಲಾಗಿದೆ. ಮತ್ತು ಬೇಸಿಕ್‌ ಯೋಜನೆಯೊಂದಿಗೆ ಚಂದಾದಾರರು ಜಿಯೋ ಆಪ್‌ಗಳ ಪ್ರೀಮಿಯಂ ಚಂದಾದಾರಿಕೆ ಕೊಡುಗೆಯನ್ನು ಪಡೆಯುತ್ತಾರೆ.

Best Mobiles in India

Read more about:
English summary
JioFiber Broadband Service Rollout Update On Preview Offer And more

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X