'ಜಿಯೋ ಫೈಬರ್' ಖರೀದಿಸಿದವರಿಗೆ ಮತ್ತೊಂದು ಸಿಹಿಸುದ್ದಿ!

|

ಬ್ರಾಡ್‌ಬ್ಯಾಂಡ್ ಆಪರೇಟರ್‌ಗಳು ಗ್ರಾಹಕರಿಗೆ ಲ್ಯಾಂಡ್‌ಲೈನ್ ಕರೆ ಸೇವೆಯನ್ನು ಉಚಿತವಾಗಿ ಒದಗಿಸುತ್ತಿರುವುದು ಹೊಸ ವಿಷಯವಲ್ಲ, ಏರ್‌ಟೆಲ್ ಮತ್ತು ಬಿಎಸ್‌ಎನ್‌ಎಲ್ ಇದನ್ನು ವರ್ಷಗಳಿಂದ ಮಾಡುತ್ತಿವೆ. ಆದರೆ, ಮುಖೇಶ್ ಅಂಬಾನಿ ಒಡೆತನದ ಕಂಪನಿಯ ಜಿಯೋ ಫಿಕ್ಸ್ಡ್ ವಾಯ್ಸ್ ಸೇವೆಯು ಆಸಕ್ತಿದಾಯಕವಾಗಿ ಕಾಣಿಸಿಕೊಂಡಿದೆ. ಏಕೆಂದರೆ, ಜಿಯೋ ಫಿಕ್ಸ್ಡ್ ವಾಯ್ಸ್ ಸೇವೆಯು ಜಿಯೋಕಾಲ್ ಮೊಬೈಲ್ ಆಪ್ ಮೂಲಕ ಆರು ಸ್ಮಾರ್ಟ್‌ಫೋನ್‌ಗಳಲ್ಲಿ ಧ್ವನಿ ಕರೆ ಮಾಡಲು ಬಳಕೆದಾರರಿಗೆ ಅವಕಾಶ ನೀಡಲಿದೆ.

ಜಿಯೊ ಕಾಲ್ ಆಪ್‌

ಹೌದು, ಜಿಯೋ ಫೈಬರ್ ಸೇವೆಯಲ್ಲಿ ಜಿಯೋಕಾಲ್ ಮೊಬೈಲ್ ಆಪ್ ಮೂಲಕ ಆರು ಸ್ಮಾರ್ಟ್‌ಫೋನ್‌ಗಳಲ್ಲಿ ಧ್ವನಿ ಕರೆ ಮಾಡಲು ಬಳಕೆದಾರರಿಗೆ ಅವಕಾಶ ಲಭ್ಯವಿದೆ. ಕಂಪನಿಯು ಒದಗಿಸಿದ ಜಿಯೋ ಫೈಬರ್ ರೂಟರ್ ಅನ್ನು ಸ್ಮಾರ್ಟ್‌ಫೋನ್‌ಗಳು ಸಂಪರ್ಕಿಸಿದರೆ ರಿಲಯನ್ಸ್ ಜಿಯೋ ಎಲ್ಲಾ ಜಿಯೋ ಫೈಬರ್ ಗ್ರಾಹಕರಿಗೆ ಜಿಯೋ ಫಿಕ್ಸ್ಡ್ ವಾಯ್ಸ್ ಕರೆ ಸೇವೆಯನ್ನು ಉಚಿತವಾಗಿ ಒದಗಿಸುತ್ತಿದೆ. ಇದಕ್ಕಾಗಿ ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಕೇವಲ ಜಿಯೊ ಕಾಲ್ ಆಪ್‌ ಅನ್ನು ಡೌನ್‌ಲೋಡ್ ಮಾಡಿಕೊಂಡರೆ ಸಾಕಾಗುತ್ತದೆ.

ಜಿಯೊ ಅಪ್ಲಿಕೇಶನ್‌

ಜಿಯೋ ಫೈವರ್ ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಮೈ ಜಿಯೊವನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು ಮತ್ತು ರಿಜಿಸ್ಟರ್ ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು ಜಿಯೋ ಫೈಬರ್ ಖಾತೆಗೆ ಲಾಗ್ ಇನ್ ಆಗಬೇಕಾಗುತ್ತದೆ. ನೀವು ಜಿಯೋಫೈಬರ್ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು ಮೈ ಜಿಯೊ ಅಪ್ಲಿಕೇಶನ್‌ಗೆ ಲಾಗ್ ಇನ್ ಮಾಡಿದ ನಂತರ, ಜಿಯೊ ಕಾಲ್ ಆಪ್‌ ಅನ್ನು ಡೌನ್‌ಲೋಡ್ ಮಾಡಿಕೊಂಡು ಮುಂದಿನ ಹಂತಗಳನ್ನು ಅನುಸರಿಸುವ ಮೂಲಕ ಧ್ವನಿ ಕರೆ ಸೇವೆಯನ್ನು ಸಕ್ರಿಯಗೊಳಿಸಬಹುದು.

ಎಲ್ಲಾ ಅನುಮತಿಗಳನ್ನು ನೀಡಿ.

ಗೂಗಲ್ ಪ್ಲೇ ಸ್ಟೋರ್ ಅಥವಾ ಆಪಲ್ ಆಪ್ ಸ್ಟೋರ್‌ನಿಂದ ಜಿಯೋಕಾಲ್ ಆಪ್ ಅನ್ನು ಡೌನ್‌ಲೋಡ್ ಮಾಡಿ. ಡೌನ್‌ಲೋಡ್ ಮಾಡಿದ ನಂತರ, ಮುಂದೆ ಮುಂದುವರಿಯಲು ಅಪ್ಲಿಕೇಶನ್‌ಗೆ ಅಗತ್ಯವಿರುವ ಎಲ್ಲಾ ಅನುಮತಿಗಳನ್ನು ನೀಡಿ. ಸೆಟಪ್ ಪ್ರಕ್ರಿಯೆಗೆ ಮೊದಲ ಬೂಟ್‌ನಲ್ಲಿ ಅಪ್ಲಿಕೇಶನ್ ಈಗ ಮೂರು ಆಯ್ಕೆಗಳನ್ನು ಒದಗಿಸುತ್ತದೆ- ಜಿಯೋ 4ಜಿ ಸಿಮ್ ಕಾರ್ಡ್, ಜಿಯೋಫೈ ಸಂಪರ್ಕ ಮತ್ತು ಸ್ಥಿರ ಲ್ಯಾಂಡ್‌ಲೈನ್ ಸೇವೆ. ನಿಮ್ಮ ಸ್ಮಾರ್ಟ್‌ಫೋನ್‌ಗೆ VoLTE ಸೇವೆಯ ಕೊರತೆಯಿದ್ದರೆ, ನೀವು ಮೊದಲ ಆಯ್ಕೆಯನ್ನು ಆರಿಸಿಕೊಳ್ಳಬಹುದು;

JioFixedVoice

ಹಾಗೆಯೇ, ನಿಮ್ಮ JioFi ಸಂಖ್ಯೆಯ ಮೂಲಕ ನೀವು ಧ್ವನಿ ಕರೆಗಳನ್ನು ಮಾಡಲು ಬಯಸಿದರೆ, ನೀವು ಎರಡನೇ ಆಯ್ಕೆಯನ್ನು ಆರಿಸಿಕೊಳ್ಳಬಹುದು. ಇನ್ನು ಕೊನೆಯದಾಗಿ, ನೀವು JioFixedVoice ಸೇವೆಯನ್ನು ಹೊಂದಿದ್ದರೆ, ಪ್ರಾರಂಭಿಸಲು ನೀವು ಮೂರನೇ ಆಯ್ಕೆಯನ್ನು ಕ್ಲಿಕ್ ಮಾಡಿ. ನಂತರ ನಿಮ್ಮ ಜಿಯೋ ಫೈಬರ್ ನೋಂದಾಯಿತ ಸಂಖ್ಯೆಗೆ OTP ಬರುತ್ತದೆ. ಅದು JioFixedVoice ಲ್ಯಾಂಡ್‌ಲೈನ್ ಸಂಖ್ಯೆಯನ್ನು ಬಳಸಿಕೊಂಡು ನಿಮ್ಮ ಸ್ಮಾರ್ಟ್‌ಫೋನ್‌ನಿಂದ ಉಚಿತವಾಗಿ ಧ್ವನಿ ಕರೆ ಮಾಡಲು ಅನುವುಮಾಡಿಕೊಡುತ್ತದೆ.

ಉಚಿತ ಕರೆ

ಇದು ರಿಲಯನ್ಸ್ ಜಿಯೋದ ಅದರ ವಿಶಿಷ್ಟ ಸೇವೆಗಳಲ್ಲಿ ಒಂದಾಗಿದೆ. ಆದರೆ, ಈ ಸೇವೆಯಲ್ಲಿ ಒಂದು ಸಣ್ಣ ಸಮಸ್ಯೆ ಕೂಡ ಇದೆ. ಜಿಯೋಕಾಲ್ ಅಪ್ಲಿಕೇಶನ್ ಸ್ಥಾಪಿಸಿರುವ ಸ್ಮಾರ್ಟ್‌ಫೋನಿಲ್ಲಿ ಉಚಿತ ಕರೆಗಳನ್ನು ಮಾಡಲು ಮತ್ತು ಸ್ವೀಕರಿಸಲು ಯಾವಾಗಲೂ ಜಿಯೋಫೈಬರ್ ರೂಟರ್‌ಗೆ ಸಂಪರ್ಕದಲ್ಲಿರಬೇಕಾಗುತ್ತದೆ. ಜಿಯೋಫೈಬರ್ ಮೂಲಕ ಉಚಿತವಾಗಿ ಕರೆ ಮಾಡಲು ಯಾವಾಗಲೂ ಜಿಯೋಫೈಬರ್ ರೂಟರ್‌ಗೆ ಕನೆಕ್ಟ್ ಆಗಬೇಕು. ಇಲ್ಲವಾದಲ್ಲಿ ನೀವು ಜಿಯೋ ಫಿಕ್ಸ್ಡ್ ವಾಯ್ಸ್ ಸೇವೆಯಲ್ಲಿ ಉಚಿತ ಕರೆಗಳನ್ನು ಮಾಡಲು ಸಾಧ್ಯವಿಲ್ಲ.

Best Mobiles in India

Read more about:
English summary
JioFiber JioFixedVoice service even allows users to make voice calls on up to six smartphones through the JioCall mobile app. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X