ಕ್ಲೌಡ್‌ ಆಧಾರಿತ ಗೇಮಿಂಗ್‌ ಸೇವೆ ಪರಿಚಯಿಸಿದ ಜಿಯೋ! ಏನಿದರ ವಿಶೇಷ!

|

ಭಾರತದ ಟೆಲಿಕಾಂ ದೈತ್ಯ ಜಿಯೋ ಇದಿಗ ಕ್ಲೌಡ್‌ ಆಧಾರಿತ ಗೇಮಿಂಗ್‌ ಸೇವೆ ನೀಡಲು ಮುಂದಾಗಿದೆ. ಇದಕ್ಕಾಗಿ ಭಾರತದಲ್ಲಿ ಜಿಯೋಗೇಮ್ಸ್‌ಕ್ಲೌಡ್‌ ಅನ್ನು ಪರಿಚಯಿಸಿದೆ. ಇದು ಪ್ರಸ್ತುತ ಬೀಟಾ ವರ್ಷನ್‌ನಲ್ಲಿ ಲಭ್ಯವಿದ್ದು, ಬಳಕೆದಾರರು ಬೀಟಾ ಪರೀಕ್ಷೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಇದರಿಂದ ಬಳಕೆದಾರರು ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳಲ್ಲಿ ಗೇಮ್‌ ಅನ್ನು ಡೌನ್‌ಲೋಡ್‌ ಮಾಡದೆಯೇ ಇತ್ತೀಚಿನ ಗೇಮ್‌ಗಳನ್ನು ಪರೀಕ್ಷಿಸಲು ಸಾಧ್ಯವಾಗಲಿದೆ.

ಜಿಯೋದಿಂದ

ಹೌದು, ಜಿಯೋದಿಂದ ಕ್ಲೌಡ್ ಆಧಾರಿತ ಗೇಮಿಂಗ್ ಸೇವೆಯಾದ ಜಿಯೋಗೇಮ್ಸ್‌ಕ್ಲೌಡ್‌ ಪರಿಚಯಿಸಲಾಗಿದೆ. ಇದರ ಸ್ಮಾರ್ಟ್‌ಫೋನ್ ಆವೃತ್ತಿಯು ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳು ಮತ್ತು ಟ್ಯಾಬ್ಲೆಟ್‌ಗಳಿಗೆ ಮಾತ್ರ ಲಭ್ಯವಿದೆ. ಜೊತೆಗೆ ಇದರ ವೆಬ್‌ ಅಪ್ಲಿಕೇಶನ್‌ ಕೂಡ ಲಭ್ಯವಿದ್ದು, ಇದನ್ನು PC ಗಳು ಮತ್ತು ಲ್ಯಾಪ್‌ಟಾಪ್‌ಗಳಲ್ಲಿ ಮ್ಯಾಕೋಸ್, ವಿಂಡೋಸ್ ಮತ್ತು ಐಫೋನ್‌ಗಳಲ್ಲಿ ಪ್ರವೇಶಿಸಬಹುದಾಗಿದೆ. ಹಾಗಾದ್ರೆ ಜಿಯೋಗೇಮ್ಸ್‌ಕ್ಲೌಡ್‌ಗೆ ಸೈನ್‌ ಅಪ್‌ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಜಿಯೋಗೇಮ್ಸ್‌ಕ್ಲೌಡ್‌ಗೆ ಸೈನ್-ಅಪ್ ಮಾಡುವುದು ಹೇಗೆ?

ಜಿಯೋಗೇಮ್ಸ್‌ಕ್ಲೌಡ್‌ಗೆ ಸೈನ್-ಅಪ್ ಮಾಡುವುದು ಹೇಗೆ?

ಹಂತ:1 ಮೊದಲಿಗೆ ಜಿಯೋಗೇಮ್ಸ್‌ ಅನ್ನು ಡೌನ್‌ಲೋಡ್‌ ಮಾಡಿ.
ಹಂತ:2 ಇದೀಗ ನಿಮ್ಮ ಜಿಯೋ ಫೋನ್ ಸಂಖ್ಯೆಯನ್ನು ಬಳಸಿಕೊಂಡು ಅಪ್ಲಿಕೇಶನ್‌ಗೆ ಸೈನ್ ಇನ್ ಮಾಡಿ.
ಹಂತ:3 ನಂತರ ಅಪ್ಲಿಕೇಶನ್ ತೆರೆಯಿರಿ ಮತ್ತು ಕ್ಲೌಡ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ಹಂತ:4 ಇದರಲ್ಲಿ ನೀವು ಆಡಲು ಆಸಕ್ತಿ ಹೊಂದಿರುವ ಯಾವುದೇ ಆಟಗಳ ಮೇಲೆ ಕ್ಲಿಕ್ ಮಾಡಿ.
ಹಂತ:5 ಇದೀಗ ನಿಮಗೆ ಆನ್‌ಲೈನ್ ಫಾರ್ಮ್ ತೆರೆಯಲಿದೆ.
ಹಂತ:6 ಇದರಲ್ಲಿ ಹೆಸರು, ಜನ್ಮ ದಿನಾಂಕ ಮತ್ತು ಇಮೇಲ್‌ನಂತಹ ವಿವರಗಳನ್ನು ಭರ್ತಿ ಮಾಡಿರಿ.
ಹಂತ:7 ನಂತರ ನೀವು ಉಚಿತವಾಗಿ ಜಿಯೋಗೇಮ್ಸ್‌ಕ್ಲೌಡ್‌ನಲ್ಲಿ ಗೇಮ್‌ಗಳನ್ನು ಆಡುವುದಕ್ಕೆ ಸಾಧ್ಯವಾಗಲಿದೆ.

ಜಿಯೋಗೇಮ್ಸ್‌

ಇನ್ನು ಜಿಯೋಗೇಮ್ಸ್‌ ಕ್ಲೌಡ್‌ನಲ್ಲಿರುವ ಕೆಲವು ಗೇಮ್‌ಗಳು ಕನ್ಸೋಲ್ ಮಟ್ಟದ ಗ್ರಾಫಿಕ್ಸ್ ಅನ್ನು ನೀಡುತ್ತವೆ. ಇದಕ್ಕಾಗಿ ನೀವು ಸ್ಮಾರ್ಟ್‌ಫೋನ್ ಅನ್ನು ಹೆಚ್ಚಿನ ವೇಗದ ವೈಫೈ ನೆಟ್‌ವರ್ಕ್ ಅಥವಾ 5G ನೆಟ್‌ವರ್ಕ್‌ಗೆ ಸಂಪರ್ಕಿಸುವ ಮೂಲಕ ಬಳಕೆದಾರರು ಈ ಆಟಗಳನ್ನು ಆಡಬಹುದಾಗಿದೆ. ಇದಲ್ಲದೆ ಗೇಮ್ ಅನ್ನು ರಿಮೋಟ್ ಆಗಿ ಪ್ರದರ್ಶಿಸಲಾಗುತ್ತದೆ. ಸದ್ಯ ಜಿಯೋಗೇಮ್ಸ್‌ಕ್ಲೌಡ್‌ನಲ್ಲಿ ಕೆಲವು ಗೇಮ್‌ಗಳು ಲಭ್ಯವಿದೆ. ಆದರೆ ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಗೇಮ್‌ಗಳನ್ನು ಸೇರಿಸುವ ಸಾಧ್ಯತೆಯಿದೆ. ಇದಲ್ಲದೆ ಜಿಯೋಗೇಮ್ಸ್‌ಕ್ಲೌಡ್‌ ಸೇವೆ ಪ್ರಸ್ತುತ ಉಚಿತವಾಗಿದೆ, ಆದರೆ ಅಧಿಕೃತ ಪ್ರಾರಂಭದ ನಂತರ ಕಂಪನಿಯು ಶುಲ್ಕವನ್ನು ವಿಧಿಸುವ ನಿರೀಕ್ಷೆಯಿದೆ.

ಜಿಯೋ

ಇದಲ್ಲದೆ ಜಿಯೋ ಟೆಲಿಕಾಂ ಇತ್ತೀಚಿಗೆ ತನ್ನ ಎರಡು ಜನಪ್ರಿಯ ಪ್ರೀಪೇಯ್ಡ್‌ ಯೋಜನೆಗಳನ್ನು ಸಂಪೂರ್ಣವಾಗಿ (removed) ನಿಲ್ಲಿಸಿದೆ. ತನ್ನ ಪ್ಲ್ಯಾನ್‌ಗಳ ಲಿಸ್ಟ್‌ನಿಂದ ಜಿಯೋ 1499ರೂ ಮತ್ತು ಜಿಯೋ 4199ರೂ. ಪ್ರೀಪೇಯ್ಡ್‌ ಪ್ಲ್ಯಾನ್‌ಗಳನ್ನು ತೆಗೆದುಹಾಕಿದೆ. ಈ ಎರಡೂ ಯೋಜನೆಗಳು ಟೆಲಿಕಾಂನ ಅಧಿಕೃತ ವೆಬ್‌ಸೈಟ್ ಅಥವಾ ಜಿಯೋ ಮೊಬೈಲ್ ಆಪ್‌ನಲ್ಲಿ ಕಾಣಿಸುವುದಿಲ್ಲ. ಈ ಪ್ಲಾನ್‌ಗಳು ಡಿಸ್ನಿ+ ಹಾಟ್‌ಸ್ಟಾರ್‌ (Disney+ Hotstar) ಓಟಿಟಿ ಚಂದಾದಾರಿಕೆ ಸೌಲಭ್ಯ ಪಡೆದಿದ್ದು, ಜೊತೆಗೆ ದೈನಂದಿನ ಡೇಟಾ, ಎಸ್‌ಎಮ್‌ಎಸ್‌ ಪ್ರಯೋಜನ, ಅನಿಯಮಿತ ವಾಯಿಸ್‌ ಕರೆಯ ಸೌಲಭ್ಯಗಳೊಂದಿಗೆ ಆಕರ್ಷಕ ವ್ಯಾಲಿಡಿಟಿ ಸಹ ಪಡೆದಿವೆ.

ಜಿಯೋ 1,499ರೂ. ಪ್ರೀಪೇಯ್ಡ್‌ ಪ್ಲ್ಯಾನ್ ಪ್ರಯೋಜನಗಳು

ಜಿಯೋ 1,499ರೂ. ಪ್ರೀಪೇಯ್ಡ್‌ ಪ್ಲ್ಯಾನ್ ಪ್ರಯೋಜನಗಳು

ರಿಲಾಯನ್ಸ್‌ ಜಿಯೋ ಟೆಲಿಕಾಂನ 4,199ರೂ. ಪ್ರೀಪೇಯ್ಡ್‌ ಪ್ಲ್ಯಾನ್ ದೀರ್ಘಾವಧಿಯ ಯೋಜನೆ ಆಗಿದ್ದು, 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಈ ಅವಧಿಯಲ್ಲಿ ಪ್ರತಿದಿನ 2 GB ಡೇಟಾ ಪ್ರಯೋಜನಗಳು ಗ್ರಾಹಕರಿಗೆ ಲಭ್ಯವಾಗಲಿದ್ದು, ಪೂರ್ಣ ವ್ಯಾಲಿಡಿಟಿ ಅವಧಿಗೆ 168 GB ಡೇಟಾ ಸೌಲಭ್ಯ ಸಿಗಲಿದೆ. ಈ ಪ್ಲಾನ್‌ ಇನ್ಮುಂದೆ ಗ್ರಾಹಕರಿಗೆ ಲಭ್ಯವಾಗುವುದಿಲ್ಲ.

Best Mobiles in India

English summary
JioGamesCloud Gaming Service launched in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X