ಜಿಯೋ ಮಾರ್ಟ್ ವಾಟ್ಸಪ್ ಆರ್ಡರ್ ಸೇವೆ ಆರಂಭ!

|

ದೇಶದ ಟೆಲಿಕಾಂ ವಲಯದಲ್ಲಿ ಮುಂಚೂಣಿಯಲ್ಲಿರುವ ರಿಲಾಯನ್ಸ್ ಜಿಯೋ ಸಂಸ್ಥೆಯು ಹಲವು ಸೇವೆಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಇತ್ತೀಚಿಗಷ್ಟೆ ಸೋಷಿಯಲ್ ಮೀಡಿಯಾ ದೈತ್ಯ ಫೇಸ್‌ಬುಕ್ ಜಿಯೋದ ಪಾಲುದಾರಿಕೆಯನ್ನು ಪಡೆದಿದ್ದು, ದೇಶದಲ್ಲಿ ಇ-ಕಾಮರ್ಸ್‌ನಲ್ಲಿ ಹೊಸ ಬೆಳವಣಿಗೆಗಳ ಲಕ್ಷಣಗಳನ್ನು ಸೂಚಿಸಿವೆ. ಜಿಯೋ ಈಗ ವಾಟ್ಸಪ್‌ ಮೂಲಕ ಆರ್ಡರ್ ತೆಗೆದುಕೊಳ್ಳುವ ನೂತನ ಸೇವೆ ಶುರುಮಾಡಿದೆ.

ಹೌದು, ಈಗಾಗಲೆ ಜಿಯೋ ಸಂಸ್ಥೆಯು ಜಿಯೋ ಮಾರ್ಟ್‌ ಮೂಲಕ ರಿಟೇಲ್ ಉದ್ಯೋಗದೊಂದಿಗೆ ವಹಿವಾಟಿ ಸೇವೆ ನೀಡುತ್ತಿದೆ. ಆದ್ರೆ ಇದೀಗ ವಾಟ್ಸಪ್‌ ಮೂಲಕ ಆರ್ಡರ್ ತೆಗೆದುಕೊಳ್ಳುವ ಸೇವೆಗೆ ಸಜ್ಜಾಗಿದ್ದು, ಅದಕ್ಕಾಗಿ ಜಿಯೋ ಮಾರ್ಟ್‌ ವಾಟ್ಸಪ್ ನಂಬರ್ ಬಿಡುಗಡೆ ಮಾಡಿದೆ. ಗ್ರಾಹಕರು ಈ ವಾಟ್ಸಪ್‌ ನಂಬರ್ ಮೂಲಕ ಆರ್ಡರ್ ನೀಡಿದರೆ 48 ಗಂಟೆಗಳಲ್ಲಿ ಗ್ರಾಹಕರಿಗೆ ತಲುಪಿಸುವ ಯೋಜನೆ ಮಾಡಲಾಗಿದೆ ಎಂದು ಹೇಳಿಕೊಂಡಿದೆ.

ವಾಟ್ಸಪ್ ನಂಬರ್ ಆರ್ಡರ್

ಜಿಯೋ ಮಾರ್ಟ್‌ ವಾಟ್ಸಪ್ ನಂಬರ್ ಆರ್ಡರ್ ಸೇವೆಯನ್ನು ಪ್ರಾಯೋಗಿಕವಾಗಿ ಶುರುಮಾಡಿದೆ. ಜಿಯೋ ಮಾರ್ಟ್ ಮೂಲಕ ಅಗತ್ಯ ವಸ್ತುಗಳನ್ನು ಪಡೆಯಲು ವಾಟ್ಸಪ್‌ನಲ್ಲಿ ಆರ್ಡರ್‌ಗಳನ್ನು ತೆಗೆದುಕೊಳ್ಳುತ್ತಿದೆ. ಪಡೆದ ಆರ್ಡರ್‌ಗಳನ್ನು 48 ಗಂಟೆಗಳ ಒಳಗೆ ಡೆಲಿವರಿ ನಿಡುವ ಯೋಜನೆ ಹೊಂದಿದೆ. ಅಂದಹಾಗೆ ಜಿಯೋ ಮಾರ್ಟ್ ವಾಟ್ಸಾಪ್ ಆರ್ಡರ್ ಬುಕಿಂಗ್ ಸೇವೆಯನ್ನು ಮಹಾರಾಷ್ಟ್ರದ ನವೀ ಮುಂಬೈ, ಥಾಣೆ, ಮತ್ತು ಕಲ್ಯಾಣ್‌ನ ಆಯ್ದ ಪ್ರದೇಶಗಳಲ್ಲಿ ಪ್ರಾಯೋಗಿಕವಾಗಿ ಆರಂಭಿಸಲಾಗಿದೆ.

ಬುಕಿಂಗ್ ಮಾಡಲು

ಜಿಯೋ ಮಾರ್ಟ್‌ ವಾಟ್ಸಪ್‌ ಆರ್ಡರ್ ಬುಕಿಂಗ್ ಮಾಡಲು ಗ್ರಾಹಕರಿಗೆ ಜಿಯೋ (+91 88500 08000) ಈ ನಂಬರ್ ಅನ್ನು ಬಿಡುಗಡೆ ಮಾಡಿದೆ. ಗ್ರಾಹಕರು ಈ ನಂಬರ್‌ ಅನ್ನು ಸೇವ್ ಮಾಡಿಕೊಂಡು ಬಿಸಿನೆಸ್ ವಾಟ್ಸಪ್ ಖಾತೆಯ ಮೂಲಕ ವ್ಯವಹಾರ ಖಾತೆಯೊಂದಿಗೆ ಚಾಟ್ ಮಾಡಬಹುದಾಗಿದೆ. ಆದ್ರೆ ಸದ್ಯ ಈ ಸೇವೆಯು ಪ್ರಾಯೋಗಿಕ ಹಂತದಲ್ಲಿದೆ.

ಕಿರಾಣಿ ಸ್ಟೋರ್‌

ಇನ್ನು ವಾಟ್ಸಪ್ ಮೂಲಕ ನೀಡಿರುವ ಆರ್ಡರ್‌ ಅನ್ನು ನೇರವಾಗಿ ಗ್ರಾಹಕರ ಮನೆಗೆ ತಲುಪಿಸಲಾಗುವುದಿಲ್ಲ. ಬದಲಿಗೆ ಗ್ರಾಹಕರು ಆರ್ಡರ್ ನೀಡಿರುವ ಸಾಮಗ್ರಿಗಳನ್ನು ಪಡೆಯಲು ಮನೆಯ ಹತ್ತಿರದ ಕಿರಾಣಿ ಸ್ಟೋರ್‌ಗೆ ಹೋಗಬೇಕಾಗುತ್ತದೆ. ಅದಕ್ಕಾಗಿ ಜಿಯೋ ಪಿಕ್‌ಅಪ್‌ ನೋಟಿಫಿಕೇಶನ್ ಕಳುಹಿಸುತ್ತದೆ. ಹಾಗೂ ಕಿರಾಣಿ ಅಂಗಡಿಯ ವಿಳಾಸದ ಗೂಗಲ್ ಲಿಂಕ್ ಸಹ ಕಳುಹಿಸಲಾಗುತ್ತದೆ. ಸಾಮಗ್ರಿ ಪಡೆಯುವ ವೇಳೆ ಹಣ ಪಾವತಿ ಮಾಡಲು ಅವಕಾಶ ಇರಲಿದೆ ಎಂದು ಹೇಳಿದೆ.

ಜಿಯೋ ಮಾರ್ಟ್

ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ಇ-ಕಾಮರ್ಸ್ ತಾಣಗಳಿಗೆ ಸೆಡ್ಡು ಹೊಡೆಯುವ ನಿಟ್ಟಿನಲ್ಲಿ ಈ ವರ್ಷದ ಜನವರಿಯಲ್ಲಿ ರಿಲಯನ್ಸ್ ''ಜಿಯೋ ಮಾರ್ಟ್'' ಅನ್ನು ಪರಿಚಯಿಸಿರುವುದನ್ನು ಈ ಸಂದರ್ಭದಲ್ಲಿ ನಾವು ನೆನಪಿಸಿಕೊಳ್ಳಬಹುದಾಗಿದೆ. ರಿಲಯನ್ಸ್ ರಿಟೇಲ್ ಈ ಹೊಸ ಉದ್ಯಮವನ್ನು 'ದೇಶ್ ಕಿ ನಾಯ್ ಡುಕಾನ್' ಎಂದು ಕರೆಯುತ್ತದೆ. ಈ ಸೇವೆಯು ಪ್ರಸ್ತುತ ತನ್ನ ಬಳಕೆದಾರರಿಗೆ ಉಚಿತ ಮನೆ ವಿತರಣೆಯೊಂದಿಗೆ 50,000 ಕ್ಕೂ ಹೆಚ್ಚು ಕಿರಾಣಿ ಉತ್ಪನ್ನಗಳನ್ನು ಆಯ್ಕೆ ಮಾಡಲು ಅನುಮತಿಸುತ್ತದೆ.

Best Mobiles in India

English summary
JioMart is taking orders on WhatsApp for essential goods, and the delivery is promised within 48 hours.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X