ಜಿಯೋಫೋನ್‌ ನೆಕ್ಸ್ಟ್ 1999ರೂ.ಗೆ ಖರೀದಿಸಿ!..ಬಾಕಿ ಹಣ ತುಂಬಲು ಬೆಸ್ಟ್‌ EMI ಆಯ್ಕೆ!

|

ಕಳೆದ ವರ್ಷ ರಿಲಯನ್ಸ್ ಜಿಯೋ ಬಿಡುಗಡೆ ಮಾಡಿದ ಜಿಯೋಫೋನ್‌ ನೆಕ್ಸ್ಟ್‌ (JioPhone Next) ಕೈಗೆಟುಕುವ ದರದ 4G ಸ್ಮಾರ್ಟ್‌ಫೋನ್ ಆಗಿದೆ. ಈ ಸ್ಮಾರ್ಟ್‌ಫೋನ್ 6,499ರೂ. ಪ್ರೈಸ್‌ಟ್ಯಾಗ್‌ ಅನ್ನು ಹೊಂದಿದ್ದು, ಆದರೆ ಗ್ರಾಹಕರು EMI ಯೋಜನೆಯಡಿ 1,999 ರೂಗಳಲ್ಲಿ JioPhone ನೆಕ್ಸ್ಟ್ ಅನ್ನು ಖರೀದಿಸಲು ಸಾಧ್ಯವಾಗುತ್ತದೆ. ಜಿಯೋವಿನ ಅಧಿಕೃತ ಜಾಲತಾಣ jio.com ಮೂಲಕ ಜಿಯೋಫೋನ್‌ ನೆಕ್ಸ್ಟ್ ಸ್ಮಾರ್ಟ್‌ಫೋನನ್ನು ಬುಕ್ ಮಾಡಬಹುದಾಗಿದೆ.

ಜಿಯೋಫೋನ್‌ ನೆಕ್ಸ್ಟ್ 1999ರೂ.ಗೆ ಖರೀದಿಸಿ!.ಬಾಕಿ ಹಣ ತುಂಬಲು ಬೆಸ್ಟ್‌ EMI ಆಯ್ಕೆ

ಬಳಕೆದಾರರು 1,999ರೂ. ಡೌನ್‌ಪೇಮೆಂಟ್ ಮಾಡಿ ಫೋನ್ ಖರೀದಿಸಬಹುದು. ಬಾಕಿ ಹಣವನ್ನು ಮೊಬೈಲ್ ರೀಚಾರ್ಜ್ ಯೋಜನೆಗಳನ್ನು ಕೂಡ ಒಳಗೊಂಡ ಇಎಮ್‌ಐ (EMI) ಆಯ್ಕೆ ಮೂಲಕವೇ ಪಾವತಿಸಬಹುದಾಗಿದೆ. ಆದಾಗ್ಯೂ, ಇಎಮ್‌ಐ ಸೌಲಭ್ಯ ಆಯ್ಕೆಯು ಸಂಸ್ಕರಣಾ ಶುಲ್ಕವನ್ನು ಒಳಗೊಂಡಿರುತ್ತದೆ ಎನ್ನಲಾಗಿದೆ. ಬಳಕೆದಾರರಿಗಾಗಿ ಜಿಯೋ ಕೆಲವು ಭಿನ್ನ EMI ಯೋಜನೆ ಆಯ್ಕೆಗಳನ್ನು ನೀಡಿದೆ. ಯೋಜನೆಗಳ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ ಬನ್ನಿರಿ.

ಜಿಯೋಫೋನ್‌ ನೆಕ್ಸ್ಟ್ 1999ರೂ.ಗೆ ಖರೀದಿಸಿ!.ಬಾಕಿ ಹಣ ತುಂಬಲು ಬೆಸ್ಟ್‌ EMI ಆಯ್ಕೆ

* ಆಲ್ವೇಸ್‌ ಆನ್ ಪ್ಲಾನ್‌: ಈ ಯೋಜನೆಯಲ್ಲಿ ಬಳಕೆದಾರರು ಪ್ರತಿ ತಿಂಗಳು 5GB + 100 ನಿಮಿಷಗಳ ಧ್ವನಿ ಕರೆಯನ್ನು 18 ತಿಂಗಳು (ತಿಂಗಳಿಗೆ ರೂ 350) ಅಥವಾ 24 ತಿಂಗಳುಗಳು (ತಿಂಗಳಿಗೆ ರೂ 300) ಪಡೆಯುತ್ತಾರೆ.

* ಲಾರ್ಜ್ ಪ್ಲ್ಯಾನ್: ಈ ಯೋಜನೆಯು ಬಳಕೆದಾರರಿಗೆ ಅನಿಯಮಿತ ವಾಯಿಸ್ ಕರೆಯೊಂದಿಗೆ 1.5GB ದೈನಂದಿನ ಡೇಟಾವನ್ನು ನೀಡುತ್ತದೆ ಮತ್ತು 500 ರೂ/ತಿಂಗಳು ಮತ್ತು 450 ರೂ/ತಿಂಗಳಿಗೆ 18 ತಿಂಗಳುಗಳು ಮತ್ತು 24 ತಿಂಗಳುಗಳಿಗೆ ಲಭ್ಯವಿರುತ್ತದೆ.

ಜಿಯೋಫೋನ್‌ ನೆಕ್ಸ್ಟ್ 1999ರೂ.ಗೆ ಖರೀದಿಸಿ!.ಬಾಕಿ ಹಣ ತುಂಬಲು ಬೆಸ್ಟ್‌ EMI ಆಯ್ಕೆ

ಇನ್ನು ಒಂದು ವೇಳೆ ಬಳಕೆದಾರರು ಅಧಿಕ ದೈನಂದಿನ ಡೇಟಾವನ್ನು ಬಯಸಿದರೆ, ಅವರಿಗಾಗಿ ಕಂಪನಿಯು XL ಮತ್ತು XXL ಯೋಜನೆಗಳ ಆಯ್ಕೆ ನೀಡಿದೆ.

* XL ಪ್ಲ್ಯಾನ್: ಈ ಯೋಜನೆಯೊಂದಿಗೆ, ಬಳಕೆದಾರರು 500 ರೂ/ತಿಂಗಳು (24 ತಿಂಗಳುಗಳು) ಅಥವಾ ತಿಂಗಳಿಗೆ 550 ರೂ. ಗಳಿಗೆ (18 ತಿಂಗಳುಗಳು) ಅನಿಯಮಿತ ಧ್ವನಿ ಕರೆಯೊಂದಿಗೆ 2GB ದೈನಂದಿನ ಡೇಟಾವನ್ನು ಪಡೆಯುತ್ತಾರೆ.

* XXL ಪ್ಲ್ಯಾನ್: ಈ ಯೋಜನೆಯೊಂದಿಗೆ, ಬಳಕೆದಾರರಿಗೆ ತಿಂಗಳಿಗೆ 550 ರೂ (24 ತಿಂಗಳುಗಳು) ಅಥವಾ 600 ರೂ (18 ತಿಂಗಳುಗಳು) ಗೆ ಅನಿಯಮಿತ ವಾಯಿಸ್ ಕರೆಯೊಂದಿಗೆ 2.5GB ದೈನಂದಿನ ಡೇಟಾವನ್ನು ನೀಡಲಾಗುತ್ತದೆ. ಈ ಎಲ್ಲಾ ಯೋಜನೆಗಳನ್ನು ಕಂಪನಿಯು ಜಿಯೋಫೋನ್‌ ನೆಕ್ಸ್ಟ್‌ ನೊಂದಿಗೆ ಪರಿಚಯಿಸಿದೆ.

ಜಿಯೋಫೋನ್‌ ನೆಕ್ಸ್ಟ್ ಫೋನಿನ ಫೀಚರ್ಸ್‌:
ಈ ಫೋನ್ 5.45 ಇಂಚಿನ ಹೆಚ್‌ಡಿ ಡಿಸ್‌ಪ್ಲೇ ಹೊಂದಿದ್ದು, ಅದನ್ನು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ಪರದೆಯಿಂದ ರಕ್ಷಿಸಲಾಗಿದೆ. ಹಾಗೆಯೇ ಇದು 2GB RAM ಮತ್ತು 32GB ಅಂತರ್ನಿರ್ಮಿತ ಮೆಮೊರಿಯೊಂದಿಗೆ ಬರುತ್ತದೆ ಮತ್ತು ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ QM215 ಪ್ರೊಸೆಸರ್‌ನಿಂದ ಚಾಲಿತವಾಗಿದೆ. ಈ ಫೋನ್‌ನ ಮೆಮೊರಿಯನ್ನು 512 GB ವರೆಗೆ ಹೆಚ್ಚಿಸಬಹುದು. ಈ ಫೋನ್ 'ಪ್ರಗತಿ ಓಎಸ್' ನಲ್ಲಿ ಕಾರ್ಯನಿರ್ವಹಿಸುತ್ತದೆ. ಜಿಯೋ ಮತ್ತು ಗೂಗಲ್ ಅಪ್ಲಿಕೇಶನ್‌ಗಳು ಸಹ ಇದರಲ್ಲಿ ಪೂರ್ವ ಲೋಡ್ ಆಗಿವೆ.

ಹಾಗೆಯೇ ಜಿಯೋಫೋನ್‌ ನೆಕ್ಸ್ಟ್ ಫೋನ್ ಡ್ಯುಯಲ್ ಸಿಮ್ ಅನ್ನು ನೀಡುತ್ತದೆ. ಜೊತೆಗೆ ಹಿಂಭಾಗದಲ್ಲಿ 13 ಮೆಗಾ ಪಿಕ್ಸೆಲ್ ಹಿಂಬದಿಯ ಕ್ಯಾಮೆರಾ ಇದ್ದು, ಮುಂಭಾಗದ ಕ್ಯಾಮೆರಾ 8 ಮೆಗಾ ಪಿಕ್ಸೆಲ್ ಒಳಗೊಂಡಿದೆ. ಈ ಫೋನ್ 3500 mAh ಬ್ಯಾಟರಿ ಬ್ಯಾಕ್‌ಅಪ್‌ ಪಡೆದಿದೆ. ಜೊತೆಗೆ ಕನೆಕ್ಟಿವಿಟಿ ಆಯ್ಕೆಗಳಲ್ಲಿ ಬ್ಲೂಟೂತ್, ವೈಫೈ, ಹಾಟ್‌ಸ್ಪಾಟ್ ಮತ್ತು OTG ಬೆಂಬಲವನ್ನು ಒಳಗೊಂಡಿದೆ.

Best Mobiles in India

English summary
JioPhone Next is Available just Rs 1,999 with Easy EMI Options.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X