ಜಿಯೋಫೋನ್ ನಲ್ಲಿ ಬರಲಿದೆ ವೈ-ಫೈ ಹಾಟ್ ಸ್ಪಾಟ್ ಫೀಚರ್

|

ಫೇಸ್ ಬುಕ್, ವಾಟ್ಸ್ ಆಪ್ ಮತ್ತು ಗೂಗಲ್ ಸರ್ವೀಸ್ ಗಳ ನಂತರ ಇದೀಗ ರಿಲಯನ್ಸ್ ಜಿಯೋ ಫೋನ್ ಗಳ ಬಳಕೆದಾರರಿಗೆ ಸದ್ಯದಲ್ಲೇ ವೈ-ಫೈ ಹಾಟ್ ಸ್ಪಾಟ್ ಫಂಕ್ಷನಾಲಿಟಿಯು ಫೀಚರ್ ಫೋನ್ ಗಳಲ್ಲಿ ಲಭ್ಯವಾಗಲಿದೆ. ಕಂಪೆನಿಯು ಈ ಫೀಚರ್ ನ್ನು ಟೆಸ್ಟ್ ಮಾಡುತ್ತಿದೆ ಮತ್ತು ಎಲ್ಲಾ ಜಿಯೋ ಫೋನ್ ಬಳಕೆದಾರರಿಗೆ ಈ ಸೌಲಭ್ಯವು ಲಭ್ಯವಾಗಲಿದೆ.

ಜಿಯೋಫೋನ್ ನಲ್ಲಿ ವೈ-ಫೈ ಹಾಟ್ ಸ್ಪಾಟ್:

ಜಿಯೋಫೋನ್ ನಲ್ಲಿ ವೈ-ಫೈ ಹಾಟ್ ಸ್ಪಾಟ್:

2017 ರ ಕಂಪೆನಿಯ ವಾರ್ಷಿಕ ಜನರಲ್ ಮೀಟಿಂಗ್ ನಲ್ಲಿ ಜಿಯೋಫೋನ್ ನ್ನು ಕಂಪೆನಿಯು ಬಿಡುಗಡೆಗೊಳಿಸಿತ್ತು ಮತ್ತು ಇದುವರೆಗೂ ಕಂಪೆನಿಯು ಸುಮಾರು 50 ಮಿಲಿಯನ್ ಹ್ಯಾಂಡ್ ಸೆಟ್ ನ್ನು ಮಾರಾಟ ಮಾಡಿದೆ ಎಂದು ತಿಳಿದುಬಂದಿದೆ. ಕಳೆದ ವರ್ಷ ಈ ಫೋನ್ ವಾಟ್ಸ್ ಆಪ್, ಫೇಸ್ ಬುಕ್ ಮತ್ತು ಗೂಗಲ್ ಸೇವೆಯ ಬೆಂಬಲವನ್ನು ಪಡೆದಿದೆ ಮತ್ತು ಇದೀಗ ಕಂಪೆನಿಯು ವೈ-ಫೈ ಹಾಟ್ ಸ್ಪಾಟ್ ಫಂಕ್ಷನಾಲಿಟಿಯನ್ನು ಫೋನಿನಲ್ಲಿ ಸೇರಿಸುವುದಕ್ಕೆ ಪ್ರಯತ್ನಿಸುತ್ತಿದೆ.

ಟೆಸ್ಟಿಂಗ್ ನಡೆಯುತ್ತಿದೆ:

ಟೆಸ್ಟಿಂಗ್ ನಡೆಯುತ್ತಿದೆ:

ಸದ್ಯ ಕಂಪೆನಿ ಇದರ ಟೆಸ್ಟಿಂಗ್ ಕೆಲಸವನ್ನು ಮಾಡುತ್ತಿದ್ದು ಸದ್ಯದಲ್ಲೇ ಬಿಡುಗಡೆಗೊಳಿಸುವ ಚಿಂತನೆಯಲ್ಲಿದೆ. ಕಂಪೆನಿಗೆ ಈ ಫಂಕ್ಷನಾಲಿಟಿಯ ಎಲ್ಲಾ ಟೆಸ್ಟಿಂಗ್ ಕೆಲಸಗಳು ಮುಗಿದ ಕೆಲವೇ ದಿನಗಳಲ್ಲಿ ಎಲ್ಲಾ ಜಿಯೋಫೋನ್ ಗಳಲ್ಲೂ ಕೂಡ ಇದರ ಅಪ್ ಡೇಟ್ ಕೆಲಸಗಳು ನಡೆಯಲಿದೆ.

ವೈ-ಫೈ ಹಾಟ್ ಸ್ಪಾಟ್ ಸೆಟ್ ಮಾಡುವುದು ಹೇಗೆ?

ವೈ-ಫೈ ಹಾಟ್ ಸ್ಪಾಟ್ ಸೆಟ್ ಮಾಡುವುದು ಹೇಗೆ?

ಸೆಟ್ಟಿಂಗ್ಸ್ ಆಯ್ಕೆಯ ಒಳಗಡೆ ಈ ಫಂಕ್ಷನಾಲಿಟಿಯು ಜಿಯೋ ಫೋನ್ ಬಳಕೆದಾರರಿಗೆ ಲಭ್ಯವಾಗುತ್ತದೆ. ವೈ-ಫೈ ಹಾಟ್ ಸ್ಪಾಟ್ ನ್ನು ಜಿಯೋಫೋನ್ ನಲ್ಲಿ ಆಕ್ಟಿವೇಟ್ ಮಾಡುವುದಕ್ಕಾಗಿ ಜಿಯೋ ಫೋನ್ ನಲ್ಲಿ ಸೆಟ್ಟಿಂಗ್ಸ್ ಗೆ ತೆರಳಿ ಮತ್ತು ನೆಟ್ ವರ್ಕ್ಸ್ ನ್ನು ಆಯ್ಕೆಮಾಡಿ ಮತ್ತು ಕನೆಕ್ಟಿವಿಟಿ ಮೆನುವಿಗೆ ತೆರಳಿ. ನಂತರ ಇಂಟರ್ನೆಟ್ ಶೇರಿಂಗ್ ಆಯ್ಕೆಯನ್ನು ಪ್ರೆಸ್ ಮಾಡಿ ಮತ್ತು ವೈ-ಫೈ ಹಾಟ್ ಸ್ಪಾಟ್ ಆಯ್ಕೆಯನ್ನು ನೀವಲ್ಲಿ ಗಮನಿಸುತ್ತೀರಿ ಮತ್ತು ಅದು ಡೀಫಾಲ್ಟ್ ಆಗಿ ಆಫ್ ಆಗಿರುತ್ತದೆ. ನಿಮಗೆ ಅಗತ್ಯವಿದ್ದಾಗ ಆನ್ ಮಾಡಿಕೊಳ್ಳಬಹುದು.

ಒಂದು ವೇಳೆ ನೀವು ಬಯಸಿದಲ್ಲಿ ನಿಮ್ಮ ನೆಟ್ ವರ್ಕ್ ಹೆಸರನ್ನೂ ಕೂಡ ಬದಲಾಯಿಸಬಹುದು ಮತ್ತು ಅದಕ್ಕಾಗಿ ಪಾಸ್ ವರ್ಡ್ ಕೂಡ ಸೆಟ್ ಮಾಡಬಹುದು. ಒಂದು ವೇಳೆ ನೆಟ್ ವರ್ಕ್ ಜೋಡನೆ ಯಶಸ್ವಿಯಾದಲ್ಲಿ ಹಾಟ್ ಸ್ಪಾಟ್ ಐಕಾನ್ ನೋಟಿಫಿಕೇಷನ್ ಮೆನುವಿನಲ್ಲಿ ಕಾಣಿಸುತ್ತದೆ.

ಜಿಯೋಫೋನ್ ವೈಶಿಷ್ಟ್ಯತೆಗಳು:

ಜಿಯೋಫೋನ್ ವೈಶಿಷ್ಟ್ಯತೆಗಳು:

ಜಿಯೋಫೋನ್ ಕಳೆದ ವರ್ಷ ಜುಲೈ ನಲ್ಲಿ ಬಿಡುಗಡೆಗೊಂಡಿತ್ತು. ಈ ಫೀಚರ್ ಫೋನ್ 2.4 ಇಂಚಿನ ಸ್ಕ್ರೀನ್ ಜೊತೆಗೆ QVGA ಡಿಸ್ಪ್ಲೇ ಜೊತೆಗೆ 240 x 320 167 ppi ರೆಸಲ್ಯೂಷನ್ ನ್ನು ಹೊಂದಿದೆ ಮತ್ತು KAI OS HTML5-ಆಧಾರಿತ ಫೈಯರ್ ಫಾಕ್ಸ್ OS ನಲ್ಲಿ ರನ್ ಆಗುತ್ತದೆ.ಈ 4ಜಿ ಫೀಚರ್ ಫೋನ್ 1.2GHz ಡುಯಲ್-ಕೋರ್ ಪ್ರೊಸೆಸರ್ ಕೋರ್ ಪ್ರೊಸೆಸರ್ ನ್ನು ಹೊಂದಿದೆ ಮತ್ತು ಕನೆಕ್ಟಿವಿಟಿ ಆಯ್ಕೆಗಳಲ್ಲಿ ವೈ-ಫೈ, 3ಜಿ, 4ಜಿ, NFC ಬ್ಲೂಟೂತ್ ಆಯ್ಕೆಗಳಿವೆ. 512MB RAM ಮತ್ತು 4ಜಿಬಿವರೆಗೆ ಹಿಗ್ಗಿಸಿಕೊಳ್ಳಬಹುದಾದ ಮೆಮೊರಿ ಆಯ್ಕೆಗಳಿವೆ. 2000 mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ.

ಕ್ಯಾಮರಾ ವಿಚಾರಕ್ಕೆ ಬಂದರೆ 2MP ಹಿಂಭಾಗದ ಕ್ಯಾಮರಾ ಮತ್ತು 0.3 MP ಮುಂಭಾಗದ ಸೆಲ್ಫೀ ಕ್ಯಾಮರಾವನ್ನು ಒಳಗೊಂಡಿದೆ.

Best Mobiles in India

English summary
JioPhone update may soon bring WiFi hotspot feature to allow internet sharing with other phones

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X