ಜಿಯೋ ಫೋನ್ ಗ್ರಾಹಕರಿಗೆ ಉಚಿತ ಕರೆ ಮತ್ತು ಎಸ್‌ಎಮ್‌ಎಸ್‌ ಕೊಡುಗೆ!

|

ಇಡೀ ವಿಶ್ವವನ್ನೇ ನಲುಗಿಸಿರುವ ಮಾಹಾಮಾರಿ ಕೊರೊನಾ ವೈರಸ್ ಭಾರತದಲ್ಲಿಯೂ ಒಕ್ಕರಿಸಿ ಭೀತಿ ಹೆಚ್ಚಿಸುತ್ತಿದೆ. ದೇಶದಲ್ಲಿ ಕೊರೊನಾ ವೈರಸ್‌ ವ್ಯಾಪಿಸುವುದನ್ನು ತಡೆಯಲು ಸರ್ಕಾರ ಲಾಕ್‌ಡೌನ್ ಲಕ್ಷಣರೇಖೆಯನ್ನು ಹಾಕಿದೆ. ಈ ನಿಟ್ಟಿನಲ್ಲಿ ಜಿಯೋ ಟೆಲಿಕಾಂ ತನ್ನ ಬಳಕೆದಾರರಿಗೆ ಈಗಾಗಲೇ ಡಬಲ್ ಡೇಟಾ ಪ್ರಯೋಜನ ಮತ್ತು ಐಸಿಯು ಕರೆ ಸೌಲಭ್ಯದ ಮಿತಿ ಹೆಚ್ಚಿಸಿದೆ. ಪರಿಚಯಿಸಿದೆ. ಅದರ ಬೆನ್ನಲೇ ಇದೀಗ ಮತ್ತೊಂದು ಸಿಹಿಸುದ್ದಿ ನೀಡಿದೆ.

ಜಿಯೋ ಟೆಲಿಕಾಂ

ಹೌದು, ಲಾಕ್‌ಡೌನ್ ಪರಿಣಾಮದಿಂದಾಗಿ ಜಿಯೋ ಟೆಲಿಕಾಂ ಜಿಯೋ ಫೋನ್ ಬಳಕೆದಾರರಿಗೆ ಉಚಿತ ವಾಯಿಸ್‌ ಕರೆ ಮಿತಿ ಹಾಗೂ ಉಚಿತ ಎಸ್‌ಎಮ್‌ಎಸ್‌ ನೀಡುವ ಘೋಷಣೆ ಮಾಡಿದೆ. ಇದರೊಂದಿಗೆ ವ್ಯಾಲಿಡಿಟಿ ಅವಧಿ ಮುಗಿದಿದ್ದರೂ ಒಳಬರುವ ಕರೆಗಳು ಮುಂದುವರೆಯುತ್ತವೆ. ಅಂದಹಾಗೆ ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೇ ಜಿಯೋ ಫೋನ್ ಚಂದಾದಾರರಿಗೆ ಈ ಕೊಡುಗೆ ಲಭ್ಯವಾಗಲಿದೆ. ಇನ್ನು ಈ ಕೊಡುಗೆಯು ಇದೇ ಏಪ್ರಿಲ್ 2020ರ ವರೆಗೆ ಮಾತ್ರ ಇರುತ್ತದೆ.

ಜಿಯೋ ಕೊಡುಗೆ ಏನು

ಜಿಯೋ ಕೊಡುಗೆ ಏನು

ಜಿಯೋ ಫೋನ್ ಬಳಕೆದಾರರಿಗೆ 100 ನಿಮಿಷಗಳ ವಾಯಿಸ್‌ ಕರೆ ಅವಧಿ ಮತ್ತು 100 ಎಸ್‌ಎಮ್‌ಎಸ್‌ಗಳು ಉಚಿತವಾಗಿ ಲಭ್ಯವಾಗಲಿವೆ. ಇದರೊಂದಿಗೆ ಚಂದಾದಾರರ ವ್ಯಾಲಿಡಿಟಿ ಅವಧಿ ಮುಗಿದಿದ್ದರೂ ಅವರ ನಂಬರ್‌ಗೆ ಒಳ ಬರುವ ಕರೆಗಳ ಸಂಪರ್ಕ ಇದೇ ಏಪ್ರಿಲ್‌ 17, 2020ರ ವರೆಗೂ ಮುಂದುವರೆಯಲಿದೆ. ಈ ಕೊಡುಗೆ ಉಚಿತವಾಗಿದ್ದು, ಬಳಕೆದಾರರು ಯಾವುದೇ ಹೆಚ್ಚುವರಿ ಶುಲ್ಕ ಪಾವತಿಸುವ ಅಗತ್ಯ ಇರುವುದಿಲ್ಲ.

ಲಾಕ್‌ಡೌನ್‌ ಎಫೆಕ್ಟ್‌

ಲಾಕ್‌ಡೌನ್‌ ಎಫೆಕ್ಟ್‌

ಲಾಕ್‌ಡೌನ್ ಜಾರಿ ಇರುವುದರಿಂದ ಬಹುತೇಕ ಬಳಕೆದಾರರು ಆನ್‌ಲೈನ್‌ ಮೂಲಕವೇ, ಯುಪಿಐ ಆಪ್ಸ್‌ ಮೂಲಕ ರೀಚಾರ್ಜ್ ಮಾಡಿಸಿಕೊಳ್ಳುತ್ತಿದ್ದಾರೆ. ಆದರೆ ಈ ಸಂದರ್ಭದಲ್ಲಿ ಆನ್‌ಲೈನ್ ರೀಚಾರ್ಜ್ ಮಾಡಿಕೊಳ್ಳುವ ಬಗ್ಗೆ ಮಾಹಿತಿ ಇಲ್ಲದವರು ಮನೆಯಿಂದ ಹೊರಹೋಗಿ ಅಂಗಡಿಗಳಲ್ಲಿ ರೀಚಾರ್ಜ್ ಮಾಡಿಸುವುದು ಕಷ್ಟ ಆಗಿದೆ. ಹೀಗಾಗಿ ಜಿಯೋ ತನ್ನ ಜಿಯೋ ಫೋನ್ ಬಳಕೆದಾರರಿಗೆ ಈ ಕೊಡುಗೆಯನ್ನು ಘೋಷಿಸಿದೆ.

ರೀಚಾರ್ಜ್‌

ಪ್ರಸ್ತುತ ಮೊಬೈಲ್ ರೀಚಾರ್ಜ್‌ ಮಾಡಿಕೊಳ್ಳಲು ಹಲವು ಆಯ್ಜೆಗಳಿವೆ. ಗ್ರಾಹಕರು ಜಿಯೋ ಆಪ್‌, ಯುಪಿಐ ಆಪ್ ಹಾಗೂ ಆನ್‌ಲೈನ್‌ ಮೂಲಕವು ಜಿಯೋ ನಂಬರ್ ರೀಚಾರ್ಜ್ ಮಾಡಿಕೊಳ್ಳಬಹುದಾಗಿದೆ. ಹಾಗೆಯೇ ಹೊಸದಾಗಿ ATM ಸೆಂಟರ್‌ಗಳಲ್ಲಿ ರೀಚಾರ್ಜ್ ಮಾಡುವ ಸೌಲಭ್ಯವನ್ನು ಜಿಯೋ ಹೊಸದಾಗಿ ಲಾಂಚ್ ಮಾಡಿದೆ. ಆದರೆ ಕೆಲವು ಆಯ್ದ ಪ್ರಮುಖ ಬ್ಯಾಂಕ್ ಎಟಿಎಮ್‌ಗಳು ಮಾತ್ರ ಈ ಸೇವೆಯನ್ನು ಒಳಗೊಂಡಿವೆ.

Most Read Articles
Best Mobiles in India

English summary
JioPhone customers in the country will get 100 minutes of free calls and 100 SMSes for free, and these benefits will be valid until April 17.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X