ಟೆಕ್‌ ವಲಯದಲ್ಲಿ ವಜಾ ಪ್ರಕ್ರಿಯೆಯ ಬಿರುಗಾಳಿ; ಎಲ್ಲೆಲ್ಲಿ ಉದ್ಯೋಗ ಕಡಿತ?

|

ಸಾಮಾನ್ಯವಾಗಿ ಅಮೆಜಾನ್‌ ಹಾಗೂ ಟ್ವಿಟ್ಟರ್‌ನಲ್ಲಿ ಉದ್ಯೋಗಿಗಳನ್ನು ವಜಾ ಮಾಡುವ ಸುದ್ದಿ ಎಲ್ಲೆಡೆ ಸದ್ದು ಮಾಡುತ್ತಿದೆ. ಅದರಲ್ಲೂ ಅಮೆಜಾನ್‌ ಸ್ವಯಂ ನಿರ್ಧಾರದ ಮೇಲೆ ಸಂಸ್ಥೆಗೆ ರಾಜೀನಾಮೆ ನೀಡಬಹುದು ಎಂದು ಉದ್ಯೋಗಿಗಳನ್ನು ಕೇಳಿಕೊಂಡಿದೆ. ಇದರ ನಡುವೆ ಅಮೆಜಾನ್‌ ಒಂದೇ ಮಾತ್ರವಲ್ಲದೆ ಇನ್ನೂ ಹಲವು ಕಂಪೆನಿಗಳು ಈ ಉದ್ಯೋಗ ಕಡಿತಕ್ಕೆ ಮುಂದಾಗಿವೆ.

ಅಮೆಜಾನ್‌

ಹೌದು, ಅಮೆಜಾನ್‌, ಮೆಟಾ ಹಾಗೂ ಟ್ವಿಟ್ಟರ್‌ ಒಳಗೊಂಡಂತೆ ಇತರೆ ಕಂಪೆನಿಗಳು ಸಾವಿರಾರು ಉದ್ಯೋಗಿಗಳನ್ನು ತೆಗೆದುಹಾಕುತ್ತಿವೆ. ಅದರಂತೆ ಪ್ರಮುಖ ಟೆಕ್‌ ಕಂಪೆನಿಗಳಲ್ಲಿ ಆಗುತ್ತಿರುವ ಈ ಬೆಳವಣಿಗೆಗೆ ಕಂಪೆನಿಗಳು ಸಹ ವಿವಿಧ ಕಾರಣಗಳನ್ನು ಉಲ್ಲೇಖಿಸುತ್ತಿವೆ. ಇದಿಷ್ಟೇ ಅಲ್ಲದೆ, ಹಲವು ಕಂಪೆನಿಗಳು ಮುಂದಿನ ಕೆಲವು ತಿಂಗಳುಗಳವರೆಗೆ ನೇಮಕಾತಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸುವುದಾಗಿಯೂ ಘೋಷಿಸಿವೆ. ಹಾಗಿದ್ರೆ ಯಾವೆಲ್ಲಾ ಕಂಪೆನಿಗಳು ಎಷ್ಟೆಷ್ಟು ಉದ್ಯೋಗ ಕಡಿತ ಮಾಡುತ್ತಿವೆ, ಮಾಡಿವೆ ಎಂಬುದನ್ನು ಈ ಲೇಖನದಲ್ಲಿ ವಿವರಿಸಿದ್ದೇವೆ ಓದಿರಿ.

ಮೆಟಾ

ಮೆಟಾ

ಮೆಟಾ ಸಂಸ್ಥೆಯಲ್ಲಿ ಇದುವರೆಗೆ 11,000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಿದೆ. ಅಂದರೆ ಒಟ್ಟು ಉದ್ಯೋಗಿಗಳ ಶೇಕಡಾ 13 ರಷ್ಟು ಉದ್ಯೋಗಿಗಳು ಮೆಟಾ ಸಂಸ್ಥೆಯಿಂದ ಹೊರನಡೆದಿದ್ದಾರೆ. ಇದರ ನಡುವೆ ನೇಮಕಾತಿ ಪ್ರಕ್ರಿಯೆಯನ್ನು 2023 ರ ಮೊದಲ ತ್ರೈಮಾಸಿಕದವರೆಗೆ ಮಾಡುವುದಿಲ್ಲ ಎಂದು ಸಂಸ್ಥೆ ಹೇಳಿದೆ.

ಅಮೆಜಾನ್‌

ಅಮೆಜಾನ್‌

ಅಮೆಜಾನ್ ಸಹ 10,000 ಉದ್ಯೋಗಿಗಳನ್ನು ವಜಾಗೊಳಿಸುತ್ತಿದೆ ಎಂದು ತಿಳಿದುಬಂದಿದೆ. ಇದಕ್ಕೆ ಕಾರಣ ತಿಳಿಸಿರುವ ಅಮೆಜಾನ್ ಸಿಇಒ ಆಂಡಿ ಜಾಸ್ಸಿ, ಕಂಪೆನಿಯ ವಾರ್ಷಿಕ ವಿಮರ್ಶೆಯು ಕಷ್ಟಕರವಾಗಿದ್ದು, ಇದು ಉದ್ಯೋಗ ಕಡಿತದ ಘೋಷಣೆಗೆ ಕಾರಣವಾಗಿದೆ ಎಂದಿದ್ದಾರೆ. ಇನ್ನು ಅಮೆಜಾನ್‌ನಲ್ಲಿ ಉದ್ಯೋಗ ಕಡಿತವು 2023 ರ ಆರಂಭದವರೆಗೆ ಮುಂದುವರಿಯುತ್ತದೆ ಎಂದು ಹೇಳಲಾಗುತ್ತಿದೆ.

ಇಂಟೆಲ್

ಇಂಟೆಲ್

ಇಂಟೆಲ್ ಕಂಪೆನಿಯಲ್ಲೂ ಈ ಪ್ರಕ್ರಿಯೆ ನಡೆಯಲಿದೆ. ಈ ಬಗ್ಗೆ ಸಿಇಒ ಪ್ಯಾಟ್ ಗೆಲ್ಸಿಂಗರ್ ಮಾತನಾಡಿದ್ದು, ಮುಂದಿನ ವರ್ಷ $3 ಬಿಲಿಯನ್ ಉಳಿಸುವ ಪ್ರಯತ್ನದ ಭಾಗವಾಗಿ ಉದ್ಯೋಗಗಳನ್ನು ಕಡಿತಗೊಳಿಸಲಾಗುತ್ತಿದೆ ಎಂದು ಹೇಳಿದ್ದಾರೆ. ಇನ್ನು ಈ ಎಫೆಕ್ಟ್‌ ಇಂಟೆಲ್‌ನಲ್ಲಿನ ಮಾರಾಟ ಮತ್ತು ಮಾರುಕಟ್ಟೆ ಟೀಮ್‌ಗಳ ಮೇಲೆ ಬೀಳಲಿದೆ.

ಸಿಸ್ಕೋ

ಸಿಸ್ಕೋ

ಸಿಸ್ಕೊ ಕಂಪೆನಿಯು ​​4,000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸುತ್ತಿರುವ ಬಗ್ಗೆ ಮಾಹಿತಿ ತಿಳಿದುಬಂದಿದೆ. ಅದಂತೆ ಒಟ್ಟಾರೆ ಉದ್ಯೋಗಿಗಳ 5% ರಷ್ಟು ಉದ್ಯೋಗಿಗಳಿಗೆ ಗೇಟ್‌ ಪಾಸ್‌ ನೀಡಲಾಗುತ್ತಿದೆ. ಹಾಗೆಯೇ ಕಂಪೆನಿಯು ಉದ್ಯೋಗ ಕಡಿತದ ಬಗ್ಗೆ ಯಾವುದೇ ವಿವರವನ್ನು ಇನ್ನೂ ಬಹಿರಂಗಪಡಿಸಿಲ್ಲ.

ಸೀಗೇಟ್

ಸೀಗೇಟ್

ಹಾರ್ಡ್ ಡ್ರೈವ್ ತಯಾರಕ ಕಂಪೆನಿಗಳಲ್ಲಿ ಪ್ರಮುಖವಾದ ಸೀಗೇಟ್ ಟೆಕ್ನಾಲಜಿ ಕಳೆದ ತಿಂಗಳು ಸುಮಾರು 3,000 ಕ್ಕೂ ಹೆಚ್ಚಿನ ಉದ್ಯೋಗಿಗಳನ್ನು ಕಡಿತಗೊಳಿಸಲು ಯೋಜಿಸಿದೆ. ಆರ್ಥಿಕ ಅನಿಶ್ಚಿತತೆ ಜೊತೆಗೆ ಬೇಡಿಕೆ ಕುಸಿಯುತ್ತಿದೆ ಎಂಬ ಮಾಹಿತಿಯ ಆಧಾರದ ಮೇಲೆ ಈ ಕ್ರಮ ಜರುಗಿಸಲು ಮುಂದಾಗಿದೆ.

ಸೇಲ್ಸ್‌ಫೋರ್ಸ್

ಸೇಲ್ಸ್‌ಫೋರ್ಸ್

ಯುಎಸ್ ಮೂಲದ ಎಂಟರ್‌ಪ್ರೈಸ್ ಸಾಫ್ಟ್‌ವೇರ್ ಕಂಪೆನಿಯಾದ ಸೇಲ್ಸ್‌ಫೋರ್ಸ್ ಈ ತಿಂಗಳ ಆರಂಭದಲ್ಲಿ ಉದ್ಯೋಗ ಕಡಿತ ಮಾಡುವ ಬಗ್ಗೆ ಮಾಹಿತಿ ನೀಡಿದೆ. ಹಾಗೆಯೇ ಇದಕ್ಕೆ ಕಾರಣ ನೀಡಿದ್ದು, ನಮ್ಮ ಮಾರಾಟ ಕಾರ್ಯಕ್ಷಮತೆ ಪ್ರಕ್ರಿಯೆಯು ಹೆಚ್ಚಿನ ಹೊಣೆಗಾರಿಕೆಯನ್ನು ಹೊಂದಿದ್ದು ಈ ಸಮಯದಲ್ಲಿ, ಕೆಲವರು ನಮ್ಮ ಸಂಸ್ಥೆಯಿಂದ ತೊರೆಯಲು ಕಾರಣವಾಗಬಹುದು ಎಂದು ತಿಳಿಸಿದೆ.

ಟ್ವಿಟ್ಟರ್

ಟ್ವಿಟ್ಟರ್

ಪ್ರಮುಖವಾಗಿ ಈ ವಜಾಗೊಳಿಸುವ ಪ್ರಕ್ರಿಯೆ ಹೆಚ್ಚಾಗಿ ಟ್ವಿಟರ್ ನಲ್ಲಿ ಜರುಗುತ್ತಿದೆ. ಇದರಲ್ಲಿ ಅರ್ಧದಷ್ಟು ಉದ್ಯೋಗಿಗಳನ್ನು ವಜಾಗೊಳಿಸಲಾಗಿದೆ. ಈ ಕ್ರಮವು ಕಂಪೆನಿಯ ಭವಿಷ್ಯದ ಬಗ್ಗೆ ಒಂದು ವಾರದ ಅವ್ಯವಸ್ಥೆ ಮತ್ತು ಅನಿಶ್ಚಿತತೆಯನ್ನು ಉಂಟುಮಾಡಿತ್ತು. ಇನ್ನು ಆದಾಯದಲ್ಲಿ ಭಾರಿ ಕುಸಿತವನ್ನು ಅನುಭವಿಸುತ್ತಿದೆ ಎಂದು ಎಲಾನ್‌ ಮಸ್ಕ್‌ ಟ್ವೀಟ್ ಮಾಡಿದ್ದಾರೆ.

Best Mobiles in India

English summary
Job cuts in these companies like Twitter, Amazon and Meta

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X