ಮತ್ತೆ ಎಂಟ್ರಿ ಕೊಟ್ಟ ಜೋಕರ್‌ ಮಾಲ್‌ವೇರ್? ಕೂಡಲೇ ಈ ಅಪ್ಲಿಕೇಶನ್‌ ಡಿಲೀಟ್‌ ಮಾಡಿ?

|

ಈಗಾಗಲೇ ಸಾಕಷ್ಟು ಸೌಂಡ್‌ ಮಾಡಿದ್ದ ಕುಖ್ಯಾತ ಜೋಕರ್‌ ಮಾಲ್‌ವೇರ್‌ ಇದೀಗ ಮತ್ತೊಮ್ಮೆ ಕಾಣಿಸಿಕೊಂಡಿದೆ. ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ 1,00,000ಕ್ಕೂ ಹೆಚ್ಚು ಡೌನ್‌ಲೋಡ್‌ ಪಡೆದುಕೊಂಡಿರುವ ಅಪ್ಲಿಕೇಶನ್‌ಗಳನ್ನು ಅಟ್ಯಾಕ್‌ ಮಾಡಿದೆ. ಆದರಿಂದ ಈ ಅಪ್ಲಿಕೇಶನ್‌ಗಳನ್ನು ನೀವು ಬಳಸುತ್ತಿದ್ದರೆ ಕೂಡಲೇ ಡಿಲೀಟ್‌ ಮಾಡಿ ಎಂದು ಸೈಬರ್‌ ಸೆಕ್ಯುರಿಟಿ ರಿಸರ್ಚರ್‌ಗಳು ಸೂಚನೆ ನೀಡಿದ್ದಾರೆ. ಇನ್ನು ಜೋಕರ್‌ ಮಾಲ್‌ವೇರ್‌ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿನ ಅಪ್ಲಿಕೇಶನ್‌ಗಳನ್ನು ಪ್ರವೇಶಿಸುತ್ತಿರುವುದು ಇದೇ ಮೊದಲೇನಲ್ಲ.

ಜೋಕರ್‌

ಹೌದು, ಜೋಕರ್‌ ಮಾಲ್‌ವೇರ್‌ ಮತ್ತೆ ಕಾಣಿಸಿಕೊಂಡಿದೆ. ಪ್ಲೇ ಸ್ಟೋರ್‌ನಲ್ಲಿ ಸಾಕಷ್ಟು ಡೌನ್‌ಲೋಡ್‌ ಪಡೆದುಕೊಂಡಿರುವ ಪ್ರಮುಖ ನಾಲ್ಕು ಅಪ್ಲಿಕೇಶನ್‌ಗಳಲ್ಲಿ ಈ ಮಾಲ್‌ವೇರ್‌ ಪ್ರವೇಶಿಸಿದೆ ಎಂದು ವರದಿಯಾಗಿದೆ. ಈ ಮಾಲ್‌ವೇರ್‌ ಅಟ್ಯಾಕ್‌ನಿಂದಾಗಿ ಅಪ್ಲಿಕೇಶನ್‌ಗಳು ಪ್ಲೇ ಸ್ಟೋರ್‌ನಲ್ಲಿ ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ. ಒಂದು ವೇಳೆ ನೀವು ಕೂಡ ಜೋಕರ್‌ ಮಾಲ್‌ವೇರ್‌ ಅಟ್ಯಾಕ್‌ ಆಗಿರುವ ಅಪ್ಲಿಕೇಶನ್‌ಗಳನ್ನು ಬಳಸುತ್ತಿದ್ದರೆ ನಿಮ್ಮ ಫೋನ್‌ಗೆ ಡ್ಯಾಮೇಜ್‌ ಆಗೋದು ಗ್ಯಾರಂಟಿ ಎನ್ನಲಾಗಿದೆ.

ಮಾಲ್‌ವೇರ್

ಜೋಕರ್‌ ಮಾಲ್‌ವೇರ್ ಬಗ್ಗೆ ಸೆಕ್ಯುರಿಟಿ ರಿಸರ್ಚರ್‌ ಸಂಸ್ಥೆ Pradeo ವರದಿ ಮಾಡಿದೆ. ಈ ಸಂಸ್ಥೆ ನೀಡಿದ ವರದಿಯ ಪ್ರಕಾರ ಜೋಕರ್‌ ಮಾಲ್‌ವೇರ್‌ ನಾಲ್ಕು ಅಪ್ಲಿಕೇಶನ್‌ಗಳಲ್ಲಿ ಕಂಡು ಬಂದಿದೆ. ಇವುಗಳನ್ನು ಸ್ಮಾರ್ಟ್ SMS ಮೆಸೇಜಸ್‌, ಬ್ಲಡ್‌ ಪ್ರೆಷರ್ ಮಾನಿಟರ್, ವಾಯ್ಸ್‌ ಲ್ಯಾಂಗ್ವೇಜಸ್‌ ಟ್ರಾನ್ಸ್‌ಲೇಟರ್‌, ಕ್ವಿಕ್‌ ಟೆಕ್ಸ್ಟ್‌ SMS (Sammobile) ಅಪ್ಲಿಕೇಶನ್‌ ಎಂದು ಗುರುತಿಸಲಾಗಿದೆ. ಈ ಎಲ್ಲಾ ಅಪ್ಲಿಕೇಶನ್‌ಗಳು ಸಾಕಷ್ಟು ಡೌನ್‌ಲೋಡ್‌ಗಳನ್ನು ಪಡೆದುಕೊಂಡಿವೆ. ಆದರಿಂದ ಇವುಗಳನ್ನು ಕೂಡಲೇ ಡಿಲೀಟ್‌ ಮಾಡಿ ಎಂದು ಸೂಚನೆ ನೀಡಿದೆ. ಇನ್ನುಳಿದಂತೆ ಜೋಕರ್‌ ಮಾಲ್‌ವೇರ್‌ ಎಂದರೇನು? ಇದರಿಂದಾಗುವ ಅನಾನುಕೂಲ ಏನು? ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಮಾಲ್‌ವೇರ್‌

ಜೋಕರ್‌ ಮಾಲ್‌ವೇರ್‌ ಡೇಟಾ ಕದಿಯುವ ಮಾಲ್‌ವೇರ್ ಆಗಿದೆ. ಅದರ ಕೋಡ್, ಎಕ್ಸಿಕ್ಯೂಶನ್ ವಿಧಾನಗಳು ಅಥವಾ ಪೇಲೋಡ್-ಹಿಂಪಡೆಯುವ ತಂತ್ರಗಳನ್ನು ಅನುಸರಿಸುವ ಮೂಲಕ ಯಾರಿಗೂ ಕಾಣಿಸದಂತೆ ಅಪ್ಲಿಕೇಶನ್‌ಗಳನ್ನು ಪ್ರವೇಶಿಲಿದೆ. ಇದನ್ನು ಪತ್ತೆ ಮಾಡುವುದು ಕೂಡ ಕಷ್ಟ. ಏಕೆಂದರೆ ಜೋಕರ್‌ ಮಾಲ್‌ವೇರ್‌ ಕಡಿಮೆ ಕೋಡ್‌ ಬಳಸುತ್ತದೆ. ಆದರಿಂದ ಕಳೆದ ಮೂರು ವರ್ಷಗಳ ಅವಧಿಯಲ್ಲಿ ಈ ಮಾಲ್‌ವೇರ್‌ ಸಾವಿರಾರು ಅಪ್ಲಿಕೇಶನ್‌ಗಳಲ್ಲಿ ಪತ್ತೆಯಾಗಿದೆ.

ಜೋಕರ್‌

ಕ್ವಿಕ್ ಹೀಲ್ ಪ್ರಕಾರ, ಜೋಕರ್‌ ಮಾಲ್‌ವೇರ್‌ ಎಸ್‌ಎಂಎಸ್, ಕಾಂಟ್ಯಾಕ್ಟ್‌ ಪಟ್ಟಿ, ಡಿವೈಸ್ ಮಾಹಿತಿ, ಓಟಿಪಿಗಳ ಮತ್ತು ಇತರೆ ಆಯ್ಕೆಗಳನ್ನು ಒಳಗೊಂಡಂತೆ ಆಂಡ್ರಾಯ್ಡ್ ಬಳಕೆದಾರರ ಹಿನ್ನೆಲೆಯಲ್ಲಿ ಡೇಟಾವನ್ನು ಕದಿಯುತ್ತವೆ. ಅಲ್ಲದೆ ಆಂಡ್ರಾಯ್ಡ್ ಬಳಕೆದಾರರ ಡೇಟಾ ಗೌಪ್ಯತೆಗೆ ಈ ಜೋಕರ್ ಮಾಲ್ವೇರ್ ತುಂಬಾ ಅಪಾಯಕಾರಿ ಎನ್ನಲಾಗಿದೆ. ಜನರು ಪ್ರೀಮಿಯಂ ಚಂದಾದಾರಿಕೆ ಸೇವೆಗಳಿಗೆ ಜನರನ್ನು ರಹಸ್ಯವಾಗಿ ಸೈನ್ ಅಪ್ ಮಾಡಲು, SMS ಸಂದೇಶಗಳು, ಸಂಪರ್ಕಗಳನ್ನು ಕದಿಯಲು ಮತ್ತು ಸರಣಿ ಮತ್ತು IMEI ಸಂಖ್ಯೆಗಳಂತಹ ಸಾಧನದ ಮಾಹಿತಿಯನ್ನು ಸಂಗ್ರಹಿಸುತ್ತಿದೆ. ಇದರಿಂದಾಗಿ ಈ ಜೋಕರ್ ಮಾಲ್ವೇರ್ ಆಂಡ್ರಾಯ್ಡ್ ಬಳಕೆದಾರರಿಗೆ ಸಾಕಷ್ಟು ಅಪಾಯಕಾರಿಯಾಗಿ ಕಂಡುಬಂದಿದೆ ಎಂದು ಹೇಳಲಾಗಿದೆ.

ಮಾಲ್‌ವೇರ್‌

ಈ ಮಾಲ್‌ವೇರ್‌ ಬಳಕೆದಾರರನ್ನು ಅನಗತ್ಯ ಪಾವತಿಸಿದ ಸೇವೆಗಳಿಗೆ ಚಂದಾದಾರರನ್ನಾಗಿ ಮಾಡುವುದು ಅಥವಾ ಕರೆಗಳನ್ನು ಮಾಡುವುದು, ಇಲ್ಲವೇ ಪ್ರೀಮಿಯಂ ಸಂಖ್ಯೆಗಳಿಗೆ ಸಂದೇಶಗಳನ್ನು ಕಳುಹಿಸುವ ಮೂಲಕ ಡೇಟಾ ಕದಿಯುತ್ತದೆ. ಸದ್ಯ ಇದೀಗ ಸ್ಮಾರ್ಟ್ SMS ಮೆಸೇಜಸ್‌, ಬ್ಲಡ್‌ ಪ್ರೆಷರ್ ಮಾನಿಟರ್, ವಾಯ್ಸ್‌ ಲ್ಯಾಂಗ್ವೇಜಸ್‌ ಟ್ರಾನ್ಸ್‌ಲೇಟರ್‌, ಕ್ವಿಕ್‌ ಟೆಕ್ಸ್ಟ್‌ SMS (Sammobile) ಅಪ್ಲಿಕೇಶನ್‌ಗಳಲ್ಲಿ ಜೋಕರ್‌ ಮಾಲ್‌ವೇರ್‌ ಪತ್ತೆಯಾಗಿದೆ. ಈ ಅಪ್ಲಿಕೇಶನ್‌ಗಳನ್ನು ಒಟ್ಟಾರೆಯಾಗಿ 100,000 ಕ್ಕೂ ಹೆಚ್ಚು ಬಾರಿ ಡೌನ್‌ಲೋಡ್‌ ಮಾಡಲಾಗಿದೆ.

ಡಿವೈಸ್‌ನಲ್ಲಿ

ಒಂದು ವೇಳೆ ನಿಮ್ಮ ಡಿವೈಸ್‌ನಲ್ಲಿ ಈ ಅಪ್ಲಿಕೇಶನ್‌ಗಳಲ್ಲಿ ಯಾವುದನ್ನಾದರೂ ಡೌನ್‌ಲೋಡ್‌ ಮಾಡಿದ್ದರೆ, ಅವುಗಳನ್ನು ತಕ್ಷಣವೇ ನಿಮ್ಮ ಡಿವೈಸ್‌ನಿಂದ ಡಿಲೀಟ್‌ ಮಾಡುವುದು ಉತ್ತಮ. ಈ ಮಾಲ್‌ವೇರ್‌ ಸೋಂಕಿತ ಅಪ್ಲಿಕೇಶನ್‌ಗಳು ನಿಮ್ಮ ಡಿವೈಸ್‌ನಲ್ಲಿ ಇತರ ಅಪ್ಲಿಕೇಶನ್‌ಗಳನ್ನು ಇನ್‌ಸ್ಟಾಲ್‌ ಮಾಡುವ ಸಾಮರ್ಥ್ಯ ಹೊಂದಿರುತ್ತವೆ. ಇದರಿಂದ ಹ್ಯಾಕರ್‌ಗಳು ಸುಲಭವಾಗಿ ನಿಮ್ಮ ಮೊಬೈಲ್‌ನಲ್ಲಿ ಅನಧಿಕೃತ ಅಪ್ಲಿಕೇಶನ್‌ಗಳನ್ನು ಇನ್‌ಸ್ಟಾಲ್‌ ಮಾಡುವ ಮೂಲಕ ನಿಮ್ಮ ಡಿವೈಸ್‌ನ ಕಂಟ್ರೋಲ್‌ ಅನ್ನು ತೆಗೆದುಕೊಳ್ಳಬಹುದು.

ಗೂಗಲ್‌ ಪ್ಲೇ

ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಜೋಕರ್ ಮಾಲ್‌ವೇರ್‌ ಪತ್ತೆಯಾಗಿರುವುದು ಇದೇ ಮೋದಲೇನಲ್ಲ. 2017 ರಲ್ಲಿ ಆಂಡ್ರಾಯ್ಡ್‌ ಅಪ್ಲಿಕೇಶನ್‌ಗಳಲ್ಲಿ ಈ ಮಾಲ್‌ವೇರ್‌ ಮೊದಲಬಾರಿಗೆ ಕಾಣಿಸಿಕೊಂಡಿತ್ತು. ಅಲ್ಲದೆ ಜೂನ್ 2021 ರಲ್ಲಿ ಎಂಟು ಅಪ್ಲಿಕೇಶನ್‌ಗಳಲ್ಲಿ ಮತ್ತು ಆಗಸ್ಟ್‌ನಲ್ಲಿ 16 ಇತರ ಅಪ್ಲಿಕೇಶನ್‌ಗಳಲ್ಲಿ ಜೋಕರ್ ಮಾಲ್‌ವೇರ್ ಕಾಣಿಸಿಕೊಂಡಿತ್ತು. ಅಲ್ಲದೆ ಜನವರಿ 2020 ರಿಂದ ಗೂಗಲ್ ವರದಿಯು ಜೋಕರ್ ವೈರಸ್ ಸೋಂಕಿಗೆ ಒಳಗಾಗಿರುವ ಕಾರಣ ಇಲ್ಲಿಯವರೆಗೆ 1,700 ಕ್ಕೂ ಹೆಚ್ಚು ಅಪ್ಲಿಕೇಶನ್‌ಗಳನ್ನು ಪ್ಲೇ ಸ್ಟೋರ್‌ನಿಂದ ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ಹೇಳಿದೆ.

ಸ್ಮಾರ್ಟ್‌ಫೋನ್‌

ಇನ್ನು ನಿಮ್ಮ ಸ್ಮಾರ್ಟ್‌ಫೋನ್‌ ಹ್ಯಾಕ್‌ ಆಗಿದೆಯಾ ಇಲ್ಲವೇ ಎಂದು ತಿಳಿದುಕೊಳ್ಳುವುದಕ್ಕೆ ಕೆಲವು ವಿಷಯಗಳನ್ನು ಸೂಕ್ಷ್ಮವಾಗಿ ಗಮನಿಸಬೇಕಾಗುತ್ತದೆ. ಹೀಗೆ ನೀವು ಗಮನಿಸಬೇಕಾದ ಬಹುಮುಖ್ಯ ವಿಚಾರಗಳಲ್ಲಿ ನಿಮ್ಮ ಫೋನ್‌ನ ಬ್ಯಾಟರಿ ಬ್ಯಾಕ್‌ಅಪ್‌ ಕೂಡ ಸೇರಿದೆ. ನಿಮ್ಮ ಫೋನಿನ ಬ್ಯಾಟರಿ ಸಾಮಾನ್ಯಕ್ಕಿಂತ ವೇಗವಾಗಿ ಬರಿದಾಗುತ್ತಿದ್ದರೆ, ಮಾಲ್‌ವೇರ್ ಮತ್ತು ಮೋಸದ ಅಪ್ಲಿಕೇಶನ್‌ಗಳು ದುರುದ್ದೇಶಪೂರಿತ ಕೋಡ್ ಅನ್ನು ಬಳಸುತ್ತಿರಬಹುದು. ಇದರಿಂದ ನಿಮ್ಮ ಫೋನಿನ ಬ್ಯಾಟರಿ ಬೇಗ ಖಾಲಿಯಾಗುತ್ತಿರುವ ಸಾದ್ಯತೆ ಇರುತ್ತದೆ.

ಸ್ಮಾರ್ಟ್‌ಫೋನ್‌ನಲ್ಲಿ

ಇದಲ್ಲದೆ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ನೀವು ಗುರುತಿಸದ ಅಥವಾ ನೀವು ಡೌನ್‌ಲೋಡ್ ಮಾಡಿಲ್ಲ ಎಂದು ಖಚಿತವಾಗಿರುವ ಅಪ್ಲಿಕೇಶನ್‌ಗಳನ್ನು ನೀವು ಗಮನಿಸುತ್ತೀರಿ. ಇದು ಹ್ಯಾಕರ್ ಅಥವಾ ಮಾಲ್‌ವೇರ್‌ನ ಕೆಲಸವಾಗಿರುತ್ತದೆ. ನಿಮಗೆ ತಿಳಿಯದೆ ಕೆಲವು ಅಪ್ಲಿಕೇಶನ್‌ಗಳು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಇನ್‌ಸ್ಟಾಲ್‌ ಆಗಿದ್ದರೆ ನಿಮ್ಮ ಫೋನ್‌ ಹ್ಯಾಕ್‌ ಆಗಿರುವ ಸಾದ್ಯತೆ ಇರಲಿದೆ. ಅಲ್ಲದೆ ನಿಮ್ಮ ಸ್ಮಾರ್ಟ್‌ಫೋನ್ ಇದ್ದಕ್ಕಿದ್ದಂತೆ ನಿಧಾನವಾಗುವುದು. ತನ್ನ ಕಾರ್ಯನಿರ್ವಹಣೆಯಲ್ಲಿ ತುಂಬಾ ಸ್ಲೋ ಆಗಿದ್ದರೆ ನಿಮ್ಮ ಫೋನ್‌ ಹ್ಯಾಕ್‌ ಆಗಿರುವ ಸಾದ್ಯತೆ ಉಂಟು. ಹಾಗೆಯೇ ನಿಮ್ಮ ಡೇಟಾ ಬಳಕೆ ಇದ್ದಕ್ಕಿದ್ದಂತೆ ಹೆಚ್ಚಾಗಿದ್ದರೂ ಕೂಡ ಯಾವುದೋ ಮಾಲ್‌ವೇರ್‌ ನಿಮ್ಮ ಫೋನಿನಲ್ಲಿ ಇರುವ ಅವಕಾಶವಿರುತ್ತದೆ.

Most Read Articles
Best Mobiles in India

English summary
malware's back once again, having been spotted in Play Store apps with over 100,000 combined installs.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X