3ಡಿಯಲ್ಲಿ ಬರಲಿದೆ ಜುರಾಸಿಕ್‌ ಪಾರ್ಕ್

Posted By: Staff

ಜುರಾಸಿಕ್‌ ಪಾರ್ಕ್‌ನ ಡೈನೋಸಾರ್‌ಗಳು ಮತ್ತೆ ಥಿಯೇಟರ್‌ಗೆ ಲಗ್ಗೆಯಿಡಲಿವೆ. ಮೈಕೆಲ್ ಕ್ರಿಸ್ಟನ್ ಅವರ ಕಾದಂಬರಿ ಆಧಾರಿತ ವೈಜ್ಞಾನಿಕ ಕಾಲ್ಪನಿಕ ಸಿನಿಮಾ ಜುರಾಸಿಕ್ ಪಾರ್ಕ್ - 4  3ಡಿಯಲ್ಲಿ ಮೂಡಿಬರಲಿದೆ.

 

3ಡಿಯಲ್ಲಿ ಬರಲಿದೆ ಜುರಾಸಿಕ್‌ ಪಾರ್ಕ್

ಯುನಿವರ್ಸಲ್ ಪಿಕ್ಚರ್ಸ್‌ ನಿರ್ಮಾಣ ಸಂಸ್ಥೆ ಇದೇ ವರ್ಷ ಜೂನ್‌ 13ರಲ್ಲಿ ಈ ಚಿತ್ರವನ್ನು ಬಿಡುಗಡೆ ಮಾಡಲಿದ್ದು, ಕೆಲವೊಂದು ಮಾಹಿತಿಗಳ ಪ್ರಕಾರ ರಿಕ್‌ ಜಫಾ ಹಾಗೂ ಅಮಂದ ಸಿಲ್ವರ್‌ ಈ ಚಿತ್ರದ ಸ್ಕ್ರಿಪ್ಟ್‌ ಬರೆದಿದ್ದಾರೆ. ಜುರಾಸಿಕ್‌ ಪಾರ್ಕ್‌ ಮೊದಲ ಎರಡು ಚಿತ್ರಗಳನ್ನು ನಿರ್ದೇಶನ ಮಾಡಿದ್ದ ಸ್ಟೀವನ್‌ ಸ್ಪೈಲ್‌ ಬರ್ಗ್ ಈ ಚಿತ್ರವನ್ನು ನಿರ್ಮಾಣ ಮಾಡಲಿದ್ದಾರೆ.

ಜುರಾಸಿಕ್ ಪಾರ್ಕ್ ಸಿನಿಮಾದ 20ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಇದೇ ಏಪ್ರಿಲ್ 5ರಂದು 'ಜುರಾಸಿಕ್ ಪಾರ್ಕ್' ಮೂಲ ಚಿತ್ರ 3ಡಿಯಲ್ಲಿ ಮರು ಬಿಡುಗಡೆಯಾಗುತ್ತಿದೆ.

 
Please Wait while comments are loading...
Opinion Poll

Social Counting