KRACK ವೈ-ಫೈ ನ್ಯೂನತೆ : ನಿಮ್ಮ ಆನ್ಲೈನ್ ಸುರಕ್ಷತೆಗೆ ಇದನ್ನು ತಿಳಿದಿರಲೇಬೇಕು

ವೈ-ಫೈ ಎನ್ಕ್ರಿಪ್ಶನ್ ಪ್ರೊಟೋಕಾಲ್ ಆದ WAP2ನಲ್ಲಿರುವ ಸುರಕ್ಷತಾ ನ್ಯೂನತೆ KRACK ನಿಂದಾಗಿ ನೀವು ವೈಫೈ ನೆಟ್ವರ್ಕ್ ನ ಮೂಲಕ ಕಳಿಸುವ ಮತ್ತು ಸ್ವೀಕರಿಸುವ ಎಲ್ಲಾ ಮಾಹಿತಿ ಆನ್ಲೈನ್ ಖದೀಮರ ಕೈ ಸೇರಬಹುದು.

By Tejaswini P G
|

ಹೆಚ್ಚಾಗಿ ಬಳಕೆಯಲ್ಲಿರುವ ವೈ-ಫೈ ಎನ್ಕ್ರಿಪ್ಶನ್ ಪ್ರೊಟೋಕಾಲ್ ಆದ WAP2ನಲ್ಲಿ ಬಯಲಾಗಿದೆ ಹೊಸದೊಂದು ನ್ಯೂನತೆ.ಈ ನ್ಯೂನತೆಯಿಂದಾಗಿ ಆನ್ಲೈನ್ ಖದೀಮರು ನಡೆಸುವ ವೈಫೈ ದಾಳಿಗೆ ನೀವು ಬಲಿಯಾಗಬಹುದು. ನೀವು ವೈಫೈ ಗೆ ಕನೆಕ್ಟ್ ಮಾಡಿದಾಗಲೆಲ್ಲಾ ನಿಮ್ಮ ಸಾಧನದಲ್ಲಿರುವ ನಿಮ್ಮ ಮಾಹಿತಿ ಈ ಆನ್ಲೈನ್ ಖದೀಮರ ಪಾಲಾಗಬಹುದು ಎನ್ನುವುದರ ಅರಿವು ನಿಮಗಿದೆಯೇ?

KRACK ವೈ-ಫೈ ನ್ಯೂನತೆ : ನಿಮ್ಮ ಆನ್ಲೈನ್ ಸುರಕ್ಷತೆಗೆ ಇದನ್ನು ತಿಳಿದಿರಲೇಬೇಕು

ವೈಫೈ ಪ್ರೊಟೋಕಾಲ್ ನ ಈ ದೋಷವನ್ನು KRACK ಎಂದು ಕರೆಯಲಾಗಿದ್ದು, ಇದು WAP2 ವೈಫೈ ಪ್ರೊಟೋಕಾಲ್ ಮೇಲೆ ತನ್ನ ಪ್ರಭಾವ ಬೀರುತ್ತದೆಯೆಂದು ಹೇಳಲಾಗುತ್ತಿದೆ.

ಇದು ಯಾವುದೇ ನಿರ್ದಿಷ್ಟ ಸಾಧನ ಅಥವ WAP2 ವೈಫೈ ಪ್ರೊಟೋಕಾಲ್ ನ ಅವತರಣಿಕೆಗೆ ಸೀಮಿತವಾಗದೇ ಎಲ್ಲಾ ನೂತನ ಸುರಕ್ಷಿತ ವೈಫೈ ಜಾಲಗಳ ವಿರದ್ಧ ಕಾರ್ಯನಿರ್ವಹಿಸುತ್ತದೆಯೆಂದು ಇದನ್ನು ಕಂಡುಹಿಡಿದ ಮ್ಯಾತಿ ವ್ಯಾನ್ಹೋಫ್ ಎಂಬ ಸಂಶೋಧಕರೊಬ್ಬರು ಹೇಳಿದ್ದಾರೆ. ಇವರ ಪ್ರಕಾರ ನೀವು ನಿಮ್ಮ ಸಾಧನವನ್ನು ವೈಫೈ ಗೆ ಕನೆಕ್ಟ್ ಮಾಡಿದ್ದಲ್ಲಿ KRACK ಅದರ ಮೇಲೆ ತನ್ನ ಪ್ರಭಾವ ಬೀರುವುದು ಖಂಡಿತ.

ಏನಿದು KRACK ನ್ಯೂನತೆ?

ಏನಿದು KRACK ನ್ಯೂನತೆ?

ನಿಮ್ಮ ಸಾಧನ ಒಂದು ಸುರಕ್ಷಿತ ವೈಫೈ ಜಾಲಕ್ಕೆ ಕನೆಕ್ಟ್ ಮಾಡುವಾಗ ನಡೆಸುವ 4-ಹಂತದ ಆಥೆಂಟಿಕೇಶನ್ ಹ್ಯಾಂಡ್ಶೇಕ್ ನ 3 ನೇ ಹಂತವನ್ನು KRACK( ಕೀ ರಿ-ಇನ್ಸ್ಟಾಲೇಶನ್ ಅಟ್ಯಾಕ್) ಗುರಿಯಾಗಿಸುತ್ತದೆ.ಈ ಹ್ಯಾಂಡ್ಶೇಕ್ ನ 3ನೇ ಹಂತದಲ್ಲಿ ಎನ್ಕ್ರಿಪ್ಶನ್ ಕೀ ಅನ್ನು ಹಲವಾರು ಬಾರಿ ಮರು ಪ್ರಸಾರ ಮಾಡಲಾಗುತ್ತದೆ.

ಈ ಹಂತದಲ್ಲಿ ಆನ್ಲೈನ್ ಆಕ್ರಮಣಕಾರರು ಎನ್ಕ್ರಿಪ್ಶನ್ ಕೀ ಅನ್ನು ಸಂಗ್ರಹಿಸಿ, ರಿಟ್ರ್ಯಾನ್ಸ್ಮಿಶನ್ಗಳನ್ನು ನಿರ್ದಿಷ್ಟ ಮಾದರಿಯಲ್ಲಿ ಮರುಕಳಿಸುವ ಮೂಲಕ ವೈಫೈ ನ ಸೆಕ್ಯೂರಿಟಿ ಎನ್ಕ್ರಿಪ್ಶನ್ ಅನ್ನು ಅತಿಕ್ರಮಿಸಬಹುದು.ಈ ಕುರಿತು ಹೆಚ್ಚಿನ ಮಾಹಿತಿಯನ್ನು ಮ್ಯಾತಿ ವ್ಯಾನ್ಹೋಫ್ ನ KRACK ಅಟ್ಯಾಕ್ ವೆಬ್ಸೈಟ್ಗಳಲ್ಲಿ ಪಡೆಯಬಹುದು.

ನೀವು ಬಳಸುತ್ತಿರುವ ಸಾಧನ ಯಾವುದೇ ಆಗಿದ್ದರೂ, ನೀವು ವೈಫೈ ಬಳಸುತ್ತಿದ್ದರೆ KRACK ವೈಫೈ ದೋಷಕ್ಕೆ ಗುರಿಯಾಗುವ ಸಾಧ್ಯತೆಯಿದೆ. ಕೆಲವೊಂದು ಸಾಧನಗಳು ಈ ತೊಂದರೆಗೆ ಗುರಿಯಾಗುವ ಸಾಧ್ಯತೆ ಹೆಚ್ಚಿದೆಯಂತೆ.

ಒಮ್ಮೆ ನಿಮ್ಮ ಸಾಧನದ ವೈಫೈ ಸೆಕ್ಯೂರಿಟಿ ಎನ್ಕ್ರಿಪ್ಶನ್ ಅನ್ನು ಅತಿಕ್ರಮಿಸಿದರೆಂದರೆ, ಆನ್ಲೈನ್ ಖದೀಮರು ನೀವು ಆ ವೈಫೈ ನೆಟ್ವರ್ಕ್ ನ ಮೂಲಕ ಕಳಿಸುವ ಮತ್ತು ಸ್ವೀಕರಿಸುವ ಎಲ್ಲಾ ಮಾಹಿತಿಯ ಮೇಲೆ ತಮ್ಮ ಹಿಡಿತವನ್ನು ಸಾಧಿಸಬಹುದು. ನಿಮ್ಮ ಕ್ರೆಡಿಟ್ ಕಾರ್ಡ್ ಸಂಖ್ಯೆ, ಪಾಸ್ವರ್ಡ್ಗಳು, ಈಮೇಲ್ಗಳು, ಚ್ಯಾಟ್ ಮೆಸೇಜ್ಗಳು, ಫೋಟೋಗಳು ಹೀಗೆ ಎಲ್ಲ ಮಾಹಿತಿಯೂ ಅವರ ಕೈ ಸೇರಬಹುದು.

How to search your lost smartphone!!! ಕಳೆದು ಹೋದ ನಿಮ್ಮ ಸ್ಮಾರ್ಟ್‌ಫೋನ್ ಹುಡುಕುವುದೇಗೆ...?
KRACK ವೈಫೈ ನ್ಯೂನತೆಯಿಂದ ರಕ್ಷಣೆ ಹೇಗೆ?

KRACK ವೈಫೈ ನ್ಯೂನತೆಯಿಂದ ರಕ್ಷಣೆ ಹೇಗೆ?

KRACK ವೈಫೈ ನ್ಯೂನತೆಯಿಂದ ಉಂಟಾಗಬಹುದಾದ ತೊಂದರೆಗಳಿಂದ ನಿಮ್ಮ ಸಾಧನಗಳನ್ನು ರಕ್ಷಿಸಲು ಅದರಲ್ಲಿರುವ ತಂತ್ರಾಂಶಗಳನ್ನು ಇತ್ತೀಚಿನ ಆವೃತ್ತಿಗೆ ಅಪ್ಡೇಟ್ ಮಾಡಿಕೊಳ್ಳಬೇಕು ಎಂದು ವ್ಯಾನ್ಹೋಫ್ ತಿಳಿಸಿದ್ದಾರೆ. ಅಲ್ಲದೆ ನೀವು ನಿಮ್ಮ ಸಾಧನಗಳನ್ನು ಅಪ್ಡೇಟ್ ಮಾಡಿದ್ದರೂ ಅದು ಸುರಕ್ಷಿತವಲ್ಲದ ಬೇರೆ ಸಾಧನಗಳೊಡನೆ ಸಂಪರ್ಕ ಸಾಧಿಸಬಹುದು.

ಈ ಕಾರಣಕ್ಕಾಗಿ ಈ ವೈಫೈ ನ್ಯೂನತೆಯ ಬಗ್ಗೆ ಎಲ್ಲೆಡೆ ಅರಿವು ಮೂಡಿ ಎಲ್ಲರೂ ಜಾಗರೂಕರಾಗುವ ತನಕ ವೈಫೈ ಬಳಕೆಯನ್ನು ತೊರೆದು ವೈರಡ್ ಈಥರ್ನೆಟ್ ಕನೆಕ್ಶನ್ ಅಥವ ಮೊಬೈಲ್ ಡೇಟಾ ಬಳಸುವುದು ಕ್ಷೇಮವೆಂದು ಅವರು ಹೇಳಿದ್ದಾರೆ.

ವಾಟ್ಸ್‌ಆಪ್ ಬಿಟ್ಟು ಬೇರೆ ಯಾಕೆ?: ಬರುತ್ತಿದೆ ಗ್ರೂಪ್ ಆಡಿಯೋ-ವಿಡಿಯೋ ಕಾಲಿಂಗ್ವಾಟ್ಸ್‌ಆಪ್ ಬಿಟ್ಟು ಬೇರೆ ಯಾಕೆ?: ಬರುತ್ತಿದೆ ಗ್ರೂಪ್ ಆಡಿಯೋ-ವಿಡಿಯೋ ಕಾಲಿಂಗ್

KRACK ವೈಫೈ ನ್ಯೂನತೆಯಿಂದ ಯಾರಿಗೆ ಹೆಚ್ಚು ಅಪಾಯ?

KRACK ವೈಫೈ ನ್ಯೂನತೆಯಿಂದ ಯಾರಿಗೆ ಹೆಚ್ಚು ಅಪಾಯ?

ವೈಫೈ ಮೂಲಕ ಡೇಟಾ ಕಳಿಸುವ ಮತ್ತು ಸ್ವೀಕರಿಸುವ ಎಲ್ಲಾ ಸಾಧನಗಳೂ ಇದರಿಂದ ತೊಂದರೆಗೆ ಒಳಗಾಗಬಹುದಾದರೂ, ಸಂಶೋಧಕರ ಪ್ರಕಾರ ಆಂಡ್ರಾಯ್ಡ್ ಸಾಧನಗಳಿಗೆ ಹೆಚ್ಚಿನ ಅಪಾಯವಿದೆ. ದುರದೃಷ್ಟವಶಾತ್, ಆಂಡ್ರಾಯ್ಡ್ 6.0 ಮಾರ್ಶ್ಮೆಲ್ಲೋ ಮತ್ತು ನಂತರದ ಆವೃತ್ತಿಗಳನ್ನು ಬಳಸುತ್ತಿರುವ ಆಂಡ್ರಾಯ್ಡ್ ಫೋನ್ಗಳಿಗೆ ಹೆಚ್ಚಿನ ಅಪಾಯವಂತೆ!

ಹೊಸ iOS,watchOS,macOS ಮತ್ತು tvOS ಬೀಟಾ ಅಪ್ಡೇಟ್ಗಳಲ್ಲಿ KRACK ವೈಫೈ ನ್ಯೂನತೆಯನ್ನು ಸರಿಪಡಿಸಲಾಗಿದೆ ಎಂದು ಆಪಲ್ ಹೇಳಿಕೆ ನೀಡಿದೆ. ಮೈಕ್ರೋಸಾಫ್ಟ್ ಕೂಡ ಅಕ್ಟೋಬರ್ 10ರಂದು ವಿಂಡೋಸ್ 10 ಹೊಂದಿರುವ ಪಿಸಿಗಳಲ್ಲಿ KRACK ನ್ಯೂನತೆಯನ್ನು ಸರಿಪಡಿಸಲು ಪ್ಯಾಚ್ ಒಂದನ್ನು ಬಿಡುಗಡೆ ಮಾಡಿರುವದಾಗಿ ವಿಂಡೋಸ್ ಸೆಂಟ್ರಲ್ ಗೆ ತಿಳಿಸಿದೆ.

Best Mobiles in India

Read more about:
English summary
Get to know more about the KRACK Wi-Fi flaw that might put all your data at risk when you use Wi-Fi.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X