ಗ್ರಾಹಕರ ಗಮನ ಸೆಳೆಯಲು ಸ್ವದೇಶಿ ಬ್ರ್ಯಾಂಡ್‌ ಲಾವಾದಿಂದ ಹೊಸ ಪ್ಲಾನ್‌!

|

ದೇಶಿಯ ಸ್ಮಾರ್ಟ್‌ಫೋನ್‌ ತಯಾರಕ ಕಂಪೆನಿಗಳಲ್ಲಿ ಲಾವಾ ಕಂಪೆನಿ ಕೂಡ ಒಂದಾಗಿದೆ. ಈಗಾಗಲೇ ಹಲವು ಸ್ಮಾರ್ಟ್‌ಫೊನ್‌ಗಳ ಮೂಲಕ ಗಮನ ಸೆಳೆದಿರುವ ಲಾವಾ ಕಂಪೆನಿ ಇದೀಗ ತನ್ನ ಬಳಕೆದಾರರನ್ನು ಆಕರ್ಷಿಸಲು ಹೊಸ ಸರ್ವಿಸ್‌ ಅಟ್‌ ಹೋಮ್‌ ಪ್ರೋಗ್ರಾಂ ಘೋಷಿಸಿದೆ. ಇದರ ಮೂಲಕ ಬಳಕೆದಾರರ ಮನೆ ಬಾಗಿಲಿಗೆ ಸೇವೆಯನ್ನು ನೀಡಲು ಮುಂದಾಗಿದೆ. ಅಂದರೆ ಈ ಕೊಡುಗೆ ಭಾಗವಾಗಿ ಸ್ಮಾರ್ಟ್‌ಫೋನ್ ತಯಾರಕರು ದೇಶಾದ್ಯಂತ ಸುಮಾರು 9000 ಪಿನ್ ಕೋಡ್‌ಗಳಿಗೆ ಮನೆ ಬಾಗಿಲಿಗೆ ಸೇವೆಯನ್ನು ನೀಡಲು ಮುಂದಾಗಿದೆ.

ಸರ್ವಿಸ್‌

ಹೌದು, ಲಾವಾ ಕಂಪೆನಿ ಭಾರತದಲ್ಲಿ ಸರ್ವಿಸ್‌ ಅಟ್‌ ಹೋಮ್‌ ಪ್ರೋಗ್ರಾಂ ಮೂಲಕ ಬಳಕೆದಾರರ ಮನೆ ಬಾಗಿಲಿಗೆ ಬಂದು ಸೇವೆ ನೀಡುವುದಾಗಿ ಹೇಳಿದೆ. ಈ ಸೇವೆ ಮೊದಲು ಲಾವಾ ಬ್ಲೇಜ್ ಫೋನ್‌ಗಳಿಗೆ ಮಾತ್ರ ಲಭ್ಯವಿತ್ತು. ಆದರೆ ಇದೀಗ ಮುಂದೆ ಬಿಡುಗಡೆಯಾಗಲಿರುವ ಎಲ್ಲಾ ಲಾವಾ ಸ್ಮಾರ್ಟ್‌ಫೊನ್‌ ಮಾದರಿಗಳಿಗೂ ಲಭ್ಯವಾಗಲಿದೆ. ಇದರ ಮೂಲಕ ಫೋನ್‌ನ ವಾರಂಟೆ ಸಮಯದೊಳಗೆ ಗ್ರಾಹಕರು ಸರ್ವಿಸ್‌ ಸೇವೆಯನ್ನು ಪಡೆದುಕೊಳ್ಳಬಹುದಾಗಿದೆ. ಹಾಗಾದ್ರೆ ಲಾವಾ ಸರ್ವಿಸ್‌ ಅಟ್‌ ಹೋಮ್‌ ಪ್ರೋಗ್ರಾಂ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸ್ಮಾರ್ಟ್‌ಫೋನ್‌

ಲಾವಾ ಸ್ಮಾರ್ಟ್‌ಫೋನ್‌ ಗ್ರಾಹಕರು ಇನ್ಮುಂದೆ ಮನೆಯಲ್ಲಿಯೇ ಕುಳಿತು ಸರ್ವಿಸ್‌ ಸೇವೆಯನ್ನು ಪಡೆದುಕೊಳ್ಳಬಹುದಾಗಿದೆ. ಫೋನ್‌ನ ವಾರಂಟಿ ಸಮಯದೊಳಗೆ ಗ್ರಾಹಕರು ಈ ಸೇವೆಯನ್ನು ಪಡೆಯಬಹುದು. ಇದಕ್ಕಾಗಿ ಗ್ರಾಹಕರು ಕಂಪನಿಯ ಅಧಿಕೃತ ವೆಬ್‌ಸೈಟ್, ಕಾಲ್ ಸೆಂಟರ್, ಲಾವಾ ಕೇರ್ ಅಪ್ಲಿಕೇಶನ್ ಮತ್ತು ಅಧಿಕೃತ ವಾಟ್ಸಾಪ್ ಸಂಖ್ಯೆಯ ಮೂಲಕ ಸೇವೆಯನ್ನು ಪಡೆದುಕೊಳ್ಳಲು ಸಾಧ್ಯವಾಗಲಿದೆ. ನೀವು ದೂರು ಸಲ್ಲಿಸಿದ ಎರಡು ಗಂಟೆಗಳ ಒಳಗೆ ಸರ್ವಿಸ್‌ ರಿಕ್ವೆಸ್ಟ್‌ ಅನ್ನು ಸ್ವಿಕರಿಸಬೇಕಾಗುತ್ತದೆ. ಅಲ್ಲದೆ 48 ಗಂಟೆಗಳ ಒಳಗೆ ಸರ್ವಿಸ್‌ ಸೇವೆಯನ್ನು ನೀಡಬೇಕಾಗುತ್ತದೆ ಎಂದು ಕಂಪೆನಿ ಹೇಳಿಕೊಂಡಿದೆ.

ಸ್ಮಾರ್ಟ್‌ಫೋನಿ

ಇನ್ನು ಈ ಸರ್ವಿಸ್‌ ಪ್ರೋಗ್ರಾಂನಲ್ಲಿ ಸ್ಮಾರ್ಟ್‌ಫೋನಿನ ಸಣ್ಣ ಸಾಫ್ಟ್‌ವೇರ್ ಮತ್ತು ಹಾರ್ಡ್‌ವೇರ್ ಸಮಸ್ಯೆಗಳನ್ನು ಮನೆಯಲ್ಲಿಯೇ ಪರಿಹರಿಸಲಾಗುತ್ತದೆ. ಆದರೆ ಹೆಚ್ಚಿನ ಸಮಸ್ಯೆಗಳಿದ್ದರೆ ಕಸ್ಟಮರ್‌ ಕೇಂದ್ರಕ್ಕೆ ತೆಗೆದುಕೊಂಡು ಹೋಗಿ ಸರಿಪಡಿಸಲಾಗುವುದು ಎಂದು ಲಾವಾ ಕಂಪೆನಿ ಹೇಳಿಕೊಂಡಿದೆ. ಅಲ್ಲದೆ ಸರ್ವಿಸ್‌ ಅನ್ನು ಮುಗಿಸಿದ ನಂತರ ಸ್ಮಾರ್ಟ್‌ಫೋನ್ ಅನ್ನು ಅವರ ಮನೆ ಬಾಗಿಲಿಗೆ ತಲುಪಿಸಲಾಗುವುದು ಎಂದು ಹೇಳಿದೆ.

ಫೋನ್‌

ಇದಲ್ಲದೆ ಬಳಕೆದಾರರು ತಮ್ಮ ಫೋನ್‌ಗಳನ್ನು ಕಸ್ಟಮರ್‌ ಸರ್ವಿಸ್‌ ಸೆಂಟರ್‌ಗೆ ಹೋಗಿ ಕೂಡ ನೀಡಬಹುದಾಗಿದೆ. ಆದರೆ ಫೋನ್‌ನ ವಾರೆಂಟಿ ದಿನಾಂಕದೊಳಗೆ ತೆಗೆದುಕೊಂಡು ಹೋಗಬೇಕಾಗುತ್ತದೆ. ಇನ್ನು ಮನೆಯಲ್ಲಿಯೇ ಸರ್ವಿಸ್‌ ನೀಡುವುದು ಗ್ರಾಹಕರು ಅಗತ್ಯತೆಗಳನ್ನು ಪೂರೈಸುವ ಒಂದು ವಿಧಾನವಾಗಿದೆ. ಇದರಿಂದ ಸ್ಮಾರ್ಟ್‌ಫೋನ್‌ ಸರ್ವಿಸ್‌ಗಾಗಿ ಸರ್ವಿಸ್‌ ಸೆಂಟರ್‌ನಲ್ಲಿ ಸರದಿ ಸಾಲು ನಿಲ್ಲುವುದು ತಪ್ಪಲಿದೆ. ಇದರಿಂದ ಗ್ರಾಹಕರ ಅನುಭವವನ್ನು ಹೆಚ್ಚಿಸುವ ಪ್ರಯತ್ನವಾಗಿ ಈ ಸೇವೆಯನ್ನು ಒದಗಿಸುತ್ತೇವೆ ಎಂದು ಲಾವಾ ಕಂಪೆನಿ ಹೇಳಿದೆ.

ಲಾವಾ

ಇನ್ನು ಲಾವಾ ಕಂಪೆನಿ ಇತ್ತೀಚಿಗೆ ಭಾರತದಲ್ಲಿ ಹೊಸ ಲಾವಾ X2 ಸ್ಮಾರ್ಟ್‌ಫೋನ್‌ ಪರಿಚಯಿಸಿದೆ. ಈ ಸ್ಮಾರ್ಟ್‌ಫೋನ್ 6.5-ಇಂಚಿನ HD+ IPS ಡಿಸ್‌ಪ್ಲೇ ಹೊಂದಿದೆ. ಇದು ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಮತ್ತು ಬಯೋಮೆಟ್ರಿಕ್ ದೃಢೀಕರಣಕ್ಕಾಗಿ ಫೇಸ್ ಅನ್‌ಲಾಕ್ ಅನ್ನು ಕೂಡ ಹೊಂದಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಆಕ್ಟಾ-ಕೋರ್ ಮೀಡಿಯಾ ಟೆಕ್ ಹಿಲಿಯೊ SoC ಪ್ರೊಸೆಸರ್‌ ಬಲವನ್ನು ಹೊಂದಿದೆ. ಇದು ಆಂಡ್ರಾಯ್ಡ್ 11 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 2GB RAM ಮತ್ತು 32GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದಲ್ಲದೆ ಮೆಮೊರಿ ಕಾರ್ಡ್‌ ಬೆಂಬಲದೊಂದಿಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸುವುದಕ್ಕೆ ಅವಕಾಶವಿದೆ.

Best Mobiles in India

English summary
Lava has announced a new 'Service at Home' programme for its users

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X