ಭಾರತದಲ್ಲಿ ಲಾಂಚ್ ಆಗಿದೆ ಫೇಸ್ ಅನ್ಲಾಕ್ ಹೊಂದಿರುವ ಲಾವಾ Z91 : ಹೀಗಿದೆ ಬೆಲೆ ಮತ್ತು ಫೀಚರ್ಗಳು

ಲಾವಾ ಸಂಸ್ಥೆಯು ತನ್ನ Z ಸರಣಿಯಲ್ಲಿ Z91 ಎಂಬ ಹೊಸ ಸ್ಮಾರ್ಟ್ಫೋನ್ ಅನ್ನು ಶೀಘ್ರದಲ್ಲಿಯೇ ಭಾರತದಲ್ಲಿ ಲಾಂಚ್ ಮಾಡಲಿದ್ದು, ಬೆಲೆ ರೂ 9,999 ಆಗಿದೆ

By Tejaswini P G
|

ಕೆಲ ದಿನಗಳ ಹಿಂದಷ್ಟೇ ಲಾವಾ ಸಂಸ್ಥೆಯು ಲಾವಾ Z50, ಆಂಡ್ರಾಯ್ಡ್ ಓರಿಯೋ (ಗೋ ಎಡಿಶನ್) ಸ್ಮಾರ್ಟ್ಫೋನ್ ಅನ್ನು ರೂ 4,400 ಬೆಲೆಗೆ ಭಾರತದಲ್ಲಿ ಲಾಂಚ್ ಮಾಡಿತ್ತು. ಅದು ಲಾಂಚ್ ಆಗಿ ಇನ್ನೂ ಹದಿನೈದು ದಿನಗಳು ಕಳೆವ ಮೊದಲೇ ಆ ಸಂಸ್ಥೆಯು Z ಸರಣಿಯಲ್ಲಿ ಮತ್ತೊಂದು ಹೊಸ ಸ್ಮಾರ್ಟ್ಫೋನ್ ಅನ್ನು ಹೊರತಂದಿದೆ. ಈ ಹೊಸ ಲಾಂಚ್ ಲಾವಾ Z91 ಫುಲ್ ವಿಶನ್ ಡಿಸ್ಪ್ಲೇ ಮತ್ತು ಫೇಸ್ ಅನ್ಲಾಕ್ ಫೀಚರ್ ಗಳನ್ನು ಹೊಂದಿದ್ದು, ಬೆಲೆ ರೂ 9,999 ನಿಗದಿಪಡಿಸಲಾಗಿದೆ.

ಭಾರತದಲ್ಲಿ ಲಾಂಚ್ ಆಗಿದೆ ಫೇಸ್ ಅನ್ಲಾಕ್ ಹೊಂದಿರುವ ಲಾವಾ Z91

ಕಳೆದ ವರ್ಷ ಲಾಂಚ್ ಆದ ಲಾವಾ Z60, ಲಾವಾ Z70 , ಲಾವಾ Z80 ಮತ್ತು ಲಾವಾ Z90 ಮೊದಲಾದ ಸ್ಮಾರ್ಟ್ಫೋನ್ ಗಳ Z ಸರಣಿಗೆ Z91 ಹೊಸ ಸೇರ್ಪಡೆಯಾಗಿದೆ. ಈ ಹೊಸ ಸ್ಮಾರ್ಟ್ಫೋನ್ ನ ಬೆಲೆ ರೂ 9,999 ಆಗಿದ್ದು 2ವರ್ಷಗಳ ವ್ಯಾರೆಂಟಿ ಮತ್ತು ಒಂದು ಬಾರಿ ಉಚಿತ ಸ್ಕ್ರೀನ್ ರಿಪ್ಲೇಸ್ಮೆಂಟ್ ನೊಂದಿಗೆ ಬರುತ್ತದೆ. ಲಾವಾ Z91 ಖರೀದಿಸುವವರು ಏರ್ಟೆಲ್ ನಿಂದ ರೂ 2000 ದಷ್ಟು ಕ್ಯಾಶ್ಬ್ಯಾಕ್ ಕೂಡ ಪಡೆಯಬಹುದಾಗಿದೆ. ಅಲ್ಲದೆ ಲಾವಾ ಸಂಸ್ಥೆಯು ಟ್ವಿಟ್ಟರ್ ನಲ್ಲಿ Z91 ನ ಟೀಸರ್ ಒಂದನ್ನು ಪೋಸ್ಟ್ ಮಾಡಿದ್ದು, ಅದರಲ್ಲಿ ಫೇಸ್ ಅನ್ಲಾಕ್ ಫೀಚರ್ ಕುರಿತು ತಿಳಿಸಲಾಗಿದೆ.

ಲಾವಾ Z91 ನ ಫೀಚರ್ಗಳ ಕುರಿತು ಹೇಳುವುದಾದರೆ ಇದರಲ್ಲಿದೆ 5.7 ಇಂಚ್ ಫುಲ್-HD+ ಫುಲ್ ವ್ಯೂ ಡಿಸ್ಪ್ಲೇ 1440X720 ಪಿಕ್ಸೆಲ್ ರೆಸೊಲ್ಯೂಶನ್ ಮತ್ತು 18:9 ಆಸ್ಪೆಕ್ಟ್ ಅನುಪಾತ ದೊಂದಿಗೆ. ಇದರ ಡಿಸ್ಪ್ಲೇ 2.5D ಕರ್ವ್ಡ್ ಗ್ಲಾಸ್ ಕೋಟಿಂಗ್ ಕೂಡ ಹೊಂದಿದೆ. ಈ ಸ್ಮಾರ್ಟ್ಫೋನ್ ಆಂಡ್ರಾಯ್ಡ್ 7.1 ನುಗಾಟ್ ಓಎಸ್ ಹೊಂದಿದ್ದು ಸ್ಟಾರ್ ಓಎಸ್ 4.2 ನ ಮೇಲ್ಪದರವನ್ನೂ ಹೊಂದಿದೆ. ಇನ್ನು ಮೀಡಿಯಾಟೆಕ್ MTK6739 ಪ್ರಾಸೆಸರ್ ಹೊಂದಿರುವ ಲಾವಾ Z91 ಜೊತೆಗೆ 3GB RAM ಮತ್ತು 32GB ಸ್ಟೋರೇಜ್ ಸಾಮರ್ಥ್ಯ ಹೊಂದಿದ್ದು ಅದನ್ನು ಮೈಕ್ರೋSD ಕಾರ್ಡ್ ಬಳಸುವ ಮೂಲಕ 128GB ವರೆಗೆ ವಿಸ್ತರಿಸಬಹುದಾಗಿದೆ.

ಲಾವಾ Z91 ಸ್ಮಾರ್ಟ್ಫೋನ್ 13MP ರೇರ್ ಕ್ಯಾಮೆರಾ ಹೊಂದಿದ್ದು ಜೊತೆಗೆ LED ಫ್ಲ್ಯಾಶ್ ಮತ್ತು f/2.0 ಅಪರ್ಚರ್ ಹೊಂದಿದೆ.ಈ ಕ್ಯಾಮೆರಾ ಬೋಕೇಹ್ ಮೋಡ್ ನಲ್ಲಿ ಫೋಟೋ ಸೆರೆಹಿಡಿಯುವ ಸಾಮರ್ಥ್ಯವನ್ನೂ ಹೊಂದಿದೆ. ಇನ್ನು ಇದರ ಫ್ರಂಟ್ ಕ್ಯಾಮೆರಾ ಬಗ್ಗೆ ಹೇಳುವುದಾದರೆ ಇದರಲ್ಲಿದೆ 8MP ಸೆಲ್ಫೀ ಕ್ಯಾಮೆರಾ ಮತ್ತು f/2.2 ಅಪರ್ಚರ್. ಈ ಸೆಲ್ಫೀ ಕ್ಯಾಮೆರಾ ಸ್ಟಾರ್ ಓಎಸ್ 4.2 ನೀಡಿರುವ ವೀಡಿಯೋ ಬ್ಯೂಟಿ ಫೀಚರ್ ಅನ್ನು ಹೊಂದಿದೆ.

ಏಪ್ರಿಲ್ 10 ರಂದು ಭಾರತೀಯ ಮಾರುಕಟ್ಟೆಗೆ ಗೂಗಲ್ ಹೋಮ್ ಸ್ಮಾರ್ಟ್‌ ಸ್ಪೀಕರ್..!ಏಪ್ರಿಲ್ 10 ರಂದು ಭಾರತೀಯ ಮಾರುಕಟ್ಟೆಗೆ ಗೂಗಲ್ ಹೋಮ್ ಸ್ಮಾರ್ಟ್‌ ಸ್ಪೀಕರ್..!

ಸ್ಮಾರ್ಟ್ಫೋನ್ ಅನ್ನು ಅನ್ಲಾಕ್ ಮಾಡಲು ಲಭ್ಯವಿರುವ ಫೇಸ್ ಅನ್ಲಾಕ್ ಫೇಶಿಯಲ್ ರೆಕಗ್ನಿಶನ್ ಫೀಚರ್ ಲಾವಾ Z91 ಅನ್ನು ಮತ್ತಷ್ಟು ಆಕರ್ಷಕವಾಗಿಸುತ್ತದೆ. ಲಾವಾ Z91 ನಲ್ಲಿ ಫೇಸ್ ಅನ್ಲಾಕ್ ಫೀಚರ್ ಮಾತ್ರವಲ್ಲದೇ ಫಿಂಗರ್ಪ್ರಿಂಟ್ ಸೆನ್ಸರ್ ನಂತಹ ಬಯೋಮೆಟ್ರಿಕ್ ಫೀಚರ್ ಕೂಡ ಇದೆ.

ಈ ಸ್ಮಾರ್ಟ್ಫೋನ್ ನಲ್ಲಿರುವ ಫಿಂಗರ್ಪ್ರಿಂಟ್ ಸೆನ್ಸರ್ ಐದು ಬೆರಳುಗಳನ್ನು ಗುರುತಿಸುವ ಸಾಮರ್ಥ್ಯ ಹೊಂದಿದ್ದು ಆಪ್ಲಿಕೇಶನ್ ತೆರೆಯುವುದು ಮೊದಲಾದ ಶಾರ್ಟ್ಕಟ್ ಗಳಿಗೆ ಇದನ್ನು ಬಳಸಬಹುದಾಗಿದೆ. ಅಷ್ಟೇ ಅಲ್ಲದೆ ಲಾವಾ Z91 ನಲ್ಲಿ 4G VoLTE, ಡ್ಯುಯಲ್ ಸಿಮ್ ಸಪೋರ್ಟ್, ಜಿಪಿಎಸ್, ಬ್ಲೂಟೂತ್, ವೈಫೈ ಮತ್ತು 3000 mAh ಸಾಮರ್ಥ್ಯದ ಬ್ಯಾಟರಿ ಮೊದಲಾದ ಉತ್ತಮ ಫೀಚರ್ಗಳು ಇವೆ.

Best Mobiles in India

Read more about:
English summary
Lava Z91, the latest smartphone under the Z series has been launched with a pricing of Rs. 9,999. This smartphone comes with highlighted features such as FullVision 18:9 display and Face Unlock. The smartphone has software-based Bokeh mode and selfie video beautification as well. This smartphone comes with the Rs. 2,000 cash back offer from Airtel.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X