ಮಿಸ್ ಮಾಡದಿರಿ 11,999 ರ ಲೀ2 ಸ್ಮಾರ್ಟ್‌ಫೋನ್ ಅನ್ನು 1 ರೂಗೆ ಗೆಲ್ಲುವ ಅವಕಾಶ!
ಬುಧವಾರಷ್ಟೇ ಲೀಕೊ ತನ್ನ ಲೀ2 ಮತ್ತು ಲೀ ಮ್ಯಾಕ್ಸ್ 2 ಸ್ಮಾರ್ಟ್‌ಫೋನ್‌ಗಳ ಲಾಂಚ್ ಮಾಡಿದ್ದು, ಬೆಲೆ ರೂ 11,999 ಆಗಿದೆ. ಈ ಸ್ಮಾರ್ಟ್‌ಫೋನ್‌ಗಳು ಇದೀಗ lemall.com ನಲ್ಲಿ ಲಭ್ಯವಾಗುತ್ತಿದ್ದು ಈ ವಿಷಯವನ್ನು ಈವೆಂಟ್‌ನಲ್ಲಿ ಪ್ರಕಟಿಸಲಾಗಿತ್ತು.
ಸೀಮಿತ ಅವಧಿಯಲ್ಲಿ ಇದೇ ಪ್ಲಾಟ್‌ಫಾರ್ಮ್‌ನಲ್ಲಿ ರೂ 11,999 ರ ಲೀ2 ರೂ 1 ಕ್ಕೆ ಲಭ್ಯವಾಗುತ್ತಿದ್ದು ಮೊದಲ 300 ಖರೀದಿದಾರರಿಗೆ ಇದನ್ನು ಕೊಳ್ಳುವ ಅವಕಾಶವಿದೆ. ಮೊದಲು ಬಂದವರಿಗೆ ಮೊದಲ ಆದ್ಯತೆ ಎಂಬ ನಿಯಮವನ್ನು ಕಂಪೆನಿ ಅನುಸರಿಸುತ್ತಿದೆ.

ಭಾರತದಲ್ಲಿ ಸ್ಮಾರ್ಟ್‌ಫೋನ್ ಮಾರಾಟ ಯಾವ ಬಗೆಯಲ್ಲಿ ನಡೆಯಲಿದೆ ಎಂಬುದನ್ನು ಲೀಕೊ ಇದುವರೆಗೆ ಬಹಿರಂಗಪಡಿಸಿಲ್ಲ. ಆದರೆ ಫೋನ್‌ನ ನೋಂದಣಿಯು ಜೂನ್ 15 ರಿಂದ ಮಧ್ಯಾಹ್ನ 12 ರಿಂದ ಆರಂಭವಾಗಲಿದೆ.

ರೂ 1 ರ ಬೆಲೆಗೆ ಲೀ2 ಸ್ಮಾರ್ಟ್‌ಫೋನ್ ಅನ್ನು ನಿಮ್ಮದಾಗಿಸಿಕೊಳ್ಳಬೇಕು ಎಂದಾದಲ್ಲಿ ಸ್ಮಾರ್ಟ್‌ಫೋನ್‌ಗಾಗಿ ನೋಂದಾವಣೆಯನ್ನು lemall.com ನಲ್ಲಿ ಮಾಡಬೇಕು. ಅದೂ ಜೂನ್ 15 ಕ್ಕೆ ನೀವು ಮಾಡಬೇಕಾಗುತ್ತದೆ. ನೀವು ಅದೃಷ್ಟವಂತರಾಗಿದ್ದಲ್ಲಿ ಫೋನ್ ರೂ 1 ಕ್ಕೆ ನಿಮಗೆ ಲಭ್ಯವಾಗಬಹುದು.


Click it and Unblock the Notifications








