ಲೆನೊವೊದಿಂದ ಭಾರತದಲ್ಲಿ ಹೊಸ ಲ್ಯಾಪ್‌ಟಾಪ್‌ ಬಿಡುಗಡೆ! ಇದರ ಕಾರ್ಯದಕ್ಷತೆ ಹೇಗಿದೆ?

|

ಜನಪ್ರಿಯ ಲ್ಯಾಪ್‌ಟಾಪ್‌ ತಯಾರಕ ಕಂಪೆನಿಗಳಲ್ಲಿ ಲೆನೊವೊ ಮುಂಚೂಣಿಯಲ್ಲಿದೆ. ತನ್ನ ಭಿನ್ನ ಶ್ರೇಣಿಯ ಲ್ಯಾಪ್‌ಟಾಪ್‌ಗಳ ಮೂಲಕ ಗ್ಲೋಬಲ್‌ ಮಾರುಕಟ್ಟೆಯಲ್ಲಿ ಗುರುತಿಸಿಕೊಂಡಿದೆ. ಇದೀಗ ತನ್ನ ಹೊಸ ಲೆನೊವೊ 'ಐಡಿಯಾಪ್ಯಾಡ್ 1' ಲ್ಯಾಪ್‌ಟಾಪ್‌ ಅನ್ನು ಅನಾವರಣಗೊಳಿಸಿದೆ. ಈ ಲ್ಯಾಪ್‌ಟಾಪ್‌ AMD ರೈಜೆನ್‌ 3 7320U ಪ್ರೊಸೆಸರ್‌ನೊಂದಿಗೆ ಬರಲಿದೆ ಎಂದು ಲೆನೊವೊ ಕಂಪೆನಿ ಘೋಷಣೆ ಮಾಡಿದೆ. ಇನ್ನು 'ಐಡಿಯಾಪ್ಯಾಡ್ 1' ಮಲ್ಟಿ ಟಾಸ್ಟ್‌ ಫಂಕ್ಷನ್‌ ಅನ್ನು ಒಳಗೊಂಡಿದೆ ಎಂದು ಹೇಳಲಾಗಿದೆ.

ಲೆನೊವೊದಿಂದ ಭಾರತದಲ್ಲಿ ಹೊಸ ಲ್ಯಾಪ್‌ಟಾಪ್‌ ಬಿಡುಗಡೆ! ಇದರ ಕಾರ್ಯದಕ್ಷತೆ ಹೇಗಿದೆ?

ಹೌದು, ಲೆನೊವೊ ಕಂಪೆನಿ ಹೊಸ ಲೆನೊವೊ ಐಡಿಯಾಪ್ಯಾಡ್ 1 ಲ್ಯಾಪ್‌ಟಾಪ್‌ ಪರಿಚಯಿಸಿದೆ. ಈ ಲ್ಯಾಪ್‌ಟಾಪ್‌ ವೀಡಿಯೊ ವೀಕ್ಷಣೆ ಮತ್ತು ಗೇಮಿಂಗ್‌ನಲ್ಲಿ ಅತ್ಯುತ್ತಮ ಅನುಭವ ನೀಡಲಿದೆ ಎಂದು ವರದಿಯಾಗಿದೆ. ಜೊತೆಗೆ ಈ ಲ್ಯಾಪ್‌ಟಾಪ್‌ ಡಿಸ್‌ಪ್ಲೇ 220 ನಿಟ್ಸ್ ಬ್ರೈಟ್‌ನೆಸ್ ಬೆಂಬಲಿಸಲಿದ್ದು, ಡಾಲ್ಬಿ ಆಡಿಯೊ ಬೆಂಬಲಿಸುವ ಸ್ಟೀರಿಯೋ ಸ್ಪೀಕರ್‌ಗಳನ್ನು ಹೊಂದಿದೆ. ಇನ್ನುಳಿದಂತೆ ಈ ಲ್ಯಾಪ್‌ಟಾಪ್‌ ಏನೆಲ್ಲಾ ಫೀಚರ್ಸ್‌ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಲೆನೊವೊ ಐಡಿಯಾಪ್ಯಾಡ್ 1 ಲ್ಯಾಪ್‌ಟಾಪ್‌ 15 ಇಂಚಿನ ಫುಲ್‌ ಹೆಚ್‌ಡಿ ಆಂಟಿ-ಗ್ಲೇರ್ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 220 ನಿಟ್ಸ್ ಬ್ರೈಟ್‌ನೆಸ್ ಅನ್ನು ಹೊಂದಿದ್ದು, ವೀಡಿಯೋ ವೀಕ್ಷಣೆ ಮತ್ತು ಗೇಮಿಂಗ್‌ನಲ್ಲಿ ಉತ್ತಮ ಅನುಭವವನ್ನು ನೀಡಲಿದೆ. ಜೊತೆಗೆ ಡಾಲ್ಬಿ ಆಡಿಯೊ ಬೆಂಬಲಿಸುವ ಸ್ಟೀರಿಯೋ ಸ್ಪೀಕರ್‌ಗಳನ್ನು ಹೊಂದಿದೆ. ಇನ್ನು ಈ ಲ್ಯಾಪ್‌ಟಾಪ್‌ AMD Ryzen 3 7320U ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸಲಿದ್ದು, AMD Radeon 610M ಗ್ರಾಫಿಕ್ಸ್‌ ಕಾರ್ಡ್‌ ಹೊಂದಿದೆ.

ಲೆನೊವೊದಿಂದ ಭಾರತದಲ್ಲಿ ಹೊಸ ಲ್ಯಾಪ್‌ಟಾಪ್‌ ಬಿಡುಗಡೆ! ಇದರ ಕಾರ್ಯದಕ್ಷತೆ ಹೇಗಿದೆ?

ಈ ಲ್ಯಾಪ್‌ಟಾಪ್ ಮೂಲಕ ಬಳಕೆದಾರರು ಮಲ್ಟಿಟಾಸ್ಕ್ ಅನ್ನು ಸುಲಭವಾಗಿ ಮಾಡುವುದಕ್ಕೆ ಅವಕಾಶ ನೀಡಲಿದೆ. ಇದರಲ್ಲಿ ನೀವು ಆನ್‌ಲೈನ್‌ ತರಗತಿಗಳನ್ನು ಅಟೆಂಡ್‌ ಮಾಡುವುದಕ್ಕೆ ಹಾಗೂ ಸ್ನೇಹಿತರ ಜೊತೆಗೆ ಸಂವಹನ ನಡೆಸುವುದಕ್ಕೆ ಅವಕಾಶ ದೊರೆಯಲಿದೆ. ಜೊತೆಗೆ ನಿಮ್ಮ ನೆಚ್ಚಿನ ಆನ್‌ಲೈನ್‌ ಪ್ರೋಗ್ರಾಂಗಳನ್ನು ಸ್ಟ್ರೀಮ್‌ ಮಾಡುವುದಕ್ಕೆ ಅನುವು ಮಾಡಿಕೊಡಲಿದೆ ಎಂದು ಹೇಳಲಾಗಿದೆ. ಆದರಿಂದ ಇದು ವಿಸ್ತೃತ ಖಾತರಿ ಮತ್ತು ಅತ್ಯುತ್ತಮ-ದರ್ಜೆಯ ಕಾರ್ಯಕ್ಷಮತೆಯ ಡಿವೈಸ್‌ ಆಗಿದೆ ಎಂದು ಲೆನೊವೊ ಇಂಡಿಯಾದ ಡೈರೆಕ್ಟರ್ ಆಪ್‌ ಕನ್ಸೂಮರ್ ಬಿಸಿನೆಸ್ ದಿನೇಶ್ ನಾಯರ್ ಹೇಳಿದ್ದಾರೆ.

ಇನ್ನು ಈ ಲ್ಯಾಪ್‌ಟಾಪ್ 720p HD ಇನ್‌ಬಿಲ್ಟ್‌ ಕ್ಯಾಮೆರಾವನ್ನು ಹೊಂದಿದೆ. ಇದು ಪ್ರೈವೆಸಿ ಶಟರ್‌ ಅನ್ನು ಹೊಂದಿದ್ದು, ಅನಪೇಕ್ಷಿತ ನೋಡುಗರನ್ನು ನಿರ್ಬಂಧಿಸಲಿದೆ. ಇನ್ನು ಇದರಲ್ಲಿರುವ ಝೆನ್ 2 ಕೋರ್ ಆರ್ಕಿಟೆಕ್ಚರ್ ಮತ್ತು AMD RDNA 2 ಗ್ರಾಫಿಕ್ಸ್ ಮಲ್ಟಿ ಪಂಕ್ಷನ್‌ ಅನ್ನು ಸುಲಭಗೊಳಿಸಲಿದೆ. ಇದಲ್ಲದೆ ಲ್ಯಾಪ್‌ಟಾಪ್‌ ಲಾಂಗ್‌ ಬ್ಯಾಟರಿ ಅವಧಿಯನ್ನು ಹೊಂದಿದ್ದು, 14 ಗಂಟೆಗಳ ಬ್ಯಾಟರಿ ಅವಧಿಯನ್ನು ಒದಗಿಸಲಿದೆ ಎನ್ನಲಾಗಿದೆ.

ಲೆನೊವೊದಿಂದ ಭಾರತದಲ್ಲಿ ಹೊಸ ಲ್ಯಾಪ್‌ಟಾಪ್‌ ಬಿಡುಗಡೆ! ಇದರ ಕಾರ್ಯದಕ್ಷತೆ ಹೇಗಿದೆ?

ಲೆನೊವೊ ಐಡಿಯಾಪ್ಯಾಡ್‌ 1 ಭಾರತದಲ್ಲಿ 44,690ರೂ. ಆರಂಭಿಕ ಬೆಲೆಯಲ್ಲಿ ದೊರೆಯಲಿದೆ. ಇದನ್ನು ಇದೇ ಫೆಬ್ರವರಿ 8 ರಿಂದ ಖರೀದಿಸಬಹುದಾಗಿದ್ದು, ಕ್ಲೌಡ್ ಗ್ರೇ ಬಣ್ಣದ ಆಯ್ಕೆಯಲ್ಲಿ ದೊರೆಯಲಿದೆ. ಇದನ್ನು ಲೆನೊವೊ ಎಕ್ಸ್‌ಕ್ಲೂಸಿವ್ ಸ್ಟೋರ್‌ಗಳು, ಲೆನೊವೊ ಡಾಟ್ ಕಾಮ್, ಅಮೆಜಾನ್ ಮತ್ತು ದೊಡ್ಡ ಚಿಲ್ಲರೆ ಅಂಗಡಿಗಳಲ್ಲಿ ಸೇಲ್‌ ಮಾಡಲಾಗುತ್ತದೆ ಎಂದು ಲೆನೊವೊ ಕಂಪೆನಿ ಹೇಳಿಕೊಂಡಿದೆ.

ಇದಲ್ಲದೆ ಲೆನೊವೊ ಕಂಪೆನಿ ಇತ್ತೀಚಿಗೆ ಹೊಸ ಲೆನೊವೊ ಥಿಂಕ್‌ ಫೋನ್‌ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಇದು 6.6-ಇಂಚಿನ ಪೋಲ್ಇಡಿ ಡಿಸ್‌ಪ್ಲೇಯನ್ನು ಒಳಗೊಂಡಿದೆ. ಅಲ್ಲದೆ ಥಿಂಕ್‌ಫೋನ್ ಮತ್ತು ಥಿಂಕ್‌ಪ್ಯಾಡ್ ಲ್ಯಾಪ್‌ಟಾಪ್‌ಗಳ ನಡುವೆ ತಡೆರಹಿತ ಏಕೀಕರಣವನ್ನು ಒದಗಿಸುವ ಹೊಸ ಥಿಂಕ್‌2ಥಿಂಕ್‌ ಕನೆಕ್ಟ್‌ ಫೀಚರ್ಸ್‌ ಅನ್ನು ಸಹ ಪರಿಚಯಿಸಿದೆ.

Best Mobiles in India

English summary
The new laptop features a 15-inch Full-HD anti-glare display with up to 220 nits brightness and stereo speakers by Dolby Audio.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X