ಲೆನೋವೋ K8 ಪ್ಲಸ್ ನ ಬೆಲೆಯಲ್ಲಿ ಭಾರೀ ಕಡಿತ; ಈಗ ರೂ 7,999 ಕ್ಕೆ ಲಭ್ಯ!

By Tejaswini P G

  ಕಳೆದ ಸಪ್ಟಂಬರ್ನಲ್ಲಿ ಭಾರತದಲ್ಲಿ ಲಾಂಚ್ ಆದ ಲೆನೋವೋ K8 ಪ್ಲಸ್ 3GB ಮತ್ತು 4GB RAM ಗಳ ಎರಡು ಆವೃತ್ತಿಗಳಲ್ಲಿ ಲಭ್ಯವಿದೆ. K8 ಪ್ಲಸ್ 3GB ಆವೃತ್ತಿಯ ನಿಜವಾದ ಬೆಲೆ ರೂ 10,999 ಆಗಿದ್ದು, ಈಗ ಫ್ಲಿಪ್ಕಾರ್ಟ್ ನಲ್ಲಿ ರೂ 3000 ದಷ್ಟು ಬೆಲೆ ಕಡಿತ ಮಾಡಲಾಗಿದೆ.

  ಲೆನೋವೋ K8 ಪ್ಲಸ್ ನ ಬೆಲೆಯಲ್ಲಿ ಭಾರೀ ಕಡಿತ; ಈಗ ರೂ 7,999 ಕ್ಕೆ ಲಭ್ಯ!

  ಈ ರಿಯಾಯಿತಿಯ ಜೊತೆಗೆ ಲೆನೋವೋ K8 ನ ಮೇಲೆ ಇತರ ಆಫರ್ಗಳೂ ಲಭ್ಯವಿದೆ. ರೂ 2,667 ಪ್ರತಿ ತಿಂಗಳಿನಂತೆ ನೋ ಕಾಸ್ಟ್ EMI, ಹಾಗೂ ರೂ 338 ಪ್ರತಿ ತಿಂಗಳಿನಂತೆ ಇತರ EMI ಮಾತ್ರವಲ್ಲದೆ ಎಕ್ಸ್ಚೇಂಜ್ ಮೇಲೆ ರೂ 7500 ದಷ್ಟು ರಿಯಾಯಿತಿ, ಆಕ್ಸಿಸ್ ಬ್ಯಾಂಕ್ ಬಝ್ ಕ್ರೆಡಿಟ್ ಮೇಲೇ ರೂ 3000 ಮತ್ತು ಎಕ್ಸ್ಟ್ರಾ 5% ರಿಯಾಯತಿ ಹೊಂದಿದೆ. ಇದರ 4GB ಆವೃತ್ತಿ ಕೂಡ ಫ್ಲಿಪ್ಕಾರ್ಟ್ ನಲ್ಲಿ ರಿಯಾಯಿತಿ ಬೆಲೆಗೆ ಲಭ್ಯವಿದ್ದು ರೂ 8,999 ಕ್ಕೆ ಲಭ್ಯವಿದೆ. ಆದರೆ ಈ ಆವೃತ್ತಿ ಸಧ್ಯಕ್ಕೆ ಫ್ಲಿಪ್ಕಾರ್ಟ್ ನಲ್ಲಿ ಔಟ್ ಆಫ್ ಸ್ಟಾಕ್ ಆಗಿದೆ.

  ಲೆನೋವೋ K8 ಪ್ಲಸ್ ನ ಫೀಚರ್ಗಳ ಕುರಿತು ಹೇಳುವುದಾದರೆ ಇದರಲ್ಲಿದೆ 5.2ಇಂಚ್ IPS ಡಿಸ್ಪ್ಲೇ FHD ರೆಸೊಲ್ಯೂಶನ್ ಮತ್ತು 178-ಡಿಗ್ರೀ ವೈಡ್ ವ್ಯೂವಿಂಗ್ ಆಂಗಲ್ ನೊಂದಿಗೆ. ಡಿಸ್ಪ್ಲೇ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ನ ರಕ್ಷಣಾ ಕವಚವನ್ನೂ ಹೊಂದಿದೆ. ಇನ್ನು ಈ ಲೆನೋವೋ ಫೋನ್ ಒಕ್ಟಾ-ಕೋರ್ ಮೀಡಿಯಾಟೆಕ್ ಹೀಲಿಯೋ P25 ಪ್ರಾಸೆಸರ್ ನ ಬಳಕೆ ಮಾಡುತ್ತದೆ. ಈ ಮೊಬೈಲ್ 3GB ಮತ್ತು 4GB RAM ನ ಎರಡು ಆವೃತ್ತಿಗಳಲ್ಲಿ ಲಭ್ಯವಿದ್ದು, ಎರಡೂ ಆವೃತ್ತಿಗಳು 32 GB ಸ್ಟೋರೇಜ್ ಸಾಮರ್ಥ್ಯ ಹೊಂದಿದೆ.

  ಲೆನೋವೋ K8 ಪ್ಲಸ್ ಸ್ಮಾರ್ಟ್ಫೋನ್ ಆಂಡ್ರಾಯ್ಡ್ 7.1.1 ನುಗಾಟ್ ಓಎಸ್ ಹೊಂದಿದ್ದು, ಶೀಘ್ರದಲ್ಲಿಯೇ ಆಂಡ್ರಾಯ್ಡ್ ಓರಿಯೋ ಅಪ್ಡೇಟ್ ಪಡೆಯಲಿದೆ. ಇದರಲ್ಲಿ ಡ್ಯುಯಲ್ ರೇರ್ ಕ್ಯಾಮೆರಾ ಸೆಟಪ್ ಇದ್ದು 13MP ಪ್ರೈಮರಿ ಸೆನ್ಸರ್ ಮತ್ತು 5MP ಸೆಕೆಂಡರಿ ಡೆಪ್ತ್ ಸೆನ್ಸರ್ ಹೊಂದಿದೆ.

  ಜಿಯೋ ಆಫರ್ ಕೊಟ್ಟ ಗಂಟೆಗಳಲ್ಲಿ ಏರ್‌ಟೆಲ್‌ನಿಂದ ಬೊಂಬಾಟ್ ಆಫರ್‌: IPL ನೋಡಲು ಏರ್‌ಟೆಲ್ ಬೆಸ್ಟ್‌..!

  ಇದರ ಪ್ರೈಮರಿ ಸೆನ್ಸರ್ ಎಲ್ಲಾ ಸೂಕ್ಷ್ಮ ವಿವರಗಳನ್ನು ಸೆರೆಹಿಡಿಯುತ್ತದಲ್ಲದೆ ಚಿತ್ರದಲ್ಲಿ ಉತ್ತಮ ಬಣ್ಣವನ್ನು ನೀಡುತ್ತದೆ. ಇನ್ನು ಇದರ ಸೆಕೆಂಡರಿ ಸೆನ್ಸರ್ ಬೋಕೇ ಇಫೆಕ್ಟ್ ಇರುವ ಚಿತ್ರಗಳನ್ನು ಸೃಷ್ಟಿಸುವ ಸಾಮರ್ಥ್ಯ ಹೊಂದಿದೆ.ಎರಡೂ ಸೆನ್ಸರ್ಗಳು f/2.0 ಅಪರ್ಚರ್ ಹೊಂದಿದೆ.

  ಇನ್ನು ಇದರ ಫ್ರಂಟ್ ಕ್ಯಾಮೆರಾ 8MP ಸೆನ್ಸರ್ ಹೊಂದಿದ್ದು f/2.0 ಅಪರ್ಚರ್,ಪ್ರೊಫೆಶನಲ್ ಮೋಡ್, ಬ್ಯೂಟಿಫೈ ಮೋಡ್, 84-ಡಿಗ್ರೀ ವೈಡ್ ಆಂಗಲ್ ಲೆನ್ಸ್ ಹೊಂದಿದೆ. ಅಲ್ಲದೆ ಇದರಲ್ಲಿ ಪಾರ್ಟಿ ಫ್ಲ್ಯಾಶ್ ಕೂಡ ಲಭ್ಯವಿದ್ದು ಕಡಿಮೆ ಬೆಳಕಿನಲ್ಲೂ ಉತ್ತಮ ಸೆಲ್ಫೀ ಸೆರೆಹಿಡಿಯಲು ಇದು ಸಹಾಯಕವಾಗಿದೆ.

  How To Link Aadhaar With EPF Account Without Login (KANNADA)
  K8 ಪ್ಲಸ್ ನಲ್ಲಿ ಹಿರಿದಾದ 4000mAh ಸಾಮರ್ಥ್ಯದ ಬ್ಯಾಟರಿ ಇದ್ದು ಟರ್ಬೋ ಚಾರ್ಜಿಂಗ್ ಫೀಚರ್ ಹೊಂದಿದೆ. ಸ್ಟ್ಯಾಂಡ್ಬೈ ನಲ್ಲಿ 2 ದಿನಗಳ ಕಾಲ ಕಾರ್ಯನಿರ್ವಹಿಸಬಲ್ಲ ಈ ಬ್ಯಾಟರಿ, 13 ಘಂಟೆಗಳ ವೆಬ್ ಬ್ರೌಸಿಂಗ್, 20 ಘಂಟೆಗಳ ವೀಡಿಯೋ ಪ್ಲೇಬ್ಯಾಕ್ ಮತ್ತು ಹೆಡ್ಫೋನ್ ಮೂಲಕ 100 ಘಂಟೆಗಳ ಮ್ಯೂಸಿಕ್ ಪ್ಲೇಬ್ಯಾಕ್ ನೀಡುವ ಸಾಮರ್ಥ್ಯ ಹೊಂದಿದೆ.

  Read more about:
  English summary
  Lenovo K8 Plus with 3GB RAM was retailing for Rs. 10,999, but it has just received a price cut of Rs. 3,000. The smartphone is now available for purchase at just Rs. 7,999 on Flipkart. The 4GB RAM variant of the smartphone is also listed on Flipkart at a discounted price of Rs. 8,999. However, this model is out of stock at the moment.
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more