ಲೆನೊವೊ ಕಂಪೆನಿಯಿಂದ ಹೊಸ ಸ್ಮಾರ್ಟ್‌ ಟ್ಯಾಬ್‌ ಬಿಡುಗಡೆ! ಕ್ವಾಡ್‌ ಸ್ಪೀಕರ್‌ ವಿಶೇಷ!

|

ಜನಪ್ರಿಯ ಸ್ಮಾರ್ಟ್‌ ಟ್ಯಾಬ್ಲೆಟ್‌ಗಳಿಗೆ ಲೆನೊವೊ ಕಂಪೆನಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿದೆ. ತನ್ನ ಭಿನ್ನ ಶ್ರೇಣಿಯ ಟ್ಯಾಬ್‌ಗಳ ಮೂಲಕ ಲೆನೊವೊ ಕಂಪೆನಿ ಟ್ಯಾಬ್‌ ಪ್ರಿಯರ ನೆಚ್ಚಿನ ಆಯ್ಕೆ ಎನಿಸಿಕೊಂಡಿದೆ. ಸದ್ಯ ಲೆನೊವೊ ಕಂಪೆನಿ ಹೊಸ ಲೆನೊವೊ ಶಿಯಾಕ್ಸಿನ್‌ ಪ್ಯಾಡ್‌ ಪ್ಲಸ್‌ 2023 ಅನ್ನು ಪರಿಚಯಿಸಿದೆ. ಇದು ಕಳೆದ ವರ್ಷ ಬಿಡುಗಡೆಯಾಗಿದ್ದ ಶಿಯಾಕ್ಸಿನ್‌ ಪ್ಯಾಡ್‌ ಪ್ಲಸ್‌ನ ಉತ್ತರಾಧಿಕಾರಿಯಾಗಿದೆ. ಇನ್ನು ಈ ಪ್ಯಾಡ್‌ ಡ್ಯುಯಲ್ ಮೈಕ್ರೊಫೋನ್‌ಗಳನ್ನು ಒಳಗೊಂಡಿದೆ.

ಲೆನೊವೊ

ಹೌದು, ಲೆನೊವೊ ಕಂಪೆನಿ ಹೊಸದಾಗಿ ಲೆನೊವೊ ಶಿಯಾಕ್ಸಿನ್‌ ಪ್ಯಾಡ್‌ ಪ್ಲಸ್‌ 2023 ಅನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ ಟ್ಯಾಬ್ಲೆಟ್‌ ಡ್ಯುಯಲ್-ಟೋನ್ ಕಲರ್ ಫಿನಿಶ್‌ ಅನ್ನು ಹೊಂದಿದೆ. ಇದು ಹಸಿರು ಮತ್ತು ಬೂದು ಬಣ್ಣದ ಆಯ್ಕೆಗಳಲ್ಲಿ ಬರುತ್ತದೆ. ಇನ್ನು ಈ ಟ್ಯಾಬ್ಲೆಟ್‌ ಡ್ಯುಯಲ್‌ ಮೈಕ್ರೊಫೋನ್‌ಗಳು ಮತ್ತು ಕ್ವಾಡ್‌ ಸ್ಪೀಕರ್‌ಗಳನ್ನು ಡಾಲ್ಬಿ ಟ್ಮಾಸ್‌ಗೆ ಬೆಂಬಲವನ್ನು ಹೊಂದಿದೆ. ಇನ್ನುಳಿದಂತೆ ಈ ಹೊಸ ಸ್ಮಾರ್ಟ್‌ ಟ್ಯಾಬ್ಲೆಟ್‌ ಏನೆಲ್ಲಾ ವಿಶೇಷತೆ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಲೆನೊವೊ

ಲೆನೊವೊ ಶಿಯಾಕ್ಸಿನ್‌ ಪ್ಯಾಡ್‌ ಪ್ಲಸ್‌ 2023 11.5 ಇಂಚಿನ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 2000 x 1200 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದಿದೆ. ಇನ್ನು ಟ್ಯಾಬ್‌ನ ಸುತ್ತಲೂ ಸ್ಟೈಲಸ್ ಇನ್‌ಪುಟ್ ಅನ್ನು ಕೂಡ ನೀಡಲಾಗಿದೆ. ಅಲ್ಲದೆ DC ಬ್ಲರ್‌ ಮತ್ತು DCI-P3 ಕಲರ್‌ ಗ್ಯಾಮಟ್‌ಗೆ ಬೆಂಬಲವನ್ನು ಸಹ ನೀಡಲಿದೆ. ಇನ್ನು ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್‌ ಮತ್ತು 400 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಅನ್ನು ಹೊಂದಿದೆ. ಇದು TÜV ರೈನ್‌ಲ್ಯಾಂಡ್‌ ಐಸೇಫ್‌ 2.0 ಪ್ರಮಾಣೀಕರಣವನ್ನು ಸಹ ಹೊಂದಿದೆ.

ಲೆನೊವೊ

ಲೆನೊವೊ ಶಿಯಾಕ್ಸಿನ್‌ ಪ್ಯಾಡ್‌ ಪ್ಲಸ್‌ 2023 ಮೀಡಿಯಾಟೆಕ್‌ ಹೆಲಿಯೋ G99 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು 6GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಅನ್ನು ಒಳಗೊಂಡಿದೆ. ಇದಲ್ಲದೆ ಮೆಮೊರಿ ಕಾರ್ಡ್‌ ಮೂಲಕ 1TB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ. ಇದು ZUI 14 ಅನ್ನು ಬೂಟ್ ಮಾಡುತ್ತದೆ. ಆದರಿಂದ ಇದು ಸ್ಪ್ಲಿಟ್-ಸ್ಕ್ರೀನ್, ಫ್ಲೋಟಿಂಗ್ ವಿಂಡೋಗಳು, ಕೀಬೋರ್ಡ್ ಶಾರ್ಟ್‌ಕಟ್‌ ಅನ್ನು ಒಳಗೊಂಡಿದೆ.

ಲೆನೊವೊ

ಲೆನೊವೊ ಶಿಯಾಕ್ಸಿನ್‌ ಪ್ಯಾಡ್‌ ಪ್ಲಸ್‌ 2023 13 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸಿಂಗಲ್‌ ರಿಯರ್‌ ಕ್ಯಾಮೆರಾ ನೀಡಲಾಗಿದೆ. ಇದು 8 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸೆಲ್ಫಿ ಕ್ಯಾಮೆರಾವನ್ನು ಹೊಂದಿದ್ದು, ಲ್ಯಾಂಡ್‌ಸ್ಕೇಪ್‌ ಬೆಜೆಲ್‌ನಲ್ಲಿದೆ. ಇನ್ನು ರಿಯರ್‌ ಕ್ಯಾಮೆರಾದಲ್ಲಿ ಎಲ್‌ಇಡಿ ಫ್ಲ್ಯಾಷ್‌ ಅನ್ನು ನೀಡಲಾಗಿದೆ. ಇದಲ್ಲದೆ ಸ್ಮಾರ್ಟ್ ಟ್ಯಾಬ್‌ನಲ್ಲಿ ಪವರ್ ಕೀ ಅನ್ನು ಮೇಲ್ಭಾಗದಲ್ಲಿ ನೀಡಲಾಗಿದೆ. ಇನ್ನು ವಾಲ್ಯೂಮ್ ಕೀಗಳನ್ನು ಬಲಭಾಗದಲ್ಲಿ ಇರಿಸಲಾಗಿದೆ.

ಲೆನೊವೊ

ಲೆನೊವೊ ಶಿಯಾಕ್ಸಿನ್‌ ಪ್ಯಾಡ್‌ ಪ್ಲಸ್‌ 2023 ಟ್ಯಾಬ್‌ 7,700mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 20W ವೈರ್ಡ್‌ ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ವೈಫೈ 6 ಮತ್ತು ಬ್ಲೂಟೂತ್ 5.2 ,ಯುಎಸ್‌ಬಿ ಟೈಪ್-ಸಿ ಪೋರ್ಟ್, 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಬೆಂಬಲಿದಲಿದೆ. ಅಲ್ಲದೆ ಅಧಿಕೃತ ಕೀಬೋರ್ಡ್ ಪರಿಕರಕ್ಕಾಗಿ ಮ್ಯಾಗ್ನೆಟಿಕ್ ಪೊಗೊ ಪಿನ್ ಕನೆಕ್ಟರ್ ಅನ್ನು ಹೊಂದಿದೆ. ಇದು ಡ್ಯುಯಲ್ ಮೈಕ್ರೊಫೋನ್‌ಗಳು ಮತ್ತು ಕ್ವಾಡ್ ಸ್ಪೀಕರ್‌ಗಳನ್ನು ಡಾಲ್ಬಿ ಅಟ್ಮಾಸ್‌ಗೆ ಬೆಂಬಲವನ್ನು ಹೊಂದಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಲೆನೊವೊ ಶಿಯಾಕ್ಸಿನ್‌ ಪ್ಯಾಡ್‌ ಪ್ಲಸ್‌ 2023 ಪ್ರಸ್ತುತ ಚೀನಾದಲ್ಲಿ ಮಾತ್ರ ಬಿಡುಗಡೆಯಾಗಿದೆ. ಆದರಿಂದ ಚೀನಾದಲ್ಲಿ ಇದರ 6GB + 128GBಸ್ಟೋರೇಜ್‌ ಆಯ್ಕೆಗೆ ಯುವಾನ್‌ 1,799 (ಅಂದಾಜು 20,357ರೂ) ಬೆಲೆ ಹೊಂದಿದೆ. ಇದು ಭಾರತದಲ್ಲಿ ಯಾವಾಗ ಬಿಡುಗಡೆಯಾಗಲಿದೆ. ಭಾರತದಲ್ಲಿ ಇದರ ಫೀಚರ್ಸ್‌ ಹೇಗಿರಲಿದೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

Best Mobiles in India

Read more about:
English summary
Lenovo Xiaoxin Pad Plus 2023 With Quad Speakers Launched

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X