ಆಪಲ್‌ನಿಂದ ವಿಶ್ವದ ದೊಡ್ಡ ಸ್ಮಾರ್ಟ್‌ವಾಚ್ ಡಿಸ್‌ಪ್ಲೇ ತಯಾರಿಕಾ ಸಂಸ್ಥೆಯಾದ ಎಲ್‌ಜಿ

By GizBot Bureau
|

ಕೊರಿಯನ್ ಮೂಲದ ಎಲ್ ಜಿ ಸಂಸ್ಥೆ ವಿಶ್ವದ ಅತೀ ದೊಡ್ಡ OLED ಸ್ಮಾರ್ಟ್ ವಾಚ್ ಡಿಸ್ಪ್ಲೇಯನ್ನು ಪೂರೈಕೆ ಮಾಡುವ ಸಂಸ್ಥೆಯಾಗಿ ಹೊರಹೊಮ್ಮಿದೆ. ಸದ್ಯ ಅದು ಸ್ಯಾಮ್ ಸಂಗ್ ಸಂಸ್ಥೆಯನ್ನು ಹಿಂದಿಕ್ಕಿ ಈ ಸ್ಥಾನಕ್ಕೆ ಪಾತ್ರವಾಗುತ್ತಿದೆ ಎಂದು IHS ಸಂಶೋಧನಾ ಸಂಸ್ಥೆ ಹೇಳಿದೆ. ಇದು ಸಾಧ್ಯವಾಗಿದ್ದು ಆಪಲ್ ವಾಚ್ ನ ಡಿಮಾಂಡ್ ಅಧಿಕವಾಗಿರುವ ಕಾರಣದಿಂದಾಗಿ ಅಂತೆ.

ಆಪಲ್‌ನಿಂದ ದೊಡ್ಡ ಸ್ಮಾರ್ಟ್‌ವಾಚ್ ಡಿಸ್‌ಪ್ಲೇ ತಯಾರಿಕಾ ಸಂಸ್ಥೆಯಾದ ಎಲ್‌ಜಿ

ಬ್ಯುಸಿನೆಸ್ ಕೊರಿಯಾದ ವರದಿಯ ಅನುಸಾರ “ ಜುಲೈ 9 ರಂದು ಮಾರ್ಕೆಟ್ ನ ಸಂಶೋಧನೆ ಮಾಡುವ ಸಂಸ್ಥೆಯಾಗಿರುವ IHS ಮಾರ್ಕಿಟ್ ಪ್ರಕಟಿಸಿರುವಂತೆ ಎಲ್ ಜಿ ಡಿಸ್ಪ್ಲೇಯು ಸುಮಾರು 10.64 ಮಿಲಿಯನ್ AMOLED ಸ್ಮಾರ್ಟ್ ವಾಚ್ ನ್ನು ನ ಡಿಸ್ಪ್ಲೇ ಪೆನಲ್ ನ್ನು ಕಳೆದ ವರ್ಷ ಸಪ್ಲೈ ಮಾಡಿದ್ದು, ಇದು ಮಾರ್ಕೆಟ್ ಶೇರ್ ನ ಶೇಕಡಾ 41.4 ಆಗಿದೆ ಎಂದು ತಿಳಿಸಿದೆ. ಇದು ಸ್ಯಾಮ್ ಸಂಗ್ ಡಿಸ್ಪ್ಲೇಯು (8.95 ಮಿಲಿಯನ್, 34.8%) ಎವರ್ಡಿಸ್ಪ್ಲೇ (4.17 ಮಿಲಿಯನ್, 16.2%), AUO (1.47 ಮಿಲಿಯನ್, 5.7%) ಮತ್ತು BOE (380,000, 1.5%) ಗಿಂತ ಅಧಿಕವಾಗಿದೆ.

ಈ ವರದಿಯಲ್ಲಿ ಆಪಲ್ ವಾಚ್ ನ ಬೇಡಿಕೆಯು ಅಧಿಕವಾಗಿರುವುದೇ ಇದಕ್ಕೆ ಕಾರಣ ಎಂದು ತಿಳಿಸಲಾಗಿದೆ. ಮತ್ತು ಆಪಲ್ ವಾಚ್ ಗೆ ಎಲ್ ಜಿ ಸಂಸ್ಥೆಯೇ OLED ಡಿಸ್ಪ್ಲೇಯನ್ನು ಸರಬರಾಜು ಮಾಡುತ್ತದೆ. ಕಳೆದ ವರ್ಷ ಎಲ್ ಜಿ ಡಿಸ್ಪ್ಲೇ ಮತ್ತು ಸ್ಯಾಮ್ ಸಂಗ್ ಡಿಸ್ಪ್ಲೇ ಒಟ್ಟು 14.75 ಮಿಲಿಯನ್ OLED ಸ್ಮಾರ್ಟ್ ವಾಚ್ ಪೆನಲ್ ನ್ನು ಆಪಲ್ ಗೆ ಸರಬರಾಜು ಮಾಡಿದೆ ಮತ್ತು ಇದರ ಒಟ್ಟು ಸರಬರಾಜಿನಲ್ಲಿ ಶೇಕಡಾ 70 ರಷ್ಟನ್ನು ಎಲ್ ಜಿ ಡಿಸ್ಪ್ಲೇಯೇ ಒಳಗೊಂಡಿದೆ.

ಆಪಲ್‌ನಿಂದ ದೊಡ್ಡ ಸ್ಮಾರ್ಟ್‌ವಾಚ್ ಡಿಸ್‌ಪ್ಲೇ ತಯಾರಿಕಾ ಸಂಸ್ಥೆಯಾದ ಎಲ್‌ಜಿ

ಸದ್ಯ ಆಪಲ್ ಸಂಸ್ಥೆಯೇ ವಿಶ್ವದ ಸ್ಮಾರ್ಟ್ ವಾಚ್ ಮಾರ್ಕೆಟ್ ನ ರಾಜನಾಗಿ ಮೆರೆಯುತ್ತಿದೆ ಮತ್ತು ಎಲ್ ಜಿಯು ಅದರ ಪ್ರಮುಖ ಸರಬರಾಜು ಸಂಸ್ಥೆಯಾಗಿದೆ. ಇತ್ತೀಚಿನ ಮಾಹಿತಿಯೊಂದರ ಪ್ರಕಾರ ಮುಂಬರುವ ಆಪಲ್ ಐಫೋನ್ ಗಳಲ್ಲೂ ಕೂಡ ಎಲ್ ಜಿಯ ಡಿಸ್ಪ್ಲೇ OLED ಪೆನಲ್ ಗಳು ಇರಲಿವೆಯಂತೆ. ಮಾಹಿತಿಯೊಂದರ ಅನ್ವಯ ಎಲ್ ಜಿ ಸಂಸ್ಥೆಯು ಸುಮಾರು 2 ರಿಂದ 4 ಮಿಲಿಯನ್ OLED ಪೆನಲ್ ಗಳನ್ನು ಐಫೋನ್ ತಯಾರಿಕೆಗಾಗಿ ಸರಬರಾಜು ಮಾಡಲಿದೆ ಎಂದು ಹೇಳಲಾಗುತ್ತದೆ.
ಆಪಲ್‌ನಿಂದ ದೊಡ್ಡ ಸ್ಮಾರ್ಟ್‌ವಾಚ್ ಡಿಸ್‌ಪ್ಲೇ ತಯಾರಿಕಾ ಸಂಸ್ಥೆಯಾದ ಎಲ್‌ಜಿ

ಈ ವಾರದ ಆರಂಭದಲ್ಲಿ ಆಪಲ್ ಸಂಸ್ಥೆಯು ಐಫೋನ್ ಎಕ್ಸ್ ಮತ್ತು ಐಫೋನ್ ಎಸ್ ಇ ಯ ಸರಬರಾಜನ್ನು ನಿಲ್ಲಿಸುವ ಸಾಧ್ಯತೆಯ ಬಗ್ಗೆ ವರದಿಗಳು ಬಂದಿದ್ದವು. ಅದಕ್ಕೆ ಕಾರಣ ಮುಂಬರುವ ಐಫೋನ್ ಬಗ್ಗೆ ಹೆಚ್ಚು ಗಮನ ಹರಿಸಲು ಆಪಲ್ ಸಂಸ್ಥೆ ಇಚ್ಛಿಸುತ್ತಿದೆ ಎಂದು ಹೇಳಲಾಗುತ್ತಿದೆ. ಹಲವಾರು ಅಪ್ ಡೇಟ್ ಗಳು ಇತ್ತೀಚಿನ ವರ್ಷಗಳಲ್ಲಿ ನಡೆಯುತ್ತಿರುವುದು ಮತ್ತು ಹೆಚ್ಚಿನ ಡಿಮ್ಯಾಂಡ್ ಸೃಷ್ಟಿಯಾಗುತ್ತಿರುವುದರಿಂದಾಗಿ, ಭವಿಷ್ಯದ ಐಫೋನ್ ಗಳ ಬಗ್ಗೆ ಆಪಲ್ ಚಿಂತನೆ ನಡೆಸುತ್ತಿದೆ ಎಂಬುದಾಗಿ ಬ್ಲೂಫಿನ್ ಅಧ್ಯಯನವೊಂದು ತಿಳಿಸಿದೆ.

ಇದು ಹೆಚ್ ಪಿಯ ಸ್ಥಾನದ ಮೇಲೆ ಪರಿಣಾಮ ಬೀರಲಿದೆಯಾ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕು. ಒಟ್ಟಿನಲ್ಲಿ ಸದ್ಯಕ್ಕೆ ಆಪಲ್ ನ ಕೃಪಾಕಟಾಕ್ಷದಿಂದಾಗಿ ಎಲ್ ಜಿಯು ವಿಶ್ವದ ಅತೀ ದೊಡ್ಡ ಸ್ಮಾರ್ಟ್ ವಾಚ್ ಡಿಸ್ಪ್ಲೇ ತಯಾರಿಕಾ ಸಂಸ್ಥೆಯಾಗಿ ಹೊರಹೊಮ್ಮಿದೆ.

Best Mobiles in India

English summary
LG becomes world's top smartwatch display maker, thanks to Apple. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X