ಎಲ್‌ಜಿಯಿಂದ ಎರಡು ಹೊಸ ಗೇಮಿಂಗ್‌ ಮಾನಿಟರ್‌ ಲಾಂಚ್‌! ವಾವ್ಹ್‌ ಎನಿಸುವ ಫೀಚರ್ಸ್‌!

|

ಎಲೆಕ್ಟ್ರಾನಿಕ್ಸ್‌ ದೈತ್ಯ ಎಲ್‌ಜಿ ಕಂಪೆನಿ ಗೇಮಿಂಗ್‌ ಮಾನಿಟರ್‌ ವಲಯದಲ್ಲಿಯೂ ಗುರುತಿಸಿಕೊಂಡಿದೆ. ಈಗಾಗಲೇ ಹಲವು ಮಾದರಿಯ ಮಾನಿಟರ್‌ಗಳನ್ನು ಪರಿಚಯಿಸಿರುವ ಎಲ್‌ಜಿ ಕಂಪೆನಿ, ಇದೀಗ ಎರಡು ಹೊಸ ಅಲ್ಟ್ರಾಗೇರ್‌ OLED ಗೇಮಿಂಗ್ ಮಾನಿಟರ್‌ಗಳನ್ನು ಪರಿಚಯಿಸಿದೆ. ಈ ಗೇಮಿಂಗ್‌ ಮಾನಿಟರ್‌ಗಳು 27 ಇಂಚು ಮತ್ತು 45 ಇಂಚಿನ ಆಯ್ಕೆಗಳಲ್ಲಿ ಬರಲಿವೆ. ಇನ್ನು ಈ ಎರಡು ಮಾನಿಟರ್‌ಗಳ ಡಿಸ್‌ಪ್ಲೇ 240Hz ರಿಫ್ರೆಶ್‌ ರೇಟ್‌ ಬೆಂಬಲಿಸಲಿವೆ.

ಮಾನಿಟರ್‌

ಹೌದು, ಎಲ್‌ಜಿ ಕಂಎನಿ ಎರಡು ಹೊಸ ಅಲ್ಟ್ರಾಗೇರ್‌ ಗೇಮಿಂಗ್‌ ಮಾನಿಟರ್‌ಗಳನ್ನು ಬಿಡುಗಡೆ ಮಾಡಿದೆ. 240Hz ರಿಫ್ರೆಶ್‌ ರೇಟ್‌ ಬೆಂಬಲಿಸುವ OLED ಡಿಸ್‌ಪ್ಲೇ ಹೊಂದಿರುವ ವಿಶ್ವದ ಮೊದಲ ಮಾನಿಟರ್‌ಗಳು ಎಂಬ ಖ್ಯಾತಿಗೆ ಪಾತ್ರವಾಗಿವೆ. ಇನ್ನು ಈ ಗೇಮಿಂಗ್‌ ಮಾನಿಟರ್‌ಗಳು ಇಂದಿನ ಜಮಾನಕ್ಕೆ ಸೂಕ್ತವಾಗುವ ಅನೇಕ ಫೀಚರ್ಸ್‌ಗಳನ್ನು ಹೊಂದಿವೆ. ಈ ಮಾನಿಟರ್‌ಗಳನ್ನು ನಿಮಗೆ ಬೇಕಾದಂತೆ ಸ್ವಿವೆಲ್‌ ಮಾಡುವುದಕ್ಕೆ ಕೂಡ ಅವಕಾವಿದೆ. ಇನ್ನುಳಿದಂತೆ ಈ ಗೇಮಿಂಗ್‌ ಮಾನಿಟರ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಎಲ್‌ಜಿ ಅಲ್ಟ್ರಾಗೇರ್‌ 45-ಇಂಚಿನ ಮಾನಿಟರ್

ಎಲ್‌ಜಿ ಅಲ್ಟ್ರಾಗೇರ್‌ 45-ಇಂಚಿನ ಮಾನಿಟರ್

ಎಲ್‌ಜಿ ಅಲ್ಟ್ರಾಗೇರ್‌ 45 ಇಂಚಿನ ಮಾನಿಟರ್ WQHD ಸ್ಕ್ರೀನ್ ರೆಸಲ್ಯೂಶನ್ ಹೊಂದಿದೆ. ಇದರ ಡಿಸ್‌ಪ್ಲೇ 21:9 ರಚನೆಯ ಅನುಪಾತ ಹೊಂದಿದೆ. ಇದು HDR10 ಬೆಂಬಲಿಸಲಿದ್ದು, 800R ವಕ್ರತೆಯ ಜೊತೆಗೆ ಕರ್ವ್ಡ್‌ ಡಿಸ್‌ಪ್ಲೇ ಇದಾಗಿದೆ. ಇದಲ್ಲದೆ ಆಂಟಿ-ಗ್ಲೇರ್ , 1,500,000:1 ಕಾಂಟ್ರಾಸ್ಟ್ ಅನುಪಾತವನ್ನು ಒಳಗೊಂಡಿದೆ. ಜೊತೆಗೆ 98.5% DCI-P3 ಕಲರ್‌ ಗ್ಯಾಮರ್ಟ್‌ ಮತ್ತು 0.03ms GTG ರೆಸ್ಪಾನ್ಸ್‌ ಟೈಂ ಬೆಂಬಲಿಸಲಿದೆ.

ಮಾನಿಟರ್

ಇನ್ನು ಈ ಮಾನಿಟರ್ ಹೊಂದಾಣಿಕೆಯ ಸ್ಟ್ಯಾಂಡ್‌ನೊಂಡಿಗೆ ಬರಲಿದೆ. ಇದನ್ನು ನೀವು 90 ಡಿಗ್ರಿಗಳವರೆಗೆ ಪಿವೋಟ್ ಮಾಡುವುದಕ್ಕೆ ಅವಕಾಶವಿದೆ. ಇದನ್ನು ಓರೆಯಾಗಿಸಬಹುದು ಮತ್ತು ಸ್ವಿವೆಲ್ ಕೂಡ ಮಾಡಬಹುದು. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 2 HDMI 2.1 ಪೋರ್ಟ್‌ಗಳು, ಡಿಸ್‌ಪ್ಲೇ ಪೋರ್ಟ್, USB 3.0 ಪೋರ್ಟ್ ಮತ್ತು 4 ಪೋಲ್ ಹೆಡ್‌ಫೋನ್ ಜ್ಯಾಕ್, DTS ಹೆಡ್‌ಫೋನ್: X ಗೆ ಬೆಂಬಲವನ್ನು ನೀಡಲಿದೆ. ಇದು ರಿಮೋಟ್ ಕಂಟ್ರೋಲರ್ ಅನ್ನು ಕೂಡ ಪಡೆದುಕೊಂಡಿದೆ.

ಎಲ್‌ಜಿ ಅಲ್ಟ್ರಾಗೇರ್‌ 27-ಇಂಚಿನ ಮಾನಿಟರ್

ಎಲ್‌ಜಿ ಅಲ್ಟ್ರಾಗೇರ್‌ 27-ಇಂಚಿನ ಮಾನಿಟರ್

ಎಲ್‌ಜಿ ಅಲ್ಟ್ರಾಗೇರ್‌ 27-ಇಂಚಿನ ಮಾನಿಟರ್ QHD ಸ್ಕ್ರೀನ್ ರೆಸಲ್ಯೂಶನ್‌ ಬೆಂಬಲಿಸುವ ಫ್ಲಾಟ್ OLED ಡಿಸ್ಪ್ಲೇಯನ್ನು ಹೊಂದಿದೆ. ಇದು HDR10 ಬೆಂಬಲ, 98.5% DCI-P3 ಕಲರ್‌ ಗ್ಯಾಮಟ್‌ ಮತ್ತು 0.03ms GTG ರೆಸ್ಪಾನ್ಸ್‌ ಟೈಂ ಅನ್ನು ನೀಡಲಿದೆ. ಈ ಗೇಮಿಂಗ್‌ ಮಾನಿಟರ್‌ ಕೂಡ ಕನೆಕ್ಟಿವಿಟಿ ಆಯ್ಕೆಗಳಲ್ಲಿ 2 HDMI 2.1 ಪೋರ್ಟ್‌ಗಳು, ಡಿಸ್‌ಪ್ಲೇ ಪೋರ್ಟ್, USB 3.0 ಪೋರ್ಟ್ ಮತ್ತು 4 ಪೋಲ್ ಹೆಡ್‌ಫೋನ್ ಜ್ಯಾಕ್, DTS ಹೆಡ್‌ಫೋನ್: X ಗೆ ಬೆಂಬಲವನ್ನು ನೀಡಲಿದೆ. ಇದು ರಿಮೋಟ್ ಕಂಟ್ರೋಲರ್ ಅನ್ನು ಕೂಡ ಪಡೆದುಕೊಂಡಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಎಲ್‌ಜಿ ಅಲ್ಟ್ರಾಗೇರ್‌ OLED 45 ಇಂಚಿನ ಮತ್ತು 27 ಇಂಚಿನ ಗೇಮಿಂಗ್ ಮಾನಿಟರ್‌ಗಳು CES 2023 ನಲ್ಲಿ ಲಭ್ಯವಾಗಲಿದೆ. ಅಂದರೆ ಮುಂದಿನ ವರ್ಷ ಜನವರಿ 5 ರಿಂದ ಜನವರಿ 8 ರವರೆಗೆ ದೊರೆಯಲಿವೆ. ಪ್ರಸ್ತುತ ಈ ಗೇಮಿಂಗ್‌ ಮಾನಿಟರ್‌ಗಳು US ನಲ್ಲಿ ಪ್ರೀ-ಬುಕಿಂಗ್‌ಗೆ ಸಿದ್ಧವಾಗಿವೆ. ಅದರಂತೆ ಎಲ್‌ಜಿ ಅಲ್ಟ್ರಾಗೇರ್‌ 27 ಇಂಚಿನ ಮಾನಿಟರ್‌ ಬೆಲೆ $999.99 (ಅಂದಾಜು 82,800ರೂ) ಮತ್ತು 45 ಇಂಚಿನ ಅಲ್ಟ್ರಾಗೇರ್‌ OLED ಮಾನಿಟರ್ ಬೆಲೆ $1,699.99 (ಅಂದಾಜು 1,40,800ರೂ)ಬೆಲೆಯಲ್ಲಿ ಲಭ್ಯವಾಗಲಿದೆ.

Best Mobiles in India

English summary
LG has introduced two new UltraGear OLED gaming monitors

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X