ಬಜೆಟ್ ಫೋನ್ ಎಲ್‌ಜಿ ಕೆ8 ರೂ 9,999 ಕ್ಕೆ ದೇಶದಲ್ಲಿ ಲಾಂಚ್

By: Shwetha PS

ಈ ವರ್ಷದ ಆರಂಭದಲ್ಲಿ ಎಲ್‌ಜಿಯು ಕೆ8 ಮತ್ತು ಕೆ5 ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡಿದೆ. ಈಗ ಎಲ್‌ಜಿ ಕೆ8 ಅನ್ನು ಭಾರತದಲ್ಲಿ ರೂ 9,999 ಕ್ಕೆ ಲಾಂಚ್ ಮಾಡಿದೆ. ಈ ಸ್ಮಾರ್ಟ್‌ಫೋನ್ ಎಲ್‌ಜಿ ಕೆ8 ನ ಸಕ್ಸೆಸರ್ ಆಗಿದ್ದು ಈ ಫೋನ್ 2016 ರಲ್ಲಿ ಲಾಂಚ್ ಆಗಿತ್ತು.

ಬಜೆಟ್ ಫೋನ್ ಎಲ್‌ಜಿ ಕೆ8 ರೂ 9,999 ಕ್ಕೆ ದೇಶದಲ್ಲಿ ಲಾಂಚ್

ಜನಪ್ರಿಯ ರೀಟೈಲರ್ ಹೇಳುವಂತೆ ಎಲ್‌ಜಿ ಕೆ8ಯು ಮಾಡೆಲ್ ಸಂಖ್ಯೆ X240i ನೊಂದಿಗೆ ಬಂದಿದ್ದು ಈಗ ದೇಶದಲ್ಲಿ ಈ ಫೋನ್ ರೂ 9,999 ಕ್ಕೆ ಬಿಡುಗಡೆ ಆಗಿದೆ. ಇದರ ಮಾರುಕಟ್ಟೆ ಬೆಲೆ ರೂ 11,000 ಆಗಿದೆ. ಸ್ಮಾರ್ಟ್‌ಫೋನ್ ಯಾವಾಗ ಲಭ್ಯವಾಗಲಿದೆ ಎಂಬುದು ಇನ್ನೂ ತಿಳಿದು ಬಂದಿಲ್ಲ.

ಎಲ್‌ಜಿ ಕೆ8 ಪ್ರೀಮಿಯಂ ವಿನ್ಯಾಸದೊಂದಿಗೆ ಬಂದಿದ್ದು ಇದು ಕರ್ವ್ಡ್ ಮೂಲೆಗಳನ್ನು ಹೊಂದಿದೆ. ಇದರ ವಿಶೇಷತೆಗಳತ್ತ ಗಮನ ಹರಿಸುವುದಾದರೆ ಸ್ಮಾರ್ಟ್‌ಫೋನ್ 5 ಇಂಚಿನ ಎಚ್‌ಡಿ 720 ಐಪಿಎಸ್ ಡಿಸ್‌ಪ್ಲೇಯೊಂದಿಗೆ ಬಂದಿದ್ದು 1.3GHZ ಕ್ವಾಡ್ ಕೋರ್ ಮೀಡಿಯಾಟೆಕ್ ಇದರಲ್ಲಿದೆ. ಫೋನ್ 2 ಜಿಬಿ RAM ಅನ್ನು ಪಡೆದುಕೊಂಡಿದ್ದು 16 ಜಿಬಿ ಮೆಮೊರಿ ಸ್ಮಾರ್ಟ್‌ಫೋನ್‌ನಲ್ಲಿದೆ. ಇದನ್ನು ಎಸ್‌ಡಿ ಕಾರ್ಡ್ ಬಳಸಿಕೊಂಡು 64 ಜಿಬಿಗೆ ವಿಸ್ತರಿಸಬಹುದು.

ಗೂಗಲ್ ಫ್ಯುಷನ್ ಟೇಬಲ್ ಉಪಯೋಗವೇನು..? ಬಳಸುವುದು ಹೇಗೆ..?

ಎಲ್‌ಜಿ ಕೆ8 ಕ್ಯಾಮೆರಾದತ್ತ ನೋಡುವುದಾದರೆ 13 ಎಮ್‌ಪಿ ಕ್ಯಾಮೆರಾವನ್ನು ಇದು ಹೊಂದಿದ್ದು ಎಲ್‌ಇಡಿ ಫ್ಲ್ಯಾಶ್ ಇದರಲ್ಲಿದೆ. 5 ಎಮ್‌ಪಿ ಸೆಲ್ಫಿ ಕ್ಯಾಮೆರಾವನ್ನು ಡಿವೈಸ್ ಹೊಂದಿದ್ದು ಎಲ್‌ಇಡಿ ಫ್ಲ್ಯಾಶ್ ಅನ್ನು ಫೋನ್ ಪಡೆದಿದೆ. ಎಲ್‌ಜಿ ಸ್ಮಾರ್ಟ್‌ಫೋನ್‌ನಲ್ಲಿ ಬ್ಲೂಟೂತ್ 4.2, ಎನ್‌ಎಫ್‌ಸಿ, ವೈಫೈ, ಡ್ಯುಯಲ್ ಸಿಮ್ ಬೆಂಬಲ ಇದೆ. ಆಂಡ್ರಾಯ್ಡ್ ನಾಗಟ್ ಡಿವೈಸ್‌ನಲ್ಲಿದೆ. ಎಲ್‌ಜಿ ಕೆ8 2500mAh ಬ್ಯಾಟರಿಯನ್ನು ಪಡೆದುಕೊಂಡಿದ್ದು ಇದು ಸ್ಮಾರ್ಟ್‌ಫೋನ್‌ಗೆ ಉನ್ನತ ಶಕ್ತಿಯನ್ನು ನೀಡುತ್ತಿದೆ.

ಎಲ್‌ಜಿ ಕೆ8 ಫೋನ್ ರೂ 9,999 ಕ್ಕೆ ದೇಶದಲ್ಲಿ ಲಾಂಚ್ ಆಗಿದೆ. ಈ ಫೋನ್ ಮಾರುಕಟ್ಟೆಯಲ್ಲಿರುವ ಇತರ ಬಜೆಟ್ ಫೋನ್‌ಗಳಾದ ಶ್ಯೋಮಿ ರೆಡ್ಮೀ ನೋಟ್ 4 ಗೆ ತೀವ್ರ ಪೈಪೋಟಿಯನ್ನು ನೀಡುತ್ತಿದೆ. ಮೈಕ್ರೋಮ್ಯಾಕ್ಸ್ ಕೂಡ ಇದೇ ಬೆಲೆಯಲ್ಲಿ ಕ್ಯಾನ್‌ವಾಸ್ ಇನ್‌ಫಿನಿಟಿಯನ್ನು ಲಾಂಚ್ ಮಾಡುವುದೆಂದು ಘೋಷಿಸಿದೆ.

Read more about:
English summary
LG K8 with entry-level specifications seems to have been launched in India at Rs. 9,999, claims a tipster.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot