ಎಲ್‌ಜಿ ಎಲ್25 ಫೈರ್‌ಫಾಕ್ಸ್ ಸ್ಮಾರ್ಟ್‌ಫೋನ್ ಶೀಘ್ರದಲ್ಲಿ

Written By:

ಮೊಜೈಲಾದ ಫೈರ್‌ಫಾಕ್ಸ್ ಓಎಸ್‌ಗೆ ಎಲ್‌ಜಿ ಹೊಸತೇನೂ ಅಲ್ಲ. ಈ ದಕ್ಷಿಣ ಕೊರಿಯಾದ ದೈತ್ಯ ತನ್ನ ಪ್ರಥಮ ಹಂತದ ಫೈರ್‌ಫಾಕ್ಸ್ ಹ್ಯಾಂಡ್‌ಸೆಟ್‌ನೊಂದಿಗೆ ಎಲ್‌ಜಿ ಫೈರ್‌ವೆಬ್ ಅನ್ನು ಬ್ರೆಜಿಲ್‌ನಲ್ಲಿ ಕಳೆದ ವರ್ಷ ಲಾಂಚ್ ಮಾಡಿತ್ತು.

ಇದೀಗ, ಕಂಪೆನಿಯು ಫೈರ್‌ಫಾಕ್ಸ್ ಓಎಸ್ ಆಧಾರಿತ ಸ್ಮಾರ್ಟ್‌ಫೋನ್ ಎಲ್‌ಜಿ ಎಲ್25 ನ ಚಿತ್ರಗಳನ್ನು ಬಹಿರಂಗಗೊಳಿಸಿದೆ. ಈ ಹೊಸ ಫೋನ್ ಫೈರ್‌ಫಾಕ್ಸ್ ಓಎಸ್ ಅನ್ನು ಹೊಂದಿದೆ ಎಂಬುದಂತೂ ಸುಳ್ಳಲ್ಲ.

ಭಾರತಕ್ಕೂ ಬರಲಿದೆಯೇ ಎಲ್‌ಜಿ ಎಲ್25 ಸ್ಮಾರ್ಟ್‌ಫೋನ್?

ಇದನ್ನೂ ಓದಿ: ವಾಟ್ಸಾಪ್ ಸಮಸ್ಯೆಯೇ ಇಲ್ಲಿದೆ ಪರಿಹಾರ

ಅಪ್‌ಲೀಕ್ಸ್ ಪ್ರಕಾರ, ಎಲ್‌ಜಿ ಎಲ್25 ಜಪಾನ್‌ನ ಕ್ಯಾರಿಯರ್ ಕೆಡಿಡಿಐಗೆ ಲಭ್ಯವಾಗುತ್ತಿದೆ. ದುರಾದೃಷ್ಟವಶಾತ್ ಎಲ್‌ಜಿ ಜಪಾನೀ ಮಾರುಕಟ್ಟೆ ಅಲ್ಲದೆ ಬೇರೆ ಕಡೆ ಫೋನ್ ಅನ್ನು ಬಿಡುಗಡೆ ಮಾಡುವ ನಿಟ್ಟಿನಲ್ಲಿ ಇಲ್ಲ.

ಹೊಸ ಫೋನ್‌ ಎಲ್‌ಜಿಯ ಹಳೆಯ ಉತ್ಪನ್ನಗಳಂತಿದ್ದು ಇದು ಸೀಮಿತ ಕೊಡುಗೆಗಳನ್ನು ಒಳಗೊಂಡಿದೆ. ಎಲ್‌ಜಿ ಎಲ್25 ಅನ್ನು ಕಂಪೆನಿ ಯಾವಾಗ ಬಿಡುಗಡೆ ಮಾಡುತ್ತದೆ ಎಂಬುದು ಇನ್ನೂ ಅಧಿಕೃತವಾಗಿ ಹೊರಬಿದ್ದಿಲ್ಲ ಆದರೆ ಜನವರಿ 2015 ರಂದು ನಡೆಯಲಿರುವ ಕನ್ಸ್ಯೂಮರ್ ಇಲೆಕ್ಟ್ರಾನಿಕ್ಸ್ ಶೋನಲ್ಲಿ ಸ್ಮಾರ್ಟ್‌ಫೋನ್ ಲಾಂಚ್ ಆಗುವ ಸಂಭವನೀಯತೆ ಹೆಚ್ಚಿದೆ.

English summary
This article tells about LG is no stranger to Mozilla's Firefox OS. The South Korean giant had launched its first ever entry-level Firefox handset, the LG Fireweb, in Brazil last year.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot