ಎಲ್‌ಜಿ ಕಂಪೆನಿಯಿಂದ ಈ ವರ್ಷ ಬರಲಿವೆ 14 ಹೊಸ ಸ್ಮಾರ್ಟ್‌ಟಿವಿಗಳು!

|

ಟೆಕ್‌ ವಲಯದಲ್ಲಿ ಟಿವಿ ಮಾರುಕಟ್ಟೆ ಇಂದು ಸಾಕಷ್ಟು ಕಲರ್‌ಫುಲ್‌ ಆಗಿದೆ. ಟೆಕ್ನಾಲಜಿ ಮುಂದುವರೆದಂತೆ ಸ್ಮಾರ್ಟ್‌ಟಿವಿಗಳು ಮಾರುಕಟ್ಟೆಗೆ ದಾಂಗುಡಿ ಇಡುತ್ತಿವೆ. ಹಲವಾರು ಕಂಪೆನಿಗಳು ಈಗಾಗ್ಲೆ 4K ಸ್ಕ್ರೀನ್‌ ರೆಸಲ್ಯೂಶನ್‌ ಹೊಂದಿರುವ , OLED & QLED ಸ್ಮಾರ್ಟ್‌ಟಿವಿಗಳನ್ನ ಪರಿಚಯಿಸಿವೆ. ಇವುಗಳಲ್ಲಿ ಎಲ್‌ಜಿ ಕಂಪೆನಿ ಕೂಡ ಒಂದಾಗಿದೆ. ಸದ್ಯ ಟಿವಿ ಮಾರುಕಟ್ಟೆಯಲ್ಲಿ ತನ್ನದೇ ಪ್ರಾಬಲ್ಯ ಸಾದಿಸಿರುವ ಎಲ್‌ಜಿ 2020ರ ಟಿವಿ ಲೈನ್‌ ಆಪ್‌ನಲ್ಲಿ ಹಲವಾರು ಹೊಸ ಮಾದರಿಯ ಸ್ಮಾರ್ಟ್‌ಟಿವಿಗಳನ್ನ ಪರಿಚಯಿಸುವುದಾಗಿ ಘೋಷಣೆ ಮಾಡಿದೆ.

ಹೌದು

ಹೌದು, ಎಲೆಕ್ಟ್ರಾನಿಕ್ಸ್‌ ಪ್ರಾಡಕ್ಟಗಳ ದೈತ್ಯ ಎಂದೆ ಎನಿಸಿಕೊಂಡಿರುವ ಎಲ್‌ಜಿ , ಪ್ರೀಮಿಯಿಂ ಟಿವಿ ಮಾರುಕಟ್ಟೆಯಲ್ಲಿ ತನ್ನ ಪ್ರಾಬಲ್ಯವನ್ನ ಇನ್ನಷ್ಟು ವಿಸ್ತರಿಸಲು ಪ್ಲ್ಯಾನ್‌ ರೂಪಿಸಿಕೊಂಡಿದೆ. ಇದೇ ಕಾರಣಕ್ಕಾಗಿ ಇದೀಗ 2020 ನೇ ಸಾಲಿನಲ್ಲಿ ಯಾವ್ಯವಾ ಟಿವಿ ಬಿಡುಗಡೆಯಾಗಲಿದೆ ಅನ್ನೊದನ್ನ ಘೋಷಿಸಿದ್ದು, ಈ ಸಾಲಿನಲ್ಲಿ ಬರೋಬ್ಬರಿ 14 ಹೊಸ ಒಎಲ್ಇಡಿ ವಿನ್ಯಾಸ AI ಟೆಕ್ನಾಲಜಿ ಹೊಂದಿರುವ ಸ್ಮಾರ್ಟ್‌ಟಿವಿಗಳನ್ನ ಪರಿಚಯಿಸಲಿದೆ. ಈ ಮೂಲಕ ಟಿವಿ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಮೂಡಿಸಲು ಸಿದ್ದವಾಗಿದೆ ಎಂದು ಹೇಳಲಾಗ್ತಿದೆ. ಅಷ್ಟಕ್ಕೂ ಎಲ್‌ಜಿ ಸಂಸ್ಥೆ ಬಿಡುಗಡೆ ಮಾಡಲಿರುವ ಹೊಸ ಸ್ಮಾರ್ಟ್‌ಟಿವಿಗಳು ಯಾವುವು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿ.

CX ಸರಣಿಯ 4K OLED AI ThinQ TV

CX ಸರಣಿಯ 4K OLED AI ThinQ TV

ಸದ್ಯ ಎಲ್‌ಜಿ ಬಿಡುಗಡೆ ಮಾಡಲಿರುವ ಹೊಸ ಸ್ಮಾರ್ಟ್‌ಟಿವಿಗಳಲ್ಲಿ CX ಸರಣಿಯಲ್ಲಿ ಮೂರು ಮಾದರಿಯ 4K OLED AI ThinQ ಟಿವಿಗಳು ಇದೇ ತಿಂಗಳು ದಕ್ಷಿಣ ಕೊರಿಯಾ ಮತ್ತು ಯುನೈಟೆಡ್ ಸ್ಟೇಟಸ್ನಲ್ಲಿ ಬಿಡುಗಡೆಯಾಗಲಿದೆ ಎನ್ನಲಾಗ್ತಿದೆ. ಇವುಗಳಲ್ಲಿ 55 ಮತ್ತು 65 ಇಂಚಿನ CX ಮಾದರಿಯ ಸ್ಮಾರ್ಟ್‌ಟಿವಿಗಳು ಇದೇ ಮಾರ್ಚ್‌ 18 ರಂದು ದಕ್ಷಿಣ ಕೊರಿಯಾದಲ್ಲಿ ಮಾರಾಟಕ್ಕೆ ಲಭ್ಯವಾಗಲಿದ್ದು, 77 ಇಂಚಿನ ಆವೃತ್ತಿಯ ಸ್ಮಾರ್ಟ್‌ಟಿವಿ ಮುಂದಿನ ತಿಂಗಳು ಬಿಡುಗಡೆ ಮಾಡಲಾಗುವುದು ಎಂದು ಕಂಪೆನಿ ಹೇಳಿದೆ. ಇನ್ನು 55 ಇಂಚಿನ CX ಮಾದರಿಯ TV ಬೆಲೆ ದಕ್ಷಿಣ ಕೊರಿಯಾದಲ್ಲಿ$2,340(ಅಂದಾಜು 1,73,064.ರೂ ) ಆಗಿದೆ ಎಂದು ಕಂಪನಿ ತಿಳಿಸಿದೆ.

GX ಗ್ಯಾಲರಿ ಸರಣಿಯ ಟಿವಿಗಳು

GX ಗ್ಯಾಲರಿ ಸರಣಿಯ ಟಿವಿಗಳು

ಇನ್ನು ಎಲ್‌ಜಿ ತನ್ನ GX ಗ್ಯಾಲರಿ ಆವೃತ್ತಿಯಲ್ಲಿ 55-, 65- ಮತ್ತು 77-ಇಂಚಿನ ಮೂರು ಸ್ಮಾರ್ಟ್‌ಟಿವಿಗಳನ್ನ ಇದೇ ಮಾರ್ಚ್‌ ತಿಂಗಳ ಕೊನೆಯಲ್ಲಿ ಬಿಡುಗಡೆ ಮಾಡಲಿದೆ. ಈ ಸ್ಮಾರ್ಟ್‌ಟಿವಿಗಳು ಅಲ್ಟ್ರಾಥಿನ್ ಅಂಶವನ್ನು ಹೊಂದಿವೆ ಎಂದು ಹೇಳಲಾಗ್ತಿದೆ. ಇದರಲ್ಲಿ 65 ಇಂಚಿನ ಸ್ಮಾರ್ಟ್‌ಟಿವಿ ಕೇವಲ 20 ಮಿಲಿಮೀಟರ್ ನಷ್ಟು ತೆಳ್ಳಗಿನ ವಿನ್ಯಾಸವನ್ನ ಹೊಂದಿರಲಿದೆ ಎನ್ನಲಾಗ್ತಿದೆ. ಇದಲ್ಲದೆ ಹೈ-ಎಂಡ್ 77-ಇಂಚಿನ GX ಸರಣಿಯ ಟಿವಿ 12.5 ಮಿಲಿಯನ್, 66 ಇಂಚಿನ ಟಿವಿ 5.6 ಮಿಲಿಯನ್, ಮತ್ತು 55 ಇಂಚಿನ ಟಿವಿ 3.1 ಮಿಲಿಯನ್ ಬೆಲೆಯನ್ನ ಹೊಂದಿರಲಿವೆ ಎಂದು ಅಂದಾಜಿಸಲಾಗಿದೆ.

OLED ZX ರಿಯಲ್ 8K

OLED ZX ರಿಯಲ್ 8K

ಎಲ್‌ಜಿ ಕಂಪೆನಿ ಈ ಸರಣಿಯಲ್ಲಿ 88- ಮತ್ತು 77 ಮತ್ತು ಅಲ್ಟ್ರಾಥಿನ್ 65-ಇಂಚಿನ ಮೂರು ಒಎಲ್ಇಡಿ ವಾಲ್‌ಪೇಪರ್ ಟಿವಿಯನ್ನ ಮುಂದಿನ ತಿಂಗಳು ಬಿಡುಗಡೆ ಮಾಡಲಿದೆ. ಇನ್ನು ಈ ಸ್ಮಾರ್ಟ್‌ಟಿವಿಗಳು ಈ ತಲೆಮಾರಿನ ಆಶಯಕ್ಕ್ಎ ತಕ್ಕಂತೆ ವಿನ್ಯಾಸವನ್ನ ಒಳಗೊಂಡಿರಲಿದೆ ಎನ್ನಲಾಗ್ತಿದೆ. ಇನ್ನು ಈ ಟಿವಿಗಳ ಬೆಲೆ ಎಷ್ಟು ಅನ್ನುವುದು ಇನ್ನು ತಿಳಿದು ಬಂದಿಲ್ಲ. ಆದರೆ 88 ಇಂಚಿನ ZX ಸ್ಮಾರ್ಟ್‌ಟಿವಿ ಸುಮಾರು 49 ಮಿಲಿಯನ್ ಬೆಲೆಯನ್ನ ಹೊಂದಿರುವ ನಿರೀಕ್ಷೆಯಿದೆ ಎಂದು ಹೇಳಲಾಗ್ತಿದೆ.

ಇನ್ನು

ಇನ್ನು ಈ ವರ್ಷ ಬಿಡುಗಡೆಯಾಗಲಿರುವ ಹಾಗೂ ಈಗಾಗಲೇ ಮಾರುಕಟ್ಟೆಗೆ ಎಂಟ್ರಿ ನೀಡಿರುವ ಸ್ಮಾರ್ಟ್‌ಟಿವಿಗಳಲ್ಲಿ ಹೆಚ್ಚಿನವು ಮೂರನೇ ತಲೆಮಾರಿನ AI ಪ್ರೊಸೆಸರ್ ಹೊಂದಿದ್ದು, ಉತ್ತಮ ಸಂಸ್ಕರಣಾ ಕಾರ್ಯಕ್ಷಮತೆಯನ್ನ ಒಳಗೊಂಡಿವೆ ಎಂದು ಎಲ್‌ಜಿ ಕಂಪೆನಿ ಹೇಳಿದೆ. ಇದಲ್ಲದೆ ಗೇಮಿಂಗ್ ಅನುಭವಕ್ಕಾಗಿ ಈ ಸ್ಮಾರ್ಟ್‌ಟಿವಗಳಲ್ಲಿ Nvidia ದ G-ಸಿಂಕ್ ಅನ್ನು ಹೊಂದಿಸಲಾಗಿದೆ. ಸದ್ಯ ಇಂಡಸ್ಟ್ರಿ ಟ್ರ್ಯಾಕರ್ IHS Markit,ನ ಮಾಹಿತಿಯ ಪ್ರಕಾರ, ಟಿವಿ ಮಾರುಕಟ್ಟೆಯಲ್ಲಿ ಎಲ್‌ ಜಿ ಕಂಪೆನಿ ಶೇಕಡಾ 16.3 ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದ್ದು, ಎಲ್‌ಜಿ ಕಂಪೆನಿ ಕಳೆದ ವರ್ಷ ವಿಶ್ವದ ಎರಡನೇ ಅತಿದೊಡ್ಡ ಟಿವಿ ಮಾರಾಟ ಕಂ ಪೆನಿಯಾಗಿ ಗುರ್ತಿಸಿಕೊಂಡಿದೆ. ಸದ್ಯ ಈ ವರ್ಷ ಯಾವ ರೀತಿಯ ಕಮಾಲ್‌ ಮಾಡಿದೆ ಅನ್ನೊದನ್ನ ನೋಡಬೇಕಿದೆ.

Best Mobiles in India

English summary
LG said its CX series 4K OLED AI ThinQ TVs will be available this month in South Korea and the United States, followed by markets in other regions.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X