ಎಲ್‌ಜಿ OLED 48CX ಸ್ಮಾರ್ಟ್‌ಟಿವಿ ಬಿಡುಗಡೆ! ಬೆಲೆ ಎಷ್ಟು? ವಿಶೇಷತೆ ಏನು?

|

ಎಲೆಕ್ಟ್ರಾನಿಕ್ಸ್‌ ದೈತ್ಯ ಎನಿಸಿಕೊಂಡಿರುವ ಎಲ್‌ಜಿ ಸಂಸ್ಥೆ ಸ್ಮಾರ್ಟ್‌ಟಿವಿ ವಲಯದಲ್ಲಿ ಸಾಕಷ್ಟು ಪ್ರಾಬಲ್ಯ ಸಾಧಿಸಿದೆ. ಈಗಾಗಲೇ ಹಲವು ಮಾದರಿಯ ಸ್ಮಾರ್ಟ್‌ಟಿವಿಗಳನ್ನು ಪರಿಚಯಿಸಿ ಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಸದ್ಯ ಇದೀಗ OLED ಟೆಲಿವಿಷನ್ ಶ್ರೇಣಿಯ ಭಾಗವಾಗಿ LG OLED 48CX ಟಿವಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.

LG OLED 48CX ಟಿವಿ

ಹೌದು, ಎಲ್‌ಜಿ ಕಂಪೆನಿ ತನ್ನ ಹೊಸ LG OLED 48CX ಟಿವಿಯನ್ನು ಭಾರತದಲ್ಲಿ ಲಾಂಚ್‌ ಮಾಡಿದೆ. ಈ ಸ್ಮಾರ್ಟ್‌ಟಿವಿ ಎಲ್‌ಜಿ ವೆಬ್ ಓಎಸ್ ಆಧಾರಿತ ಸ್ಮಾರ್ಟ್ ಟಿವಿ AMD ಫ್ರೀಸಿಂಕ್ ಮತ್ತು ಎನ್ವಿಡಿಯಾ ಜಿ-ಸಿಂಕ್ ಹೊಂದಾಣಿಕೆಯ ಬೆಂಬಲವನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್‌ಟಿವಿ ಆಲ್ಫಾ 9 ಜನ್ 3 ಪ್ರೊಸೆಸರ್ ಹೊಂದಿದೆ. ಇದು ಆಡಿಯೋಗಾಗಿ ಎಐ ಅಕೌಸ್ಟಿಕ್ ಟ್ಯೂನಿಂಗ್ ಮತ್ತು LGಯ 'HDR 10 ಪ್ರೊ' ಬೆಂಬಲವನ್ನು ನೀಡುತ್ತದೆ. ಇನ್ನುಳಿದಂತೆ ಈ ಸ್ಮಾರ್ಟ್‌ಟಿವಿ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಎಲ್‌ಜಿ ಒಎಲ್ಇಡಿ 48 CX ಟಿವಿ

ಎಲ್‌ಜಿ ಒಎಲ್ಇಡಿ 48 CX ಟಿವಿ 3840x2160 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 48 ಇಂಚಿನ 4K ಸ್ವಯಂ-ಬೆಳಕು ಒಎಲ್ಇಡಿ ಸ್ಕ್ರೀನ್‌ ಅನ್ನು ಹೊಂದಿದೆ. ಇನ್ನು ಈ ಟಿವಿಯು ಡಾಲ್ಬಿ ವಿಷನ್ ಐಕ್ಯೂ ಮತ್ತು ಅಟ್ಮೋಸ್ ಅನ್ನು ಸಹ ಹೊಂದಿದೆ. ಇದು ಕೋಣೆಯ ಬ್ರೈಟ್‌ನೆಸ್‌ಗೆ ಅನುಗುಣವಾಗಿ ಎಲ್‌ಜಿ ಟಿವಿಯಲ್ಲಿ ಡಾಲ್ಬಿ ವಿಷನ್ ವಿಷಯವನ್ನು ಉತ್ತಮಗೊಳಿಸುತ್ತದೆ. ವರ್ಧಿತ ಒಟ್ಟಾರೆ ಅನುಭವಕ್ಕಾಗಿ ಪ್ರದರ್ಶನವು AI ಅಕೌಸ್ಟಿಕ್ ಟ್ಯೂನಿಂಗ್ ಆಡಿಯೊದಿಂದ ಪೂರಕವಾಗಿದೆ. ಬ್ಲೂಟೂತ್ ಹೆಡ್‌ಸೆಟ್ ಅಥವಾ ಸೌಂಡ್ ಬಾರ್ ಅನ್ನು ಟಿವಿಯೊಂದಿಗೆ ಸಂಪರ್ಕಿಸಲು ಬಳಕೆದಾರರು ವೈರ್‌ಲೆಸ್ ಸೌಂಡ್ ವೈಶಿಷ್ಟ್ಯದ ಲಾಭವನ್ನು ಪಡೆಯಬಹುದು.

ಸ್ಮಾರ್ಟ್‌ಟಿವಿ

ಇನ್ನು ಈ ಸ್ಮಾರ್ಟ್‌ಟಿವಿ ಎಲ್‌ಜಿಯ ಆಲ್ಫಾ 9 ಜನ್ 3 ಪ್ರೊಸೆಸರ್ ಹೊಂದಿದೆ. ಇದಲ್ಲದೆ ಈ ಟಿವಿಯ ರಿಫ್ರೆಶ್ ದರವನ್ನು ಕನ್ಸೋಲ್ ಅಥವಾ ಪಿಸಿಯಿಂದ output ಆಗುವ ಫ್ರೇಮ್ ದರಕ್ಕೆ ಕ್ರಿಯಾತ್ಮಕವಾಗಿ ಹೊಂದಿಸುತ್ತದೆ. ಸದ್ಯ HGG ಪ್ರೊಫೈಲ್‌ನೊಂದಿಗೆ ಸಂಯೋಜಿಸಿ, ಆಟೋ-ಲೈಟ್‌ ಪಿಕ್ಸೆಲ್‌ಗಳು ಪ್ರಸ್ತುತಪಡಿಸಿದ ಪರಿಪೂರ್ಣ ಬ್ಲ್ಯಾಕ್‌ ಹೆಚ್‌ಡಿಆರ್ ಗೇಮಿಂಗ್‌ಗೆ ಉತ್ತಮ ಅನುಭವವನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ. ಇತರ ಗೇಮಿಂಗ್-ಕೇಂದ್ರಿತ ಫೀಚರ್ಸ್‌ಗಳಲ್ಲಿ ಆಟೋ ಲೋ-ಲ್ಯಾಟೆನ್ಸಿ ಮೋಡ್ ಮತ್ತು HDMI 2.1 ವಿಶೇಷಣಗಳನ್ನು ಪೂರೈಸುವ ವರ್ಧಿತ ಆಡಿಯೊ ರಿಟರ್ನ್ ಚಾನೆಲ್ ಸೇರಿವೆ. ALLM ನೊಂದಿಗೆ, ಹೊಂದಾಣಿಕೆಯ ಕನ್ಸೋಲ್ ಅನ್ನು ಸಂಪರ್ಕಿಸಿದಾಗ LG ​​OLED 48CX ನ ಕಡಿಮೆ-ಮಂದಗತಿಯ ಗೇಮ್ ಮೋಡ್ ಅನ್ನು ಸ್ವಯಂಚಾಲಿತವಾಗಿ ಆಯ್ಕೆ ಮಾಡಲಾಗುತ್ತದೆ.

ಅಮೆಜಾನ್

ಇದು ಗೂಗಲ್ ಅಸಿಸ್ಟೆಂಟ್, ಅಮೆಜಾನ್ ಅಲೆಕ್ಸಾ, ಆಪಲ್ ಏರ್‌ಪ್ಲೇ 2, ಮತ್ತು ಹೋಮ್‌ಕಿಟ್ ಬೆಂಬಲದೊಂದಿಗೆ ಇಂಟರ್‌ ಬಿಲ್ಟ್‌ ಎಲ್‌ಜಿ ಥಿಂಕ್ಯೂ ಪ್ಲಾಟ್‌ಫಾರ್ಮ್ ಅನ್ನು ಹೊಂದಿದೆ. ಅಲ್ಲದೆ ಕಂಪನಿಯ ಮ್ಯಾಜಿಕ್ ರಿಮೋಟ್‌ನೊಂದಿಗೆ ವಾಯ್ಸ್‌ ನಿಯಂತ್ರಣದೊಂದಿಗೆ ಬರುತ್ತದೆ. ಇದಲ್ಲದೆ ಈ ಸ್ಮಾರ್ಟ್‌ಟಿವಿಯು ಐ ಕಂಫರ್ಟ್ ಡಿಸ್‌ಪ್ಲೇ ವಿನ್ಯಾಸವನ್ನು ಸಹ ಹೊಂದಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಇಂಟರ್‌ಬಿಲ್ಟ್‌ ವೈ-ಫೈ ಮತ್ತು ಬ್ಲೂಟೂತ್ ವಿ 5.0, 3 USB ಪೋರ್ಟ್‌ಗಳು, 4HDMI V2.1 ಪೋರ್ಟ್‌ಗಳನ್ನು ಬೆಂಬಲಿಸಲಿದೆ.

ಎಲ್‌ಜಿ

ಸದ್ಯ ಎಲ್‌ಜಿ ಕಂಪೆನಿಯ ಎಲ್‌ಜಿ ಒಎಲ್ಇಡಿ 48CX TV ಭಾರತದ ಆಫ್‌ಲೈನ್ ರಿಟೇಲ್‌ ಸ್ಟೋರ್‌ನಲ್ಲಿ 1,99,990 ರೂ.ಬೆಲೆಯನ್ನು ಹೊಂದಿದೆ. ಎಲ್‌ಜಿ ಇಂಡಿಯಾ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಖರೀದಿಸಬಹುದಾಗಿದೆ.

Best Mobiles in India

English summary
LG OLED 48CX TV is built for gaming and high-quality content consumption.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X