ಎಲ್‌ಜಿ ಸಂಸ್ಥೆಯಿಂದ ಹೊಸ ಸ್ಮಾರ್ಟ್‌ಟಿವಿ ಲಾಂಚ್‌!..ಬೆಂಡೆಬಲ್ ಡಿಸ್‌ಪ್ಲೇ ವಿಶೇಷ!

|

ಎಲೆಕ್ಟ್ರಾನಿಕ್ಸ್‌ ದೈತ್ಯ ಎನಿಸಿಕೊಂಡಿರುವ ಎಲ್‌ಜಿ ಕಂಪೆನಿ ಸ್ಮಾರ್ಟ್‌ಟಿವಿ ಮಾರುಕಟ್ಟೆಯಲ್ಲಿ ವಿಶೇಷ ಸ್ಥಾನವನ್ನು ಪಡೆದುಕೊಂಡಿದೆ. ಸ್ಮಾರ್ಟ್‌ಟಿವಿ ವಲಯದಲ್ಲಿ ಎಲ್‌ಜಿ ಕಂಪೆನಿಯ ಪ್ರಾಡಕ್ಟ್‌ಗಳಿಗೆ ಸಾಕಷ್ಟು ಜನಪ್ರಿಯತೆಯನ್ನು ಕಾಣಬಹುದಾಗಿದೆ. ಇದೇ ಕಾರಣಕ್ಕೆ ಎಲ್‌ಜಿ ಕಂಪೆನಿ ವಿಶೇಷ ಮಾದರಿಯ ಸ್ಮಾರ್ಟ್‌ಟಿವಿಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಾ ಬಂದಿದೆ. ಸದ್ಯ ಇದೀಗ ಎಲ್‌ಜಿ ಕಂಪೆನಿ ಹೊಸದಾಗಿ ಬೆಂಡಬಲ್ ಡಿಸ್‌ಪ್ಲೇ ಹೊಂದಿರುವ LG OLED ಫ್ಲೆಕ್ಸ್ TV LX3 ಅನ್ನು ಲಾಂಚ್‌ ಮಾಡಿದೆ.

LG

ಹೌದು, ಎಲ್‌ಜಿ ಕಂಪೆನಿ ಹೊಸದಾಗಿ LG OLED ಫ್ಲೆಕ್ಸ್ TV LX3 ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಟಿವಿ 42 ಇಂಚಿನ 4K ಸ್ಕ್ರೀನ್‌ ಅನ್ನು ಹೊಂದಿದೆ, ಆದ್ದರಿಂದ ಇದನ್ನು ಫ್ಲಾಟ್ ಮತ್ತು ಕರ್ವ್ ಆಗಿ ಬಳಸಬಹುದಾಗಿದೆ. ಇನ್ನು ಈ ಸ್ಕ್ರೀನ್‌ 900R ವರೆಗೆ ಗರಿಷ್ಠ ವಕ್ರತೆಯನ್ನು ನೀಡುತ್ತದೆ. ಈ ಹೊಸ ಸ್ಮಾರ್ಟ್‌ಟಿವಿ ಗೇಮಿಂಗ್‌ಗೆ ಸೂಕ್ತವಾಗಿದೆ ಎನ್ನಲಾಗಿದೆ. ಅಲ್ಲದೆ ಈ ಸ್ಮಾರ್ಟ್‌ಟಿವಿಯನ್ನು ಕಂಪ್ಯೂಟರ್ ಮಾನಿಟರ್‌ನಂತೆ ಸುಲಭವಾಗಿ ಬಳಸಬಹುದು. ಇನ್ನುಳಿದಂತೆ ಈ ಸ್ಮಾರ್ಟ್‌ಟಿವಿಯ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಮುಂದೆ ಓದಿರಿ.

OLED

ಎಲ್‌ಜಿ ಕಂಪೆನಿಯ OLED ಫ್ಲೆಕ್ಸ್ ಟಿವಿ LX3 ಬೆಂಡೆಬಲ್ ಡಿಸ್‌ಪ್ಲೇಯನ್ನು ಹೊಂದಿದ್ದು, ಗರಿಷ್ಠ 900R ವಕ್ರತೆಯನ್ನು ಹೊಂದಿದೆ. ಈ ಸ್ಮಾರ್ಟ್‌ಟಿವಿಯ ವಕ್ರತೆಯನ್ನು ರಿಮೋಟ್ ಬಳಸಿಕೊಂಡು ಆಟೋಮ್ಯಾಟಿಕ್‌ ಆಗಿ ಎರಡು ಪೂರ್ವನಿಗದಿಗಳಲ್ಲಿ ಒಂದಕ್ಕೆ ಸೆಟ್‌ ಮಾಡಬಹುದಾಗಿದೆ. ಆದರೆ ಬಳಕೆದಾರರು 5% ಏರಿಕೆಗಳಲ್ಲಿ ಹಸ್ತಚಾಲಿತವಾಗಿ ಸ್ಕ್ರೀನ್‌ ಅನ್ನು ಸರಿಹೊಂದಿಸಬಹುದಾಗಿದೆ. ಇದರಲ್ಲಿ 20 ವಿಭಿನ್ನ ಹಂತದ ವಕ್ರತೆಯನ್ನು ಕ್ರಿಯೆಟ್‌ ಮಾಡಬಹುದಾಗಿದೆ. ಇದು ನೋಡುವ ಕೋನಗಳ ಮತ್ತಷ್ಟು ಕಸ್ಟಮೈಸೇಶನ್ನಗಾಗಿ ಸ್ಕ್ರೀನ್‌ ಟಿಲ್ಟ್ ಮತ್ತು ಎತ್ತರದ ಹೊಂದಾಣಿಕೆಯನ್ನು ಸಹ ಹೊಂದಿದೆ.

ಸ್ಮಾರ್ಟ್‌ಟಿವಿ

ಇನ್ನು ಈ ಸ್ಮಾರ್ಟ್‌ಟಿವಿ 42 ಇಂಚಿನ ಗಾತ್ರದ ಆಯ್ಕೆಯಲ್ಲಿ ಲಭ್ಯವಾಗಲಿದೆ. ಇದು ಡಾಲ್ಬಿ ವಿಷನ್ ಮತ್ತು ಡಾಲ್ಬಿ ಅಟ್ಮಾಸ್‌ಗೆ ಬೆಂಬಲವನ್ನು ನೀಡಲಿದೆ. ಈ ಡಿಸ್‌ಪ್ಲೇ 120Hz ರೆಸಲ್ಯೂಶನ್ ಅನ್ನು ಒಳಗೊಂಡಿದೆ. ಇನ್ನು ಈ ಸ್ಮಾರ್ಟ್‌ಟಿವಿಯಲ್ಲಿ ವೇರಿಯಬಲ್ ರಿಫ್ರೆಶ್ ರೇಟ್, ಆಟೋ ಲೋ ಲೇಟೆನ್ಸಿ ಮೋಡ್ ಮತ್ತು ಜಿ-ಸಿಂಕ್ ಮತ್ತು ಎಎಮ್‌ಡಿ ಫ್ರೀಸಿಂಕ್‌ಗಾಗಿ ಹೊಂದಾಣಿಕೆಯಂತಹ ಇತರ ಗೇಮಿಂಗ್-ನಿರ್ದಿಷ್ಟ ಫೀಚರ್ಸ್‌ಗಳನ್ನು ಹೊಂದಿದೆ.

OLED

LG OLED ಫ್ಲೆಕ್ಸ್ ಟಿವಿಯನ್ನು ಗೇಮಿಂಗ್‌ಗಾಗಿ ಬಳಸಬಹುದಾಗಿದೆ. ಇದರ ಫ್ಲಾಟ್ ಅಥವಾ ಬಾಗಿದ ಪ್ರದರ್ಶನದಂತೆ ಇದನ್ನು ಬಳಸುವುದಕ್ಕೆ ಸೂಕ್ತವಾಗಿದೆ. ಈ ಸ್ಮಾರ್ಟ್‌ಟಿವಿಯು LG ಅಲ್ಪಾ 9 ನೇ ತಲೆಮಾರಿನ 5 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದರಲ್ಲಿ ಸೌಂಡ್‌ಗಾಗಿ ಫ್ರಂಟ್-ಫೈರಿಂಗ್ 40W ಸ್ಪೀಕರ್ ವ್ಯವಸ್ಥೆಯನ್ನು ಹೊಂದಿದೆ. ಇನ್ನು ಎಲ್‌ಜಿ ಒಲ್‌ಇಡಿ ಫ್ಲೆಕ್ಸ್‌ TV LX3 ಸ್ಮಾರ್ಟ್‌ಟಿವಿಯ ನಿಖರ ಬೆಲೆ ಎಷ್ಟು ಅನ್ನೊದರ ವಿವರಗಳನ್ನು ಘೋಷಿಸಿಲ್ಲ. ಆದರೆ ಇದು ಜರ್ಮನಿಯ ಬರ್ಲಿನ್‌ನಲ್ಲಿ ಸೆಪ್ಟೆಂಬರ್ 2 ರಿಂದ 6 ರವರೆಗೆ ನಡೆಯಲಿರುವ IFA 2022 ನಲ್ಲಿ ಪ್ರದರ್ಶನಗೊಳ್ಳಲಿದೆ. ಇದಾದ ನಂತರ ಭಾರತಕ್ಕೂ ಎಂಟ್ರಿ ನೀಡುವ ಸಾಧ್ಯತೆಯಿದೆ.

ಎಲ್‌ಜಿ

ಇದಲ್ಲದೆ ಎಲ್‌ಜಿ ಕಂಪೆನಿ ಇತ್ತೀಚಿಗೆ ಭಾರತದಲ್ಲಿ ತನ್ನ OLED ಟಿವಿ 2022 ಸರಣಿಯನ್ನು ಪರಿಚಯಿಸಿದೆ. ಈ ಸರಣಿಯಲ್ಲಿ 42 ಇಂಚಿನ OLED ಟಿವಿಯಿಂದ 97 ಇಂಚಿನ OLED ಟಿವಿಯನ್ನು ಕೂಡ ಕಾಣಬಹುದಾಗಿದೆ. ಇನ್ನು ಎಲ್‌ಜಿ ಪರಿಚಯಿಸಿರುವ ಹೊಸ ಸರಣಿಯು 42 ಇಂಚಿನಿಂದ ಬೃಹತ್ 97 ಇಂಚಿನ ಟಿವಿಗಳು ಒಳಗೊಂಡಿದೆ. ಇನ್ನು ಎಲ್‌ಜಿ G2 ಸರಣಿಯು 55 ಇಂಚಿನ ಮತ್ತು 65 ಇಂಚಿನ ಮಾದರಿಗಳಲ್ಲಿ ಲಭ್ಯವಿರುತ್ತದೆ.

ಸರಣಿಯು

ಇನ್ನು LG ಯ C2 ಸರಣಿಯು 2022 ಶ್ರೇಣಿಯು ಒಟ್ಟು ಆರು ಆಯ್ಕೆಗಳೊಂದಿಗೆ ನೀಡುತ್ತದೆ. ಇದರಲ್ಲಿ C2 ಸರಣಿಯ ಮೊದಲ 42 ಇಂಚಿನ OLED ಟಿವಿಯನ್ನು ಸಹ ಪಡೆಯುತ್ತದೆ. ಇತರ ಆಯ್ಕೆಗಳಲ್ಲಿ 97 ಇಂಚಿನ, 83-ಇಂಚಿನ, 77-ಇಂಚಿನ, 65-ಇಂಚಿನ, 55-ಇಂಚಿನ, 48-ಇಂಚಿನ ಟಿವಿಗಳು ಸೇರಿವೆ. ಜೊತೆಗೆ B2 OLED ಟಿವಿ ಸರಣಿಯು 65 ಇಂಚಿನ ಮತ್ತು 55 ಇಂಚಿನ ಎರಡು ಸ್ಕ್ರೀನ್‌ ಗಾತ್ರಗಳಲ್ಲಿ ಬರಲಿದೆ. ಇನ್ನು A2 ಸರಣಿಯು 65-ಇಂಚಿನ, 55-ಇಂಚಿನ ಮತ್ತು 48-ಇಂಚಿನ ಮೂರು ಪರದೆಯ ಗಾತ್ರಗಳಲ್ಲಿ ಲಭ್ಯವಿರುತ್ತದೆ.

Most Read Articles
Best Mobiles in India

Read more about:
English summary
LG OLED Flex TV LX3 With Bendable Display Launched

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X