ಈ ಸ್ಮಾರ್ಟ್‌ಫೋನ್ 16 ಕ್ಯಾಮೆರಾಗಳನ್ನು ಹೊಂದಿದೆ ಎಂದರೆ ಆಶ್ಚರ್ಯವಾಗಲೇಬೇಕು!!

|

ಒಂದು, ಎರಡು, ಮೂರು ಕ್ಯಾಮೆರಾಗಳಿರುವ ಸ್ಮಾರ್ಟ್‌ಫೋನ್ ನೋಡಿದ್ದ ನಮಗೆ ನಾಲ್ಕು ಕ್ಯಾಮೆರಾಗಳ ಸ್ಮಾರ್ಟ್‌ಪೋನ್ ಇತ್ತೀಚಿಗೆ ಬಿಡುಗಡೆಯಾಗಿ ಆಶ್ಚರ್ಯ ಮೂಡಿಸಿತ್ತು. ಆದರೆ, ನಾವು ಇಂದು ನಿಮಗೆ ಹೇಳುವ ಒಂದು ಸುದ್ದಿ ನಿಮ್ಮನ್ನು ಬೆಚ್ಚಿಬೀಳಿಸಬಹುದು. ಏಕೆಂದರೆ, 16 ಕ್ಯಾಮೆರಾಗಳನ್ನು ಹೊಂದಿರುವ ಹೊಸ ಮೊಬೈಲ್ ಇನ್ನೇನು ಮೊಬೈಲ್ ಮಾರುಕಟ್ಟೆಗೆ ಕಾಲಿಡಲಿದೆ.

ಹೌದು, ಕೊರಿಯನ್ ತಂತ್ರಜ್ಞಾನ ದೈತ್ಯ ಎಲ್‌ಜಿ ಸಂಸ್ಥೆಯು ಹದಿನಾರು ಕ್ಯಾಮೆರಾ ಹೊಂದಿರುವ ಸ್ಮಾರ್ಟ್‌ಫೋನ್ ತಯಾರಿಸಲು ಪೇಟೆಂಟ್ ಪಡೆದಿದೆ. ಸ್ಮಾರ್ಟ್‌ಫೋನ್‌ನಲ್ಲಿ ಹೊಸ ಹೊಸ ಮಾದರಿಯ ಕ್ಯಾಮೆರಾ ಅಳವಡಿಸುವ ಸ್ಪರ್ಧೆಯಲ್ಲಿ ಎಲ್.ಜಿ. ಸಂಸ್ಥೆಯು ಪ್ರಯತ್ನಿಸುತ್ತಿದ್ದು, ಇದೀಗ ಮೊಬೈಲ್ ಮಾರುಕಟ್ಟೆಯಲ್ಲಿ ಮತ್ತೊಂದು ದೊಡ್ಡ ಬದಲಾವಣೆ ತರಲು ಮುಂದಾಗಿದೆ.

ಈ ಸ್ಮಾರ್ಟ್‌ಫೋನ್ 16 ಕ್ಯಾಮೆರಾಗಳನ್ನು ಹೊಂದಿದೆ ಎಂದರೆ ಆಶ್ಚರ್ಯವಾಗಲೇಬೇಕು!!

ಹದಿನಾರು ಕ್ಯಾಮೆರಾ ಹೊಂದಿರುವ ಸ್ಮಾರ್ಟ್‌ಫೋನ್‌ಗೆ ಅಮೆರಿಕಾದ ಪೇಟೆಂಟ್ ಕಚೇರಿಯಿಂದ ಪೇಟೆಂಟ್ ಪಡೆದಿರುವ ಎಲ್‌ಜಿ ಸಂಸ್ಥೆ, ಅದನ್ನು ಸಾಧಿಸಲು ಹೆಕ್ಸಾಡೆಸಿಮಲ್ ಕ್ಯಾಮೆರಾಗಳನ್ನು ಉಪಯೋಗಿಸುವ ಇರಾದೆಯಲ್ಲಿದೆ. ಇದರಲ್ಲಿ ವಿವಿಧ ಮಟ್ಟದ ಫೋಕಲ್ ಲೆಂತ್ ಇರುವ ಒಟ್ಟು ಹದಿನಾರು ಮಸೂರಗಳನ್ನು ಅಳಡವಡಿಸಲಾಗುವುದು ಎಂದು ಎಲ್‌ಜಿ ಸಂಸ್ಥೆಯು ತಿಳಿಸಿದೆ.

ಫೋನಿನ ವಿವಿಧ ಕೋನಗಳನ್ನು ಉಪಯೋಗಿಸಿಕೊಂಡು ದೃಶ್ಯಗಳನ್ನು ಸೆರೆಹಿಡಿಯಬಲ್ಲ ಈ ಲೆನ್ಸ್‌ಗಳು ಕೊನೆಯಲ್ಲಿ ಇಮೇಜ್ ಸಿಂಕ್ರೊನೈಸ್‌ಗೆ ಸಹಕರಿಸುತ್ತವೆ. ಯಾವುದಾರೂ ಒಂದು ಲೆನ್ಸ್ ಉಪಯೋಗಿಸಿ ಚಿತ್ರವನ್ನು ಚಿತ್ರೀಕರಿಸುವ ಆಯ್ಕೆಯ ಜೊತೆಗೆ ಯಾವ ಲೆನ್ಸ್‌ನಿಂದ ಉತ್ತಮ ಚಿತ್ರ ರೂಪಿಸಬಹುದು ಎಂದು ಬಳಕೆದಾರರೇ ನಿರ್ಧರಿಸುವ ಅವಕಾಶವೂ ದೊರೆಯಲಿದೆ.

ಈ ಸ್ಮಾರ್ಟ್‌ಫೋನ್ 16 ಕ್ಯಾಮೆರಾಗಳನ್ನು ಹೊಂದಿದೆ ಎಂದರೆ ಆಶ್ಚರ್ಯವಾಗಲೇಬೇಕು!!

ವೈಡ್ ಆಂಗಲ್ ಚಿತ್ರಗಳು, ಪೋಟ್ರೇಟ್ ಚಿತ್ರಗಳು, ಪನೋರಮಾ, ಜೂಮ್, ಭಾಗಶಃ ಫೋಕಸಿಂಗ್, ಪಿಕ್ಚರ್ ಇನ್ ಪಿಕ್ಚರ್ ಮೊದಲಾದ ಸಾಧ್ಯತೆಗಳನ್ನು ಇಂತಹ ಸಂಕೀರ್ಣ ವ್ಯವಸ್ಥೆಯಲ್ಲಿ ಒದಗಿಸಲು ಸಾಧ್ಯ ಎಂದು ಹೇಳಲಾಗಿದ್ದು, ಹದಿನಾರು ಕ್ಯಾಮೆರಾ ಹೊಂದಿರುವ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಬಂದಾಗ ಆ ಸ್ಮಾರ್ಟ್‌ಫೋನ್ ಹೇಗಿರಲಿದೆ ಎಂಬುದೇ ಕುತೋಹಲವಾಗಿದೆ.

ಭಾರತದಲ್ಲಿನ್ನು ಪ್ರಚಂಡ ವೇಗದಲ್ಲಿ ಅಂತರ್ಜಾಲ ಲಭ್ಯ!!..ಏಕೆ ಗೊತ್ತಾ?

ಭಾರತದಲ್ಲಿನ್ನು ಪ್ರಚಂಡ ವೇಗದಲ್ಲಿ ಅಂತರ್ಜಾಲ ಲಭ್ಯ!!..ಏಕೆ ಗೊತ್ತಾ?

ಭಾರತದಲ್ಲಿ ಉಪಗ್ರಹ ಆಧಾರಿತ ಬ್ರಾಡ್‌ಬ್ಯಾಂಡ್ ಸೇವೆಯನ್ನು ನೀಡುವಲ್ಲಿ ಮಹತ್ವದ ಪಾತ್ರ ವಹಿಸಲಿರುವ ಜಿಸ್ಯಾಟ್ 11 ಉಪಗ್ರಹವನ್ನು ಇಸ್ರೊ ಯಶಸ್ವಿಯಾಗಿ ಉಡಾವಣೆ ಮಾಡಿದೆ. ಫ್ರಾನ್ಸ್‌ನ ಜಿಯಾನಾದ ಕೌರೌ ನಲ್ಲಿರುವ ಏರಿಯನ್ ಲಾಂಚ್ ಕಾಂಪ್ಲೆಕ್ಸ್ ನಲ್ಲಿ ಬುಧವಾರ ಬೆಳಗ್ಗಿನ ಜಾವ 2.0ಕ್ಕೆ(ಸ್ಥಳೀಯ ಕಾಲಮಾನದಲ್ಲಿ) ಉಪಗ್ರಹವನ್ನು ಉಡಾವಣೆ ಮಾಡಲಾಗಿದೆ.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಈ ವರೆಗೂ ನಿರ್ಮಿಸಿರುವ ಉಪಗ್ರಹಗಳಲ್ಲಿ ಈ ಜಿಸ್ಯಾಟ್ 11 ಉಪಗ್ರಹ ಅತ್ಯಂತ ದೈತ್ಯ ಮತ್ತು ಹೆಚ್ಚು ತೂಕದ ಉಪಗ್ರಹವಾಗಿದೆ. 'ಭಾರತದ ಅತ್ಯಂತ ತೂಕದ, ಮತ್ತು ಅತ್ಯಂತ ಶಕ್ತಿಯುತ ಉಪಗ್ರಹವನ್ನು ಇಂದು ಉಡಾವಣೆ ಮಾಡಲಾಯಿತು' ಎಂದು ಇಸ್ರೋ ಅಧ್ಯಕ್ಷ ಕೆ ಶಿವನ್ ಉಡಾವಣೆಯ ನಂತರ ಹೇಳಿದ್ದಾರೆ.

ಇದುವರೆಗೆ ಉಡ್ಡಯನ ಮಾಡಲಾದ ಅತೀ ಭಾರದ ಉಪಗ್ರಹ ಎಂಬ ಖ್ಯಾತಿಗೆ ಪಾತ್ರವಾಗಿರುವ ಜಿಸ್ಯಾಟ್ -11 5870 ಕೆಜಿ ತೂಕವಿದೆ. ಹಾಗಾದರೆ, ಇಂದು ಉಡಾವಣೆ ಮಾಡಲಾಗಿರುವ ಜಿಸ್ಯಾಟ್ 11 ಉಪಗ್ರಹದ ಉಪಯೋಗಗಳು ಯಾವುವು? ಬ್ರಾಡ್‌ಬ್ಯಾಂಡ್ ಸೇವೆಗೆ ಹೇಗೆ ಸಹಕಾರಿ? ಫ್ರಾನ್ಸ್‌ನಲ್ಲಿ ಉಪಗ್ರಹವನ್ನು ಉಡಾವಣೆ ಮಾಡಿದ್ದು ಏಕೆ ಎಂದು ಮುಂದೆ ಓದಿ ತಿಳಿಯಿರಿ.

 ಫ್ರಾನ್ಸ್‌ನಲ್ಲಿ ಉಪಗ್ರಹ ಉಡಾವಣೆ ಏಕೆ?

ಫ್ರಾನ್ಸ್‌ನಲ್ಲಿ ಉಪಗ್ರಹ ಉಡಾವಣೆ ಏಕೆ?

ದೇಶದ ಅತೀ ಭಾರದ ಉಪಗ್ರಹ ಎಂಬ ಖ್ಯಾತಿಗೆ ಪಾತ್ರವಾಗಿರುವ ಜಿಸ್ಯಾಟ್ 11 ಉಪಗ್ರಹದ ತೂಕ 5870 ಕೆಜಿ ತೂಕವಿದೆ. 5870 ಕೆಜಿ ತೂಕದ ಉಪಗ್ರಹವನ್ನು ಹೊತ್ತೊಯ್ಯುವ ಸಾಮರ್ಥ್ಯವಿರುವ ರಾಕೆಟ್ ಇಸ್ರೊ ಬಳಿ ಇಲ್ಲವಾದ್ದರಿಂದ ಐರೋಪ್ಯ ಬಾಹ್ಯಾಕಾಶ ಸಂಸ್ಥೆಯ ಯ್ಯಾರಿಯಾನ್ 5 ರಾಕೆಟ್ ಮೂಲಕ ಜಿಸ್ಯಾಟ್ 11 ಅನ್ನು ಉಡಾವಣೆ ಮಾಡಲಾಗಿದೆ.

ಜಿಸ್ಯಾಟ್ 11 ಉಪಯೋಗಗಳು ಯಾವುವು?

ಜಿಸ್ಯಾಟ್ 11 ಉಪಯೋಗಗಳು ಯಾವುವು?

ಜಿಸ್ಯಾಟ್ 11 ಉಪಗ್ರಹದ ಸಹಾಯದಿಂದ ಇನ್ಮುಂದೆ ಡಿಶ್ ಆಂಟೆನಾ ಮೂಲಕ ಮನೆಗೆ ಉಪಗ್ರಹ ಬ್ರಾಡ್‌ಬ್ಯಾಂಡ್ ಸಂಪರ್ಕವನ್ನು ಪಡೆಯಬಹುದಾಗಿದೆ. ದೇಶದ ಯಾವುದೇ ಮೂಲೆಯಲ್ಲೂ ಬ್ರಾಡ್‌ಬ್ಯಾಂಡ್ ಸಂಪರ್ಕ ಸಾಧ್ಯವಾಗಲಿದೆ. ಇಷ್ಟು ಮಾತ್ರವಲ್ಲದೆ ವಿಮಾನದಲ್ಲೂ ಸಹ ಅಂತರ್ಜಾಲವನ್ನು ಒದಗಿಸಲು ಸಹ ಜಿಸ್ಯಾಟ್ 11 ಉಪಗ್ರಹ ಸಾಮರ್ಥ್ಯವನ್ನು ಹೊಂದಿದೆ.

ಪ್ರಚಂಡ ವೇಗದಲ್ಲಿ ಅಂತರ್ಜಾಲ!

ಪ್ರಚಂಡ ವೇಗದಲ್ಲಿ ಅಂತರ್ಜಾಲ!

ಜಿಸ್ಯಾಟ್ 11 ಉಪಗ್ರಹ ಇಡೀ ದೇಶಕ್ಕೆ ಪ್ರಚಂಡ ವೇಗದಲ್ಲಿ ಅಂತರ್ಜಾಲವನ್ನು ಒದಗಿಸಲಿದೆ. ಇಡೀ ದೇಶಕ್ಕೆ ಹಲವು ಇನ್ಫ್ರಾರೆಡ್ ಕಿರಣಗಳನ್ನು ಬಳಿಸಿ ಅಂತರ್ಜಾಲವನ್ನು ನೀಡುತ್ತಿದೆ. ಈ ಕಿರಣಗಳ ವ್ಯಾಪ್ತಿ ತೀರಾ ಕಡಿಮೆ ಇದ್ದು, ಸಾಮರ್ಥ್ಯ ಅಧಿಕವಾಗಿರುತ್ತದೆ. ಹೀಗಾಗಿ, ಜಿಸ್ಯಾಟ್ 11 ಉಪಗ್ರಹದ ಮೂಲಕ ದತ್ತಾಂಶಗಳನ್ನು ಪ್ರಚಂಡ ವೇಗದಲ್ಲಿ ಎಲ್ಲೆಡೆ ಪಡೆಯಬಹುದಾಗಿದೆ.

ಅಂತರ್ಜಾಲ ವೇಗ ಎಷ್ಟು?

ಅಂತರ್ಜಾಲ ವೇಗ ಎಷ್ಟು?

ಈ ಉಪಗ್ರಹ ಕಾರ್ಯಾರಂಭ ಮಾಡಿ, ಸಾರ್ವಜನಿಕ ಸೇವೆಗೆ ಲಭ್ಯವಾದರೆ 16 ಜಿಬಿಪಿಎಸ್ ವೇಗದ ಅಂತರ್ಜಾಲ ಸೇವೆ ಸಿಗಲಿದೆ. 16 ಜಿಬಿಪಿಎಸ್ ಎಂದರೆ ಒಂದು ಸೆಕೆಂಡ್‌ಗೆ 16GB ಡೇಟಾ ರವಾನೆಯಾಗಲಿದೆ. ಉಪಗ್ರಹದ ಕಿರಣಗಳು ದೇಶದ 16 ಸ್ಥಳಗಳಲ್ಲಿ ಕೇಂದ್ರೀಕೃತವಾಗುವುದರಿಂದ ದೇಶದ ಎಲ್ಲಾ ಭಾಗಗಳಲ್ಲೂ ಒಂದೇ ವೇಗದ ಅಂತರ್ಜಾಲ ಸೇವೆ ಲಭ್ಯವಾಗಲಿದೆ.

ಜಿಸ್ಯಾಟ್ 11 ಉಪಗ್ರಹದ ವಿಶೇಷತೆ ಏನು?

ಜಿಸ್ಯಾಟ್ 11 ಉಪಗ್ರಹದ ವಿಶೇಷತೆ ಏನು?

ಭಾರತದಲ್ಲಿ ಈ ಹಿಂದಿನ ಉಪಗ್ರಹಗಳಲ್ಲಿ ವಿಸ್ರೃತ ಏಕ ಇನ್ಫ್ರಾರೆಡ್ ಕಿರಣವನ್ನು ಬಳಸಲಾಗುತ್ತಿತ್ತು. ಇಡೀ ದೇಶಕ್ಕೆ ಒಂದೇ ಕಿರಣದ ಸಂಪರ್ಕ ಏರ್ಪಡುತ್ತಿದ್ದರಿಂದ ಕಿರಣದ ಸಾಮರ್ಥ್ಯ ದುರ್ಬಲವಾಗುತ್ತಿತ್ತು. ಆದರೆ, ಜಿಸ್ಯಾಟ್ 11 ಉಪಗ್ರಹ 32 ಕಿರಣಗಳ ಮೂಲಕ ದೇಶದಲ್ಲಿ ಹಲವೆಡೆ ಸಂಪರ್ಕವನ್ನು ನೀಡುತ್ತದೆ. ಇದರಿಂದ ಅಂತರ್ಜಾಲದ ವೇಗ ಭಾರೀ ಹೆಚ್ಚಾಗಲಿದೆ.

ಇಸ್ರೋ ಅಧ್ಯಕ್ಷರು ಹೇಳಿದ್ದೇನು?

ಇಸ್ರೋ ಅಧ್ಯಕ್ಷರು ಹೇಳಿದ್ದೇನು?

"ಜಿಸ್ಯಾಟ್ -11 ಉಪಗ್ರಹವು ಭಾರತದ ಶ್ರೀಮಂತ ಆಸ್ತಿ. ಇದು ದೇಶದ ದೂರ ದೂರದ ಪ್ರದೇಶಗಳಲ್ಲೂ ಸೆಕೆಂಡಿಗೆ 16 ಜಿಬಿ ಡೆಟಾ ಲಿಂಕ್ ಸರ್ವಿಸ್ ನೀಡಲು ಸಮರ್ಥವಾಗಿದೆ. ಉಪಗ್ರಹದ ಎಂಜಿನ್ ಸಹಾಯದಿಂದ ಒಟ್ಟು ಮೂರು ಹಂತಗಳಲ್ಲಿ ಉಪಗ್ರಹವನ್ನು ಭೂಸ್ಥಿರ ಕಕ್ಷೆಗೆ ವಾರ್ಗಾವಣೆ ಮಾಡಲಾಗುವುದು ಎಂದು ಇಸ್ರೋ ಅಧ್ಯಕ್ಷ ಕೆ ಶಿವನ್ ಅವರು ಹೇಳಿದ್ದಾರೆ.

ಜಿಸ್ಯಾಟ್ 11 ಉಪಯೋಗಗಳು ಯಾವುವು?

ಜಿಸ್ಯಾಟ್ 11 ಉಪಯೋಗಗಳು ಯಾವುವು?

ಜಿಸ್ಯಾಟ್ 11 ಉಪಗ್ರಹದ ಸಹಾಯದಿಂದ ಇನ್ಮುಂದೆ ಡಿಶ್ ಆಂಟೆನಾ ಮೂಲಕ ಮನೆಗೆ ಉಪಗ್ರಹ ಬ್ರಾಡ್‌ಬ್ಯಾಂಡ್ ಸಂಪರ್ಕವನ್ನು ಪಡೆಯಬಹುದಾಗಿದೆ. ದೇಶದ ಯಾವುದೇ ಮೂಲೆಯಲ್ಲೂ ಬ್ರಾಡ್‌ಬ್ಯಾಂಡ್ ಸಂಪರ್ಕ ಸಾಧ್ಯವಾಗಲಿದೆ. ಇಷ್ಟು ಮಾತ್ರವಲ್ಲದೆ ವಿಮಾನದಲ್ಲೂ ಸಹ ಅಂತರ್ಜಾಲವನ್ನು ಒದಗಿಸಲು ಸಹ ಜಿಸ್ಯಾಟ್ 11 ಉಪಗ್ರಹ ಸಾಮರ್ಥ್ಯವನ್ನು ಹೊಂದಿದೆ.

Best Mobiles in India

English summary
he South Korean company -- whose V40 ThinQ has five cameras -- might be working on a camera with as many as 16 lenses, according to US patent 10,135,963, which was awarded on Nov. 20.. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X