ಎಲ್‌ಜಿ ಕಂಪೆನಿಯ ಮೊದಲ ಸ್ಮಾರ್ಟ್‌ ಮಾನಿಟರ್‌ ಲಾಂಚ್‌! ವಾವ್ಹ್‌ ಎನಿಸುವ ಫೀಚರ್ಸ್‌!

|

ಎಲೆಕ್ಟ್ರಾನಿಕ್ಸ್‌ ದೈತ್ಯ ಎಲ್‌ಜಿ ಕಂಪೆನಿ ತನ್ನ ಮೊದಲ ಸ್ಮಾರ್ಟ್‌ ಮಾನಿಟರ್‌ ಅನ್ನು ಪರಿಚಯಿಸಿದೆ. ಇದನ್ನು LG ಸ್ಮಾರ್ಟ್ ಮಾನಿಟರ್ 32SQ780S ಎಂದು ಹೆಸರಿಸಲಾಗಿದೆ. ಇನ್ನು ಈ ಸ್ಮಾರ್ಟ್‌ ಮಾನಿಟರ್‌ 32 ಇಂಚಿನ LCD ಸ್ಕ್ರೀನ್‌ ಹೊಂದಿದೆ. ಈ ಮಾನಿಟರ್ webOS 22ನಲ್ಲಿ ಕಾರ್ಯನಿರ್ವಹಿಸಲಿದೆ. ಇದರಿಂದ ನೀವು ಎಲ್ಲಾ ಪ್ರಮುಖ ಸ್ಟ್ರೀಮಿಂಗ್‌ ಪ್ಲಾಟ್‌ಫಾರ್ಮ್‌ಗಳಿಗೆ ಪ್ರವೇಶವನ್ನು ಪಡೆಯಲು ಸಾಧ್ಯವಾಗಲಿದೆ.

LG

ಹೌದು, ಎಲ್‌ಜಿ ಕಂಪೆನಿ ತನ್ನ ಮೊದಲ ಸ್ಮಾರ್ಟ್‌ ಮಾನಿಟರ್‌ LG ಸ್ಮಾರ್ಟ್ ಮಾನಿಟರ್ 32SQ780S ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಇದು ThinkQ ಹೋಮ್, ಮ್ಯಾಜಿಕ್ ರಿಮೋಟ್ ಸೇರಿದಂತೆ LG ಸ್ಮಾರ್ಟ್ ಟಿವಿಗಳಲ್ಲಿ ಲಭ್ಯವಿರುವ ಎಲ್ಲಾ ಮಾದರಿಯ ಫೀಚರ್ಸ್‌ಗಳನ್ನು ಕೂಡ ಒಳಗೊಂಡಿದೆ. ಜೊತೆಗೆ ಆಪಲ್‌ ಏರ್‌ಪ್ಲೇ 2 ಗೆ ಬೆಂಬಲವನ್ನು ಕೂಡ ನೀಡಲಿದೆ. ಇನ್ನುಳಿದಂತೆ ಈ ಹೊಸ ಸ್ಮಾರ್ಟ್‌ ಮಾನಿಟರ್‌ ವಿಶೇಷತೆ ಏನಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಮಾನಿಟರ್

LG ಸ್ಮಾರ್ಟ್ ಮಾನಿಟರ್ 32SQ780S 32 ಇಂಚಿನ LCD ಡಿಸ್‌ಪ್ಲೇಯನ್ನು ಹೊಂದಿದೆ. ಇದು 60Hz ರಿಫ್ರೆಶ್ ರೇಟ್‌ ಬೆಂಬಲಿಸಲಿದೆ. ಈ ಡಿಸ್‌ಪ್ಲೇ 3840 x 2160 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಡಿಸ್‌ಪ್ಲೇ DCI-P3 ಕಲರ್‌ ಗ್ಯಾಮಟ್‌ 90% ವರೆಗೆ ನೀಡಲಿದೆ. LG ಸ್ಮಾರ್ಟ್ ಮಾನಿಟರ್ 32SQ780S LG ಯ ಎರ್ಗೋ ಸ್ಟ್ಯಾಂಡ್‌ನೊಂದಿಗೆ ಬರುತ್ತದೆ. ಇದು ಸ್ವಿವೆಲ್, ಪಿವೋಟ್, ಎಕ್ಸ್‌ಟೆಂಡ್‌, ಎತ್ತರ ಮತ್ತು ಟಿಲ್ಟ್‌ನಂತಹ ಮಲ್ಟಿಪಲ್‌ ಅಡ್ಜೆಸ್ಟ್‌ಮೆಂಟ್‌ಗಳನ್ನು ಬೆಂಬಲಿಸುತ್ತದೆ.

ಸ್ಮಾರ್ಟ್‌ ಮಾನಿಟರ್

ಇನ್ನು ಈ ಸ್ಮಾರ್ಟ್‌ ಮಾನಿಟರ್ webOS 22 ನಲ್ಲಿ ಕಾರ್ಯನಿರ್ವಹಿಸಲಿದೆ. ಇದು ಎಲ್ಲಾ ಪ್ರಮುಖ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಿಗೆ ಪ್ರವೇಶವನ್ನು ನೀಡಲಿದೆ. ಜೊತೆಗೆ ಎಲ್‌ಜಿ ಸ್ಮಾರ್ಟ್‌ಟಿವಿಗಳಲ್ಲಿ ಲಭ್ಯವಿರುವ ThinkQ ಹೋಮ್, ಮ್ಯಾಜಿಕ್ ರಿಮೋಟ್ ಸೇರಿದಂತೆ ಅನೇಕ ಫೀಚರ್ಸ್‌ಗಳನ್ನು ಕೂಡ ಈ ಸ್ಮಾರ್ಟ್‌ ಮಾನಿಟರ್‌ನಲ್ಲಿ ಕಾಣಬಹುದಾಗಿದೆ. ಇದು ವೈಫೈ, ಬ್ಲೂಟೂತ್ ಮತ್ತು 10W (2 x 5W) ಸ್ಪೀಕರ್‌ಗಳನ್ನು ಹೊಂದಿದೆ. ಅಲ್ಲದೆ 2 x HDMI 3 x USB ಟೈಪ್-A, 1 x USB ಟೈಪ್-C ಜೊತೆಗೆ 65W ಪವರ್ ಔಟ್‌ಪುಟ್ ಮತ್ತು ಗಿಗಾಬಿಟ್ ಈಥರ್ನೆಟ್ ಪೋರ್ಟ್ ಅನ್ನು ಒಳಗೊಂಡಿದೆ.

ಮಾನಿಟರ್

ಎಲ್‌ಜಿ ಸ್ಮಾರ್ಟ್ ಮಾನಿಟರ್ 32SQ780S ಹೊಸ ಮಾದರಿಯ ಫೀಚರ್ಸ್‌ಗಳಿಂದ ಗಮನಸೆಳೆದಿದೆ. ಇದನ್ನು ನೀವು ಜಿರೋದಿಂದ 180mm ವರೆಗೆ ವಿಸ್ತರಿಸಬಹುದಾಗಿದೆ. ಅಲ್ಲದೆ ಒಟ್ಟು ಸುಮಾರು 280 ಡಿಗ್ರಿ ವರೆಗೆ ತಿರುಗಿಸಬಹುದಾಗಿದೆ. ಇದರ ಟಿಲ್ಟ್ ವ್ಯಾಪ್ತಿಯು ಸರಿಸುಮಾರು 25 ಡಿಗ್ರಿ ವರೆಗೆ ಇರಲಿದೆ. ಅಲ್ಲದೆ ಮಾನಿಟರ್‌ನ ಎತ್ತರವನ್ನು ಜಿರೋದಿಂದ 130mm ವರೆಗೆ ಸೆಟ್‌ ಮಾಡುವುದಕ್ಕೆ ಕೂಡ ಅವಕಾಶವಿದೆ. ಇನ್ನು ಈ ಸ್ಮಾರ್ಟ್‌ ಮಾನಿಟರ್‌ ಆಪಲ್‌ ಏರ್‌ಪ್ಲೇ 2 ಬೆಂಬಲವನ್ನು ಕೂಡ ಒಳಗೊಂಡಿದೆ. ಇದು ಸ್ಯಾಮ್‌ಸಂಗ್‌ ಕಂಪೆನಿಯ ಗ್ಯಾಲಕ್ಸಿ ಎಂ ಸ್ಮಾರ್ಟ್‌ ಮಾನಿಟರ್‌ಗಳಿಗೆ ಪೈಪೋಟಿ ನೀಡಲಿದೆ ಎಂದು ಹೇಳಲಾಗಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಎಲ್‌ಜಿ ಸ್ಮಾರ್ಟ್ ಮಾನಿಟರ್ 32SQ780S ಪ್ರಸ್ತುತ ಯುಎಸ್‌ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದರ ಬೆಲೆ ಯುಎಸ್‌ನಲ್ಲಿ $499.99(ಅಂದಾಜು 41,178ರೂ) ಆಗಿದೆ. ಇನ್ನು ಈ ಸ್ಮಾರ್ಟ್‌ಮಾನಿಟರ್‌ ಇತರ ಮಾರುಕಟ್ಟೆಗಳಿಗೆ ಎಂಟ್ರಿ ನೀಡುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ. ಇದು ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಬಗ್ಗೆ ಕೂಡ ಎಲ್‌ಜಿ ಕಂಪೆನಿ ಯಾವುದೇ ವಿವರಗಳನ್ನು ಹಂಚಿಕೊಂಡಿಲ್ಲ.

Best Mobiles in India

English summary
Lg smart monitor 32sq780s with native 4K panel launched

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X