ಶೀಘ್ರದಲ್ಲೇ ಬರಲಿದೆ ಎಲ್‌ಜಿ ಸಂಸ್ಥೆಯ ಎಲ್‌ಜಿQ ಸರಣಿಯ ಸ್ಮಾರ್ಟ್‌ಫೋನ್‌!

|

ದಕ್ಷಿಣ ಕೊರಿಯಾದ ಸ್ಮಾರ್ಟ್‌ಫೋನ್‌ ಬ್ರಾಂಡ್‌ ಎಲ್‌ಜಿ ತನ್ನ ವೈವಿಧ್ಯಮಯ ಸ್ಮಾರ್ಟ್‌ಫೋನ್‌ಗಳಿಗೆ ಹೆಸರುವಾಸಿಯಾಗಿದೆ. ತನ್ನ ಭಿನ್ನ ಮಾದರಿಯ ಸ್ಮಾರ್ಟ್‌ಫೋನ್‌ಗಳ ಮೂಲಕ ಸ್ಮಾರ್ಟ್‌ಫೋನ್‌ ಪ್ರಿಯರ ನೆಚ್ಚಿನ ಬ್ರ್ಯಾಂಡ್‌ ಆಗಿ ಗುರುತಿಸಿಕೊಂಡಿದೆ. ಸದ್ಯ ಇತ್ತೀಚಿಗಷ್ಟೇ ಎಲ್‌ಜಿ ವೆಲ್ವೆಟ್‌ ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಿದ್ದ ಎಲ್‌ಜಿ ಕಂಪೆನಿ ಇದೀಗ ತನ್ನ 13 ಹೊಸ ಡಿವೈಸ್‌ಗಳ ಹೆಸರುಗಳಿಗಾಗಿ ಒಟ್ಟಿಗೆ ಅರ್ಜಿ ಸಲ್ಲಿಸಿದೆ ಎನ್ನಲಾಗಿದೆ. ಅಲ್ಲದೆ ಈ ಎಲ್ಲಾ ಹೊಸ ಫೋನ್‌ಗಳನ್ನು ಮಧ್ಯಮ ಶ್ರೇಣಿಯ ಎಲ್ಜಿ ಕ್ಯೂ-ಸರಣಿಯಡಿಯಲ್ಲಿ ಬಿಡುಗಡೆ ಮಾಡಲಾಗುವುದು ಎಂದು ವರದಿಯಾಗಿದೆ.

ಸ್ಮಾರ್ಟ್‌ಫೋನ್‌

ಎಲ್‌ಜಿ

ಹೌದು, ಎಲ್‌ಜಿ ಕಂಪೆನಿ ತನ್ನ ಹೊಸ ಮಾದರಿಯ ಸ್ಮಾರ್ಟ್‌ಫೋನ್‌ಗಳ ಬಿಡುಗಡೆಗೆ ಸಿದ್ದತೆ ನಡೆಸುತ್ತಿದೆ. ಇತ್ತೀಚಿನ ದಿನಗಳಲ್ಲಿ ಸಂಪೂರ್ಣವಾಗಿ ತನ್ನ ಹೊಸ ಅವತರಣಿಕೆಯ ಸ್ಮಾರ್ಟ್‌ಫೋನ್‌ಗಳಿಗೆ ಬದಲಾಗಿರುವ ಎಲ್ಜಿ ಮತ್ತೆ ಹೊಸ 13 ಹೊಸ ಸ್ಮಾರ್ಟ್‌ಫೋನ್‌ಗಳ ಹೆಸರುಗಳಿಗಾಗಿ ಅರ್ಜಿಗಳನ್ನು ಇತ್ತೀಚೆಗೆ ಕೊರಿಯಾ ಬೌದ್ಧಿಕ ಆಸ್ತಿ ಹಕ್ಕುಗಳ ಮಾಹಿತಿ ಸೇವೆಗೆ (ಕಿಪ್ರಿಸ್) ಸಲ್ಲಿಸಲಾಗಿದೆ. ಅಲ್ಲದೆ ಇತ್ತೀಚೆಗೆ ಪ್ರಾರಂಭಿಸಲಾದ ಎಲ್ಜಿ ವೆಲ್ವೆಟ್ನೊಂದಿಗೆ ಬ್ರಾಂಡ್ ತೆಗೆದುಕೊಂಡ ವಿಧಾನಕ್ಕಿಂತ ಭಿನ್ನವಾಗಿ ಫೋನ್‌ಗಳು ಸರಳ, ಸಂಖ್ಯೆಯ ಹೆಸರುಗಳನ್ನು ಹೊಂದಿವೆ ಎನ್ನಲಾಗಿದೆ.

ಹೆಸರು

ಇನ್ನು ಈ ಹೆಸರುಗಳನ್ನ ನೋಡುವುದಾದರೆ Q31, Q32, Q33, Q51, Q51S, Q52, Q53, Q61, Q62, Q63, Q91, Q92, ಮತ್ತು Q93. 9 ಸರಣಿಯಲ್ಲಿ ಹೆಸರುಗಳನ್ನ ದಾಖಲಿಸಲಾಗಿದೆ. ಈ ಎಲ್ಲಾ 13 ಹೆಸರಿನ ಡಿವೈಸ್‌ಗಳು ಕೂಡ ಸ್ಮಾರ್ಟ್‌ಫೋನ್‌ಗಳು ಆಗಿರಲಿವೆ ಎಂದು ನಿರೀಕ್ಷಿಸಲಾಗಿದೆ. ಇನ್ನು ಈ ಎಲ್ಲಾ ಕ್ಯೂ-ಸರಣಿ ಡಿವೈಸ್‌ಗಳಲ್ಲಿ ಕ್ಯೂ 30 ಸರಣಿಯನ್ನು ಹೊರತುಪಡಿಸಿ ಇನ್ನು ಉಳಿಸದವುಗಳು ಪ್ರಸ್ತುತ ಮಾದರಿಗಳನ್ನು ಹೊಂದಿವೆ ಎನ್ನಲಾಗಿದೆ. ಅಲ್ಲದೆ ಈ ಹೊಸ ಸರಣಿಯ ಹೆಸರಿನ ಉದ್ದೇಶ ಹಳೆಯ ಎಲ್‌ಜಿ K10 ಸರಣಿಯ ಬದಲಿ ಸ್ಮಾರ್ಟ್‌ಫೋನ್‌ಗಳಾಗಿರಬಹುದು ಎಂದು ಸಹ ಹೇಳಲಾಗಿದೆ.

ಸ್ಮಾರ್ಟ್‌ಫೋನ್

ಅಲ್ಲದೆ ಈ ಹೆಸರಿನ ಅಡಿಯಲ್ಲಿ ಬರುವ ಸ್ಮಾರ್ಟ್‌ಫೋನ್‌ಗಳು ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್‌ಗಳಾಗಿವೆ. ಸದ್ಯ ಇವುಗಳಲ್ಲಿ ಎಲ್‌ಜಿ ಕ್ಯೂ 51 ಸ್ಮಾರ್ಟ್‌ಫೋನ್‌ ಬಗ್ಗೆ ಎರಡು ತಿಂಗಳ ಹಿಂದೆ ಘೋಷಣೆ ಮಾಡಲಾಗಿದೆ. ಅಲ್ಲದೆ ಲಬ್ಯ ಮಾಹಿತಿ ಪ್ರಕಾರ ಈ ಫೋನ್ ಮೀಡಿಯಾ ಟೆಕ್ ಹಿಲಿಯೊ P22 ಪ್ರೊಸೆಸರ್‌ ವೇಗವನ್ನು ಹೊಂದಿರಲಿದೆ ಹಾಗೂ ಆಂಡ್ರಾಯ್ಡ್ 10 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ ಎಂದು ಹೇಳಲಾಗಿದೆ. ಅಲ್ಲದೆ ಈ ಸ್ಮಾರ್ಟ್‌ಫೋನ್‌ 3GB RAM ಅನ್ನು ಹೊಂದಿರುವ ಸಾಧ್ಯತೆ ಇದೆ ಎಂದು ನಿರೀಕ್ಷಿಸಲಾಗಿದೆ.

ಡ್ಯುಯೆಲ್

ಇದಲ್ಲದೆ ಮತ್ತೊಂದು ಲಭ್ಯ ಮಾಹಿತಿಯ ಪ್ರಕಾರ ಈ ಸ್ಮಾರ್ಟ್‌ಫೋನ್‌ಗಳು 6.5-ಇಂಚಿನ 720p + ಡಿಸ್ಪ್ಲೇಯನ್ನು ಹೊಂದಿರುವ ನಿರೀಕ್ಷೆ ಇದೆ. ಅಲ್ಲದೆ ಸ್ಮಾರ್ಟ್‌ಫೋನ್‌ ಅನ್ನು ಸಂಪೂರ್ಣವಾಗಿ ತೆರೆದಾಗ ‘ಟಿ' ಅಕ್ಷರವನ್ನು ಪ್ರತಿನಿಧಿಸುವ ಫಾರ್ಮ್ ಫ್ಯಾಕ್ಟರ್ ಹೊಂದಿರುವ ಫೋನ್ ಅನ್ನು ತೋರಿಸಲಾಗಿದೆ. ಇದರ ಪ್ರಕಾರ ಈ ಸ್ಮಾರ್ಟ್‌ಫೋನ್‌ಗಳು ಡ್ಯುಯೆಲ್‌ ಸ್ಕ್ರೀನ್‌ ಮಾದರಿಯಲ್ಲಿ ಲಬ್ಯವಾದರೂ ಅಚ್ಚರಿಯಿಲ್ಲ.

Best Mobiles in India

Read more about:
English summary
The phones themselves feature simple, numbered names, unlike the approach the brand took with the recently launched LG Velvet.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X