Subscribe to Gizbot

ಹಳಸು ಆಹಾರ ಪತ್ತೆ ಹಚ್ಚುವ ಫ್ರಿಡ್ಜ್ ತರಲಿದೆ LG

Posted By: Varun
ಹಳಸು ಆಹಾರ ಪತ್ತೆ ಹಚ್ಚುವ ಫ್ರಿಡ್ಜ್ ತರಲಿದೆ LG

ದಕ್ಷಿಣ ಕೊರಿಯಾದ ದೈತ್ಯ ಎಲೆಕ್ಟ್ರಾನಿಕ್ ವಸ್ತುಗಳ ಉತ್ಪಾದಕ LG ಕಂಪನಿ ಅತಿ ಶೀಘ್ರದಲ್ಲಿ ಹಳಸಿದ ಆಹಾರವನ್ನು ಪತ್ತೆ ಹಚ್ಚುವ ಫ್ರಿಡ್ಜ್ ಒಂದನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ ಎಂದು ತಿಳಿಸಿದೆ.

ಗೃಹೋಪಯೋಗಿ ವಸ್ತುಗಳ ಉತ್ಪಾದನೆಯಲ್ಲಿ ಹಲವಾರು ಸ್ಮಾರ್ಟ್ ಸಾಧನಗಳನ್ನು ಹೊರತಂದಿರುವ LG ಕಂಪನಿಯ ಈ ಸ್ಮಾರ್ಟ್ ಫ್ರಿಡ್ಜ್, ಒಳಗೆ ಇಟ್ಟಿರುವ ಪ್ಯಾಕೆಟ್ ಆಹಾರ ಪದಾರ್ಥಗಳ ಬಾರ್ ಕೋಡ್ ಅನ್ನು ಗುರುತಿಸಿ ಅದರ ಎಕ್ಸ್ ಪೈರಿ ದಿನಾಂಕವನ್ನು ಬಳಕೆದಾರರಿಗೆ ಫ್ರಿಡ್ಜ್ ನ ಮುಂಭಾಗದ ಪ್ಯಾನೆಲ್ ನಲ್ಲಿ ತೋರಿಸುವ ತಂತ್ರಜ್ಞಾನ ಹೊಂದಿದೆಯಂತೆ.

ಹಾಗಾಗಿ ಆಹಾರ ಪದಾರ್ಥಗಳು ಕೆಡುವ ಮುನ್ನವೇ ಉಪಯೋಗಿಸುವುದರ ಜೊತೆಗೆ, ಫ್ರಿಡ್ಜ್ ನ ಒಳಗೆ ಇರುವ ಜಾಗವನ್ನು ಸಮರ್ಪಕವಾಗಿ ಬಳಸಲು ಈ ತಂತ್ರಜ್ಞಾನದಿಂದ ಅನುಕೂಲವಾಗಲಿದೆ ಎಂದು LG ಕಂಪನಿಯ ಸಿಇಒ ಶಿನ್ ತಿಳಿಸಿದರು.

ಫ್ರಿಡ್ಜ್ ನ ಜೊತೆ ಸ್ಮಾರ್ಟ್ ಆದ ರೋಬೋಟ್ ವ್ಯಾಕ್ಯೂಮ್ ಕ್ಲೀನರ್ ಅನ್ನು ಕೂಡ LG ಬಿಡುಗಡೆ ಮಾಡಲಿದೆಯಂತೆ. ಹೋಂ-ಬಾಟ್ ಹೆಸರಿನ ಈ ವ್ಯಾಕ್ಯೂಮ್ ಕ್ಲೀನರ್ ಅಲ್ಟ್ರಾಸಾನಿಕ್ ಹಾಗು ಇನ್ಫ್ರಾರೆಡ್ ಸೆನ್ಸಾರ್ ಗಳನ್ನು ಹೊಂದಿದ್ದು, ಗೋಡೆಗಳಿಗೆ ಡಿಕ್ಕಿ ಹೊಡೆಯದೆ ತಾನೇ ಸಮರ್ಪಕವಾಗಿ ಕೆಲಸ ಮಾಡುವ ಸಾಮರ್ಥ್ಯ ಇದಕ್ಕಿದೆಯಂತೆ.

ಈ ಎರಡೂ ಉತ್ಪನ್ನಗಳು ಭಾರತೀಯ ಮಾರುಕಟ್ಟೆಗೆ ಮುಂದಿನ ತಿಂಗಳು ಬರುವ ನಿರೀಕ್ಷೆ ಇದೆ.

Read more about:
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot