ಎಲ್‌ಜಿ ಟೋನ್ ಫ್ರೀ ಎಫ್ಎನ್ 7 ಇಯರ್‌ಬಡ್ಸ್‌ ಬಿಡುಗಡೆ!

|

ಎಲೆಕ್ಟ್ರಾನಿಕ್ಸ್‌ ವಲಯದ ದೈತ್ಯ ಎನಿಸಿಕೊಂಡಿರುವ ಎಲ್‌ಜಿ ಕಂಪೆನಿ ತನ್ನ ಭಿನ್ನ ಮಾದರಿಯ ಸ್ಮಾರ್ಟ್‌ಫೋನ್‌ಗಳ ಜೊತೆಗೆ ವೈವಿಧ್ಯಮಯ ಇಯರ್‌ಬಡ್ಸ್‌ಗಳಿಂದಲೂ ಗುರುತಿಸಿಕೊಂಡಿದೆ. ಇಗಾಗಲೇ ಹಲವು ಮಾದರಿಯ ಇಯರ್‌ಬಡ್ಸ್‌ ಪರಿಚಯಿಸಿರುವ ಎಲ್‌ಜಿ ಕಂಪೆನಿ ತನ್ನ ಹೊಸ ಎಲ್‌ಜಿ ಜೋಡಿ ವಾಯರ್‌ಲೆಸ್ ಇಯರ್‌ಬಡ್ಸ್‌ಗಳನ್ನು ಬಿಡುಗಡೆ ಮಾಡಿದೆ. ಈ ಇಯರ್‌ಬಡ್ಸ್‌ಗಳು ಸ್ವಯಂ-ಶುಚಿಗೊಳಿಸುವ ಕೇಸ್‌ನೊಂದಿಗೆ ಬರುತ್ತದೆ. ಎಲ್‌ಜಿ ಟೋನ್ ಫ್ರೀ FN7 ವಾಯರ್‌ಲೆಸ್ ಇಯರ್‌ಬಡ್ಸ್‌ ಆಕ್ಟಿವ್‌ ನಾಯ್ಸ್‌ ಕ್ಯಾನ್ಸಲೇಶನ್‌ ಅನ್ನು ಸಹ ಹೊಂದಿದೆ.

ಎಲ್‌ಜಿ

ಹೌದು, ಎಲ್‌ಜಿ ಕಂಪೆನಿ ತನ್ನ ಹೊಸ ಎಲ್‌ಜಿ ಟೋನ್ ಫ್ರೀ ಎಫ್ಎನ್ 7 ಇಯರ್‌ಬಡ್ಸ್‌ ಅನ್ನು ಬಿಡುಗಡೆ ಮಾಡಿದೆ. ಈ ಇಯರ್‌ಬಡ್ಸ್‌ ಕಂಪನಿಯ ಯುವಿನಾನೊ ಚಾರ್ಜಿಂಗ್ ಕೇಸ್‌ ಅನ್ನು ಒಳಗೊಂಡಿದೆ. ಇನ್ನು ಈ ಚಾರ್ಜಿಂಗ್ ಕೇಸ್‌ ಇಯರ್‌ಬಡ್‌ಗಳ ಸಿಲಿಕೋನ್ ತುದಿ ಮತ್ತು ಒಳ ಜಾಲರಿಯನ್ನು ಸ್ವಚ್ ಗೊಳಿಸಲು ಯುವಿ ಬೆಳಕನ್ನು ಬಳಸುತ್ತದೆ. ಹಾಗಾದ್ರೆ ಈ ಇಯರ್‌ಬಡ್ಸ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಎಲ್‌ಜಿ

ಎಲ್‌ಜಿ ಟೋನ್ ಫ್ರೀ ಎಫ್ಎನ್ 7 ಇಯರ್‌ಬಡ್ಸ್‌ ಸ್ವಯಂ-ಶುಚಿಗೊಳಿಸುವ ಕೇಸ್‌ನೊಂದಿಗೆ ಬರುತ್ತದೆ. ಇದು ಆಕ್ಟಿವ್‌ ನಾಯ್ಸ್‌ ಕ್ಯಾನ್ಸಲೇಶನ್‌ ಅನ್ನು ಸಹ ಹೊಂದಿದೆ. ಅಲ್ಲದೆ ಈ ಇಯರ್‌ಬಡ್ಸ್‌ ಯುವಿನಾನೊ ಚಾರ್ಜಿಂಗ್ ಕೇಸ್‌ ಅನ್ನು ಒಳಗೊಂಡಿದೆ. ಸಿಲಿಕೋನ್ ತುದಿ ಮತ್ತು ಒಳ ಜಾಲರಿಯನ್ನು ಸ್ವಚ್ ಗೊಳಿಸಲು ಯುವಿ ಬೆಳಕನ್ನು ಬಳಸುತ್ತದೆ. ಇದು ಇಯರ್‌ಬಡ್ಸ್‌ನಲ್ಲಿರುವ 99.9% ಬ್ಯಾಕ್ಟೀರಿಯಾವನ್ನು ಕೊಲ್ಲಲು ಇದು ಸಹಾಯ ಮಾಡುತ್ತದೆ ಎಂದು ಎಲ್‌ಜಿ ಸಂಸ್ಥೆ ಹೇಳಿಕೊಂಡಿದೆ.

ಇಯರ್‌ಬಡ್ಸ್‌

ಇನ್ನು ಈ ಇಯರ್‌ಬಡ್ಸ್‌ನಲ್ಲಿರುವ ಚಾರ್ಜಿಂಗ್ ಕೆಸ್‌ ಸ್ವಯಂ-ಶುಚಿಗೊಳಿಸುವ ಪ್ರಕ್ರಿಯೆಯನ್ನು ಸೂಚಿಸಲು ನೀಲಿ ಎಲ್ಇಡಿ ಬೆಳಕನ್ನು ಹೊಂದಿದೆ. ಅಲ್ಲದೆ ಚಾರ್ಜಿಂಗ್ ಅನ್ನು ಸೂಚಿಸಲು ಹಸಿರು ಬಣ್ಣವನ್ನು ಹೊಂದಿದೆ. ಈ ಹೊಸ ಎಲ್‌ಜಿ ವಾಯರ್‌ಲೆಸ್ ಇಯರ್‌ಬಡ್ಸ್‌ಗಳಲ್ಲಿ ಪ್ರತಿ ಬದಿಯಲ್ಲಿ ಮೂರು ಮೈಕ್ರೊಫೋನ್ ಅಳವಡಿಸಲಾಗಿದೆ. ಇನ್ನು ಎಲ್‌ಜಿ ಟೋನ್ ಫ್ರೀ ಎಫ್‌ಎನ್ 7 ಎಎನ್‌ಸಿ ಆನ್ ಆಗುವುದರೊಂದಿಗೆ 5 ಗಂಟೆಗಳ ಬ್ಯಾಟರಿ ಅವಧಿಯನ್ನು ಹೊಂದಿದೆ. ಎಎನ್‌ಸಿ ಆಫ್ ಆಗಿರುವಾಗ, ಇಯರ್‌ಬಡ್ಸ್‌ 7 ಗಂಟೆಗಳ ಕಾಲ ಮುಂದುವರಿಯುತ್ತದೆ. ಅಲ್ಲದೆ ಚಾರ್ಜಿಂಗ್ ಕೇಸ್‌ನ ಒಟ್ಟು ಬ್ಯಾಟರಿ ಅವಧಿಯು 15 ಗಂಟೆಗಳವರೆಗೆ ವಿಸ್ತರಿಸುತ್ತದೆ. ಚಾರ್ಜಿಂಗ್ ಕೇಸ್ ಯುಎಸ್‌ಬಿ ಟೈಪ್-ಸಿ ಪೋರ್ಟ್ ಅನ್ನು ಹೊಂದಿದೆ, ಮತ್ತು ಇದು ವಾಯರ್‌ಲೆಸ್ ಚಾರ್ಜಿಂಗ್ ಅನ್ನು ಸಹ ಬೆಂಬಲಿಸುತ್ತದೆ.

ಇಯರ್‌ಬಡ್ಸ್‌

ಇನ್ನು ಎಲ್‌ಜಿ ಟೋನ್ ಫ್ರೀ ಎಫ್ಎನ್ 7 ಇಯರ್‌ಬಡ್ಸ್‌ ಬೆಲೆ 21,900,000 KRWಆಗಿದೆ. ಇದು ಭಾರತದಲ್ಲಿ ಸುಮಾರು, 14,400 ರೂ ಆಗಿದೆ. ಜೊತೆಗೆ ಇದು ಕಪ್ಪು ಮತ್ತು ಬಿಳಿ ಎರಡು ಬಣ್ಣ ಆಯ್ಕೆಗಳಲ್ಲಿ ಬರುತ್ತದೆ.

Most Read Articles
Best Mobiles in India

Read more about:
English summary
LG Tone Free FN7 comes with the UVnano charging case that cleans the earbuds. It also comes with active noise cancellation.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X