ಕೆಲವೇ ದಿನಗಳಲ್ಲಿ ಗ್ರಾಹಕರ ಕೈ ಸೇರಲಿದೆಯಾ 'ಎಲ್‌ಜಿ ವಿ30' ಸ್ಮಾರ್ಟ್‌ಫೋನ್?!!

By: Akshatha J

ಸ್ಮಾರ್ಟ್ ಫೋನ್ ಪ್ರಿಯರಲ್ಲಿ ಸಾಕಷ್ಟು ಕುತೂಹಲ ಕೆರಳಿಸಿದ್ದ 'ಎಲ್‌ಜಿ ವಿ30' ಬಗ್ಗೆ ಕುತೂಹಲಕರ ಮಾಹಿತಿಯೊಂದು ಒರಬಿದ್ದಿದೆ. ಅದೇನೆಂದರೆ, ಟ್ವಿಟ್ಟರ್ ನಲ್ಲಿ ಲೀಕ್‌ಸ್ಟಾರ್ ಎಂದೇ ಖ್ಯಾತಿ ಪಡೆದಿರುವ 'ಇವನ್ ಬ್ಲಾಸ್' ಎಂಬಾತ ಆಗಸ್ಟ್ 30 ರಂದು ಈ ಸ್ಮಾರ್ಟ್ ಫೋನ್ ಬಿಡುಗಡೆ ಆಗಲಿದೆ ಎಂಬ ಕುತೂಹಲಕರ ಮಾಹಿತಿಯೊಂದನ್ನು ಟ್ವಿಟರ್‌ನಲ್ಲಿ ಹೇಳಿದ್ದಾನೆ. ಇನ್ನು ಈ ಮಾಹಿತಿ ನಿಜವೇ ಆದರೆ, ಅವಧಿಗಿಂತ ಒಂದು ತಿಂಗಳ ಮುಂಚೆಯೆ ಸ್ಮಾರ್ಟ್ ಫೋನ್ ಗ್ರಾಹಕರ ಕೈ ಸೇರುವಲ್ಲಿ ಸಂಶಯವಿಲ್ಲ.

ಕೆಲವೇ ದಿನಗಳಲ್ಲಿ ಗ್ರಾಹಕರ ಕೈ ಸೇರಲಿದೆಯಾ 'ಎಲ್‌ಜಿ ವಿ30' ಸ್ಮಾರ್ಟ್‌ಫೋನ್?!!

ಆದರೆ ಇದು ಎಷ್ಟು ಸತ್ಯ..?

ಈ ಮಾಹಿತಿಯನ್ನು ವದಂತಿ ಎಂದೇ ಭಾವಿಸಬೇಕಾಗುತ್ತದೆ. ಎಕೆಂದರೆ ಕಳೆದ ಬಾರಿ ಇಂಥಹದೇ ಒಂದು ಮಾಹಿತಿಯನ್ನು ದಕ್ಷಿಣ ಕೊರಿಯಾದ ಕೆಲವೊಂದು ಮೂಲಗಳು ಎಲ್ ಜಿ ಯ ಕೆಲವೊಂದು ಮಹತ್ವದ ನಿರ್ಣಯಗಳ ಬಗ್ಗೆ ಕೆಲವೊಂದು ಮಾಹಿತಿಗಳನ್ನು ಒರಹಾಕಿತ್ತು. ಆದಾಗ್ಯೂ ತನ್ನ ಮಾಹಿತಿಗಳ ಬಗ್ಗೆ ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ, ಈ ವದಂತಿ ಸುಳ್ಳಾಗಿತ್ತು. ಆದ್ದರಿಂದ ಈ ಸ್ಮಾರ್ಟ್ ಫೋನ್ ಬಗ್ಗೆ ಹೆಚ್ಚೇನೂ ಈಗಲೇ ಹೇಳಲು ಸಾಧ್ಯವಿಲ್ಲ. ಇನ್ನು ಈ ಲೀಕ್ಸ್ಟರ್ ನ ಮಾಹಿತಿಗೆ ವಿರುದ್ಧ ಎಂಬಂತೆ, ಇಲ್ಲೊಂದು ನಿಮಗೆ ಕೆಲ ಮಾಹಿತಿಗಳಿವೆ.

2016 ರಲ್ಲಿ ಎಲ್ ಜಿ ತನ್ನ "ವಿ 20" ಮೊಬೈಲ್ ಅನ್ನು ಅಕ್ಟೋಬರ್ ನಲ್ಲಿ ಬಿಡುಗಡೆ ಮಾಡಿತ್ತು. ಆದರೆ 'ಎಲ್‌ಜಿ ವಿ30' ರ ಬಗ್ಗೆ ಇನ್ನು ಸ್ಪಷ್ಟವಾದ ಯಾವುದೇ ಮಾಹಿತಿ ಕಂಪನಿಯ ವತಿಯಿಂದ ಹೊರಬಿದ್ದಿಲ್ಲ. ಆದರೆ ಕೆಲವೊಂದು ಮೂಲಗಳ ಪ್ರಕಾರ "ಆಪಲ್ ಐ 8" ನೊಂದಿಗೆ "ಎಲ್ ಜಿ ವಿ30" ಸ್ಪರ್ಧೆಗಿಳಿಯಲು, ಈ ಸ್ಮಾರ್ಟ್ ಫೋನ್ ಅನ್ನು ಸೆಪ್ಟೆಂಬರ್ ತಿಂಗಳಲ್ಲಿ ಬಿಡುಗಡೆ ಮಾಡುವ ಎಲ್ಲಾ ಸಾಧ್ಯತೆಗಳಿವೆ ಎಂಬ ಸುದ್ದಿ ಕೇಳಿ ಬರುತ್ತಿದೆ.Read more about:
English summary
The launch invitation hints that the LG V30 will get launched on August 31 in Berlin, Germany.
Please Wait while comments are loading...
Opinion Poll

Social Counting