LG V30+ ಡಿಸೆಂಬರ್ 16ಕ್ಕೆ ಲಾಂಚ್: ಇಲ್ಲಿದೆ ಸಂಫೂರ್ಣ ವಿವರ.!
LG ಮಾರುಕಟ್ಟೆಗೆ ಮತ್ತೊಂದು ಹೊಸ ಸ್ಮಾರ್ಟ್ ಫೋನ್ ಲಾಂಚ್ ಮಾಡಲಿದೆ. ಕಳೆದ ತಿಂಗಳೇ ನೂತನ ಸ್ಮಾರ್ಟ್ ಫೋನ್ LG V30+ ಲಾಂಚ್ ಆಗಬೇಕಿತ್ತು. ಕಾರಣಾಂತರಗಳಿಂದ LG V30+ ಸ್ಮಾರ್ಟ್ ಫೋನ್ ಬಿಡುಗಡೆ ಇದೇ ಡಿಸೆಂಬರ್ 13 ರಂದು ನಡೆಯಲಿದೆ ಎನ್ನಲಾಗಿದೆ. ಈ ಕುರಿತು LG ಮಿಡಿಯಾ ಇನ್ವೆಟ್ ಅನ್ನು ಸಹ ಕಳುಹಿಸಿದೆ ಎನ್ನಲಾಗಿದೆ.

ಈಗಾಗಲೇ LG V30+ ಸ್ಮಾರ್ಟ್ ಫೋನ್ ಕೋರಿಯಾ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿದ್ದು, ಈ ಸ್ಮಾರ್ಟ್ ಫೋನ್ LG V30 ಆಪ್ ಡೇಟ್ ಆವೃತ್ತಿ ಎನ್ನಲಾಗಿದೆ. ಈ ಸ್ಮಾರ್ಟ್ ಫೋನ್ LG ಟಾಪ್ ಎಂಡ್ ಸ್ಮಾರ್ಟ್ ಫೋನ್ ಗಳ ಸಾಲಿಗೆ ಸೇರಿಕೊಳ್ಳಿದ್ದು, ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ವಿಶೇಷತೆಗಳನ್ನು ಈ ಸ್ಮಾರ್ಟ್ ಫೋನಿನಲ್ಲಿ ಕಾಣಬಹುದಾಗಿದೆ.
LG V30+ ಸ್ಮಾರ್ಟ್ ಫೋನಿನಲ್ಲಿ 6 ಇಂಚಿನ QHD ಪ್ಲಸ್ ಗುಣಮಟ್ಟದ ಡಿಸ್ ಪ್ಲೇಯನ್ನು ಕಾಣಬಹುದಾಗಿದ್ದು, ಮಾರುಕಟ್ಟೆಯಲ್ಲಿ ಟೆಂಡ್ ಆಗಿರುವ 18:9 ಅನುಪಾತದಿಂದ ಇದು ಕೂಡಿದೆ. ಈ ಸ್ಮಾರ್ಟ್ ಫೋನಿನಲ್ಲಿ ಆಕ್ಟಾ ಕೋರ್ ಸ್ನಾಪ್ ಡ್ರಾಗನ್ 835 ಪ್ರೋಸೆಸರ್ ಜೊತೆಗೆ 4GB RAM ಮತ್ತು 128GB ಇಂಟರ್ನಲ್ ಮೆಮೊರಿಯನ್ನು ಅಳವಡಿಸಲಾಗಿದೆ.
ಅಲ್ಲದೇ ಮೆಮೋರಿ ಕಾರ್ಡ್ ಹಾಕಿಕೊಳ್ಳುವ ಮೂಲಕ 2TBವರೆಗೂ ಮೆಮೊರಿಯನ್ನು ವಿಸ್ತರಿಸಿಕೊಳ್ಳುವ ಅವಕಾಶವನ್ನು ಮಾಡಿಕೊಡಲಾಗಿದೆ. LG V30+ ಸ್ಮಾರ್ಟ್ ಫೋನಿನಲ್ಲಿ ಡ್ಯುಯಲ್ ರೇರ್ ಕ್ಯಾಮೆರಾವನ್ನು ಕಾಣಬಹುದಾಗಿದೆ. 16MP + 13MP ಕ್ಯಾಮೆರಾಗಳು ಇದಾಗಿದೆ. ಮುಂಭಾಗದಲ್ಲಿ ಸೆಲ್ಫಿ ತೆಗೆದುಕೊಳ್ಳಲು 5 MP ಕ್ಯಾಮೆರಾ ನೀಡಲಾಗಿದೆ.
LG V30+ ಸ್ಮಾರ್ಟ್ ಫೋನಿನಲ್ಲಿ ಹೈಬ್ರಿಡ್ ಸಿಮ್ ಸ್ಲಾಟ್ ಕಾಣಬಹುದಾಗಿದ್ದು, 3300mAh ಬ್ಯಾಟರಿಯನ್ನು ಇದರಲ್ಲಿ ಅಳವಡಿಸಲಾಗಿದೆ. ಜೊತೆಗೆ ವೇಗದ ಚಾರ್ಜಿಂಗ್ ಗಾಘಿ ಕ್ವೀಕ್ ಚಾರ್ಜರ್ 3.0ಸಹ ಇದರಲ್ಲಿದೆ. ಈ ಸ್ಮಾರ್ಟ ಫೋನ್ ಬೆಲೆಯ ಬಗ್ಗೆ ಹೆಚ್ಚಿನ ಮಾಹಿಉತಿಗಳು ಲಭ್ಯವಾಗಿಲ್ಲ.


Click it and Unblock the Notifications








