ಎಲ್‌ಜಿ ಪ್ರೇಮಿಗಳಿಗಾಗಿ ಕಂಪೆನಿಯಿಂದ ಇನ್ನೊಂದು ಡಿವೈಸ್ ಎಲ್‌ಜಿ ವಿ30

By: Shwetha PS

ಆಗಸ್ಟ್ 31 ರಂದು ಎಲ್‌ಜಿ ಈವೆಂಟ್ ಒಂದನ್ನು ಹೋಸ್ಟ್ ಮಾಡುತ್ತಿದ್ದು ತನ್ನ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್ ಆದ ಎಲ್‌ಜಿ ವಿ30 ಅನ್ನು ಇದು ಲಾಂಚ್ ಮಾಡಲಿದೆ. ಇದಕ್ಕಾಗಿ ಹೊರತಂದಿರುವ ಪ್ರೆಸ್ ಈವೆಂಟ್‌ಗಳನ್ನು ಈಗಾಗಲೇ ನಡೆಸಲಾಗಿದ್ದು ಮಧ್ಯಾಹ್ನ 2 ಗಂಟೆಗೆ ಈ ಈವೆಂಟ್ ನಡೆಯಲಿದೆ.

ಎಲ್‌ಜಿ ಪ್ರೇಮಿಗಳಿಗಾಗಿ ಕಂಪೆನಿಯಿಂದ ಇನ್ನೊಂದು ಡಿವೈಸ್ ಎಲ್‌ಜಿ ವಿ30

ಸ್ಮಾರ್ಟ್‌ಫೋನ್ ಕುರಿತು ಕೆಲವು ಮಾಹಿತಿಗಳನ್ನು ಇವಾನ್ ಬ್ಲಾಸ್ ಎಂಬ ಟ್ವಿಟ್ಟರ್ ಆಧಾರಿತ ಸಂಸ್ಥೆಯೊಂದು ಅರುಹಿದೆ. ಈ ಫೋನ್ ಎಲ್‌ಜಿ ಜಿ6 ಅನ್ನು ಸರಿಸುಮಾರಾಗಿ ಹೋಲುತ್ತಿದೆ ಎಂಬುದು ಇವಾನ್ ಖಾತ್ರಿಪಡಿಸಿರುವ ಸಂಗತಿಯಾಗಿದ್ದು ಫೋನ್ ಕುರಿತು ಚಿತ್ರಗಳನ್ನು ಲೀಕ್ ಮಾಡಿದೆ.

ಎಲ್‌ಜಿ ವಿ30 ಮೆಟಲ್ ಬಾಡಿಯನ್ನು ಹೊಂದಿದ್ದು ಆಂಟೆನಾ ಆಧಾರಿತ ವಿನ್ಯಾಸ ಇದರಲ್ಲಿದೆ. ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಫೋನ್ ಪಡೆದುಕೊಂಡಿದ್ದು ಕ್ಯಾಮೆರಾ ಪಕ್ಕವೇ ಎಲ್‌ಇಡಿ ಫ್ಲ್ಯಾಶ್ ಮಾಡ್ಯೂಲ್ ಅನ್ನು ಹೊಂದಿಸಿದೆ. ಫಿಂಗರ್ ಪ್ರಿಂಟ್ ಸ್ಕ್ಯಾನರ್ ಡ್ಯುಯಲ್ ಕ್ಯಾಮೆರಾದ ಕೆಳಗಡೆ ಇದ್ದು ವಿ30 ಬ್ರ್ಯಾಂಡಿಂಗ್ ಮೇಲಕ್ಕೆ ಇದೆ.

4G, 3G ಮತ್ತು 2G ಬಳಕೆದಾರರಿಗೆ ವೊಡಾಫೋನ್ ನಿಂದ ಹೊಸ ಆಫರ್

ಫೋನ್ ಕುರಿತ ಸಾಕಷ್ಟು ಲೀಕ್‌ಗಳು ಈಗಾಗಲೇ ತಾಣದಲ್ಲಿ ಹರಿದಾಡುತ್ತಿದ್ದು ಕಂಪೆನಿಯಿಂದ ಅಧಿಕೃತ ಮಾಹಿತಿಗಳು ಇನ್ನೂ ಹೊರಬರಬೇಕಾಗಿದೆ. ಎಲ್‌ಜಿ ವಿ30 18:9 ಡಿಸ್‌ಪ್ಲೇಯನ್ನು ಹೊಂದಿದ್ದು ಎಲ್‌ಜಿ ಜಿ6 ನಲ್ಲಿ ಕೂಡ ಇದೇ ಅನುಪಾತವಿತ್ತು.

ಫೋನ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್ 835 ಸಾಕ್ ಅನ್ನು ಪಡೆದುಕೊಂಡಿದ್ದು 4 ಜಿಬಿ RAM ಅದರಲ್ಲಿದೆ. 64 ಜಿಬಿ ಆಂತರಿಕ ಸಾಮರ್ಥ್ಯ ಫೋನ್ ಪಡೆದಿದೆ. ಎಸ್‌ಡಿ ಕಾರ್ಡ್‌ನಿಂದ ಇದನ್ನು ವಿಸ್ತರಿಸಬಹುದೇ ಎಂಬುದಕ್ಕೆ ಮಾಹಿತಿ ದೊರಕಿಲ್ಲ. ಇದರ ಡ್ಯುಯಲ್ ಕ್ಯಾಮೆರಾ 4 ಕೆ ವೀಡಿಯೊ ರೆಕಾರ್ಡಿಂಗ್‌ಗೆ ಬೆಂಬಲವನ್ನು ನೀಡಲಿದೆ ಇದು ಫೋನ್‌ನ ವಿಶಿಷ್ಟ ವೈಶಿಷ್ಟ್ಯತೆ ಎಂದೆನಿಸಿದೆ.

Read more about:
English summary
The LG V30 press renders have been leaked well in advance of the official launch pegged for August 31.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot