ಸದ್ಯದಲ್ಲಿಯೇ ಎಲ್‌ಜಿಯಿಂದ ಡ್ಯುಯೆಲ್‌ ಸ್ಕ್ರೀನ್‌ ಫೋನ್‌ ಲಾಂಚ್‌!

|

ಪ್ರುಸ್ತುತ ಡಿಜಿಟಲ್‌ ಲೋಕದಲ್ಲಿ ಸ್ಮಾರ್ಟ್‌ಫೋನ್‌ಗಳ ಭರಾಟೆ ಭರ್ಜರಿಯಾಗಿಯೇ ನಡೆಯುತ್ತಿದೆ. ಹೊಸ ಮಾದರಿಯ ವಿಭಿನ್ನ ಫಿಚರ್ಸ್‌ಗಳುಳ್ಳ ಸ್ಮಾರ್ಟ್‌ಫೋನ್‌ಗಳೂ ಮಾರುಕಟ್ಟೆಗೆ ಲಾಂಚ್‌ ಆಗುತ್ತಲೇ ಇವೆ. ಇದೀಗ ಎಲೆಕ್ಟ್ರಾನಿಕ್ಸ್‌ ದೈತ್ಯ ಎನಿಸಿಕೊಂಡಿರೋ ಎಲ್‌ಜಿ ಕಂಪೆನಿ ತನ್ನ ಹೊಸ ಆವೃತ್ತಿಯ V60 ಥಿಂಕ್ಯೂ 5G ಸ್ಮಾರ್ಟ್‌ಫೋನ್‌ ಅನ್ನ 2020ರ ಪೆಬ್ರವರಿಯಲ್ಲಿ ಬಿಡುಗಡೆ ಮಾಡುವುದಾಗಿ ಹೇಳಿದೆ.

ಎಲ್‌ಜಿ

ಹೌದು, ಎಲೆಕ್ಟ್ರಾನಿಕ್ಸ್‌ ದೈತ್ಯ ಎನಿಸಿಕೊಂಡಿರೋ ಎಲ್‌ಜಿ ಕಂಪೆನಿ 2020 ಪೆಬ್ರವರಿಯಲ್ಲಿ ಬಾರ್ಸಿಲೋನಾದಲ್ಲಿ ನಡೆಯುವ ಮೊಬೈಲ್ ವರ್ಲ್ಡ್ ಕಾಂಗ್ರೆಸ್ ಸಮ್ಮೇಳನದಲ್ಲಿ ತನ್ನ ಹೊಸ ಆವೃತ್ತಿಯ V60 ಥಿಂಕ್ಯೂ 5G ಸ್ಮಾರ್ಟ್‌ಫೋನ್‌ ಅನ್ನ ಬಿಡುಗಡೆ ಮಾಡುವುದಾಗಿ ಹೇಳಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಡ್ಯಯೆಲ್‌ ಸ್ಕ್ರೀನ್‌ ಮಾದರಿಯದ್ದಾಗಿದ್ದು, 5G ಮೂಲಕ ಕಾರ್ಯನಿರ್ವಹಿಸಲಿದೆ.

ಎಲೆಕ್ಟ್ರಾನಿಕ್ಸ್‌

ಇನ್ನು ಎಲ್‌ಜಿ ಎಲೆಕ್ಟ್ರಾನಿಕ್ಸ್‌ ಕ್ಷೇತ್ರದಲ್ಲಿ ತನ್ನದೇ ಆದ ಜನಪ್ರಿಯತೆಯನ್ನ ಗಳಿಸಿಕೊಂಡಿದೆ. ಅಲ್ಲದೆ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದೆ. ಅಲ್ಲದೆ ಎಲ್‌ಜಿ ಕಂಪೆನಿ ಇನ್ನು ಹೆಚ್ಚಿನ ಜನಪ್ರಿಯತೆಯನ್ನ ಪಡೆದುಕೊಳ್ಳುವುದಕ್ಕಾಗಿ ಹೊಸ ಮಾದರಿಯ ಸ್ಮಾರ್ಟ್‌ಫೋನ್‌ ಪರಿಚಯಿಸೋಕೆ ಮುಂದಾಗಿದೆ ಅಂತಾ ಎಲ್‌ಜಿ ಕಂಪೆನಿಯ ಹಿರಿಯ ಅಧಿಕಾರಿಗಳು ಸ್ಪಷ್ಟ ಪಡಿಸಿದ್ದಾರೆ. ಸದ್ಯ ಕೊರಿಯಾದ ಎಲೆಕ್ಟ್ರಾನಿಕ್ಸ್ ದೈತ್ಯ ಅಲ್ಟ್ರಾ-ಫಾಸ್ಟ್ ವೈರ್‌ಲೆಸ್ ನೆಟ್‌ವರ್ಕ್ ಅಡಿಯಲ್ಲಿ ಈ ಸ್ಮಾರ್ಟ್‌ಫೋನ್‌ ಬರಲಿದೆ ಎನ್ನಲಾಗ್ತಿದೆ.

ಡ್ಯುಯೆಲ್‌

ಈ ಹೊಸ ಸ್ಮಾರ್ಟ್‌ಫೋನ್‌ನಲ್ಲಿ ನವೀಕರಿಸಿದ ಮಡಚುವ ಡ್ಯುಯೆಲ್‌ ಸ್ಕ್ರೀನ್‌ ರಚನೆಯೂ ಇರುತ್ತದೆ. ಸದ್ಯ 6.3 ಇಂಚಿನ ಡಿಸ್‌ಪ್ಲೇಯನ್ನ ಈ ಸ್ಮಾರ್ಟ್‌ಫೋನ್‌ ಹೊಂದಿರಲಿದ್ದು ಡ್ಯುಯೆಲ್‌ ಸ್ಕ್ರೀನ್‌ ಒಳಗೊಂಡಿರಲಿದೆ. ಐಪಿ68 ವಿನ್ಯಾಸ ಮಾಡಲಾಗಿದ್ದು ಇದು ಸಂಪೂರ್ಣ ವಾಟರ್‌ಪ್ರೂಪ್‌ ಸ್ಮಾರ್ಟ್‌ಫೋನ್‌ ಆಗಿರಲಿದೆ. ಇನ್ನು ಇದು ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಹೊಂದಿರಲಿದ್ದು ಅನುಕ್ರಮವಾಗಿ 13 + 13 + 16ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಅನ್ನ ಒಳಗೊಂಡಿರಲಿದೆ. ಅಲ್ಲದೆ ಸೆಲ್ಫಿ ಕ್ಯಾಮೆರಾ ಡ್ಯುಯೆಲ್‌ ಕ್ಯಾಮೆರಾ ಆಗಿರಲಿದ್ದು 8 + 5 ಮೆಗಾಪಿಕ್ಸೆಲ್‌ ಸೆನ್ಸಾರ್‌ ಒಳಗೊಂಡಿದೆ.

ಪ್ರಿಂಟ್‌

ಜೊತೆಗೆ ಫಿಂಗರ್‌ ಪ್ರಿಂಟ್‌ ಸೆನ್ಸಾರ್ ಒಳಗೊಂಡಿದ್ದು ಈ ಸ್ಮಾರ್ಟ್‌ಫೋನ್ ಕ್ವಾಲ್‌ಕಾಮ್‌ ಸ್ನಾಪ್‌ಡ್ರಾಗನ್ 865 ಚಿಪ್‌ಸೆಟ್ ಪ್ರೊಸೆಸರ್‌ ಒಳಗೊಂಡಿದ್ದು ಅಂಡ್ರಾಯ್ಡ್ 9ಪೈ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. 6 GB RAM ಮತ್ತು 128 GB ಶೇಖರಣಾ ಸಾಮರ್ಥ್ಯವನ್ನ ಹೊಂದಿದೆ. ಅಲ್ಲದೆ ಮೆಮೊರಿ ಕಾರ್ಡ್‌ ಮೂಲಕ 2TB ತನಕ ಶೇಖರಣಾ ಸಾಮರ್ಥ್ಯವನ್ನ ವಿಸ್ತರಿಸಬಹುದಾಗಿದೆ.

Most Read Articles
Best Mobiles in India

Read more about:
English summary
LG Electronics Inc will showcase its new flagship smartphone with a dual screen and 5G connectivity at the upcoming Mobile World Congress (MWC) in February, industry sources said on Tuesday. The Korean electronics giant is scheduled to unveil the new 5G phone, V60 ThinQ, at MWC Barcelona 2020, under the ultra-fast wireless network, according to the sources.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X