ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಎಲ್‌ಜಿ W10 ಆಲ್ಫಾ ಸ್ಮಾರ್ಟ್‌ಫೋನ್!..ಬೆಲೆ 9,999 ರೂ

|

ಭಾರತೀಯ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಬಜೆಟ್‌ ಬೆಲೆಯ ಸ್ಮಾರ್ಟ್‌ಫೋನ್‌ಗಳಿಗೆನೂ ಭರವಿಲ್ಲ. ಈಗಾಗ್ಲೆ ಹಲವಾರು ಕಂಪೆನಿಗಳು ಆಕರ್ಷಕ ಫಿಚರ್ಸ್‌ಗಳನ್ನ ಒಳಗೊಂಡಿರುವ ವೈವಿಧ್ಯಮಯವಾದ ಸ್ಮಾರ್ಟ್‌ಫೋನ್‌ಗಳನ್ನು ಬಜೆಟ್‌ ಬೆಲೆಯಲ್ಲಿ ಪರಿಚಯಿಸಿವೆ. ಅದರಲ್ಲಿ ಎಲೆಕ್ಟ್ರಾನಿಕ್ಸ್‌ ದೈತ್ಯ ಎನಿಸಿಕೊಂಡಿರುವ ಎಲ್‌ಜಿ ಕಂಪನಿ ಕೂಡ ಒಂದಾಗಿದೆ. ಸದ್ಯ ಇದೀಗ ಎಲ್‌ಜಿ ಕಂಪೆನಿ ಬಜೆಟ್‌ ಬೆಲೆಯ ಹೊಸ ಸ್ಮಾರ್ಟ್‌ಫೋನ್‌ ಅನ್ನು ಮಾರುಕಟ್ಟೆಗೆ ಲಾಂಚ್‌ ಮಾಡಿದೆ.

ಹೌದು

ಹೌದು, ಎಲೆಕ್ಟ್ರಾನಿಕ್ಸ್‌ ಉತ್ತನ್ನಗಳ ಮೂಲಕ ಜನಪ್ರಿಯತೆ ಸಾಧಿಸಿರುವ ಎಲ್‌ಜಿ ಕಂಪೆನಿ ಮಿಡ್‌ರೇಂಜ್‌ ಬೆಲೆಯ ಸ್ಮಾರ್ಟ್‌ಫೋನ್‌ಗಳನ್ನ ಮಾರುಕಟ್ಟೆಗೆ ಪರಿಚಯಿಸಿ ಸೈ ಎನಿಸಿಕೊಂಡಿದೆ. ಸದ್ಯ ಎಲ್‌ಜಿ ಕಂಪನಿ ತನ್ನ ಹೊಸ ಎಲ್‌ಜಿ W10 ಆಲ್ಫಾ ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇದು ಬಜೆಟ್‌ ಬೆಲೆಯಲ್ಲಿ ದೊರೆಯಲಿರುವ ಸೆಲ್ಫಿ ಸ್ನ್ಯಾಪರ್‌, ಎಲ್‌ಇಡಿ ಪ್ಲ್ಯಾಶ್‌ ಹೊಂದಿರುವ ಸ್ಮಾರ್ಟ್‌ಫೋನ್‌ ಆಗಿದೆ. ಅಷ್ಟಕ್ಕೂ ಈ ಸ್ಮಾರ್ಟ್‌ಫೋನ್‌ ಯಾವೆಲ್ಲಾ ಫೀಚರ್ಸ್‌ಗಳನ್ನ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿ.

ಡಿಸ್‌ಪ್ಲೇ

ಡಿಸ್‌ಪ್ಲೇ

ಎಲ್‌ಜಿ W10 ಆಲ್ಫಾ ಸ್ಮಾರ್ಟ್‌ಫೋನ್ 720x1520 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಹೊಂದಿರುವ 5.71 ಇಂಚಿನ ಡಿಸ್‌ಪ್ಲೇಯನ್ನ ಹೊಂದಿದೆ. ಇದು ವಾಟರ್‌ಡ್ರಾಪ್‌ ನಾಚ್‌ಶೈಲಿಯ ಡಿಸ್‌ಪ್ಲೇ ಆಗಿದ್ದು, 19:9 ಆಸ್ಪೆಕ್ಟ್‌ ರೆಶೀಯೋ ಹೊಂದಿದೆ. ಇದಲ್ಲದೆ ಈ ಡಿಸ್‌ಪ್ಲೇಯು ಫುಲ್‌ ಎಚ್‌ಡಿ ಪ್ಲಸ್‌ ಫುಲ್‌ವಿಷನ್ ಡಿಸ್‌ಪ್ಲೇ ಆಗಿದ್ದು, ಸ್ಕ್ರೀನ್-ಟು-ಬಾಡಿ ರೆಶೀಯೋ 86.83% ರಷ್ಟಿದೆ. ಇನ್ನು ಇದು ಫುಲ್‌ವಿಷನ್‌ ಡಿಸ್‌ಪ್ಲೇ ಆಗಿರುವುದರಿಂದ ವಿಡಿಯೋ ಕರೆಯಲ್ಲಿ ಉತ್ತಮ ಅನುಭವ ನೀಡಲಿದೆ.

ಪ್ರೊಸೆಸರ್‌

ಪ್ರೊಸೆಸರ್‌

ಈ ಸ್ಮಾರ್ಟ್‌ಫೋನ್‌ 1.6GHz ಆಕ್ಟಾ-ಕೋರ್ ಯುನಿಸೋಕ್ ಎಸ್‌ಸಿ 9863 SoC ಪ್ರೊಸೆಸರ್‌ ಹೊಂದಿದ್ದು, ಆಂಡ್ರಾಯ್ಡ್‌ 9 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಇನ್ನು ಈ ಸ್ಮಾರ್ಟ್‌ಫೊನ್‌ 3GB RAM ಮತ್ತು 32GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಒಳಗೊಂಡಿದೆ. ಇದಲ್ಲದೆ ಮೆಮೊರಿ ಕಾರ್ಡ್‌ ಮೂಲಕ ಶೇಖರಣಾ ಸಾಮರ್ಥ್ಯವನ್ನ 128GB ವರೆಗೆ ವಿಸ್ತರಿಸಬಹುದಾಗಿದೆ

ಕ್ಯಾಮೆರಾ ವಿನ್ಯಾಸ

ಕ್ಯಾಮೆರಾ ವಿನ್ಯಾಸ

ಎಲ್‌ಜಿ W10 ಆಲ್ಫಾ ಸ್ಮಾರ್ಟ್‌ಫೋನ್ ರಿಯರ್‌ ಕ್ಯಾಮೆರಾ ಸೆಟ್‌ಆಪ್‌ನಲ್ಲಿ ಸಿಂಗಲ್‌ ಕ್ಯಾಮೆರಾ ಹೊಂದಿದ್ದು, ಇದು 8ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಅನ್ನು ಒಳಗೊಂಡಿದೆ. ಅಲ್ಲದೆ ಇದು ಎಲ್‌ಇಡಿ ಪ್ಲ್ಯಾಶ್‌ ಅನ್ನು ಸಹ ಹೊಂದಿದ್ದು, ಈ ಕ್ಯಾಮೆರಾ ಮೂಲಕ 1080p ವೀಡಿಯೊಗಳನ್ನು ರೆಕಾರ್ಡ್ ಮಾಡಬಹುದಾಗಿದೆ. ಇದಲ್ಲದೆ 8ಮೆಗಾಪಿಕ್ಸೆಲ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನ ನೀಡಲಾಗಿದ್ದು, ಸೆಲ್ಫಿ ಹಾಗು ವಿಡಿಯೋ ಕರೆಗಳಿಗೆ ಉತ್ತಮ ಎನಿಸಲಿದೆ. ಇನ್ನು ಕ್ಯಾಮೆರಾ ಫಿಚರ್ಸ್‌ಗಳಲ್ಲಿ ಬ್ಯೂಟಿ ಮೋಡ್‌, ಅಲ್ಟ್ರಾ ವೈಡ್‌ ಆಂಗಲ್‌ ಅನ್ನು ಸಹ ನೀಡಲಾಗಿದೆ.

ಬ್ಯಾಟರಿ ಮತ್ತು ಬೆಲೆ

ಬ್ಯಾಟರಿ ಮತ್ತು ಬೆಲೆ

ಈ ಸ್ಮಾರ್ಟ್‌ಫೋನ್‌ 3,450mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಆಪ್‌ ಅನ್ನು ಹೊಂದಿದ್ದು, ವೇಗದ ಚಾರ್ಜಿಂಗ್‌ ಬೆಂಬಲದ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ
ಎಲ್‌ಜಿ W10 ಆಲ್ಫಾ ಸ್ಮಾರ್ಟ್‌ಫೋನ್ 4G VOLTE, ವೈ-ಫೈ, ಬ್ಲೂಟೂತ್ 4.1, ಜಿಪಿಎಸ್ ಮತ್ತು ಯುಎಸ್ಬಿ ಟೈಪ್-ಸಿ ಅನ್ನು ಬೆಂಬಲಿಸಲಿದೆ. ಇನ್ನು ಈ ಸ್ಮಾರ್ಟ್‌ಫೋನ್‌ 9,999 ರೂ. ಬೆಲೆಯನ್ನ ಹೊಂದಿದ್ದು, ಕಪ್ಪು ಬಣ್ಣ ಆಯ್ಕೆಯಲ್ಲಿ ಖರೀದಿಸಬಹುದಾಗಿದೆ.

Best Mobiles in India

English summary
LG W10 Alpha has debuted in India as the company's latest budget smartphone.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X