ಎಲ್‌ಜಿಯ W10, W30 ಮತ್ತು W30 ಪ್ರೊ ಸ್ಮಾರ್ಟ್‌ಫೋನ್‌ಗಳು ಲಾಂಚ್‌!..ಬೆಲೆ?

|

ಎಲ್‌ಜಿ ಕಂಪನಿಯ ಬಹುನಿರೀಕ್ಷಿತ 'ಎಲ್‌ಜಿ W10' ಬಜೆಟ್‌ ಸ್ಮಾರ್ಟ್‌ಫೋನ್‌ ಭಾರತದಲ್ಲಿಂದು ಲಾಂಚ್‌ ಆಗಿದ್ದು, ಇದರೊಂದಿಗೆ 'ಎಲ್‌ಜಿ W30' ಮತ್ತು 'ಎಲ್‌ಜಿ W30 ಪ್ರೊ' ಹೆಸರಿನ ಎರಡು ಮೀಡ್‌ರೇಂಜ್‌ ಮಾದರಿಯ ಸ್ಮಾರ್ಟ್‌ಫೋನ್‌ಗಳು ಸಹ ಬಿಡುಗಡೆ ಆಗಿವೆ. ಸ್ಪೋರ್ಟ್ಸ್‌ AI ಆಧಾರಿತ ಕ್ಯಾಮೆರಾ ಫೀಚರ್ಸ್‌ ಮತ್ತು 4,000mAh ಬ್ಯಾಟರಿ ಶಕ್ತಿಯಿಂದ ಅಟ್ರ್ಯಾಕ್ಟ್‌ ಮಾಡುವ ಈ ಸ್ಮಾರ್ಟ್‌ಫೋನ್‌ ಗ್ರಾಹಕರ ಕೈಗೆಟುಕುವ ಬೆಲೆಯನ್ನು ಹೊಂದಿವೆ.

ಎಲ್‌ಜಿಯ W10, W30 ಮತ್ತು W30 ಪ್ರೊ ಸ್ಮಾರ್ಟ್‌ಫೋನ್‌ಗಳು ಲಾಂಚ್‌!..ಬೆಲೆ?

ಹೌದು, ಎಲ್‌ ಕಂಪನಿಯು ಭಾರತದಲ್ಲಿ (ಜೂನ್‌ 26) ತನ್ನ ಜನಪ್ರಿಯ W ಸರಣಿಯಲ್ಲಿ 'ಎಲ್‌ಜಿ W10', 'ಎಲ್‌ಜಿ W30' ಮತ್ತು ಎಲ್‌ಜಿ 'W30 ಪ್ರೊ' ಹೆಸರಿನ ಮೂರು ಸ್ಮಾರ್ಟ್‌ಫೋನ್‌ಗಳನ್ನು ರಿಲೀಸ್‌ ಮಾಡಿದೆ. ಅವುಗಳಲ್ಲಿ 'ಎಲ್‌ಜಿ W10' 8,999ರೂ. ಮತ್ತು 'ಎಲ್‌ಜಿ W30' 9,999ರೂ.ಗಳ ಪ್ರೈಸ್‌ಟ್ಯಾಗ್‌ ಅನ್ನು ಹೊಂದಿದ್ದು, ಸದ್ಯ ಭಾರತೀಯ ಮೊಬೈಲ್‌ ಮಾರುಕಟ್ಟೆಯಲ್ಲಿ ಆಕರ್ಷಣಿಯ ಕೇಂದ್ರವಾಗಿವೆ. ಹಾಗಾದರೇ ಎಲ್‌ಜಿ W10', 'ಎಲ್‌ಜಿ W30' ಮತ್ತು ಎಲ್‌ಜಿ 'W30 ಪ್ರೊ' ಸ್ಮಾರ್ಟ್‌ಫೋನ್‌ಗಳ ಫೀಚರ್ಸ್‌ ಹೇಗಿವೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಓದಿರಿ : ಹೊಸ ದಾಖಲೆ ಬರೆದ ಶಿಯೋಮಿ : 'ಮಿ ಬ್ಯಾಂಡ್ 4' ಭರ್ಜರಿ ಮಾರಾಟ!ಓದಿರಿ : ಹೊಸ ದಾಖಲೆ ಬರೆದ ಶಿಯೋಮಿ : 'ಮಿ ಬ್ಯಾಂಡ್ 4' ಭರ್ಜರಿ ಮಾರಾಟ!

ಎಲ್‌ಜಿ W10 ಡಿಸ್‌ಪ್ಲೇ

ಎಲ್‌ಜಿ W10 ಡಿಸ್‌ಪ್ಲೇ

ಎಲ್‌ಜಿ W10 ಸ್ಮಾರ್ಟ್‌ಫೋನ್‌ 720 x 1512 ಪಿಕ್ಸಲ್‌ ರೆಸಲ್ಯೂಶನ್‌ ಸಾಮರ್ಥ್ಯದೊಂದಿಗೆ 6.19 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್‌ ಫುಲ್‌ವಿಜನ್‌ LCD ಡಿಸ್‌ಪ್ಲೇಯನ್ನು ಹೊಂದಿದೆ. ಡಿಸ್‌ಪ್ಲೇಯ ಪ್ರತಿ ಇಂಚಿನ ಪಿಕ್ಸಲ್ ಸಾಂದ್ರತೆಯು 271 ppi ಆಗಿದ್ದು, ಸ್ಕ್ರೀನ್‌ನಿಂದ ಬಾಹ್ಯಬಾಡಿಯ ನಡುವಿನ ಅಂತರವು ಶೇ.80.7%ರಷ್ಟು ಆಗಿದೆ. ಹಾಗೆಯೇ ಡಿಸ್‌ಪ್ಲೇಯ ಅನುಪಾತವು 18.9:9 ಆಗಿದೆ.

ಎಲ್‌ಜಿ W10 ಪ್ರೊಸೆಸರ್‌

ಎಲ್‌ಜಿ W10 ಪ್ರೊಸೆಸರ್‌

ಎಲ್‌ಜಿ W10 ಸ್ಮಾರ್ಟ್‌ಫೋನ್‌ ಮೀಡಿಯಾ ಟೆಕ್‌ MT6762 ಹಿಲಿಯೊ P22 ಪ್ರೊಸೆಸರ್‌ ಶಕ್ತಿಯನ್ನು ಹೊಂದಿದ್ದು, ಪವರ್‌VR GE8320 ಜಿಪಿಯು ಅನ್ನು ಒಳಗೊಂಡಿದೆ. ಆಂಡ್ರಾಯ್ಡ್‌ 9.0 ಓಎಸ್‌ ಬೆಂಬಲವನ್ನು ಪಡೆದಿದ್ದು, 3GB RAM ಮತ್ತು 32 GB ಆಂತರಿಕ ಸ್ಟೋರೇಜ್‌ ಅವಕಾಶವನ್ನು ಹೊಂದಿದೆ. ಎಸ್‌ಡಿ ಕಾರ್ಡ್‌ ಮೂಲಕ ಬಾಹ್ಯ ಸಂಗ್ರಹವನ್ನು 256GB ವರೆಗೂ ವಿಸ್ತರಿಸಬಹುದು.

ಓದಿರಿ : ಸ್ಮಾರ್ಟ್‌ಫೋನ್‌ ಚಾರ್ಜ್‌ ಮಾಡುವಾಗ ಈ ಕ್ರಮಗಳನ್ನು ಮರೆಯದೇ ಅನುಸರಿಸಿ! ಓದಿರಿ : ಸ್ಮಾರ್ಟ್‌ಫೋನ್‌ ಚಾರ್ಜ್‌ ಮಾಡುವಾಗ ಈ ಕ್ರಮಗಳನ್ನು ಮರೆಯದೇ ಅನುಸರಿಸಿ!

ಎಲ್‌ಜಿ W10 ಕ್ಯಾಮೆರಾ

ಎಲ್‌ಜಿ W10 ಕ್ಯಾಮೆರಾ

ಎಲ್‌ಜಿ W10 ಸ್ಮಾರ್ಟ್‌ಫೋನ್‌ ಹಿಂಭಾಗದಲ್ಲಿ ಡ್ಯುಯಲ್‌ ರೇರ್‌ ಕ್ಯಾಮೆರಾ ಆಯ್ಕೆಯನ್ನು ಒಳಗೊಂಡಿದೆ. ಪ್ರಮುಖ ಕ್ಯಾಮೆರಾವು 13ಎಂಪಿ (PDAF) ಸಾಮರ್ಥ್ಯದಲ್ಲಿದ್ದರೇ, ಇನ್ನು ಸೆಕೆಂಡರಿ ಕ್ಯಾಮೆರಾವು 5ಎಂಪಿ ಸಾಮರ್ಥ್ಯದಲ್ಲಿದ್ದು, ಡೆಪ್ತ್‌ ಸೆನ್ಸಾರ್‌ ಹೊಂದಿದೆ. ಮತ್ತು ಸೆಲ್ಫಿ ಕ್ಯಾಮೆರಾವು 8ಎಂಪಿ ಸಾಮರ್ಥ್ಯದಲ್ಲಿದ್ದು, ಎಲ್‌ಇಡಿ ಫ್ಲ್ಯಾಶ್‌ ಆಯ್ಕೆಯನ್ನು ಸಹ ಒಳಗೊಂಡಿದೆ.

ಎಲ್‌ಜಿ W10 ಬ್ಯಾಟರಿ

ಎಲ್‌ಜಿ W10 ಬ್ಯಾಟರಿ

ಎಲ್‌ಜಿ W10 ಸ್ಮಾರ್ಟ್‌ಫೋನ್‌ 4000mAh ಸಾಮರ್ಥ್ಯದ ಬ್ಯಾಟರಿ ಪವರ್‌ ಅನ್ನು ಒಳಗೊಂಡಿದ್ದು, ಇದರೊಂದಿಗೆ ಅತ್ಯುತ್ತಮ ಚಾರ್ಜರ್‌ ಸೌಲಭ್ಯವನ್ನು ಪಡೆದಿದೆ. ಇನ್ನು ಈ ಸ್ಮಾರ್ಟ್‌ಫೋನ್‌ನಲ್ಲಿ ವೈಫೈ, ಬ್ಲೂಟೂತ್ 4.2, GPS/ A-GPS, ವೈಫೈ ಡೈರೆಕ್ಟ್‌, ಫಿಂಗರ್‌ಪ್ರಿಂಟ್ ಸೆನ್ಸಾರ್‌ (ರೇರ್‌ ಮೌಂಟೆಡ್‌) ಸೌಲಭ್ಯಗಳನ್ನು ಸಹ ನೀಡಲಾಗಿದೆ.

ಓದಿರಿ : ವಾಟ್ಸಪ್‌ನಲ್ಲಿ ಮತ್ತೆ ಹೊಸ ಫೀಚರ್‌!.ವಿಡಿಯೊ ನೋಡ್ತಾ ಚಾಟ್‌ ಮಾಡಿ!ಓದಿರಿ : ವಾಟ್ಸಪ್‌ನಲ್ಲಿ ಮತ್ತೆ ಹೊಸ ಫೀಚರ್‌!.ವಿಡಿಯೊ ನೋಡ್ತಾ ಚಾಟ್‌ ಮಾಡಿ!

ಎಲ್‌ಜಿ W30 ಡಿಸ್‌ಪ್ಲೇ

ಎಲ್‌ಜಿ W30 ಡಿಸ್‌ಪ್ಲೇ

ಎಲ್‌ಜಿ W30 ಸ್ಮಾರ್ಟ್‌ಫೋನ್‌ ಸಹ 720 x 1512 ಪಿಕ್ಸಲ್‌ ರೆಸಲ್ಯೂಶನ್‌ ಸಾಮರ್ಥ್ಯದೊಂದಿಗೆ 6.26 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್‌ IPS Dot ಫುಲ್‌ವಿಜನ್‌ ಡಿಸ್‌ಪ್ಲೇಯನ್ನು ಹೊಂದಿದೆ. ಡಿಸ್‌ಪ್ಲೇಯ ಪ್ರತಿ ಇಂಚಿನ ಪಿಕ್ಸಲ್ ಸಾಂದ್ರತೆಯು 269 ppi ಆಗಿದ್ದು, ಸ್ಕ್ರೀನ್‌ನಿಂದ ಬಾಹ್ಯಬಾಡಿಯ ನಡುವಿನ ಅಂತರವು ಶೇ.76.3%ರಷ್ಟು ಆಗಿದೆ. ಹಾಗೆಯೇ ಡಿಸ್‌ಪ್ಲೇಯ ಅನುಪಾತವು 19:9 ಆಗಿದೆ.

ಎಲ್‌ಜಿ W30 ಪ್ರೊಸೆಸರ್‌

ಎಲ್‌ಜಿ W30 ಪ್ರೊಸೆಸರ್‌

ಎಲ್‌ಜಿ W30 ಸ್ಮಾರ್ಟ್‌ಫೋನ್‌ ಮೀಡಿಯಾ ಟೆಕ್‌ MT6762 ಹಿಲಿಯೊ P22 SoC ಪ್ರೊಸೆಸರ್‌ ಅನ್ನು ಹೊಂದಿದ್ದು, ಹಾಗೆಯೇ ಪವರ್‌VR GE8320 ಜಿಪಿಯು ಅನ್ನು ಸಹ ಒಳಗೊಂಡಿದೆ. ಆಂಡ್ರಾಯ್ಡ್‌ 9.0 ಪೈ ಓಎಸ್‌ ಬೆಂಬಲವನ್ನು ಪಡೆದಿದ್ದು, 3GB RAM ಮತ್ತು 32 GB ಆಂತರಿಕ ಸ್ಟೋರೇಜ್‌ ಅವಕಾಶವನ್ನು ಹೊಂದಿದೆ. ಎಸ್‌ಡಿ ಕಾರ್ಡ್‌ ಮೂಲಕ ಬಾಹ್ಯ ಸಂಗ್ರಹವನ್ನು ವಿಸ್ತರಿಸಬಹುದಾಗಿದೆ.

ಓದಿರಿ : ಆಂಡ್ರಾಯ್ಡ್‌ ಮತ್ತು ಐಫೋನ್‌ ಬಳಕೆದಾರರಿಗೆ ಆಘಾತಕರ ಸುದ್ದಿ ನೀಡಿದ ವಾಟ್ಸಪ್!ಓದಿರಿ : ಆಂಡ್ರಾಯ್ಡ್‌ ಮತ್ತು ಐಫೋನ್‌ ಬಳಕೆದಾರರಿಗೆ ಆಘಾತಕರ ಸುದ್ದಿ ನೀಡಿದ ವಾಟ್ಸಪ್!

ಎಲ್‌ಜಿ W30 ಕ್ಯಾಮೆರಾ

ಎಲ್‌ಜಿ W30 ಕ್ಯಾಮೆರಾ

ಎಲ್‌ಜಿ W30 ಸ್ಮಾರ್ಟ್‌ಪೋನ್‌ ಹಿಂಭಾಗದಲ್ಲಿ ತ್ರಿವಳಿ ಕ್ಯಾಮೆರಾ ಆಯ್ಕೆಯನ್ನು ಹೊಂದಿದ್ದು, ರೇರ್‌ ಕ್ಯಾಮೆರಾವು 13ಎಂಪಿಯ ವೈಲ್ಡ್‌ ಆಂಗಲ್‌ ಲೆನ್ಸ್‌ ಸಾಮರ್ಥ್ಯದಲ್ಲಿದೆ. ಇನ್ನು ಸೆಕೆಂಡರಿ ಕ್ಯಾಮೆರಾವು 12ಎಂಪಿಯ ಸೆನ್ಸಾರ್‌ ಹೊಂದಿದ್ದು, ತೃತೀಯ ಕ್ಯಾಮೆರಾವು 2ಎಂಪಿಯಲ್ಲಿದ್ದು, ಡೆಪ್ತ್‌ ಸೆನ್ಸಾರ್‌ ಹೊಂದಿದೆ. ಇನ್ನು ಸೆಲ್ಫಿ ಕ್ಯಾಮೆರಾವು 16ಎಂಪಿ ಸಾಮರ್ಥ್ಯದಲ್ಲಿದ್ದು, ಆಟೋ ಫೊಕಸ್‌ ಆಯ್ಕೆಯನ್ನು ಒಳಗೊಂಡಿದೆ.

ಎಲ್‌ಜಿ W30 ಬ್ಯಾಟರಿ

ಎಲ್‌ಜಿ W30 ಬ್ಯಾಟರಿ

ಓದಿರಿ : ಸ್ಯಾಮ್‌ಸಂಗ್‌ನ ಎರಡು ಹೊಸ ಫಿಟ್ನೆಸ್‌ ಡಿವೈಸ್‌ಗಳ ಬಿಡುಗಡೆ!
ಎಲ್‌ಜಿ W30 ಸ್ಮಾರ್ಟ್‌ಫೋನ್‌ ಸಹ 4000mAh ಸಾಮರ್ಥ್ಯದ ಬ್ಯಾಟರಿ ಪವರ್‌ ಅನ್ನು ಒಳಗೊಂಡಿದ್ದು, ಇದರೊಂದಿಗೆ ಅತ್ಯುತ್ತಮ ಚಾರ್ಜರ್‌ ಸೌಲಭ್ಯವನ್ನು ಪಡೆದಿದೆ. ಇನ್ನು ಈ ಸ್ಮಾರ್ಟ್‌ಫೋನ್‌ನಲ್ಲಿ ಆಂಬಿಯಂಟ್‌ ಲೈಟ್‌ ಸೆನ್ಸಾರ್‌, ವೈಫೈ, ಬ್ಲೂಟೂತ್ 4.2, GPS/ A-GPS, ವೈಫೈ ಡೈರೆಕ್ಟ್‌, ಫಿಂಗರ್‌ಪ್ರಿಂಟ್ ಸೆನ್ಸಾರ್‌(ರೇರ್‌ ಮೌಂಟೆಡ್‌) ಸೌಲಭ್ಯಗಳನ್ನು ಸಹ ನೀಡಲಾಗಿದೆ.

ಓದಿರಿ : ಸ್ಯಾಮ್‌ಸಂಗ್‌ನ ಎರಡು ಹೊಸ ಫಿಟ್ನೆಸ್‌ ಡಿವೈಸ್‌ಗಳ ಬಿಡುಗಡೆ!ಓದಿರಿ : ಸ್ಯಾಮ್‌ಸಂಗ್‌ನ ಎರಡು ಹೊಸ ಫಿಟ್ನೆಸ್‌ ಡಿವೈಸ್‌ಗಳ ಬಿಡುಗಡೆ!

ಎಲ್‌ಜಿ W30 ಪ್ರೊ ಫೀಚರ್ಸ್‌ ಹೈಲೈಟ್ಸ್‌

ಎಲ್‌ಜಿ W30 ಪ್ರೊ ಫೀಚರ್ಸ್‌ ಹೈಲೈಟ್ಸ್‌

ಎಲ್‌ಜಿ W30 ಪ್ರೊ ಸ್ಮಾರ್ಟ್‌ಫೋನ್‌ 6.21 ಹೆಚ್‌ಡಿ ಪ್ಲಸ್‌ ಫುಲ್‌ವಿಜನ್‌ ಡಿಸ್‌ಪ್ಲೇಯನ್ನು ಹೊಂದಿದೆ. ಸ್ನ್ಯಾಪ್‌ಡ್ರಾಗನ್‌ 632 SoC ಪ್ರೊಸೆಸರ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ. 4GB RAM ಮತ್ತು 64GB ಆಂತರಿಕ ಸ್ಟೋರೇಜ್‌ ಸ್ಥಳಾವಕಾಶವನ್ನು ಸಹ ಒಳಗೊಂಡಿದ್ದು, 13ಎಂಪಿ + 8ಎಂಪಿ + 16ಎಂಪಿಯ ತ್ರಿವಳಿ ಕ್ಯಾಮೆರಾ ಆಯ್ಕೆಗಳನ್ನು ಹೊಂದಿದೆ. ಈ ಫೋನ್‌ ಸಹ 4,000mAh ಬ್ಯಾಟರಿ ಬಲವನ್ನು ಪಡೆದುಕೊಂಡಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಎಲ್‌ಜಿ W10, ಎಲ್‌ಜಿ W30 ಮತ್ತು ಎಲ್‌ಜಿ W30 ಪ್ರೊ ಸ್ಮಾರ್ಟ್‌ಫೋನ್‌ಗಳು ಲಾಂಚ್‌ ಆಗಿದ್ದು, ಎಲ್‌ಜಿ W10 ಬೆಲೆಯು 8,999ರೂ.ಗಳು ಮತ್ತು ಎಲ್‌ಜಿ W30 9,999ರೂ ಆಗಿವೆ. ಆದರೆ ಎಲ್‌ಜಿ W30 ಪ್ರೊ ಸ್ಮಾರ್ಟ್‌ಫೋನ್‌ ಬೆಲೆಯನ್ನು ಕಂಪನಿಯು ಬಹಿರಂಗ ಪಡಿಸಿಲ್ಲ. ಎಲ್‌ಜಿ W10 ಮತ್ತು ಎಲ್‌ಜಿ W30 ಸ್ಮಾರ್ಟ್‌ಫೋನ್‌ಗಳ ಮೊದಲ ಫ್ಲ್ಯಾಶ್‌ ಸೇಲ್‌ ಇದೇ ಜುಲೈ 3ರಂದು ಅಮೆಜಾನ್‌ನಲ್ಲಿ ನಡೆಯಲಿದೆ.

ಓದಿರಿ : ನೋಕಿಯಾ 7.1 ಸ್ಮಾರ್ಟ್‌ಫೋನ್‌ ಬೆಲೆ ಕುಸಿತ!ಓದಿರಿ : ನೋಕಿಯಾ 7.1 ಸ್ಮಾರ್ಟ್‌ಫೋನ್‌ ಬೆಲೆ ಕುಸಿತ!

Best Mobiles in India

English summary
LG W10 and W30 will go on sale in India starting July 3, however the availability of the W30 Pro is yet to be announced. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X