ಅಶ್ಲೀಲ ತಾರೆಗಳಿಗೆ ಟ್ವಿಟರ್ ನಲ್ಲಿ ಸುಗ್ಗಿಯೋ ಸುಗ್ಗಿ

Posted By: Varun
ಅಶ್ಲೀಲ ತಾರೆಗಳಿಗೆ ಟ್ವಿಟರ್ ನಲ್ಲಿ ಸುಗ್ಗಿಯೋ ಸುಗ್ಗಿ

ಪ್ರಪಂಚದ ನಂ.1 ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟರ್ ನಲ್ಲಿ ಸಿನಿಮಾ ನಟರು ಇಲ್ಲಾ ಎಂದರೆ ಅದೇನೋ ಅವಮಾನ ಅನ್ನುವಷ್ಟರ ಮಟ್ಟಿಗೆ ಖ್ಯಾತವಾಗಿಬಿಟ್ಟಿದೆ.

ಉಂಡಿದ್ದು, ಸೀನಿದ್ದು, ಕೆಮ್ಮಿದ್ದು, ಅವ್ರ ಇವರ ಜೊತೆ ಓಡಾಡಿದ್ದು, ಈ ರೀತಿ ದಿನ ಏನೇನು ಮಾಡ್ತಾರೆ ಅಂತ ಅದನ್ನೆಲ್ಲ ತಮ್ಮ ಅಭಿಮಾನಿಗಳಿಗೆ ವರದಿ ಒಪ್ಪಿಸೋ ಥರ ಬರೆದು ಬರೆದು ಹಾಕ್ತಾರೆ. ಇದೆಲ್ಲಾ ಹಿಂಬಾಲಿಸೋ ತಾರೆಗಳ ಅಭಿಮಾನಿಗಳಿಗೆ ತಮ್ಮ ಸ್ಟಾರ್ ಏನು ಮಾಡ್ತಾರೆ ಅನ್ನೋದೇ ಮನರಂಜನೆಯಾಗಿದೆ.

ಇದೇನು ಮಹಾ ನಾವು ಕೂಡ ಮನರಂಜನೆಯನ್ನ ಕಾಮಪೀಡಿತ ಜನರಿಗೆ ಕೊಡಲು ಟ್ವಿಟರ್ ನಲ್ಲಿ ಸಿದ್ಧವಾಗಿದ್ದೇವೆ ಎಂದು ಅಶ್ಲೀಲ ಚಿತ್ರಗಳಲ್ಲಿ ನಟಿಸುವ ತಾರೆಗಳು ಹಾಗು ಲೈಂಗಿಕ ಉದ್ಯಮದಲ್ಲಿ ಇರುವವರು ಸಿದ್ಧವಾಗಿದ್ದು, ತಮ್ಮ ಉದ್ಯಮವನ್ನು ಮತ್ತಷ್ಟು ವಿಸ್ತರಿಸಿಕೊಳ್ಳಲು, ಹೆಚ್ಚು ಹೆಚ್ಚು ಜನರನ್ನು ಮರುಳು ಮಾಡಲು ಟ್ವಿಟರ್ನಲ್ಲಿಸಕ್ರೀಯವಾಗಿರುವುದು ಕಂಡು ಬಂದಿದೆ.

ಈ ರೀತಿಯ ಬೆಳವಣಿಗೆಯೊಂದು ಇತ್ತೀಚೆಗೆ ಜಾಸ್ತಿಯಾಗಿದ್ದು, ಗ್ರಾಹಕರನ್ನು ಸೆಳೆಯಲು,ತಮ್ಮ ನಗ್ನ ಚಿತ್ರಗಳನ್ನು ಹಾಕಿ, ಅದನ್ನೇ ಹುಡುಕುತ್ತಿರುವ ಜನರನ್ನು ಬಲೆಗೆ ಬೀಳಿಸುತ್ತಾರೆ. ಸಾಮಾನ್ಯವಾಗಿ ವ್ಯವಹಾರ ಮಾಡುವಾಗ ಪೋಲೀಸರ ತೊಂದರೆ ಇದ್ದೇ ಇರುವುದರಿಂದ, ಟ್ವಿಟರ್ ಒಂದು ಸುಲಭ ಮಾರ್ಗವಾಗಿದ್ದು, ಖರ್ಚು ಇಲ್ಲದೆ ಮಿಕವನ್ನು ಹುಡುಕುವುದು ಆರಾಮಾಗಿದ್ದು, ತಮ್ಮ ಗ್ರಾಹಕನ ಬಗ್ಗೆ ಮೊದಲೇ ಗೊತ್ತಾಗುವುದರಿಂದ ಹಾಗು ಮಧ್ಯವರ್ತಿಗಳಿಗೆ ಕಮಿಷನ್ ಕೂಡ ಕೊಡುವುದನ್ನೂ ತಪ್ಪಿಸಬಹುದಾಗಿರುವುದರಿಂದ ಈ ರೀತಿ ಟ್ವಿಟರ್ ಬಳಕೆ ಜಾಸ್ತಿಯಾಗಿದೆಯಂತೆ.

ಅಮೇರಿಕಾ ದಂತಹ ಮುಂದುವರೆದ ದೇಶಗಳಲ್ಲಿ ಈ ರೀತಿ ಮಾರುಕಟ್ಟೆ ಇದ್ದು ಈಗ ಈ ಚಾಳಿ ಭಾರತಕ್ಕೂ ಬಂದಿದ್ದು, ಇಂಟರ್ನೆಟ್ ನಲ್ಲಿ ಕಾಮಾಸಕ್ತರು ಇನ್ನು ಟ್ವಿಟರ್ ನಲ್ಲಿ ಸುಗ್ಗಿ ಮಾಡಬಹುದು.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot