ಗ್ರಾಹಕರಿಗೆ ಗುಡ್‌ನ್ಯೂಸ್‌!..ಇನ್ಮುಂದೆ ಗ್ಯಾಸ್ ಸಿಲಿಂಡರ್‌ಗಳಿಗೂ QR ಕೋಡ್‌!

|

ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಗ್ಯಾಸ್ ಕಳ್ಳತನವನ್ನು ತಡೆಗಟ್ಟಲು ಸರ್ಕಾರವು ಸದ್ಯದಲ್ಲೇ ಎಲ್‌ಪಿಜಿ (LPG) ಸಿಲಿಂಡರ್‌ಗಳನ್ನು ಕ್ಯೂಆರ್ (QR) ಕೋಡ್‌ಗಳೊಂದಿಗೆ ಸಜ್ಜುಗೊಳಿಸುವುದಾಗಿ ಘೋಷಿಸಿದ್ದಾರೆ.

ಗ್ಯಾಸ್ ಸಿಲಿಂಡರ್‌

ಗ್ರಾಹಕರು ತಮ್ಮ ಗೃಹಬಳಕೆಯ ಗ್ಯಾಸ್ ಸಿಲಿಂಡರ್‌ನಲ್ಲಿ ಜಾಹೀರಾತು ನೀಡಿದ್ದಕ್ಕಿಂತ 1-2 ಕೆಜಿ ಕಡಿಮೆ ಗ್ಯಾಸ್ ಇದೆ ಎಂದು ಗ್ರಾಹಕರು ಆಗಾಗ್ಗೆ ದೂರು ನೀಡುತ್ತಿರುವುದರಿಂದ ಗೃಹ ಬಳಕೆಯ ಎಲ್‌ಪಿಜಿ (LPG) ಸಿಲಿಂಡರ್‌ಗಳಲ್ಲಿ ಕ್ಯೂಆರ್ (QR) ಕೋಡ್ ಹಾಕಲು ಸರ್ಕಾರ ಮುಂದಾಗಿದೆ.

ಕ್ಯೂಆರ್ ಕೋಡ್

ಈ ಕ್ಯೂಆರ್ ಕೋಡ್ ಅನ್ನು ಸದ್ಯ ಚಾಲ್ತಿ ಇರುವ ಸಿಲಿಂಡರ್‌ಗಳ ಮೇಲೆ ಅಂಟಿಸಲಾಗುತ್ತದೆ ಮತ್ತು ಹೊಸದಕ್ಕೆ ಸೇರಿಸಲಾಗುತ್ತದೆ. ಇನ್ನು ಈ ಸೇವೆಯಿಂದಾಗಿ ಗ್ಯಾಸ್ ಕಳ್ಳತನ, ಟ್ರ್ಯಾಕಿಂಗ್ ಮತ್ತು ಟ್ರೇಸಿಂಗ್ ಮತ್ತು ಗ್ಯಾಸ್ ಸಿಲಿಂಡರ್‌ಗಳ ಉತ್ತಮ ದಾಸ್ತಾನು ನಿರ್ವಹಣೆಯ ಸದ್ಯ ಇರುವ ಹಲವಾರು ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಸಚಿವರು ಹೇಳಿದರು.

ಸಿಲಿಂಡರ್‌ಗಳಲ್ಲಿ ಗ್ಯಾಸ್

ಸರ್ಕಾರದ ಈ ಕ್ರಮವು QR ಕೋಡ್ ಅನ್ನು ಬಳಸಿಕೊಂಡು ಸಿಲಿಂಡರ್‌ಗಳಲ್ಲಿ ಗ್ಯಾಸ್ ಪ್ರಮಾಣವನ್ನು ಪತ್ತೆಹಚ್ಚಲು ಸಹಾಯ ಮಾಡುವ ಗುರಿಯನ್ನು ಹೊಂದಿದೆ. ಇದಲ್ಲದೆ, ಗ್ಯಾಸ್ ಸಿಲಿಂಡರ್‌ನಿಂದ ಕದ್ದ ಅನಿಲವನ್ನು ಕಂಡುಹಿಡಿಯುವುದಕ್ಕೆ ನೆರವಾಗಲಿದೆ ಎಂದು ಹೇಳಲಾಗಿದೆ.

ಈ ಯೋಜನೆ ಮೂರು ತಿಂಗಳಲ್ಲಿ ಜಾರಿ

ಈ ಯೋಜನೆ ಮೂರು ತಿಂಗಳಲ್ಲಿ ಜಾರಿ

ಅಂದಹಾಗೆ ಈ ಯೋಜನೆಯನ್ನು ಮೂರು ತಿಂಗಳಲ್ಲಿ ಪೂರ್ಣಗೊಳಿಸಲು ನಿರ್ಧರಿಸಲಾಗಿದೆ. ಹೊಸ ಗ್ಯಾಸ್ ಸಿಲಿಂಡರ್‌ನಲ್ಲಿ ಕ್ಯೂಆರ್ ಕೋಡ್ ಅನ್ನು ಇರಿಸಲಾಗುವುದು ಎಂದು ಗಮನಿಸಬೇಕು. ಗ್ಯಾಸ್ ಸಿಲಿಂಡರ್ ಕ್ಯೂಆರ್ ಕೋಡ್‌ನೊಂದಿಗೆ ಲೋಹದ ಸ್ಟಿಕ್ಕರ್ ಅನ್ನು ಸಹ ಹೊಂದಿರುತ್ತದೆ.

ಡೆಲಿವರಿ

ಈ ಮೊದಲು ಗ್ರಾಹಕರು ಸಿಲಿಂಡರ್‌ನಲ್ಲಿ ಕಡಿಮೆ ಗ್ಯಾಸ್ ಪಡೆಯುವ ಬಗ್ಗೆ ದೂರು ನೀಡಿದಾಗ, ಅಂತಹ ಗ್ಯಾಸ್ ದೂರುಗಳನ್ನು ಪತ್ತೆಹಚ್ಚುವುದು ಕಷ್ಟಕರವಾಗಿತ್ತು. ಮೊದಲು, ವಿತರಕರು ಗ್ಯಾಸ್ ಸಿಲಿಂಡರ್ ಅನ್ನು ತೆಗೆದ ಸ್ಥಳ ಅಥವಾ ಅದನ್ನು ಗ್ರಾಹಕರ ಮನೆಗೆ ಇರಿಸಿದ ಡೆಲಿವರಿ ವ್ಯಕ್ತಿಯ ಗುರುತು ತಿಳಿದಿರಲಿಲ್ಲ. ಈ ನಿಟ್ಟಿನಲ್ಲಿ, QR ಕೋಡ್ ಅನ್ನು ಸೇರಿಸದರೆ ಎಲ್ಲವನ್ನೂ ಪತ್ತೆಹಚ್ಚಲು ಸುಲಭವಾಗುತ್ತದೆ. ಇದರಿಂದ ಗ್ಯಾಸ್ ಕದಿಯಲು ಸಾಧ್ಯವಾಗುವುದಿಲ್ಲ ಹಾಗೂ ಗ್ರಾಹಕರು ನಿರಾಳರಾಗಿರಬಹುದು.

ಇದ್ರಲ್ಲಿ ಎಷ್ಟು ಬಾರಿ

QR ಕೋಡ್‌ಗಳನ್ನು ಬಳಸುವುದರ ಪ್ರಯೋಜನಗಳು ಕಳ್ಳತನವನ್ನು ತಡೆಗಟ್ಟುವುದನ್ನು ಮೀರಿವೆ. ಇದ್ರಲ್ಲಿ ಎಷ್ಟು ಬಾರಿ ಅನಿಲವನ್ನು ಮರುಪೂರಣಗೊಳಿಸಲಾಗಿದೆ ಎಂದು ಗ್ರಾಹಕರಿಗೆ ತಿಳಿಯುತ್ತದೆ. ರೀಫಿಲ್ಲಿಂಗ್ ಸ್ಟೇಷನ್‌ನಿಂದ ನಿಮ್ಮ ಮನೆಗೆ ಗ್ಯಾಸ್ ಹೋಗಲು ಎಷ್ಟು ಸಮಯ ತೆಗೆದುಕೊಂಡಿತು? ಹೆಚ್ಚುವರಿಯಾಗಿ, ಯಾವ ಡೀಲರ್ ಗ್ಯಾಸ್ ಸಿಲಿಂಡರ್ ಅನ್ನು ವಿತರಿಸಿದ್ದಾರೆ ಎಂಬುದು ಈ ಕ್ಯೂಆರ್ ಕೋಡ್‌ನಿಂದ ತಿಳಿಯುವುದರಿಂದ, ಇನ್ಮುಂದೆ ವಾಣಿಜ್ಯ ಉದ್ದೇಶಗಳಿಗಾಗಿ ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ ಅನ್ನು ಬಳಸಲು ಸಾಧ್ಯವಾಗುವುದಿಲ್ಲ.

ಎಲ್‌ಪಿಜಿ ಸಿಲಿಂಡರ್‌

ಯೋಜನೆಯು ಈಗ ಸರ್ಕಾರದಿಂದ ಕೆಲಸ ಮಾಡುತ್ತಿದೆ ಮತ್ತು ಈ ಯೋಜನೆಯನ್ನು ಮೂರು ತಿಂಗಳಲ್ಲಿ ಪೂರ್ಣಗೊಳಿಸುವ ಗುರಿ ಇದೆ. ಮೊದಲ ಕಂತಾಗಿ, ಕ್ಯೂಆರ್ ಕೋಡ್ ಅಳವಡಿಸಿದ 20,000 ಎಲ್‌ಪಿಜಿ ಸಿಲಿಂಡರ್‌ಗಳನ್ನು ಬಿಡುಗಡೆ ಮಾಡಲಾಗಿದೆ.

14.2 ಕೆಜಿ ಯ ಎಲ್‌ಪಿಜಿ ಸಿಲಿಂಡರ್‌

ಎಲ್ಲಾ 14.2 ಕೆಜಿ ಯ ಎಲ್‌ಪಿಜಿ ಸಿಲಿಂಡರ್‌ಗಳು ಮುಂದಿನ ಮೂರು ತಿಂಗಳ ಅವಧಿಯಲ್ಲಿ ಕ್ಯೂಆರ್ ಕೋಡ್‌ನೊಂದಿಗೆ ಎಂಬೆಡ್ ಆಗಲಿದ್ದು, ಎಲ್ಲಾ ಹಳೆಯ ಎಲ್‌ಪಿಜಿ ಸಿಲಿಂಡರ್‌ಗಳಲ್ಲಿ ವಿಶೇಷ ಸ್ಟಿಕ್ಕರ್ ಅನ್ನು ಸೇರಿಸಲಾಗುತ್ತದೆ. ಈ QR ಕೋಡ್‌ಗಳು ಗ್ರಾಹಕರಿಗೆ ಸಿಲಿಂಡರ್‌ನ ಬಗ್ಗೆ ಮಾಹಿತಿಯನ್ನು ಪ್ರವೇಶಿಸಲು ಅನುಮತಿಸುತ್ತದೆ. ಅದನ್ನು ಎಲ್ಲಿಂದ ಫಿಲ್ ಮಾಡಲಾಗಿದೆ, ವಿತರಕರು ಯಾರು, ಸುರಕ್ಷತಾ ಪರೀಕ್ಷೆಗಳನ್ನು ಮಾಡಲಾಗಿದೆಯೇ ಎಂಬ ಮಾಹಿತಿ ಪಡೆಯಬಹುದು.

Best Mobiles in India

English summary
The Indian government will install QR codes on LPG cylinders to prevent gas theft.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X