Subscribe to Gizbot

ಕಬಾಲಿ ಬಿಡುಗಡೆ; 169 ಸರ್ವೀಸ್ ಪ್ರೊವೈಡರ್, 225 ವೆಬ್‌ಸೈಟ್‌ ಬ್ಯಾನ್

Written By:

ರಜಿನಿಕಾಂತ್‌'ರವರ ತಮಿಳಿನ ಬಹುನಿರೀಕ್ಷಿತ ಸಿನಿಮಾ 'ಕಬಾಲಿ' ಜುಲೈ 22 ರಂದು ಬಿಡುಗಡೆಯಾಗುತ್ತಿರುವುದು ಸಿನಿಪ್ರಿಯರಿಗೆ ತಿಳಿದಿರುವ ವಿಷಯ. ಆದ್ರೆ ಅಘಾತಕಾರಿ ವಿಷಯ ಅಂದ್ರೆ ಸಿನಿಮಾ ಪೈರಸಿ ಭಯವು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದ್ದು, ಈ ಭಯ ಈಗ 'ಕಬಾಲಿ' ನಿರ್ಮಾಪಕರನ್ನು ಕಾಡಿದೆ.

100 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ 'ಕಬಾಲಿ' ಸಿನಿಮಾ ಪೈರಸಿ ಆಗದಂತೆ ಸುರಕ್ಷತೆಗಾಗಿ, 'ಮದ್ರಾಸ್‌ ಹೈಕೋರ್ಟ್‌' 169 ಆನ್‌ಲೈನ್‌ ವೀಡಿಯೊ ಸೇವೆ ಒದಗಿಸುವವರು ಮತ್ತು 225 ವೆಬ್‌ಸೈಟ್‌ಗಳನ್ನು ಬ್ಯಾನ್ ಮಾಡಿದೆ. ಈ ಬಗ್ಗೆ ವಿಶೇಷ ಮಾಹಿತಿಯನ್ನು ಲೇಖನದ ಸ್ಲೈಡರ್‌ನಲ್ಲಿ ಓದಿರಿ.

ಅಶ್ಲೀಲ ವೆಬ್‌ಸೈಟ್‌ಗಳನ್ನು ಕಂಪ್ಯೂಟರ್‌ನಲ್ಲಿ ಬ್ಲಾಕ್‌ ಮಾಡುವುದು ಹೇಗೆ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಮದ್ರಾಸ್‌ ಹೈಕೋರ್ಟ್‌

ಮದ್ರಾಸ್‌ ಹೈಕೋರ್ಟ್‌

ರಜಿನಿಕಾಂತ್‌'ರವರ ಬಹು ನಿರೀಕ್ಷಿತ ಸಿನಿಮಾ 'ಕಬಾಲಿ' ಬಿಡುಗಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಮದ್ರಾಸ್‌ ಹೈಕೋರ್ಟ್‌ ಶುಕ್ರವಾರ (ಜುಲೈ 15) 169 ವೀಡಿಯೊ ಸೇವೆ ಒದಗಿಸುವವರು ಮತ್ತು 225 ವೆಬ್‌ಸೈಟ್‌ಗಳನ್ನು ಬ್ಯಾನ್‌ ಮಾಡಿದೆ.

ಕಬಾಲಿ ಸಿನಿಮಾ

ಕಬಾಲಿ ಸಿನಿಮಾ

ರಜಿನಿಕಾಂತ್‌'ರವರು ನಟಿಸಿರುವ 'ಕಬಾಲಿ' ಸಿನಿಮಾವನ್ನು ಜುಲೈ 22 ರಂದು ಬಿಡುಗಡೆ ಮಾಡಲು ನಿಶ್ಚಯಿಸಲಾಗಿದೆ. ಆದ್ದರಿಂದ ಸಿನಿಮಾ ನಿರ್ಮಾಪಕರಾದ 'ಕಲೈಪುಲಿ ಎಸ್‌ ತನು'ರವರು ಸಿನಿಮಾ ಪೈರಸಿ ಆಗದಂತೆ ಸುರಕ್ಷತೆ ನೀಡಿ ಎಂದು ಕೋರ್ಟಿನಲ್ಲಿ ವಿನಂತಿಸಿಕೊಂಡಿದ್ದರು.

ಕಲೈಪುಲಿ ಎಸ್‌ ತನು

ಕಲೈಪುಲಿ ಎಸ್‌ ತನು

'ಕಲೈಪುಲಿ ಎಸ್‌ ತನು'ರವರು ಡೈರೆಕ್ಟ್‌ ಇಂಟರ್ನೆಟ್‌ ಸರ್ವೀಸ್‌ ಪ್ರೊವೈಡರ್ಸ್‌ಗಳ ವೆಬ್‌ಸೈಟ್‌ಗಳ ಆಕ್ಸೆಸ್ ಬ್ಲಾಕ್‌ ಮಾಡಬೇಕೆಂದು ಕೇಳಿಕೊಂಡಿದ್ದರು.

ಅರ್ಜಿದಾರರು ಕೇಳಿದ್ದೇನು?

ಅರ್ಜಿದಾರರು ಕೇಳಿದ್ದೇನು?

ವೆಬ್‌ಸೈಟ್‌ ಬಳಕೆದಾರರು ಕೇವಲ 20 ರೂಪಾಯಿಗೆ ಕೆಲವೇ ನಿಮಿಷಗಳಲ್ಲಿ ಸಿನಿಮಾ ಡೌನ್‌ಲೋಡ್‌ ಮಾಡಬಹುದಾಗಿದ್ದು, ಇದರಿಂದ ನಿರ್ಮಾಪಕರು ಬೃಹತ್‌ ನಷ್ಟಕ್ಕೆ ಒಳಗಾಗುತ್ತಾರೆ. 'ಕಬಾಲಿ' ಸಿನಿಮಾ ನಿರ್ಮಾಣ ವೆಚ್ಚ 100 ಕೋಟಿ ಆಗಿದೆ. ಆದ್ದರಿಂದ ಸುರಕ್ಷತೆ ನೀಡಬೇಕೆಂದು ಕೇಳಿಕೊಂಡಿದ್ದರು.

ಇರೈವೈ ಸಿನಿಮಾ

ಇರೈವೈ ಸಿನಿಮಾ

ತಮಿಳಿನ 'ಇರೈವೈ' ಸಿನಿಮಾ ಜೂನ್‌ 3 ರಂದು ಬಿಡುಗಡೆಯಾಗಿತ್ತು, ಜೂನ್‌ 4 ರಂದು ಇರೈವೈ ಪೈರಸಿ ಆಗಿದ್ದರಿಂದ ಸಿನಿಮಾವನ್ನು ಕಾನೂನು ಬಾಹಿರವಾಗಿ ಡೌನ್‌ಲೋಡ್‌ ಮಾಡಲು ಅವಕಾಶವಿತ್ತು.ಅಲ್ಲದೇ ಜೂನ್‌ 30 ರೊಳಗೆ ಇರೈವೈ ಸಿನಿಮಾ 1.1 ಲಕ್ಷ ಡೌನ್‌ಲೋಡ್ ಆಗಿತ್ತು. ಇದರಿಂದ ಇಂಟರ್ನೆಟ್‌ ಸೇವೆ ಒದಗಿಸುವವರಿಗೆ 23 ಲಕ್ಷ ಲಾಭವಾಗಿತ್ತು ಎಂದು ಹಿರಿಯ ವಕೀಲರಾದ ವಿಜಯ್‌ ನಾರಾಯಣ್‌ ಕೋರ್ಟ್‌ನಲ್ಲಿ ಹೇಳಿದ್ದರು.

 160 ಐಪಿಎಸ್ ಲೈಸನ್ಸ್‌

160 ಐಪಿಎಸ್ ಲೈಸನ್ಸ್‌

"ಭಾರತದಲ್ಲಿ 160 ಐಪಿಎಸ್ ಲೈಸೆನ್ಸ್‌ ಪಡೆದಿದ್ದು, ಸುಮಾರು ಶೇಕಡ 70 ರಷ್ಟು ಲಾಭವು ಇಂಟರ್ನೆಟ್‌ ಸೇವೆ ಒದಗಿಸುವವರಿಗೆ ಕಾನೂನು ಬಾಹಿರ ಡೌನ್‌ಲೋಡ್‌ನಿಂದ ಬರುತ್ತದೆ. ಇವುಗಳು ಸಂಪೂರ್ಣವಾಗಿ ಲೈಸನ್ಸ್‌ ನೀತಿಗಳನ್ನು ಉಲ್ಲಂಘಿಸುತ್ತಿವೆ" ಎಂದು ನಾರಾಯಣ್‌'ರವರು ಹೇಳಿದ್ದಾರೆ.

ಗಿಜ್‌ಬಾಟ್‌

ಗಿಜ್‌ಬಾಟ್‌

ಇಂಟರ್ನೆಟ್ ಕುರಿತಾದ 20 ರೋಚಕ ರಹಸ್ಯಗಳು

ಶಾಹೀದ್ ಕಪೂರ್ ಖಾತೆ ಹ್ಯಾಕ್?

ಓದಿರಿ ಗಿಜ್‌ಬಾಟ್‌ ಲೇಖನಗಳು

ಓದಿರಿ ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌ ಫೇಸ್‌ಬುಕ್ ಪೇಜ್‌
ಕನ್ನಡ.ಗಿಜ್‌ಬಾಟ್‌.ಕಾಂ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Madras High Court bans 169 service providers, 225 websites from releasing 'Kabali'. Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot