ಮಲೆಷ್ಯಾದಲ್ಲಿ 17 ವರ್ಷದೊಳಗಿನ ಮಕ್ಕಳಿಗೆ ಇಂಟರ್‌ನೆಟ್‌ ನಿಷೇಧ!!..ಏಕೆ ಗೊತ್ತಾ?

|

ಮಕ್ಕಳ ಮೇಲೆ ಅಂತರ್ಜಾಲವು ಬೀರುತ್ತಿರುವ ದುಷ್ಪರಿಣಾಮಗಳನ್ನು ತಡೆಯುವ ಸಲುವಾಗಿ 17 ವರ್ಷದೊಳಗಿನ ಯುವಪೀಳಿಗೆಗೆ ರಾತ್ರಿ ವೇಳೆ( ಬೆಳಗಿನ ಜಾವ) ಅಂತರ್ಜಾಲವನ್ನು ನಿಷೇಧಿಸುವ ನಿರ್ಧಾರವನ್ನು ತೆಗೆದುಕೊಳ್ಳಲು ಮಲೇಷ್ಯಾ ಸರಕಾರ ಯೋಜಿಸುತ್ತಿದೆ. ಸಾಮಾಜಿಕ ಜಾಲತಾಣ ಬಳಕೆಯ ಚಟ ಹತ್ತಿಕ್ಕಲು ಸರ್ಕಾರ ಕ್ರಮಕೈಗೊಳ್ಳುತ್ತಿದೆ.

ವಿಡಿಯೊ ಗೇಮ್‌ ಮತ್ತು ಸಾಮಾಜಿಕ ಜಾಲತಾಣ ಬಳಕೆಯ ಚಟ ಹತ್ತಿಕ್ಕಲು ರಾತ್ರಿ 12 ಗಂಟೆಯಿಂದಳಗಿನ ಜಾವ 6 ಗಂಟೆವರೆಗೆ ಇಂಟರ್‌ನೆಟ್‌ ಬಳಕೆ ನಿಷೇಧಿಸಲು ಮಲೇಷ್ಯಾ ಸರಕಾರ ಯೋಜಿಸುತ್ತಿದೆ. ಉಪ ಆರೋಗ್ಯ ಸಚಿವ ಡಾ.ಲೀ ಬೂನ್‌ ಚೈ ಅವರು ಈ ಬಗ್ಗೆ ಮಲೇಷ್ಯಾ ಸಂಸತ್‌ಗೆ ಮಾಹಿತಿ ನೀಡಿದ್ದು ಅನುಷ್ಠಾನದ ಬಗ್ಗೆ ಅಭಿಪ್ರಾಯವನ್ನು ಕೇಳಿದ್ದಾರೆ.

ಮಲೆಷ್ಯಾದಲ್ಲಿ 17 ವರ್ಷದೊಳಗಿನ ಮಕ್ಕಳಿಗೆ ಇಂಟರ್‌ನೆಟ್‌ ನಿಷೇಧ!!..ಏಕೆ ಗೊತ್ತಾ?

ಜಪಾನ್‌ ಮತ್ತು ದಕ್ಷಿಣ ಕೊರಿಯಾದಲ್ಲಿ ತೆಗೆದುಕೊಂಡಿರುವ ಕ್ರಮಗಳ ಮಾದರಿಯಲ್ಲಿ ಅಂತರ್ಜಾಲದ ಚಟ ದೂರಮಾಡಲು ಕೆಲವೊಂದು ನಿಯಮಗಳನ್ನು ಅನುಷ್ಠಾನಗೊಳಿಸಲು ಚಿಂತಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಹಾಗಾದರೆ, ಯುವಪೀಳಿಗೆ ಅಂತರ್ಜಾಲ ಹೇಗೆ ಮಾರಕ? ಮಲೆಷ್ಯಾದಲ್ಲಿ ಅಂತರ್ಜಾಲ ನಿಷೇಧವೇಕೆ ಎಂಬುದನ್ನು ಮುಂದೆ ತಿಳಿಯಿರಿ.

ಅಧ್ಯಯನ ನೀಡಿದ ಎಚ್ಚರಿಕೆ!

ಅಧ್ಯಯನ ನೀಡಿದ ಎಚ್ಚರಿಕೆ!

ವಿಶ್ವ ಆರೋಗ್ಯ ಸಂಸ್ಥೆಯು ವಿಡಿಯೋ ಗೇಮ್‌ ಚಟವನ್ನು ಮಾನಸಿಕ ಆರೋಗ್ಯ ಕಾಯಿಲೆ ಎಂದು ವಿಭಾಗೀಕರಿಸಿದೆ. ವಿಡಿಯೋ ಗೇಮ್‌ ಮತ್ತು ಸಾಮಾಜಿಕ ಜಾಲತಾಣ ಆಪ್‌ಗಳ ಅತಿಯಾದ ಬಳಕೆಯು ಮಕ್ಕಳ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ಈ ಬಗ್ಗೆ ದೇಶದಲ್ಲಿ ನಡೆದಿರುವ ಅಧ್ಯಯನ ಕೂಡ ಎಚ್ಚರಿಕೆ ನೀಡಿದೆ ಎಂದು ಲೀ ಬೂನ್‌ ಚೈ ತಿಳಿಸಿದ್ದಾರೆ.

ಶೇ.34.9ರಷ್ಟು ಮಕ್ಕಳಿಗೆ ಇಂಟರ್ನೆಟ್ ಚಟ

ಶೇ.34.9ರಷ್ಟು ಮಕ್ಕಳಿಗೆ ಇಂಟರ್ನೆಟ್ ಚಟ

ಕಳೆದ ವರ್ಷ ಮಲೇಷ್ಯನ್ ಕಮ್ಯುನಿಕೇಷನ್ಸ್ ಮತ್ತು ಮಲ್ಟಿಮೀಡಿಯಾ ಕಮಿಷನ್‌ ನೀಡಿದ ಅಧ್ಯಯನದ ಮಾಹಿತಿ ಪ್ರಕಾರ, ಮಲೆಷ್ಯಾದ 13ರಿಂದ 17 ವರ್ಷದ ಮಕ್ಕಳಲ್ಲಿ ಶೇ.34.9ರಷ್ಟು ಮಕ್ಕಳಿಗೆ ಇಂಟರ್ನೆಟ್ ಚಟ ಇರುವುದು ತಿಳಿದುಬಂದಿದೆ.ಅಲ್ಲಿ 24.1 ದಶಲಕ್ಷ ಇಂಟರ್ನೆಟ್ ಬಳಕೆದಾರರಲ್ಲಿ ಶೇ.80ರಷ್ಟು ಜನರು ಸಾಮಾಜಿಕ ಜಾಲತಾಣಗಳಿಗಾಗಿ ಇಂರ್ಟನೆಟ್ ಬಳಸುತ್ತಾರೆ.

ಮತ್ತೊಂದು ಶಾಕಿಂಗ್ ವರದಿ!

ಮತ್ತೊಂದು ಶಾಕಿಂಗ್ ವರದಿ!

ಮಲೆಷ್ಯಾದಲ್ಲಿ ಅಂತರ್ಜಾಲ ನಿಷೇದ ಪ್ರಸ್ತಾಪಕ್ಕೂ ಮುನ್ನವೇ ಅಧ್ಯಯನವೊಂದು ಮೊಬೈಲ್ ಮತ್ತು ಅಂತರ್ಜಾಲದ ಬಳಕೆಯಿಂದ ಮಕ್ಕಳು ಮಧುಮೇಹ ರೋಗಕ್ಕೆ ಮಾತ್ರವಲ್ಲದೆ ಮಾನಸಿಕ ರೋಗಕ್ಕೂ ಸಹ ತುತ್ತಾಗುತ್ತಿದ್ದಾರೆ ಎಂದು ಹೇಳಿದೆ. ಹಾಗಾದರೆ, ಹೆಚ್ಚು ಮೊಬೈಲ್ ಬಳಕೆಯಿಂದ ಮಕ್ಕಳ ಮೇಲೆ ಆಗುತ್ತಿರುವ ದುಷ್ಪರಿಣಾಮಗಳು ಯಾವುವು? ಮತ್ತು ಅದಕ್ಕೆ ಪರಿಹಾರ ಏನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!

10,000 ಮಕ್ಕಳ ಮೇಲೆ ಅಧ್ಯಯನ

10,000 ಮಕ್ಕಳ ಮೇಲೆ ಅಧ್ಯಯನ

ಮೊಬೈಲ್ ಮಕ್ಕಳ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರಬಹುದು ಎನ್ನುವುದನ್ನು ತಿಳಿಯುವುದರ ಸಲುವಾಗಿ 10,000 ಕ್ಕೂ ಹೆಚ್ಚು ಮಕ್ಕಳ ಮೇಲೆ ನಿಗಾವಹಿಸಿ ಅಧ್ಯಯನ ವರದಿ ಸಿದ್ದಪಡಿಸಲಾಗಿದೆ. ವರದಿಯಲ್ಲಿ ಮೊಬೈಲ್‌ನಿಂದ ಮಕ್ಕಳ ಮಾನಸಿಕ ಮತ್ತು ದೇಹಾರೋಗ್ಯ ಎರಡೂ ಹಾಳಾಗುತ್ತದೆ ಎಂದು ತಿಳಿಸಲಾಗಿದೆ.!!

ಮೊಬೈಲ್‌ನಿಂದ ನಿದ್ರಾ ವ್ಯವಸ್ಥೆಗೆ ತೊಂದರೆ.

ಮೊಬೈಲ್‌ನಿಂದ ನಿದ್ರಾ ವ್ಯವಸ್ಥೆಗೆ ತೊಂದರೆ.

ಮಾನವನ ದೇಹಕ್ಕೆ ಅಗತ್ಯ ಪ್ರಮಾಣದಷ್ಟು ನಿದ್ರೆ ಬೇಕು. ಮಕ್ಕಳಿಗೆ ಇನ್ನು ಹೆಚ್ಚಿನ ನಿದ್ರೆ ಇದ್ದರೆ ಉತ್ತಮ. ಆದರೆ, ಹೆಚ್ಚು ಮೊಬೈಲ್ ಬಳಕೆ ಮಾಡುವ ಮಕ್ಕಳ ನಿದ್ರಾ ವ್ಯವಸ್ಥೆಯಲ್ಲಿ ಶೇ.50 ಪರ್ಸೆಂಟ್‌ಗಿಂತಲೂ ಹೆಚ್ಚು ಬದಲಾವಣೆಯಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಮಕ್ಕಳಲ್ಲಿ ನರಗಳ ಬೆಳವಣಿಗೆಯಲ್ಲಿ ತೊಂದರೆ.

ಮಕ್ಕಳಲ್ಲಿ ನರಗಳ ಬೆಳವಣಿಗೆಯಲ್ಲಿ ತೊಂದರೆ.

ಮಕ್ಕಳ ನರಮಂಡಲದ ರಚನೆ ಇನ್ನೂ ಬೆಳವಣಿಗೆ ಹಂತದಲ್ಲಿರುವಾಗ ಮೊಬೈಲ್ ಬಳಕೆ ಮಾಡಿದರೆ ಮಕ್ಕಳ ನರಗಳು ಶಕ್ತಿಹೀನವಾಗುತ್ತವೆ. ಇದರಿಂದಾಗಿ ಮುಂದೆ ಸ್ಮರಣ ಶಕ್ತಿ ಮತ್ತು ದೃಷ್ಟಿ ಮೇಲೆ ಸಮಸ್ಯೆಗಳು ತಲೆದೂರಬಹುದು ಎಂದು ಸಂಶೋಧನೆ ತಿಳಿಸಿದೆ.

ಮೊಬೈಲ್‌ನಿಂದ ಮಾನಸಿಕ ಒತ್ತಡ.

ಮೊಬೈಲ್‌ನಿಂದ ಮಾನಸಿಕ ಒತ್ತಡ.

ಮಕ್ಕಳು ಸಾಮಾಜಿಕ ಮಾಧ್ಯಮಗಳಿಂದ ದೂರವಿದ್ದಷ್ಟು ಒಳ್ಳೆಯದು ಎನ್ನುತ್ತದೆ ಈ ವರದಿ. ಸಾಮಾಜಿಕ ಮಾಧ್ಯಮಗಳಿಂದ ಹರಡುವ ಸುದ್ದಿಗಳು, ಇತರ ಜೀವನದ ಫ್ಯಾಶನ್, ಜಾಹಿರಾತುಗಳು ಮಕ್ಕಳ ಮನಸ್ಸಿನ ಮೇಲೆ ಒತ್ತಡ ತರುತ್ತವೆ ಎಂದು ಎಲ್ಲಾ ವರದಿಗಳು ಹೇಳುತ್ತವೆ.!

ಪ್ರೀತಿಯೇ ಔಷದ.

ಪ್ರೀತಿಯೇ ಔಷದ.

ಮಕ್ಕಳ ಮೇಲೆ ಮೊಬೈಲ್ ಹಾಗೂ ಸಾಮಾಜಿಕ ಮಾಧ್ಯಮಗಳು ಬೀರುತ್ತಿರುವ ಕೆಟ್ಟ ಪ್ರಬಾವವನ್ನು ತಡೆಯಲು ಪ್ರೀತಿಗಿಂತ ಬೇರೊಂದು ಲಸಿಕೆ ಇಲ್ಲ ಎಂದು ಎಲ್ಲಾ ವರದಿಗಳು ಹೇಳುತ್ತವೆ. ಮಕ್ಕಳಿಗೆ ಪ್ರೀತಿಯ ಜೊತೆಗೆ ವಾಸ್ತವ ಪ್ರಪಂಚದ ಬಗ್ಗೆ ಅರಿವು ಮೂಡಿಸುವ ಕಾರ್ಯ ಪೋಷಕರಿಂದ ಆಗಬೇಕಿದೆ.

Best Mobiles in India

English summary
The Malaysian government is considering banning Internet use for teens between 12 AM and 6 AM daily. The move is said to address the issue of video game and social media addiction. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X